ಚೀನಾ ವಸ್ತುಗಳನ್ನು ಬಹಿಷ್ಕರಿಸೋಕೆ ಮೋದಿ ಜೀ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತಾ?? 

ಚೀನಾ ವಸ್ತುಗಳನ್ನು ಬಹಿಷ್ಕರಿಸೋಕೆ ಮೋದಿ ಜೀ ಮಾಡಿರುವ ಮಾಸ್ಟರ್ ಪ್ಲಾನ್ ಏನು ಗೊತ್ತಾ?? 

ಚೀನಾ ಬರೀ ಭಾರತದ ವಿರುದ್ಧ ಗಡಿಯಲ್ಲಿ ಮಾತ್ರ ತಗಾದೆ ತೆಗೆಯುತ್ತಿಲ್ಲ, ಪಾಕಿಸ್ತಾನಕ್ಕೂ ತನ್ನ ಬೆಂಬಲವನ್ನ ಆರ್ಥಿಕ ರೂಪದಲ್ಲಿ ನೀಡುತ್ತಿದೆ. ಆರ್ಥಿಕ ಸಹಾಯ ಪಡೆವ ಪಾಕಿಸ್ತಾನ ಆ ದುಡ್ಡನ್ನ ಭಯೋತ್ಪಾದಕರ ಟ್ರೇನಿಂಗ್ ಗಳಿಗಂತ ವಿನಿಯೋಗಿಸಿ ಆ ಭಯೋತ್ಪಾದಕರ ಮೂಲಕ ಕಾಶ್ಮೀರದಲ್ಲಿ ಹಾಗು ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳನ್ನೆಸಗೋಕೆ ಮುಂದಾಗುತ್ತಿದೆ. ಅತ್ತ ಕಾಶ್ಮೀರಕ್ಕಾಗಿ ಪಾಕಿಸ್ತಾನ ಇತ್ತ ಈಶಾನ್ಯ ರಾಜ್ಯಗಳು & ದೋಕ್ಲಾಂ ನಂತಹ ಪ್ರದೇಶಗಳಲ್ಲಿ ಚೀನಾ ಭಾರತಕ್ಕೆ ಕಿರಿಕಿರಿ ಕೊಡ್ತಿವೆ. ಇದಷ್ಟೆ ಆಗಿದ್ದರೆ ಪರವಾಗಿಲ್ಲ ನಮ್ಮ ಭಾರತೀಯ ಸೇನೆ  ಹಲಾಲ್ಕೋರರಿಗೆ ತಕ್ಕ ಪಾಠವನ್ನ ಕಲಿಸೋ ಸಾಮರ್ಥ್ಯವನ್ನ ಹೊಂದಿದ್ದಾರೆ. ಆದರೆ proxy war ಗೆ ಮುಂದಾಗಿರೋ ಚೀನಾಕ್ಕೆ ಬುದ್ಧಿ ಕಲಿಸೋದು ಹೇಗೆ? ಈ proxy war ಒಂದು ರೀತಿಯಲ್ಲಿ ಬೆನ್ನಿಗೆ ಚೂರಿ ಹಾಕಿ ಶತ್ರುವನ್ನ ಮುಗಿಸುವ ಕಲೆ. ಇದನ್ನ ಚೀನಾ ಮಾಡ್ತಿದೆ.

