​ಈ ಲೇಖನದಲ್ಲಿರುವ ವಿಷಯ ನೀವು ತಿಳಿಯದಿದ್ದರೆ ನಿಮ್ಮ ಜೀವನವೇ ನಿರರ್ಥಕ…!!!!

ತಂದೆ ತಾಯಿಗೆ ಬೇಡವಾದ ಅನಾಥ ಮಗುವೊಂದು ನೂರಾರು ವೃದ್ಧರಿಗೆ  ಉರುಗೋಲಾಗಿ,ಮಗುವೇ ಇಲ್ಲದ ತಾಯಿಗೆ ಮಗುವಾಗಿ,ಅನಾಥ ಹೆಣ್ಣು ಮಗುವೊಬ್ಬಳಿಗೆ  ಜೀವನವೇ ಆಗಿರುವ, ಸಮಾಜದ ಕಣ್ಣಿಗೆ ಕಾಣದ ಒಂದು ಬಡ ಜೀವದ ಬಗ್ಗೆ ನಿಮ್ಮಗೆ ಗೊತ್ತೇ???

0

ತಂದೆ ತಾಯಿಗೆ ಬೇಡವಾದ ಅನಾಥ ಮಗುವೊಂದು ನೂರಾರು ವೃದ್ಧರಿಗೆ  ಉರುಗೋಲಾಗಿ,ಮಗುವೇ ಇಲ್ಲದ ತಾಯಿಗೆ ಮಗುವಾಗಿ,ಅನಾಥ ಹೆಣ್ಣು ಮಗುವೊಬ್ಬಳಿಗೆ  ಜೀವನವೇ ಆಗಿರುವ, ಸಮಾಜದ ಕಣ್ಣಿಗೆ ಕಾಣದ ಒಂದು ಬಡ ಜೀವದ ಬಗ್ಗೆ ನಿಮ್ಮಗೆ ಗೊತ್ತೇ???

ಹೌದು,ಅದೇನು ಸಾರ್ಥಕತೆ,ಅದೇನು ನಿಷ್ಠೆ,ಅದೇನು ತ್ಯಾಗ..ಆ ಹುಡುಗನದ್ದು.!!! ಶ್ರದ್ಧೆಯಿಂದ ಪೂರ್ತಿ ಓದಿ ಬಿಡಿ…!!

ಅದು ದೀಪಾವಳಿಯ ಸಮಯ… ಎಲ್ಲೆಡೆಯೂ ಸಡಗರ, ಅಂಧಕಾರವೆಂಬ ಕತ್ತಲೆಯನ್ನು ತೊಡೆದು ಹಾಕಿ ಮನಃಪೂರ್ವಕವಾಗಿ ದೀಪದಿಂದ ದೀಪಬೆಳಗುವ ಹಬ್ಬ.

Great
ಅಂಧಕಾರ ಅಳಿಸಬೇಕಾದ ಈ ಸಮಯದಲ್ಲಿ,ನಡೆಯಭಾರದ  ಒಂದು ಘಟನೆ ನಡೆದು ಹೋಗಿದೆ… ಮಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ತಾಯಿಯೊಬ್ಬಳು ಮಗುವನ್ನು ಹೆತ್ತು.. ಮಗುವನ್ನು ಒಲ್ಲದ ಮನಸ್ಸಿನಿಂದ ಅಲ್ಲಿಯೇ ಬಿಟ್ಟು ಹೋಗಿದ್ದಾಳೆ…ಎಷ್ಟು ಕಾದರೂ ತಾಯಿ ಬರಲೇ ಇಲ್ಲ. ಅದು ಗಂಡು ಮಗು… ಆ ಮಗು ತಾಯಿಯ ಮಮತೆಗೋಸ್ಕರ ಬಿಕ್ಕಿ ಬಿಕ್ಕಿ ಅಳತೊಡಗುತ್ತದೆ…

ಹೀಗಿರುವ ಆಸ್ಪತ್ರೆಯ ಆಡಳಿತವರ್ಗ ಮಗುವನ್ನು ಆಶ್ರಮಕ್ಕೆ ಸೇರಿಸುವುದು ಎಂದು ತೀರ್ಮಾನ ಮಾಡುತ್ತದೆ.ಇದಕ್ಕೆ ಪೂರಕ ಎಂಬಂತೆ ವಿಟ್ಲ ಸಮೀಪದ ಕನ್ಯಾನ ಭಾರತ ಸೇವಾಶ್ರಮದ ಸ್ಥಾಪಕರಾದ ಧೀರೇಂದ್ರನಾಥ ಭಟ್ಟಾಚಾರ್ಯ ಅವರನ್ನು ಸಂಪರ್ಕಿಸಲಾಗುತ್ತದೆ. ಅವರು ಮಂಗಳೂರಿಗೆ ಹೋಗಿ ಆ ಗಂಡು ಮಗು ಸಹಿತ ಇನ್ನೆರಡು ಅನಾಥ ಹೆಣ್ಣು ಮಕ್ಕಳನ್ನು ಆಶ್ರಮಕ್ಕೆ ಸಾಕಲು ತರುತ್ತಾರೆ.

ಆಶ್ರಮದಲ್ಲಿರುವ ವೃದ್ಧರಿಗೆ ಖುಷಿಯೋ ಖುಷಿ. ಮಗುವನ್ನು ಕಂಡು ಪ್ರೀತಿಯೊ ಪ್ರೀತಿ…ಆಶ್ರಮದಲ್ಲಿರುವ ತಾಯಿಯಾಗದ ಅದೆಷ್ಟು ಹೆಂಗಸರಿಗೆ ಈ ಮಗುವನ್ನು ಕಂಡರೆ ಅದ್ಯಾಕೋ ತುಂಬಾ ಪ್ರೀತಿ…
ಧೀರೇಂದ್ರನಾಥ ಅವರು ಸಣ್ಣ ಕಾರ್ಯಕ್ರಮವೊಂದನ್ನು ಏರ್ಪಡಿಸಿ ಆಶ್ರಮದಲ್ಲಿ ಮಗುವಿಗೆ “ಪರಶುರಾಮ” ಎಂದು ನಾಮಕರಣ ಮಾಡಿದರು..

Great
ತಾಯಿಯ ಹೊರತಾಗಿಯೂ ಮಗು ಚೆನ್ನಾಗಿಯೇ ಬೆಳೆಯಿತು..ದನದ ಹಾಲನ್ನು ಕೊಟ್ಟು ಮಗುವನ್ನು ಸಾಕಲಾಯ್ತು…ಮಗು ತೇವಳಿಕೊಂಡು ಆಶ್ರಮಪೂರ್ತಿ ಸುತ್ತಾಡತೊಡಗಿತು… ಅಲ್ಲಿರುವ ವೃದ್ಧರು ದಿನಾಲೂ ಎಣ್ಣೆ ಹಚ್ಚಿ ಮಗುವನ್ನು ಸ್ನಾನ ಮಾಡಿಸಿ.. ಊಟಮಾಡಿಸಿ ಆರೈಕೆ ಮಾಡುತಿದ್ದರು…

ಹೀಗೆ ದಿನಗಳು ಉರುಳಿದವು ಮಗು ದೊಡ್ಡವನಾಗಿ ಶಾಲೆಗೆ ಸೇರಿಸಲಾಯ್ತು.ಪಕ್ಕದ ಕನ್ಯಾನದ ಸರ್ಕಾರಿ ಶಾಲೆಯಲ್ಲಿ ಪರಶುರಾಮ ವಿದ್ಯಾಭ್ಯಾಸವನ್ನು ಆರಂಭಿಸಿದನು…

Orphan
ಶಾಲೆಯಲ್ಲಿ ಚೆನ್ನಾಗಿಯೇ ಓದುತ್ತಿದ್ದ ಈತ ಭಟ್ಟಾಚಾರ್ಯಗೂ ಪ್ರೀಯನಾಗಿದ್ದ.ಶಾಲೆಯಿಂದ ಬಂದು ಆಶ್ರಮದಲ್ಲಿದ್ದ ಸುಮಾರು 150ದನಗಳು ಇರುವ  ಹಟ್ಟಿಯನ್ನು ಸ್ವಚ್ಛಗೊಳಿಸುವುದು,ಹಾಲು ಕರಿಯುದು, ಆಶ್ರಮವನ್ನು ಗುಡಿಸಿ ಒರೆಸುವುದು,ಅಡುಗೆಗೆ ಸಹಾಯ ಮಾಡುವುದು, ವೃದ್ಧರನ್ನು ಸ್ನಾನ ಮಾಡಿಸುವುದು, ರಜಾದಿನದಂದು ಹುಲ್ಲು ಕೊಯ್ಯುದು,ಬಟ್ಟೆ ಒಗೆಯುದು,ಆಶ್ರಮದ ಹೂ ತೋಟವನ್ನು ನೋಡಿಕೊಳ್ಳುವುದು ಮುಂತಾದ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದನು.


ಆಶ್ರಮ ನಿವಾಸಿಗಳನ್ನು ತನ್ನ ತಾಯಿ ತಂದೆಯಂತೆ ಆತ ಪ್ರೀತಿಸುತ್ತಿದ್ದ.. ತಾಯಿಯ ನೆನಪೇ ಆತನಿಗೆ ಕಾಡಲಿಲ್ಲ.ಆಶ್ರಮ ನಿವಾಸಿಗಳಿಗೂ ಈತ ಮನೆ ಮಗನಂತಿದ್ದ…
ಹೀಗಿರುವಾಗ ಆಶ್ರಮದ ಬೆನ್ನೆಲುಬಾಗಿದ್ದ,ಪರಶುರಾಮನ ಪ್ರೀಯರಾಗಿದ್ದ,ಆಶ್ರಮದ ಸ್ಥಾಪಕರಾದ ಧೀರೇಂದ್ರನಾಥ ಭಟ್ಟಾಚಾರ್ಯರು,

ಅನಾರೋಗ್ಯದಿಂದ ದೈವಾದೀನರಾದರು..ಆಶ್ರಮಕ್ಕೆ ಆಶ್ರಮವೇ ಶೋಕಾಚಾರಣೆಯಲ್ಲಿ ಮುಳುಗಿತು.

Funeral
ಹತ್ತನೇ ತರಗತಿ ಮುಗಿಸಿದ ಬಳಿಕ,ದ್ವಿತೀಯ puc ಯನ್ನು ಉತ್ತಮ ಶ್ರೇಣಿಯೊಂದಿಗೆ ಮುಗಿಸಿದನು.. ಆಶ್ರಮ ಆತನಿಗೆ ಆಶ್ರಯದ ಜೊತೆಗೆ ಚೆನ್ನಾಗಿಯೇ ವಿದ್ಯಾಭ್ಯಾಸವನ್ನು ಕೊಡಿಸಿತು…
ಹೀಗೆ ಎರಡು ದಿನದ ಪಾಪು ಈಗ ಚಿಗುರು ಮೀಸೆ ಬಂದ ಹುಡುಗನಾಗಿ ಬಿಟ್ಟಿದ್ದಾನೆ..

Great

ಈಗ  ಆಶ್ರಮದ ಮುಖ್ಯಸ್ಥರಾಗಿರುವ ಭಟ್ಟಾಚಾರ್ಯ ಅಳಿಯ ಈಶ್ವರ ಭಟ್ ಪರಶುರಾಮನಿಗೆ ಉದ್ಯೋಗ ತೆಗಿಸಿ ಕೊಡುವುದಾಗಿ ಹೇಳಿದಾಗ.. ಪರಶುರಾಮ ನಾನು ಆಶ್ರಮದ ಸೇವೆ ಮಾಡಬೇಕು.. ನನಗೆ ಹೊರಗಿನ ಉದ್ಯೋಗ ಬೇಡ ಎಂದು ನಯವಾಗಿಯೇ ಅದನ್ನು ತಿರಸ್ಕರಿಸಿದನು..

