ಬಿಜೆಪಿಯ ಶಕ್ತಿಗೆ ಹೆದರಿದ “ಕಮ್ಮಿ’ನಿಸ್ಟರಿಂದ” ಮತ್ತೆ ಮತ್ತೆ ಹಿಂಸೆ…!!

ಹೌದು ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ಹೆಸರಾಗಿದ್ದ ದೇವರ ನಾಡು ಕೇರಳದಲ್ಲೀಗ, ರಾಜಕೀಯ ಕೊಲೆಗಳು ಸದ್ದು ಮಾಡುತ್ತಿವೆ. ಮೇಲಿಂದ ಮೇಲೆ ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತರ ನೆತ್ತರು ಹರಿಯುತ್ತಿದೆ.

ನೆನ್ನೆ ಸಂಜೆ ಕಣ್ಣೂರಿನ ಕೂತುಪರಂಬಿನ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ, ಶ್ಯಾಮ್ ಪ್ರಸಾದನನ್ನು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ .

ಇಡೀ ದೇಶದ ಚಿತ್ತ ದೇವರ ನಾಡದ ಕೇರಳದ ಮೇಲೆ ಬಿದ್ದಿದೆ..ರಕ್ತಸಿಕ್ತ ಕಮ್ಯುನಿಸ್ಟ್ ಇತಿಹಾಸದ ಪುಟ ತಿರುವಿದರೆ ರೆಡ್ ಆರ್ವಿು, ಅಡಾಲ್ಪ್ ಹಿಟ್ಲರ್, ಜೋಸೆಫ್ ಸ್ಟಾಲಿನ್, ಶ್ರೀಲಂಕಾದ ಎಲ್ಟಿಟಿಇ, ಮುಸಲೋನಿ ಕಾಣಿಸುತ್ತಾರೆ. ಆದರೆ ರಕ್ತಚೆಲ್ಲದೆ ಹತ್ಯೆ ಮಾಡಿ ಮುಗಿಸುವ ಹೊಸ ಐಡಿಯಾ ಹೇಳಿಕೊಟ್ಟ ಕಮ್ಮಿನಿಸ್ಟ ‘ಪಿನರಾಯಿ ಪ್ಲಾನ್’ ಎಷ್ಟು ಜನರಿಗೆ ಗೊತ್ತು? ಬಿಜೆಪಿ ಕಾರ್ಯಕರ್ತರ ಪಾಲಿನ ಯಮ ಅವನು..!

ಪಿನರಾಯಿ ವಿಜಯನ್ ಕೇರಳದ ಮುಖ್ಯಮಂತ್ರಿಯಾದ ದಿನದಿಂದ ಈ ತರಹದ ಹತ್ಯೆಗಳು ಅತಿಯಾಗಿವೆ. ಅಷ್ಟೆ ಯಾಕೆ ಅವರ ಹುಟ್ಟೂರು ಪಿನರಾಯಿ ಗ್ರಾಮದಲ್ಲಿ ಭೀಕರ ಕೊಲೆ ನಡೆದಿದು ನಾವು ಮರೆತ್ತಿಲ್ಲ . ಅದು ರಾಜಕೀಯ ವಿರೋಧಿಗಳ ಹತ್ಯೆ. ಮೇನಲ್ಲಿ ಕೆ.ಟಿ. ಜಯಕ್ರಿಷ್ಣನ್, ಹಲವು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತ ರಮಿತ್ ಬರ್ಬರವಾಗಿ ಕೊಲೆಗೀಡಾಗಿದ್ದಾರೆ.ಮತ್ತೆ ಇಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ, ಶ್ಯಾಮ್ ಪ್ರಸಾದರ ಬರ್ಬರವಾಗಿ ಹತ್ಯೆ ಇಲ್ಲಿಯವರೆಗೆ ಕೇರಳದಲ್ಲಿ ಇಂಥ ಹತ್ಯೆಗಳಿಗೆ ಪ್ರತಿಕ್ರಿಯೆ ಇರುತ್ತಿರಲಿಲ್ಲ. ಈ ಬಾರಿ ಹಾಗಲ್ಲ, ಇಡೀ ಕೇರಳ ಸಿಡಿದೇಳುವ ಲಕ್ಷಣ ಕಾಣಿಸುತ್ತಿದೆ.

