“ನನ್ನ ಅಂತಿಮಸಂಸ್ಕಾರ ಯುದ್ಧಭೂಮಿಯಲ್ಲೇಮಾಡಿ, ಕೈಯಲ್ಲಿರುವ ಉಂಗುರ ನನ್ನ ಮುದ್ದಿನ ಮಗಳಿಗೆ ಕೊಟ್ಟುಬಿಡಿ !!!

“ನನ್ನ ಅಂತಿಮಸಂಸ್ಕಾರ ಯುದ್ಧಭೂಮಿಯಲ್ಲೇಮಾಡಿ, ಕೈಯಲ್ಲಿರುವ ಉಂಗುರ ನನ್ನ ಮುದ್ದಿನ ಮಗಳಿಗೆ ಕೊಟ್ಟುಬಿಡಿ !!!

0

ಅದು ಭಾರತ ಹಾಗೂ ಪಕ್ಕದ ವೈರಿ ರಾಷ್ಟ್ರ ಪಾಕಿಸ್ತಾನದೊಂದಿಗಿನ 1965ರ ಯುದ್ಧ. ಅಂದಿನ ಪ್ರಧಾನಿ ಲಾಲ್ಬಾಹುದ್ದೂರ್ ಶಾಸ್ತ್ರೀಜಿ “ಜೈ ಜಾವಾನ್ ಜೈ ಕಿಸಾನ್” ಎಂದು ಸೈನಿಕರ ಹಾಗೂ ರೈತರ ಮನೋಸ್ಟೈರ್ಯವನ್ನು ಹೆಚ್ಚಿಸಿ ಹೋರಾಡಿದ ಯುದ್ದವದು. ಹಲವಾರು ತಾಯಂದಿರು ಮಗನನ್ನು, ಹಣೆಯ ಕುಂಕುಮವನ್ನು ಹಾಗೂ ಸಣ್ಣ ಪುಟಾಣಿಗಳು ತಮ್ಮ ತಂದೆಯನ್ನು ಕಳಕೊಂಡು ತಬ್ಬಲಿಗಳಾಗ ಘೋರ ಯುದ್ದವದು.

ಆ ಯುದ್ಧದಲ್ಲಿ ಹೋರಾಡಿದ ಧೀರ ಹಾಗೂ ದಿಟ್ಟ ಯೋಧ ಲೆಫ್ಟಿನೆಂಟ್ ಕರ್ನಲ್ ತಾರಪುರ್. ನವೆಂಬರ್ ಎರಡನೇ ದಿನದಂದು ನಿರಂಜನ್ ಸಿಂಹ್ ಅವರನ್ನು ಯುದ್ಧದ ರಣನೀತಿಯ ಬಗ್ಗೆ ಚರ್ಚಿಸಲು ಕೋಣೆಯೊಳಗೆ ಕರೆದ ತಾರಪುರ್ “ಒಂದುವೇಳೆ ನಾನು ಯುದ್ಧದ್ದಲ್ಲಿ ಹತನಾದ್ರೆ ನನ್ನ ಅಂತಿಮಸಂಸ್ಕಾರ ಯುದ್ಧಭೂಮಿಯಲ್ಲೇ ಮಾಡಿ, ನನ್ನ ಪ್ರಾರ್ಥನಾ ಪುಸ್ತಕವನ್ನು ನನ್ನ ತಾಯಿಗೆ ಕೊಡಿ, ಕುತ್ತಿಗೆಯಲ್ಲಿರುವ ಚಿನ್ನದ ಸರ ನನ್ನ ಹೆಂಡತಿಗೆ ಕೊಡಿ, ನನ್ನ ಉಂಗುರ ಮಗಳಿಗೆ ಕೊಡಿ, ನನ್ನ ಪೌನ್ಟೈನ್ ಪೆನ್ ನನ್ನ ಮಗನ ಕಿಸೆಯಲ್ಲಿಟ್ಟುಬಿಡಿ” ಎಂದು ಬಾವೋದ್ವೇಕಗೊಂಡು ಹೇಳಿದರು.

