ವಿಚಿತ್ರ!!40 ದಿನಗಳ ಬಳಿಕ ಈ ದೇಶದಲ್ಲಿ ಸೂರ್ಯೋದಯವಾಯಿತು..ಯಾವುದು ಆ ದೇಶ ..?

ವಿಚಿತ್ರ!!40 ದಿನಗಳ ಬಳಿಕ ಈ ದೇಶದಲ್ಲಿ ಸೂರ್ಯೋದಯವಾಯಿತು..ಯಾವುದು ಆ ದೇಶ ..?

0

ಉತ್ತರ ರಷ್ಯಾದ ಆರ್ಕ್ಟಿಕ್ ವೃತ್ತದ ಭಾಗದ ಮುರ್ಮಾನ್ಸ್ಕ್ ನಗರದ ಜನರು ಸುದೀರ್ಘ 40 ದಿನಗಳ ಬಳಿಕ ಶುಕ್ರವಾರ ವರ್ಷದ ಮೊದಲ ಸೂರ್ಯನ ಬೆಳಕಿನ ಕಿರಣಗಳನ್ನು ಕಂಡು ಸಂಭ್ರಮಿಸಿದ್ದಾರೆ.

ಆರ್ಕ್ಟಿಕ್ ಭಾಗದ ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 2 ರಿಂದ ಜನವರಿ 11 ರ ರವರೆಗೆ 42 ದಿನಗಳ ಕಾಲ ಯಾವುದೇ ಸೂರ್ಯನ ಬೆಳಕು ಕಾಣುವುದಿಲ್ಲ. ಹೀಗಾಗಿ ವರ್ಷದ ಮೊದಲ ಸೂರ್ಯೋದಯವನ್ನು ಕಾಣಲು ಈ ಪ್ರದೇಶ ಸ್ಥಳೀಯರು ಸನ್ ರೈಸ್ ಹಿಲ್ ಬಳಿ ಒಂದು ಪ್ರದೇಶದಲ್ಲಿ ಸೇರಿ ಸಂಭ್ರಮಿಸುತ್ತಾರೆ.

ಕೇವಲ 30 ನಿಮಿಷಗಳ ಅವಧಿಯ ಸೂರ್ಯೋದಯಾದ ಚಿತ್ರಗಳನ್ನು ಇಲ್ಲಿನ ಜನರು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶದಲ್ಲಿ ವರ್ಷದಲ್ಲಿ ಒಂದು ದಿವಸ (24 ಗಂಟೆ ಕಾಲ) ಸೂರ್ಯ ಮುಳುಗುವುದೇ ಇಲ್ಲ-ಸಂಪೂರ್ಣ ಹಗಲು; ಮುಂದೆ ಒಂದು ದಿವಸ (24 ಗಂಟೆ ಕಾಲ) ಸೂರ್ಯ ಮೂಡುವುದೇ ಇಲ್ಲ. ಹಗಲು ರಾತ್ರಿಗಳ ವ್ಯತ್ಯಾಸ ಅಲ್ಲದೇ ವರ್ಷದಲ್ಲಿ ಹಲವಾರು ದಿವಸ ನಿರಂತರ ಹಗಲು ನಿರಂತರ ರಾತ್ರಿಯೂ ಇರುತ್ತವೆ