ಅಕಸ್ಮಾತ್ ಈ ಘಟನೆ ನಡೆದದ್ದು ಕೇರಳದಲ್ಲಲ್ಲ ಅಥವಾ ಕಮ್ಯುನಿಸ್ಟ್ ಅಥವಾ ಇನ್ನಾವುದೇ ಸೆಕ್ಯುಲರ್ ಸರ್ಕಾರದ ಮೂಗಿನಡಿಯಲ್ಲಲ್ಲ ಎಂದಾಗಿದ್ದರೆ ಕೆಲವರು ತಲೆ ಮೇಲೆ ಆಕಾಶವೇ ಬಿದ್ದಂತೆ ಬೊಬ್ಬೆ ಹೊಡೆಯುತ್ತಿದ್ದರು. ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹ, ರಾಷ್ಟ್ರಪತಿ ಆಡಳಿತದ ಪ್ರಸ್ತಾಪ, ಪ್ರಧಾನಿ, ರಾಷ್ಟ್ರಪತಿಗಳ ಮಧ್ಯಪ್ರವೇಶಕ್ಕೆ ಆಗ್ರಹ… ಮತ್ತೊಂದು ಮಗದೊಂದು ಮಾತನ್ನು ಕೇಳಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಕೇರಳದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವುದು ಪರಿಸ್ಥಿತಿ ಎಷ್ಟು ತೀವ್ರವಾಗಿದೆ ಎಂದರೆ ಕೇರಳದಲ್ಲಿ ಪಿಣರಾಯಿ ವಿಜಯನ್ ಅಧಿಕಾರಕ್ಕೆ ಬಂದ ನಂತರ ಕಣ್ಣೂರು ಒಂದರಲ್ಲೇ ಒಟ್ಟು 7 ರಾಜಕೀಯ ಕೊಲೆಗಳು ನಡೆದಿವೆ. ಈವರೆಗೆ ರಾಜ್ಯದಲ್ಲಿ 70 ರಾಜಕೀಯ ಕೊಲೆ ನಡೆದಿವೆ.

ಬಲಪಂಥೀಕೇರಳ ರಾಜಕೀಯ ಕೊಲೆಗಳ ಇತಿಹಾಸ ಕೆದಕಿದರೆ ಹೋಗಿ ನಿಲ್ಲುವುದು 1960ರ ದಶಕದ, ಇವತ್ತಿಗೆ ಕೊಲೆಗಳ ರಾಜಧಾನಿ ಎಂದು ಬಿಂಬಿತವಾಗಿರುವ ಕಣ್ಣೂರಿಗೆ. ಅವತ್ತು ರಾಮಕೃಷ್ಣನ್ ಎಂಬ ಭಾರತೀಯ ಜನಸಂಘದ ಕಾರ್ಯಕರ್ತರೊಬ್ಬರು ಕಮ್ಯೂನಿಸ್ಟ್ ಬೆಂಬಲಿತ ಬೀಡಿ ಕಾರ್ಮಿಕರ ಕೈಯಲ್ಲಿ ಸಾವನ್ನಪ್ಪಿದ್ದರು.

ಮುಂದೆ 1970ರ ದಶಕದಲ್ಲಿ ಮಲಬಾರ್ ಭಾಗದಲ್ಲಿ ಹಿಂದೂ ಮುಸ್ಲಿಂ ಸಂಘರ್ಷ ಶುರುವಾಯಿತು. ಮುಂದೆ ಇದೇ ಆರ್.ಎಸ್.ಎಸ್ ಮತ್ತು ಕಮ್ಯೂನಿಷ್ಟರ ನಡುವಿನ ನೇರ ಗಲಭೆಯಾಗಿ ಪರಿವರ್ತನೆಯಾಯಿತು. ಕಾರ್ಯಕರ್ತರ ಹತ್ಯೆ ಆಗಿರುವುದರಿಂದ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ.1969ರಿಂದ 2016ರವರೆಗೆ ಕಣ್ಣೂರು ಒಂದರಲ್ಲೇ 210 ಜನ ರಾಜಕೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಕೇರಳ ಅಪರಾಧ ವಿಭಾಗದ ದಾಖಲೆಗಳ ಪ್ರಕಾರ 1999ರಿಂದ ಇಲ್ಲಿವರೆಗೆ 70 ಜನ ಬೀದಿ ಹೆಣವಾಗಿದ್ದಾರೆ.

ಅದರಲ್ಲೂ ಪಿಣರಾಯಿ ವಿಜಯನ್ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಏಳು ಹಾಗೂ ರಾಜ್ಯದಲ್ಲಿ ಒಟ್ಟು 70 ಕೊಲೆಗಳು ನಡೆದಿವೆ.

ಕೇರಳದ ಆಡಳಿತಾರೂಢ ಸಿಪಿಎಂ ಸರ್ಕಾರ ‘ಹತ್ಯೆ ರಾಜಕೀಯ’ ನಡೆಸುತ್ತಿದೆ ಎಂದು ಬಿಜೆಪಿ ಆರೋಪಿಸಿದ್ದು, ಇದನ್ನು ಪ್ರತಿಭಟಿಸಿ ‘ಜನ ರಕ್ಷಾ ಯಾತ್ರೆ’ ಆರಂಭಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತವರು ಜಿಲ್ಲೆ ಕಣ್ಣೂರಿನ ಪಯ್ಯನ್ನೂರಿನಲ್ಲಿ ಯಾತ್ರೆಗೆ ಚಾಲನೆ ಕೂಡ ನೀಡಿದ್ದರು.ಮೂರು ದಿನಗಳ ಕಾಲ ಕೇರಳ ಪ್ರವಾಸದಲ್ಲಿದ್ದ ಅಮಿತ್ ಷಾ ನಾಲ್ಕು ಕಿಲೋ ಮೀಟರ್ ಯಾತ್ರೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಆ ವೇಳೆ ಅವರು, ‘ಪಶ್ಚಿಮ ಬಂಗಾಳ ಮತ್ತು ತ್ರಿಪುರಾದ ಪರಿಸ್ಥಿತಿಯನ್ನು ಗಮನಿಸಿ. ಕಮ್ಯೂನಿಸ್ಟರು ಇಲ್ಲಿ ಆಡಳಿತ ನಡೆಸುತ್ತಿದ್ದಾರೆ. ಶಾಂತಿಯಿಂದಿದ್ದ ಕೇರಳ ಹಿಂಸಾಚಾರಕ್ಕೆ ತಿರುಗುತ್ತಿದೆ. ಕಮ್ಯೂನಿಸ್ಟ್ ಹಿಂಸೆಯ ಸಿದ್ಧಾಂತವನ್ನು ಇಲ್ಲಿ ಹರಡಲಾಗುತ್ತಿದೆ’ ಎಂದು ಹೇಳಿದರು.