China

ಅದ್ಹೇಗೆ ಅಂತೀರಾ?
ಚೀನಾ ತನ್ನ ದೇಶದಲ್ಲಿ ತಯಾರಿಸಿದ ಹಲವಾರು ಪ್ರತಿಶತ ವಸ್ತುಗಳನ್ನ ಭಾರತಕ್ಕೆ ರಫ್ತು ಮಾಡಿ ಅದರಿಂದ ಲಾಭ ಪಡೆದುಕೊಂಡು, ಭಾರತದ ಹಣವನ್ನೇ ಉಪಯೋಗಿಸಿಕೊಂಡು ಭಾರತದ ವಿರುದ್ಧವೇ ತೊಡೆ ತಟ್ಟಿ ನಿಲ್ತಿರೋದು. ಈ ಎಲ್ಲ ಕಾರಣಗಳಿಗಾಗಿಯೇ ದೇಶಭಕ್ತ ಸಂಘಟನೆಗಳು, ಚೀನಾದ ನರಿಬುದ್ಧಿ ಗೊತ್ತಿರುವ ಸಾಮಾನ್ಯ ಜನರು “ಚೀನಾ ವಸ್ತುಗಳನ್ನ ಬಹಿಷ್ಕರಿಸಿ” ಅನ್ನೋ ಕ್ಯಾಂಪೇನ್ ಗಳನ್ನೂ ಮಾಡ್ತಿದಾರೆ, ಈ ಕ್ಯಾಂಪೇನ್ ಸಾಕಷ್ಟು ಪ್ರಭಾವ ಬೀರಿದ್ದು ಚೀನಾದ ಅದೆಷ್ಟೋ ವಸ್ತುಗಳು ಸ್ಟಾಕ್ ಸ್ಟಾಕ್ ಆಗೇ ಉಳಿದಿವೆ.
“ಚೀನಾ ವಸ್ತುಗಳನ್ನ ಬಹಿಷ್ಕರಿಸಿ” ಅಂತ ಕ್ಯಾಂಪೇನ್ ಮಾಡುವಾಗ ಕೆಲ ಜನರು “ನಮ್ಮನ್ನ ಚೀನಾ ವಸ್ತುಗಳನ್ನ ಬಹಿಷ್ಕರಿಸಿ ಅನ್ನೋ ಬದಲು ಮೋದಿಗೆ ಮೊದಲು ಚೀನಾ ವಸ್ತುಗಳ import export ಬಹಿಷ್ಕರಿಸೋಕ್ ಹೇಳ್ರಿ, ನಾವು ಬಹಿಷ್ಕಾರ ಹಾಕ್ತಾ ಹೋಗ್ಬೇಕು ಆತ import export ಮಾಡಸ್ಗೊಳ್ಳೋದು” ಅಂತಂದಾಗ ಎದುರಿಗಿದ್ದವನ ಪಿತ್ತ ನೆತ್ತಿಗೇರೋದಂತೂ ನಿಜ & ಒಂದು ಕ್ಷಣಕ್ಕೆ ಆತ ಕೇಳ್ತಿರೋದು ನಿಜ ಅಲ್ವ ಅಂತ ಮನಸ್ಸಿನ ಒಂದು ಮೂಲೇಲಿ ಆತನ ಪ್ರಶ್ನೆ ನಮಗೂ ಕಾಡುತ್ತೆ.

ಅಷ್ಟಕ್ಕೂ ಚೀನಾ ವಸ್ತುಗಳ ಹಾವಳಿ ತಡೆಯೋಕೆ ಮೋದಿ ಏನ್ ಮಾಡ್ತಿದಾರೆ?ತಿಳಿಯೋಣ ಬನ್ನಿ!!

ಒಂದು ದೇಶ ಅಭಿವೃದ್ಧಿ ಹೊಂದಬೇಕಾದರೆ ಅಲ್ಲಿನ ಕಾರ್ಖಾನೆಗಳು ಬಹುಮುಖ್ಯವಾದ ಪಾತ್ರ ವಹಿತ್ತವೆ. ಹೌದು, ಅತಿಮುಖ್ಯವಾಗಿ ಅಲ್ಲಿನ ಉದ್ಯೋಗ ಅವಕಾಶಗಳು ಕಾರ್ಖಾನೆಗಳ ಮೇಲೆ ಅವಲಂಬಿತವಾಗಿರುತ್ತವೆ ಮತ್ತು ಆ ದೇಶದ ಆಂತರಿಕ ಉತ್ಪನ್ನದ(GDP) ಅಂಕಿಅಂಶಗಳು ಉದ್ಯೋಗಿಗಳ ಮೇಲೆ ಪರಸ್ಪರ ಅವಲಂಬಿಸಿರುತ್ತವೆ.

ಭಾರತದ ಕಾರ್ಖಾನೆಗಳು 2014 ರ ಮುಂಚೆ ಬಹಳ ಕುಂಠಿತಗೊಂಡಿದ್ದವು, ಏಕೆಂದರೆ ದಿನಬೆಳಗಾದರೆ ಭಾರತದ ಮಾರುಕಟ್ಟೆಯಲ್ಲಿ ಚೀನಾದ ವಸ್ತುಗಳು ಹರಿದಾಡುತ್ತಿದ್ದವು ಇದರ ಪರಿಣಾಮ ಭಾರತದ ಬಹಳಷ್ಟು ಕಾರ್ಖಾನೆಗಳು ಮುಚ್ಚಿದವು ಮತ್ತು ನಷ್ಟ ಅನುಭವಿಸಿದವು.
ಈ ಸಮಸ್ಯೆಗಳಿಗೆ ನೇರ ಹೊಣೆ ನಮ್ಮ ಹಿಂದಿನ 10 ವರ್ಷಗಳ ಕಾಲವಿದ್ದ UPA ಸರ್ಕಾರ ಮತ್ತು ಸರಕಾರಕ್ಕೆ ಸ್ಥಳೀಯ ಕಾರ್ಖಾನೆಗಳು, ಉತ್ಪಾದಕರು ದೂರು ನೀಡಿದರು ಯಾವುದೇ ಕ್ರಮಗಳನ್ನ ಕೈಗೊಳ್ಳದೇ ಇರೋದು.

ಚೀನಾದ ವಸ್ತುಗಳು ಭಾರತಕ್ಕೆ ಹೆಚ್ಚು ಆಮದು ಆಗಲು ಕಾರಣವಾದರೂ ಏನು?
ಇದನ್ನ ಅರ್ಥ ಮಾಡಿಕೊಳ್ಳಬೇಕಾದರೆ ಮೊದಲು ನೀವು ಈ ಎರಡು ಆರ್ಥಿಕ ಪದಗಳ ವ್ಯಾಖ್ಯಾನಗಳನ್ನ ತಿಳಿದುಕೊಳ್ಳಬೇಕಾಗುತ್ತೆ. ಅವುಗಳೇ Dumping and Anti Dumping!!

Dumping ಎಂದರೇನು??
ಡಂಪಿಂಗ್(Dumping) ಅನ್ನೋದು ಸಾಮಾನ್ಯವಾಗಿ, ಅಂತರ್ರಾಷ್ಟ್ರೀಯ ಬೆಲೆ ತಾರತಮ್ಯ, ಆಮದು(import) ಮಾಡಿಕೊಳ್ಳುವ ದೇಶದಲ್ಲಿ ಮಾರಾಟವಾದ ಉತ್ಪನ್ನದ ಬೆಲೆ ರಫ್ತು ಮಾಡುವ ದೇಶದಲ್ಲಿನ ಮಾರುಕಟ್ಟೆಯ ಉತ್ಪನ್ನಕ್ಕಿಂತ ಕಡಿಮೆಯಾಗಿರುವುದು.

Dumping

ಉದಾಹರಣೆ:
ಊಹಿಸಿಕೊಳ್ಳಿ ಚೀನಾ 1000 ಮೊಬೈಲ್ ಗಳ ಉತ್ಪನ್ನ ಮಾಡಿದೆ ಆದರೆ ಚೀನಾದ ಮಾರುಕಟ್ಟೆಯಲ್ಲಿ 500 ಮೊಬೈಲುಗಳ ಬೇಡಿಕೆ ಮಾತ್ರವಿದೆ, ಈಗ ಹೆಚ್ಚುವರಿಯಾಗಿರುವ ಆ 500 ಮೊಬೈಲುಗಳನ್ನ ಭಾರತದ ಮಾರುಕಟ್ಟೆಯಲ್ಲಿ ಡಂಪ್ ಮಾಡಿ ಮಾರಾಟ ಮಾಡುತ್ತದೆ. ಅದೂಕೂಡಾ ಚೀನಾದಲ್ಲಿ ಮಾರಾಟವಾಗುವ ಬೆಲೆಗಿಂತಲೂ ಕಡಿಮೆ ಮತ್ತು ಕೆಲವು ಬಾರಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆ.

ಚೀನಾ ತನ್ನ ದೇಶದ ವಸ್ತುಗಳನ್ನ ನರಿ ಬುದ್ಧಿಯಿಂದ ಭಾರತ ದೇಶದಲ್ಲಿ ಡಂಪ್ ಮಾಡುವ ಅಸ್ತ್ರ ಕೆಲವು ವರ್ಷಗಳಿಂದ ಪ್ರಯೋಗ ಮಾಡುತ್ತಿದೆ & ಅದರಲ್ಲಿ ತಕ್ಕ ಮಟ್ಟಿಗೆ ಯಶಸ್ಸೂ ಕಂಡಿದೆ. ಸರಿಸುಮಾರು 76% ವಸ್ತುಗಳು ಚೀನಾ ದೇಶದಿಂದ ನಮ್ಮ ದೇಶಕ್ಕೆ ಆಮದು ಆಗುತ್ತಿದೆ. ಚೀನಾದಲ್ಲಿ 100 ರೂಪಾಯಿಯ ವಸ್ತುವನ್ನು ಅಲ್ಲಿನ ಪಿಎಸ್‌ಯು(PSU) ಖರೀದಿಸಿ ಇತರೆ ದೇಶಗಳಿಗೆ 80 ರೂಪಾಯಿಯ ಬೆಲೆಗೆ ಮಾರುತ್ತವೆ. ಇಲ್ಲಿ ಆಗುವ 20 ರೂಪಾಯಿ ನಷ್ಟವನ್ನು ಖುದ್ದು ಚೀನಾ ಸರಕಾರವೇ ಭರಿಸುತ್ತದೆ. ಚೀನಾ ಸರಕಾರ ಅಮೆರಿಕಾದ ಅರ್ಧದಷ್ಟು ಜಿಡಿಪಿ ಇಟ್ಟುಕೊಂಡೂ, ತಾನು ರಫ್ತು ಮಾಡಿ ಹಣ ಮಾಡುತ್ತಿರುವುದರಿಂದ ಹೆಚ್ಚು ಹಣವನ್ನು ಮುದ್ರಿಸಿ ನಾಟಕೀಯವಾಗಿ ತನ್ನ ದೇಶದ ಮಾರುಕಟ್ಟೆ ಉತ್ತಮ ಸ್ಥಿತಿಯಲ್ಲಿದೆ ಎಂದು ತೋರಿಸಿಕೊಳ್ಳುತ್ತಿದೆ. ಸರಕಾರ ಬಿಡುಗಡೆ ಮಾಡುವ ಈ ಅಂಕಿಅಂಶಗಳನ್ನು ಯಾರೂ ಪ್ರಶ್ನಿಸುವಂತಿಲ್ಲ. ಕಾರಣ ಅಲ್ಲಿರುವುದು ದೈತ್ಯ ಕಮ್ಯುನಿಸ್ಟ ಸರಕಾರ.

ಈ Anti Dumping duty ಎಂದರೇನು??
Anti ಡಂಪಿಂಗ್(Anti-dumping duty) ಅನ್ನೋದು ಒಂದು ದೇಶದ ಸರ್ಕಾರ ವಿದೇಶದಿಂದ ಆಮದು(import) ಮಾಡಿಕೊಂಡ ವಸ್ತುಗಳ ಮೇಲೆ ವಿಧಿಸುವ ಒಂದು ರೀತಿಯ ರಕ್ಷಣಾ ನೀತಿಯ ಸುಂಕವಾಗಿದೆ(tariff).

Anti Dumping

ಉದಾಹರಣೆ:
ಊಹಿಸಿಕೊಳ್ಳಿ, ಚೀನಾ 1000 ಮೊಬೈಲ್ ಗಳ ಉತ್ಪನ್ನ ಮಾಡಿದೆ ಆದರೆ ಚೀನಾದ ಮಾರುಕಟ್ಟೆಯಲ್ಲಿ 500 ಮೊಬೈಲುಗಳ ಬೇಡಿಕೆಯಿದೆ ಅಂದುಕೊಳ್ಳಿ, ಹೆಚ್ಚುವರಿ 500 ಮೊಬೈಲುಗಳು ಭಾರತದ ಮಾರುಕಟ್ಟೆಯಲ್ಲಿ ಡಂಪ್ ಮಾಡಿ ಮಾರಾಟ ಮಾಡುತ್ತದೆ ಅದೂಕೂಡಾ ಚೀನಾದಲ್ಲಿ ಮಾರಾಟವಾಗುವ ಬೆಲೆಗಿಂತಲೂ ಕಡಿಮೆ ಮತ್ತು ಕೆಲವು ಬಾರಿ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತದೆ. ಇದಕ್ಕೆ ಪ್ರತಿಯಾಗಿ(ಪ್ರತಿದಾಳಿಯಾಗಿ) ಆ 500 ಮೊಬೈಲ್ ಗಳ ಮೇಲೆ ಅತೀ ಹೆಚ್ಚಿನ ಸುಂಕವನ್ನು(tax) ಹೇರುವುದು!! ಇದರ ಪರಿಣಾಮ ಚೀನಾ ದೇಶ ಡಂಪಿಂಗ್ ಪೂರ್ಣ ಪ್ರಮಾದಲ್ಲಿ ಕಡಿಮೆ ಮಾಡುವುದು!!

ಮೋದಿ ಸರ್ಕಾರ ಮಾಡಿದ್ದೆನು??

ಮೋದಿ ಸರ್ಕಾರದ ಇತ್ತೀಚಿಗಿನ ಉತ್ತಮ ಬೆಳವಣಿಗೆಯೆಂದರೆ, ಚೀನಾದಿಂದ ಡಂಪ್ ಆಗುತ್ತಿದ್ದ 93 ವಸ್ತುಗಳ ಮೇಲೆ Anti Dumping ಶುಲ್ಕ ಹೇರಲಾಗಿದೆ. ಕಳೆದ ವರ್ಷ ಸ್ಟೀಲ್, ರಾಸಾಯನಿಕ ವಸ್ತುಗಳ, ರಸಗೊಬ್ಬರಗಳು ಚೀನಾದಿಂದ ಡಂಪ್ ಆಗುತ್ತಿದ್ದ ವಸ್ತುಗಳಲ್ಲಿ ಇಳಿಮುಖವಾಯಿತು. ಚೀನಾದ ಸ್ಟೀಲ್ ರಫ್ತು ಒಂದರಲ್ಲೇ 43% ಕಡಿಮೆಯಾಗಿದೆ(as per Ministry of commerce data). ಸಂಪೂರ್ಣವಾಗಿ ಬಹಿಷ್ಕರಿಸಲು ಅಸಾಧ್ಯ. ಅವುಗಳಿಗೆ ಅಂತಾರಾಷ್ಟ್ರೀಯ ಬಾಧ್ಯತೆಗಳಿರುತ್ತವೆ(WTO Rules).

ಮುಂದಿನ ದಿನಗಳಲ್ಲಿ ಚೀನಾದಿಂದಾಗುವ ರಫ್ತು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕುಸಿತ ಕಾಣುವ ಲಕ್ಷಣಗಳಿವೆ. ಇದರಿಂದ ನಮ್ಮ ಕಾರ್ಖಾನೆಗಳು ಪುನರುಜ್ಜೀವನಗೊಳ್ಳುತ್ತವೆ, ನಮ್ಮ ಯುವಕರಿಗೆ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ದೇಶದ ಆರ್ಥಿಕ ಪರಿಸ್ಥಿತಿಯೂ ಉತ್ತಮವಾಗುವುದರಲ್ಲೂ ಯಾವುದೇ ಸಂಶಯವಿಲ್ಲ. ನಮ್ಮ ಹಿಂದಿನ ಪ್ರಧಾನ ಮಂತ್ರಿಗಳು ಆರ್ಥಿಕ ತಜ್ಞರಾದರೂ ಈ ಸಮಸ್ಯೆ ಬಗೆಹರಿಸೋಕೆ ಆಗಲಿಲ್ಲ, ಈ ಸಮಸ್ಯೆ ಪರಿಹರಿಸೋಕೆ ಕೊನೆಗೆ ಮೋದಿಯೇ ಬರಬೇಕಾಯಿತು!!

REport

ಇದನ್ನ ಅರಿಯದ ನಮ್ಮ ಸತ್ ಪ್ರಜೆಗಳು ಯಾವಾಗಲು ಮೋದಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿವೆ ಮತ್ತೊಂದೆಡೆ ವಿರೋಧ ಪಕ್ಷಗಳು ಬೊಬ್ಬೆಹೊಡೆಯುತ್ತಿವೆ.!! ಇನ್ನಾದರೂ ಜನ ಮೋದಿ ಸರ್ಕಾರವನ್ನ ಟೀಕಿಸುವ ಬದಲು ಮೋದಿ ಏನು ಮಾಡುತ್ತಿದ್ದಾರೆ ಅನ್ನೋದರ ಬಗ್ಗೆಯೂ ಸ್ವಲ್ಪ ಗಮನಹರಿಸಿ!!

-ಪ್ರಭಾಕರ ಜವಳಿ