ಈ ಮಾತುಹೇಳಿ ಅದಾಗಲೇ ಐದು ದಿನಗಳು ಕಳೆದಿವೆ ಅಷ್ಟೇ. ಪಾಕಿಸ್ತಾನದ ಕಡೆಯಿಂದ ಬಂದ ಮೊಟರ್ ಶೆಲ್ಲೊಂದು ತಾರಪುರ್ ಕೈಗೆ ಬಿದ್ದಿದೆ. ತೀವ್ರ ಗಾಯಗೊಂಡು ಇನ್ನೇನು ನಡೆಯಲೂ ಸಾಧ್ಯವಾಗದ ಸ್ಥಿಯಲ್ಲಿದ್ದ ಅವರನ್ನು ಯುದ್ದಭೂಮಿಯಿಂದ ಹಿಂತಿರುಗಿ ಹೋಗಿ ಚಿಕಿತ್ಸೆ ಪಡೆಯಲು ಅವರ ಸಹೋದ್ಯೋಗಿಗಳು ಎಷ್ಟು ಒತ್ತಾಯ ಮಾಡಿದರೂ ತಾರಪುರ್ ನೋವಿನಲ್ಲಿ ಕಣ್ಣುಮಂಜು ಮಂಜಾದರೂ ತನ್ನ ಹೋರಾಟಬಿಟ್ಟು ಹಿಂತಿರುಗಲಿಲ್ಲ.

ಬ್ರಿಗೇಡಿಯರ್ ಕೇಕೆ ಸಿಂಗ್ ಅವರು “ಜಸೂರನ್ ಮತ್ತು ವಝಿರ್ವಾಲಿ ಎನ್ನುವ ಸ್ಥಳಗಳನ್ನು ಅದೇ ತಿಂಗಳ 14 ಮತ್ತು 15ರೊಳಗೆ ಅಕ್ರಮಿಸಿಕೊಳ್ಳಬೇಕು” ಎಂದು ಅದೇಶವಿತ್ತರು. ಆ ಸಮಯದಲ್ಲಿ ತಾರಪುರ್ ಅವರ ಜೀವದಗೆಳೆಯರಾಗಿದ್ದವರು ಕ್ಯಾಪ್ಟನ್ ಅಜಯ್ ಸಿಂಗ್(ನಂತರದಲ್ಲಿ ಇವರು ಲೆಫ್ಟಿನೆಂಟ್ ಜನರಲ್ ಆಗಿ ಹಾಗೂ ಅಸ್ಸಾಂ ರಾಜ್ಯದ ರಾಜ್ಯಪಾಲರಾಗಿ ಕಾರ್ಯ ನಿರ್ವಹಿಸಿರುತ್ತಾರೆ). ತಾರಪುರ್ ಹಾಗೂ ಅವರ ಗೆಳೆಯ ಅಜಯ್ ವೀರಾವೇಶದಿಂದ ಪಾಕಿಸ್ತಾನದ ಕಡೆಗೆ ಮುನ್ನುಗ್ಗುತ್ತಿದ್ದರು. ಪ್ರತಿಯಾಗಿ ಪಾಕಿಸ್ತಾನದ ಕಡೆಯಿಂದಲೂ ಭಾರಿ ಗುಂಡಿನದಾಳಿಯಾದಗ, ಆತಂಕಗೊಂಡ ಅಜಯ್ ತಾರಪುರ್ ಅವರಿಗೆ ನಮ್ಮಲ್ಲಿರುವ ಟ್ಯಾಂಕಿನ ಸಂಖ್ಯೆ ಕಡಿಮೆಯಾಗಿದೆ ಏನು ಮಾಡುವುದು? ಎಂದು ಪ್ರಶ್ನೆ ಮಾಡಿದಾಗ, ಮಿಂಚಿನವೇಗದಲ್ಲಿ ಕ್ಷಣಾರ್ಧದಲ್ಲಿ ತಾರಪುರ್ ಅವರು ಎಂಟು ಟ್ಯಾಂಕ್ಗಳನ್ನು ತಂದು ನಿಲ್ಲಿಸಿ ಅದಕ್ಕೆ ಬೇಕಾಗುವ ಸೈನಿಕರನ್ನು ನಿಯೋಜಿಸಿ ಸ್ವತಃ ತಾನೂ ಒಂದು ಟ್ಯಾಂಕಿನ ಜೋತೆಗೆ ಯುದ್ಧಭೂಮಿಗೆ ಎಂಟ್ರಿಕೊಟ್ಟು ಅಜಯ್ ಪಕ್ಕತಂದು ತನ್ನ ಟ್ಯಾಂಕ್ ನಿಲ್ಲಿಸಿ ಪಾಕಿಸ್ತಾನದ ಕಡೆಗೆ ಗುಂಡಿನಮಳೆಗೈದರು.

ಅಷ್ಟೋರಳಗೆ ವೀರಾವೇಶದಿಂದ ಹೋರಾಡುತ್ತಿದ್ದ ಆ ವೀರ ಯೋಧನಮೇಲೆ ಅದ್ಯಾರ ಕೆಟ್ಟಕಣ್ಣುಬಿತ್ತೋ ಏನೋ ಸಂಜೆಯಾಗುತ್ತಿದ್ದಂತೆ ಪಾಕಿಸ್ತಾನದ ಕಡೆಯಿಂದ ಬಂದ ಬಾಂಬೊಂದು ತಾರಪುರ್ ಅವರ ಪ್ರಾಣಪಕ್ಷಿ ದೇಹಬಿಟ್ಟು ಹೆದರಿ ಓಡುವಂತೆ ಮಾಡಿಯೇಬಿಟ್ಟಿತು. ಧೀರಯೋದನ ಧೀರತನ ಇತಿಹಾಸವಾಗಿ ಬಿಟ್ಟಿತು. ತಾರಾಫೋರ್ ಪ್ರಾಣ ತಾಯಿ ಭಾರತಿಯ ಪಾದಕ್ಕೆ ಅರ್ಪಣೆಯಾಗಿತ್ತು. ತಾರಪುರ್ ಹೋರಾಡಿದ್ದ ಆ ಕುಶುಭ್ ಎಂಬ ಟ್ಯಾಂಕ್ ತೀವ್ರವಾಗಿ ಹಾನಿಗೊಳಗಾಗಿದ್ದ ಕಾರಣ ಅದು ಸ್ಟಾರ್ಟ್ಆಗಲಿಲ್ಲ ಆ ಕಾರಣಕ್ಕೆ ಅಜಯ್ ಸಿಂಹ್ ಅದನ್ನು ಯುದ್ಧಭೂಮಿಯಲ್ಲೇ ಬಿಟ್ಟುಬಂದರು. ನಾವು ಇಂದಿಗೂ ಪಾಕಿಸ್ತಾನದ ವಾರ್ ಮ್ಯೂಸಿಯಂಲ್ಲಿ ಭಾರತದ ಈ ಟ್ಯಾಂಕನ್ನು ನೋಡಬಹುದು.

ತಾರಾಫೋರ್ ಅವರ ಮಗಳು ಝರಿನ್ ಹೇಳುವಂತೆ “ತಂದೆಯ ಕೊನೆಯ ದಿನಗಳಲ್ಲಿ ಅವರ ಬಲಗೈ ಭಾರಿ ನೋವಿನಿಂದ ಕೂಡಿತ್ತು ರಕ್ತ ಹರಿಯುತ್ತದೆ ಎಂದು ಯುದ್ಧಕ್ಕೆ ಹೋಗುವಾಗ ಬಿಳಿಬಟ್ಟೆಕಟ್ಟಿಕೊಂಡು ಹೋಗುತ್ತಿದ್ದರು, ಮತ್ತು ಎಡಗೈಲ್ಲಿ ಊಟ ಮಾಡುತ್ತಿದ್ದರು. ಆ ನೋವಿನಲ್ಲೂ ನನ್ನ ಹುಟ್ಟಿದ ಹಬ್ಬದ ದಿನ ಕರೆಮಾಡಿದ್ದ ಅವರು ಅರ್ಧಗಂಟೆಗೂ ಹೆಚ್ಚುಸಮಯ ಖುಷಿಖುಷಿಯಾಗಿ ಮಾತಾಡಿದ್ದರು. ಹೇಳಿಕೇಳಿ ಅವರು ಯುದ್ಧಭೂಮಿಗೆ ಹೋಗುವಾಗ ಉಳಿದ ಸೈನಿಕರಂತೆ ಹೆಲ್ಮೆಟ್ ಧರಿಸುತ್ತಿರಲ್ಲಿಲ್ಲ. ಕಪ್ಪುಕೂಲಿಂಗ್ಗ್ಲಾಸ್ ಹಾಕಿಕೊಂಡು ಟ್ಯಾಂಕ್ ಚಾಲನೆ ಮಾಡುತಿದ್ದರು. ಒಂದು ದಿನ ಇದೇ ವಿಷಯಕ್ಕೆ ನನ್ನ ತಾಯಿ ತಂದೆಗೆ ಚೆನ್ನಾಗಿ ಬೈದಿದ್ದರು, ಇದು ನಂಗೆ ಚೆನ್ನಾಗಿ ನೆನಪಿದೆ.”

