ಕರುನಾಡ ವಾಣಿ
ಇದು ನಿಮ್ಮ ಧ್ವನಿ

ಜೀವನದ ಚಾಲೆಂಜ್ ಗಳನ್ನು ಎದುರಿಸಿ ನಿಜವಾದ ಚಾಲೆಂಜಿಂಗ್ ಸ್ಟಾರ್ ಆದ ದರ್ಶನ್ ರವರ ಕಥೆ ಇಲ್ಲಿದೆ ನೋಡಿ..

18

 

ದರ್ಶನ್ ತೂಗುದೀಪ್ ರವರು ಕನ್ನಡ ಚಿತ್ರರಂಗದಲ್ಲಿನ ಜನಪ್ರಿಯ ನಟರಲ್ಲಿ ಅಷ್ಟೇ ಯಾಕೆ ಟಾಪ್ ನಟರಲ್ಲಿ ಒಬ್ಬರು. ಕನ್ನಡದ ಖ್ಯಾತ ಖಳನಟರಾಗಿದ್ದ ತೂಗುದೀಪ ಶ್ರೀನಿವಾಸ್ ಅವರ ಮಗ.

ಚಿತ್ರರಂಗ ಪ್ರವೇಶಿಸುವ ಮೊದಲು ಕಿರುತೆರೆ ಧಾರಾವಾಹಿಯೊಂದರಲ್ಲಿ ಅಭಿನಯಿಸಿದ್ದರು. ಮೆಜೆಸ್ಟಿಕ್ ದರ್ಶನ್ ರವರು ನಾಯಕನಟನಾಗಿ ಅಭಿನಯಿಸಿದ ಮೊದಲನೆಯ ಚಿತ್ರ.

ದರ್ಶನ್ ತೂಗುದೀಪ್ ರವರ ಕುಟುಂಬ

ಕನ್ನಡ ಚಿತ್ರರಂಗದ ಹೆಸರಾಂತ ಪ್ರತಿಭೆ ತೂಗುದೀಪ ಶ್ರೀನಿವಾಸ್ ಮತ್ತು ಮೀನ ತೂಗುದೀಪ ದಂಪತಿಗಳ ಹಿರಿಯ ಮಗನಾಗಿ, ಫೆಬ್ರವರಿ 16 1977 ರಂದು ದರ್ಶನ್ ಹುಟ್ಟಿದರು.2002 ರಲ್ಲಿ ಚಿತ್ರರಂಗಕ್ಕೆ ಬಂದರು. ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯುವ ದರ್ಶನ್ ಈಗ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರೊಲ್ಲಬ್ಬರಾಗಿದ್ದಾರೆ.

ತೂಗುದೀಪ ಪ್ರೂಡಕ್ಷನ್ಸ್ ಅಡಿಯಲ್ಲಿ ಕನ್ನಡ ಚಲನಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ. ಇವರು ನೂತನವಾಗಿ ತೂಗುದೀಪ ಡಿಸ್ಟ್ರಿಬ್ಯೂಟರ್ಸ್ ಅಡಿಯಲ್ಲಿ ಚಿತ್ರ ವಿತರಕರಕರೂ ಕೂಡ ಆಗಿದ್ದಾರೆ..

ಪ್ರಾಣಿಪ್ರಿಯರಾದ ದರ್ಶನ್ ಅವರು ಮೈಸೂರಿನ ತಮ್ಮ ಫಾರ್ಮ್ ಹೌಸ್ ನಲ್ಲಿ ಅನೇಕ ಬಗೆಯ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ..

ಫಿಲ್ಮ್ ಫೇರ್ ಅವಾರ್ಡ್, ಸ್ಟೇಟ್ ಫಿಲ್ಮ್ ಅವಾರ್ಡ್ ಸೇರಿದಂತೆ ಇನ್ನು ಅನೇಕ ಪ್ರಶಸ್ತಿಗಳು ದರ್ಶನ್ ರವರ ಮುಡಿಗೇರಿದೆ..

ಎಷ್ಟೋ ಮಂದಿಗೆ ಅನೇಕ ರೀತಿಯ ಸಹಾಯ ಮಾಡಿರುವ ದರ್ಶನ್ ರವರು ಎಲ್ಲೂ ಯಾವತ್ತೂ ಕೂಡ ತಾವು ಸಹಾಯ ಮಾಡಿರುವುದರ ಬಗ್ಗೆ ಹೇಳಿಕೊಂಡಿಲ್ಲ.. ಇದು ಅವರ ದೊಡ್ಡ ಗುಣವೂ ಹೌದು..

ಕಷ್ಟದ ಜೀವನದಲ್ಲಿ ಎಲ್ಲೂ ಹೆದರದೆ.. ಸಾಧಿಸುವ ಹಾದಿಯನ್ನು ಬಿಡದೇ.. ಕನ್ನಡದ ಟಾಪ್ ನಟನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಮುಂದಿನ ಸಿನಿ ಕೆರಿಯರ್ ಗೆ ನಮ್ಮ ಕಡೆಯಿಂದ ಒಂದು ಆಲ್ ದಿ ಬೆಸ್ಟ್..