ರಾಜಧಾನಿ ತಿರುವನಂತಪುರಕ್ಕೆ ಹಮ್ಮಿಕೊಳ್ಳಲಾಗಿದ್ದ, ಸುಮಾರು 15 ದಿನಗಳ ಕಾಲ ನಡೆದಿರುವ ಯಾತ್ರೆಯಲ್ಲಿ ಬಿಜೆಪಿಯ ಹಲವು ನಾಯಕರು ಪಾಲ್ಗೊಂಡಿದ್ದರು.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಂದು ಕಮ್ಮಿನಿಸ್ಟರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಜನರಕ್ಷಾ ಯಾತ್ರೆಯಲ್ಲಿ ಕೇರಳದ ಲಕ್ಷಾಂತರ ಜನರು, ಅದರಲ್ಲೂ ಯುವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿತ್ತು… ಪಿನರಾಯಿ ವಿರುದ್ಧ ತೀವ್ರವಾಗಿ ಮಾತಿನ ಬಾಣ ಬಿಡಲಾಗಿತ್ತು. ಕೇಂದ್ರದ ಮಂತ್ರಿಗಳು ಹಾಗೂ ವಿವಿಧ ಬಿಜೆಪಿ ಆಡಳಿತಾರೂಢ ರಾಜ್ಯದ ಮುಖ್ಯಮಂತ್ರಿಗಳು ಕೇರಳದ ಜನರಕ್ಷಾ ಯಾತ್ರೆಗೆ ತೆರಳಿದ್ದರು.

ಲೋಕಸಭಾ ಚುನಾವಣೆಯಲ್ಲಿ 4 ಶೇಕಡಾ ಇದ್ದ ಬಿಜೆಪಿ ಮತ ವಿಧಾನಸಭಾ ಚುನಾವಣೆಗೆ 11ಶೇಕಡಾ ದಷ್ಟು ಏರಿಕೆ ಕಂಡಿತ್ತು.. ಇದೆ ರೀತಿ ಬಿಜೆಪಿಯ ನಡೆ ಇದ್ದರೆ 2025 ಆಗುವಾಗ ಕೇರಳದಲ್ಲಿ ಬಿಜೆಪಿ ಬಲವಾದ ಪಕ್ಷವಾಗಿ ಬೆಳೆಯಲಿದೆ.. ಇದರ ಮಧ್ಯೆ ಕಮ್ಮಿನಿಸ್ಟರಿಗೆ,ಕಾಂಗಿಗಳಿಗೆ ಅಸ್ತಿತ್ವದ ಚಿಂತೆ ಶುರುವಾಗಿದೆ.

ದೇವರನಾಡಲ್ಲಿ ಕೇಸರಿ ಧ್ವಜ ಹಾರಡುವುದರಲ್ಲಿ ಸಂಶಯವೇ ಇಲ್ಲ…ಇದಕೆಷ್ಟುಬೇಕಾದರೂ ಹೋರಾಟ ಮಾಡಿ ಜೀವ ಕೊಡಲು ನಾವು ಸಿದ್ದ…!! ದೇಶಕೋಸ್ಕರ, ಧರ್ಮಕೋಸ್ಕರ,ಪಕ್ಷಕೋಸ್ಕರ ನಮ್ಮ ಪ್ರಾಣ ಮುಡಿಪು.. ಕಮ್ಮಿನಿಸ್ಟರ ಕೈ ಕೆಳಗೆ ಕುನ್ನಿಗಳಾಗಿ ಬದುಕುದಕ್ಕಿಂತ ಸ್ವಾಭಿಮಾನಿಗಳಾಗಿ ಸಾಯುದೇ ಮೇಲು.ನಮ್ಮ ಹೋರಾಟ ನಿರಂತರ..!!!

ಸರಿ ಅನಿಸಿದ್ರೆ ಶೇರ್ ಮಾಡಿ,ಧನ್ಯವಾದಗಳು.

ಸಚಿನ್ ಜೈನ್ ಹಳೆಯೂರ್

Post Author: