​Facebook ಯಿಂದ ನಾವು ಸಾಲ ಪಡೆಯಬಹುದು ಹೇಗೆ ಗೊತ್ತಾ ??

​Facebook ಯಿಂದ ನಾವು ಸಾಲ ಪಡೆಯಬಹುದು ಹೇಗೆ ಗೊತ್ತಾ ?? ಅದ್ಹೇಗೆ ಹೇಗೆ ಅಂತಿರಾ !!

0

ಹೌದು ಈ ಜಗತ್ತಿನಲ್ಲಿ ನಾವು ಹಲವು ವಿಧದಲ್ಲಿ ದುಡ್ಡು ಮಾಡಬಹುದು, ಪ್ರಪಂಚದಲ್ಲಿ ದುಡ್ಡಿನ ಅವಶ್ಯಕತೆ ಪ್ರತಿಯೊಬ್ಬರಿಗಿದೆ. ನಾವು ಕೆಲವು ಬಾರಿ ನಮ್ಮನ್ನ ನಾವು ಮರೆತು ಹಲವರ ಬಳಿ ಹೋಗಿ ದುಡ್ಡು ಕೇಳುತ್ತೆವೆ.ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ದುಡ್ಡು ಮಾಡಬಹುದು ಹಾಗೆ ದುಡ್ಡು ಸಾಲ ಕೂಡ ತೊಗೋಬಹುದು.

Facebook Logo
ನಾವು ಸಾಲ ಪಡೆದುಕೊಳ್ಳಲು ಸಿದ್ದರಿದಾಗ ಸಾಲು ಕೊಡುವವರು ಸಿಗಬೇಕಲ್ಲ , ಹೌದು ನಾವು ಫೇಸ್ಬುಕ್ ಮುಕಾಂತರ ಸಾಲ ಪಡೆಯಬಹುದು.
ಅದ್ಹೇಗೆ ಹೇಗೆ ಅಂತಿರಾ !!

ಇವತ್ತಿನ ದಿನದಲ್ಲಿ ಯಾರು ತಾನೇ ಫೇಸ್ಬುಕ್ ಉಪಯೋಗಿಸಲಾ ಹೇಳ್ಳಿ ಪ್ರತಿಯೊಬ್ಬರೂ ಫೇಸ್ಬುಕ್ ಬಳಕೆದಾರರಾಗಿದ್ದಾರೆ.ಈ ಒಂದು ನೆಟ್ವರ್ಕ್ ಉಪಯೋಗಿಸಿ ಫೇಸ್ಬುಕ್ ಸಾಲ ಕೊಡುವ ಸೌಲಭ್ಯ ಪ್ರಾಂಭಿಸಿದೆ. ಇಲ್ಲಿಯವರೆಗೂ ಫ್ರೆಂಡ್ಸ್ ಗಳ ನಡುವೆ ಕೊಂಡಿಯಾಗಿದ್ದ ಫೇಸ್ ಬುಕ್ ಇನ್ಮುಂದೆ ಯಾರಿಗಾದರೂ ಹಣಕಾಸಿನ ಅವಶ್ಯಕತೆ ಇದ್ದಾರೆ ಅದನ್ನು ಪೂರೈಸುತ್ತದೆ. ಫ್ರೆಂಡ್ಸ್ ಗಳ ಮೂಲಕ ಸಾಲ ಪಡೆದುಕೊಳ್ಳುವ ಸೌಲಭ್ಯವನ್ನು ತನ್ನ ಬಳಕೆದಾರರಿಗೆ ನೀಡುತ್ತಿದೆ.

Fund Risers

https://www.facebook.com/fundraisers

ಎಂಬ ಲಿಂಕ್ ಉಪಯೋಗಿಸಿ ಯಾರು ಬೇಕಾದರು ಫೇಸ್ ಬುಕ್ ನಲ್ಲಿ ಹಣಕ್ಕಾಗಿ ಬೇಡಿಕೆ ಸಲ್ಲಿಸಬಹುದು. ಈ ಬೇಡಿಕೆಗೆ ಬಳಕೆದಾರ ನ ಫೇಸ್ ಬುಕ್ ಫ್ರೆಂಡ್ಸ್ ಜೊತೆ ಲಿಂಕ್ ಮಾಡಿ ಹಣ ಕಲ್ಪಿಸಿಕೊಡಲಾಗುತ್ತದೆ. ಅದು ದಾನ ಅಥವಾ ಸಾಲದ ರೂಪದಲ್ಲಿರಬಹುದು. ತಮಗೆ ಅವಶ್ಯವಿರುವ ಮೊತ್ತ ಪೂರ್ಣ ಪ್ರಮಾಣದಲ್ಲಿ ಸಿಗದಿದ್ದರೂ ತಮ್ಮ ಫೇಸ್ ಬುಕ್ ಮೂಲಕ ಮೂಲಕ ಮೊತ್ತವನ್ನು ಬ್ಯಾಂಕಿಗೆ ವರ್ಗಾಯಿಸಿಕೊಳ್ಳಬಹುದು. ಆದರೆ, ಈ ಪ್ರಕ್ರಿಯೆಗಾಗಿ ಫೇಸ್ ಬುಕ್ ಗೆ ಸ್ವಲ್ಪ ಹಣವನ್ನು ನೀಡಬೇಕಾಗಿರುತ್ತದೆ.


User ಗಳು ಈ ವಹಿವಾಟಿನಲ್ಲಿ ಹಣವನ್ನು ಪಡೆದುಕೊಂಡರೆ ಆ ಹಣದ ಶೇ. 6.9%ರಷ್ಟು ಹಣವನ್ನು ಫೇಸ್ ಬುಕ್ ಗೆ ಕೊಡಬೇಕಾಗುತ್ತದೆ. ಹಣವನ್ನು ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯ ಮುಖಾಂತರ ಪಡೆದುಕೊಳ್ಳಬಹುದು.ಹಣಕ್ಕಾಗಿ ಬೇಡಿಕೆ ಸಲ್ಲಿಸುವಾಗ ಹಣ ಯಾವ ಕಾರಣಕ್ಕೆ ಅವಗ್ಯವಿದೆ ಎಂದು ತಿಳಿಸಬೇಕು.

Fund risers
ನಷ್ಟವನ್ನು ಸರಿದೂಗಿಸಲು, ಶಿಕ್ಷಣ,ವೈಯುಕ್ತಿಕ ಅಗತ್ಯ,ವೈದ್ಯಕೀಯ ಚಿಕಿತ್ಸೆ, ಅಂತ್ಯಕ್ರಿಯೆ, ಕ್ರೀಡೆ, ಹೀಗೆ ಅನೇಕ ವಿಭಾಗಗಳಿರುತ್ತವೆ. ಅವುಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಸಂಬಂಧಿತ ವರ್ಗವನ್ನು ಆಯ್ದು ಕೊಂಡು, ಹಣಕ್ಕಾಗಿ ಬೇಡಿಕೆ ಸಲ್ಲಿಸಿ ಹಣವನ್ನು ಪಡೆಯಬಹುದು.