ಆಶ್ರಮದ ಪ್ರಮುಖ ಜವಾಬ್ದಾರಿಗಳನ್ನು ವಹಿಸಿಕೊಂಡ ಪರಶುರಾಮ ವಾರದಲ್ಲಿ 4 ದಿನ, ಕಾಸರಗೋಡು,ವಿಟ್ಲ, ಪುತ್ತೂರು,ಕುಂಬ್ಳೆ,ಬಿಸಿರೋಡ್,ಮಂಗಳೂರು ಮುಂತಾದ ಕಡೆ  ಮನೆಮನೆಗೆ,ಅಂಗಡಿಗಳಿಗೆ ತೆರಳಿ ಆಶ್ರಮಕೋಸ್ಕರ ಬೇಡಿ ಹಣವನ್ನು ಒಟ್ಟುಮಾಡುವ ಕೆಲಸ ಮಾಡತೊಡಗಿದ..

Great

ಇಂದಿಗೂ ಆತ ಈ ಕೆಲಸದಲ್ಲಿ ನಿರತನಾಗಿದ್ದಾನೆ.ಆಶ್ರಮಕ್ಕೆ ತಿಂಗಳಿಗೆ ಸುಮಾರು 3.50ಲಕ್ಷ ಹಣದ ಅವಶ್ಯಕತೆ ಇದ್ದು ಅದರಲ್ಲಿ ಸುಮಾರು 70ಸಾವಿರ ಹಣ ಸರ್ಕಾರ ಹಾಗೂ ಆಶ್ರಮದ ಹಾಲು,ತುಪ್ಪ,ತೆಂಗಿನ ಕಾಯಿ ಮುಂತಾದವುಗಳಿಂದ ಬರುವ ಅದಾಯದಿಂದ ಬರುತ್ತದೆ. ಉಳಿದ ಹಣವನ್ನು ಒಟ್ಟುಗೂಡಿಸಲು ಪರಶುರಾಮ ಈ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ.

Great
ಆಶ್ರಮದಲ್ಲಿ ವೃದ್ಧರ ಸಾವು ಸಾಮಾನ್ಯ… ಸಾವಿನ ವಿಚಾರವನ್ನು ವೃದ್ಧರ ಸಂಬಂಧಿಕರಿಗೆ ತಿಳಿಸಲಾಗುತ್ತದೆ. ಅವರು ಬಾರದಿದ್ದಾಗ ವೃದ್ಧರ ಹೆಣವನ್ನು ಹೊತ್ತು ಚಿತೆಗೆ ಬೆಂಕಿ ಕೊಡುವ ಕೆಲಸದಿಂದ ಹಿಡಿದು… ದಕ್ಷಿಣ ಕಾಶಿಯಾದ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಪಿಂಡ ಬಿಡುವ ಕಾರ್ಯವನ್ನೂ ಕೂಡ ಪರಶುರಾಮನೇ ಸ್ವತಃ ಮಾಡುತಿದ್ದ.. ಈ ವರೆಗೆ ಸುಮಾರು 104ವೃದ್ಧರ ಚಿತೆಗೆ ಬೆಂಕಿಕೊಟ್ಟು,ಅದರ ಪೂರ್ಣ ವಿಧಿ ಕಾರ್ಯವನ್ನು ಪರಶುರಾಮ ಸ್ವತಃ ತಾನೇ ಮುಗಿಸಿರುತ್ತಾನೆ….


ತಂದೆ ತಾಯಿಯೇ ಇಲ್ಲದ ಈ ಮಗು ಅದೆಷ್ಟು ವೃದ್ಧರಿಗೆ ಮಗನಾದ ನೋಡಿ…. ಸಮಾಜಕ್ಕೆ,ತನ್ನ ಮಕ್ಕಳಿಗೆ ಬೇಡವಾದ ಅದೆಷ್ಟೋ ಹಿರಿಯರಿಗೆ ತುತ್ತುಕೊಟ್ಟು ಸಾಕಿ. ಜೀವಕಳಕೊಂಡಮೇಲೂ ಮಗನಂತೆ ಉಳಿದೆಲ್ಲಾ ಅಂತಿಮ ವಿಧಿ ಕಾರ್ಯ ಮುಗಿಸುವ ಈ ಹುಡುಗ ಶ್ರೇಷ್ಠ ಅಲ್ವಾ?? ನೀವೇ ಹೇಳಿ??

ವೃದ್ಧರಿಗೆ ಆರೋಗ್ಯ ಸರಿ ಇಲ್ಲದಿದ್ದಾಗ ಅಸ್ಪತ್ರೆಯಲ್ಲಿ ಕೂಡ ಈತನೇ ನಿಲ್ಲುತ್ತಾನೆ.. ಆಶ್ರಮವನ್ನು ತನ್ನ ಮನೆಯಂತೆ.. ಅಲ್ಲಿರುವವರೆಲ್ಲರೂ ತನ್ನವರು ಎಂಬ ಭಾವನೆ ಈ ಮುಗ್ದ ಮನಸಿನದ್ದು…
ಹೀಗಿರುವಾಗ ಒಂದು ತಾಯಿ ಹಾಗೂ ಒಂದು 5 ವರ್ಷ ಪ್ರಾಯ ಹೆಣ್ಣು ಮಗು ಪಾಣಾಜೆಯ ತಮ್ಮ ಮನೆಯಲ್ಲಿ ಕುಟುಂಬದವರ ಕಿರುಕುಳ ತಾಳಲಾಗದೆ ಮನೆಬಿಟ್ಟು ಭಾರತ ಸೇವಾಶ್ರಮವನ್ನು ಸೇರಿಕೊಳ್ಳುತ್ತಾರೆ.. ಆ ಹೆಣ್ಣು ಮಗಳು ಕೂಡ ಪರಶುರಾಮನನಂತೆ ಚೆನ್ನಾಗಿಯೇ ಓದಿ,ಆಶ್ರಮದ ಕೆಲಸ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದ್ದಳು. ಮನೆಯ ಮಗಳಂತೆ ಇದ್ದ ಅವಳು ವಿಟ್ಟದಲ್ಲಿ ತನ್ನ ಪದವಿ ಶಿಕ್ಷಣವನ್ನು ಮುಗಿಸಿದಳು..ಆಕೆಯ ಹೆಸರು ಶೈಲಾ…

ಆಕೆ ಈಗ ವಯಸ್ಸಿಗೆ ಬಂದಿದ್ದಾಳೆ, 20ವರ್ಷ ಪ್ರಾಯ.ಆಶ್ರಮದಲ್ಲಿ  ಆಕೆಯ ಮದುವೆಯ ವಿಚಾರ ಬಂದಾಗ, ಆಶ್ರಮದ ಹಿರಿಯಾರ ಈಶ್ವರ ಭಟ್ಟರು ಶೈಲಾನನ್ನು….. ಆಶ್ರಮಕ್ಕೆ ತನ್ನ ಜೀವ ಮುಡಿಪಾಗಿಟ್ಟಿರುವ ಪರಶುರಾಮನಿಗೆ ಮದುವೆ ಮಾಡಿ ಕೊಡುವುದಾಗಿ ಹೇಳಿದರು.. ಪರಶುರಾಮನ ಒಪ್ಪಿಗೆಯ ಮೇರೆಗೆ ಆಶ್ರಮದಲ್ಲಿಯೇ ಆಶ್ರಮ ನಿವಾಸಿಗಳ ಸಮ್ಮುಖದಲ್ಲಿ ಪರಶುರಾಮ ಹಾಗೂ ಶೈಲಾ ಆಗಸ್ಟ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇಂದಿಗೆ ಅವರ ಮದುಗೆ ಆಗಿ ಸರಿ ಸುಮಾರು ಎರಡು ವರ್ಷ..  ಚೆನ್ನಾಗಿ ಆಶ್ರಮದಲ್ಲಿಯೇ ಸಂಸಾರ ನಡೆಸುತ್ತಿದ್ದಾರೆ.. ಒಂದು ಅನಾಥ ಹೆಣ್ಣು ಮಗಳಿಗೆ ಹೊಸ ಜೀವನ ಕೊಟ್ಟವನು ಪರಶುರಾಮ. ಎಂತಾ ಮನಸ್ಸು ಆತನದ್ದು.ಈ ಮದುವೆಯ ಫೋಟೋವನ್ನು ಇಲ್ಲಿ ನೋಡಬಹುದು….

Great
ಹೀಗೆ ಸರಿಸುಮಾರು 1984ರಿಂದ ಪರಶುರಾಮನ ಜೀವನ ನಡೆದುಬಂದಿದೆ. ತಂದೆತಾಯಿಗೆ ಆತ ಬೇಡವಾಗಿದ್ದರೂ ಕೂಡ ಅದೆಷ್ಟೋ ತಂದೆತಾಯಿಗಳ ಪ್ರೀತಿಯನ್ನು ಆತ ಆಶ್ರಮದಲ್ಲಿ ಗಳಿಸಿಕೊಂಡ….

ಆಶ್ರಮದಲ್ಲಿ ಬೆಳೆದ ಸುಮಾರು 24ಹೆಣ್ಣು ಮಕ್ಕಳನ್ನು ಆಶ್ರಮದಲ್ಲೇ ಮದುವೆ ಮಾಡಿ ಹೊರ ಸಮಾಜಕ್ಕೆ ಕೊಡಲಾಗಿದೆ.. ಇಂದು ಅವರು ಚೆನ್ನಾಗಿಯೇ ಸಂಸಾರ ನಡೆಸುತ್ತಿದ್ದಾರೆ… ಹೆರಿಗೆಗೆ ಸುಮಾರು 18ಜನ ಆಶ್ರಮಕ್ಕೆಯೇ ಬಂದು ಅವರ ಬಾಣಂತಿ ಸಮವನ್ನು ಕಳೆದಿರುತ್ತಾರೆ..ಅಲ್ಲಿರುವ ವೃದ್ಧರು ಬಾಣಂತಿ ಹಾಗೂ ಮಗುವನ್ನು ಆರೈಕೆ ಮಾಡಿರುತ್ತಾರೆ…

Indian womeb
ಪ್ರಸುತ ಆಶ್ರಣದಲ್ಲಿ 152 ಜನ ವೃದ್ಧರು 24 ಜನ ಶಾಲಾ ಹುಡುಗರು 22 ಜನ ಶಾಲಾ ಹುಡುಗಿಯರು 40 ಮಂದಿ ಅಬಲೆಯರು 4 ಮಂದಿ ಅಂಗವಿಕರು 4 ಮಂದಿ ಕಾರ್ಯಕರ್ತೆಯರು ಆಶ್ರಯ ಪಡೆದಿದ್ದಾರೆ. ಜೋತೆಗೆ ಸುಮಾರು 160 ದನಕರುಗಳಿವೆ…28 ಹಾಲು ಕೊಡುವ ದನಗಳಿವೆ.. ಹಾಲು ಹಾಗೂ ತುಪ್ಪವನ್ನು ಮಾರಾಟ ಮಾಡಲಾಗುತ್ತಿದೆ… ಹೆಚ್ಚಿನ ದನಕರುಗಲು ಕಟುಕರ ಕೈಯಿಂದ ಬಿಡಿಸಿ ತಂದದ್ದು ಆಗಿರುತ್ತದೆ….
ಅದರ ಜೋತೆಗೆ ಆಶ್ರಮದಲ್ಲಿ ದೀಪದ ಬತ್ತಿ,ಕೈಯಲ್ಲಿ ಮಾಡಿದ ಗ್ರೀಟಿಂಗ್ಸ್,ಕರಕುಶಲ ವಸ್ತುಗಳು ಮುಂತಾದವುಗಳನ್ನು ವೃದ್ದರೆ ತಯಾರು ಮಾದುತ್ತಾರೆ.  ಅದನ್ನು ಮಾರಾಟ ಮಾಡಲಾಗುತ್ತದೆ… ಇಲ್ಲಿರುವ ಫೋಟೋದಲ್ಲಿ ಇದ್ದನ್ನು ಕಾಣಬಹುದು. .

Great
ಇಂತಹ ಸಮಾಜಮುಖಿ ಆಶ್ರಮದ ಅರ್ಧ ಜವಾಬ್ದಾರಿಯನ್ನು ಇಷ್ಟು ಸಣ್ಣ ಪ್ರಾಯದಲ್ಲೇ ತನ್ನ ಹೆಗಲಿಗೆ ಹಾಕಿಕೊಂಡ ಪರಶುರಾಮನೇ ಶ್ರೇಷ್ಠ. …!!  ಅವನೇ ನಿಜವಾದ ರಾಮ,

ನಿಜವಾದ ಪರಶುರಾಮ…!!
ಈಗಿನ ಈ ವಾಟ್ಸಪ್,Facebook ಯುಗದಲ್ಲಿ ಇಂತಹ ಒಬ್ಬ ಸಮಾಜಮುಖಿಯಾಗಿ ಕೆಲಸ ಮಾಡುವ ಯುವಕ ಇದ್ದಾನೆ ಅಂದ್ರೆ ಆಶ್ಚರ್ಯ… ಅಲ್ವಾ??? ಈತ ಸಮಾಜಕ್ಕೆ,ಆಶ್ರಮಕ್ಕೆ,

ಆಶ್ರಮದಲ್ಲಿರುವ ವೃದ್ಧರಿಗೋಸ್ಕರ ತನ್ನ ಜೀವನ ಮುಡಿಪಿಟ್ಟಿರುವಾಗ ಸಮಾಜದಲ್ಲಿರುವ ನನ್ನ ನಿಮ್ಮಂತವರ ಜವಾಬ್ದಾರಿ ಏನು??? ಮತ್ತೆ ಯೋಚನೆ ಮಾಡಬೇಕಾದ ಕಾಲ ಬಂದಿದೆ ಅಲ್ವಾ???
ಬೇರೆಬೇರೆ ರೀತಿಯ ಪ್ರಶಸ್ತಿ ಪುರಸ್ಕಾರಗಳನ್ನು ನೀಡುವ ಸರ್ಕಾರಕ್ಕೆ ಈ ಬಡಪಾಯಿಯ ಸೇವೆ ಕಾಣುತಿಲ್ಲವೇ?? ಈತನನ್ನು ಗುರುತಿಸುವ ಕಾರ್ಯ ನಡೆಯಲಿ…

Award
ಸಮಾಜದಲ್ಲಿ ಪರಶುರಾಮನಂತಹ ಸಾವಿರಾರು ಜನ ಹುಟ್ಟಿಬರಲಿ.. ತಾಯಿತಂದೆಯ ಪ್ರೀತಿಯ ಹೊರತಾಗಿಯೂ  ತಂದೆ ತಾಯಿಯ ಪ್ರೀತಿಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟ ಪರಶುರಾಮನಿಗೆ ಶತಶತ ನಮನಗಳು..  ಆತನಿಗೆ ದೇವ್ರು ಇನ್ನಷ್ಟು ಸೇವೆ ಮಾಡುವ ಶಕ್ತಿ ಆಯುಷ್ಯ ಅನುಗ್ರಹಿಸಲಿ ಎಂಬುದೇ ನನ್ನ ಆಶಯ…

 ನಿಮ್ಮ ಆಶಯವೂ ಅದೇ ತಾನೇ??? ಸರಿ ಅನಿಸಿದ್ರೆ ಶೇರ್ ಮಾಡಿ ಧನ್ಯವಾದಗಳು…
ಸಚಿನ್ ಜೈನ್ ಹಳೆಯೂರ್