ಕ್ಯಾಪ್ಟನ್ ಅಜಯ್ ಸಿಂಹ್ ಅವರು ತನ್ನ ಹೃದಯದ ಸ್ನೇಹಿತ ತಾರಾಫೋರ್ ಅವರ ವೀರ ಯೋಶೋಗಾಥೆಯನ್ನು ವಿವರಿಸುತ್ತಾ “ನನಗೆ ನೆನಪಿದೆ ಯುದ್ಧದ ಸಂದರ್ಭದಲ್ಲಿ ಮತ್ತೊಬ್ಬ ಸೈನಿಕರೊಬ್ಬರು ತಾರಪೋರಲ್ಲಿ ನಿಮ್ಮ ಪೊಸಿಷನ್ ಬದಲಿಸಬಹುದಲ್ಲಾ? ಎಂದಾಗ ಇಲ್ಲಾ ಎಂದ ತಾರಾಫೋರ್ ನೀವು ಎಲ್ಲಿದ್ದಿರೋ ಅಲ್ಲೇ ಇರಿ ನಿಮಿಗೆ ಒಂದುವೇಳೆ ಗುಂಡು ಬಂದರೆ ಅದು ಮೊದಲು ನನ್ನ ಎದೆಗೆ ಹೊಕ್ಕಲಿ ಎಂದ್ದಿದ್ದರು. 1965ರ ಯುದ್ಧದ ಯುದ್ಧಭೂಮಿಯಲ್ಲಿ ತಾರಾಫೋರ್ ಅವರ ಏರುದ್ವನಿಯ ಕಮಾಂಡ್ ಕೇಳುವಾಗ ಮೈರೋಮಾಂಚನವಾಗುತ್ತಿತ್ತು”

ಲೆಫ್ಟಿನೆಂಟ್ ಜನರಲ್ ನಿರಂಜನ್ ಚಿಮಾ ಅವರ ಪತ್ನಿ ಉಷಾ ಚಿಮಾ ಹೇಳುವಂತೆ “1965ರ ಯುದ್ಧಕ್ಕೆ ಗಂಡನನ್ನು ರೈಲಿನಲ್ಲಿ ಕಳುಹಿಸಿಕೊಡಲು ಪುನಾ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಗ, ಇನ್ನೇನು ರೈಲು ಹೊರಡುತ್ತದೆ ಎಂದಾಗುವಾಗ ನನ್ನ ಬಳಿಬಂದ ತಾರಪುರ್ ನಿಮ್ಮ ಗಂಡನನ್ನು ನಾನು ಚೆನ್ನಾಗಿ ನೋಡಿಕೊಳ್ಳುತ್ತೆನೆ ಚಿಂತೆ ಮಾಡಬೇಡಿ ಎಂದರು. ನಿಜವಾಗಿಯೂ ತಾರಪುರ್ ನನ್ನ ಗಂಡನನ್ನು ಚೆನ್ನಾಗಿ ನೋಡಿಕೊಂಡು ಮಾತು ಉಳಿಸಿಕೊಂಡರು. ಆದರೆ ಸ್ವತಃಕ ಅವರೇ ಲೋಕಬಿಟ್ಟು ಹೋದರಲ್ಲಾ”.

1966ರ ಗಣರಾಜ್ಯೋತ್ಸವದ ದಿನ ಕರ್ನಲ್ ತಾರಾಫೋರ್ ಅವರ 41ವರ್ಷದ ವಿಧವೆ ಪತ್ನಿ ತನ್ನೆರಡು ಸಣ್ಣ ಮಕ್ಕಳೊಂದಿಗೆ ದೆಹಲಿಗೆ ತನ್ನ ಹುತಾತ್ಮ ಗಂಡನಿಗೆ ಲಭಿಸಿದ ಸೇನೆಯ ಪರಮೋನ್ನತ ‘ಪರಮವೀರ’ ಪುರಸ್ಕಾರ ಪಡೆಯಲು ಬಂದಿದ್ದರು. ಸರ್ವಪಳ್ಳಿ ರಾಧಾಕೃಷ್ಣನ್ ಅವರು ಗೌರವ ಹಸ್ತಾಂತರ ಮಾಡಿದರು. ಪತಿಯನ್ನು ನೆನೆದು ಬಾವೋದ್ವೇಕಗೊಂಡ ಅವರು ತನ್ನೆರಡು ಮಕ್ಕಳನ್ನು ತಬ್ಬಿಕೊಂಡು ಅತ್ತಿದ್ದರು.

ದೇಶಕಂಡ ಅಮರರತ್ನ ಕ್ಯಾಪ್ಟನ್ ತಾರಾಫೋರ್. ದೇಹದಲ್ಲಿದ್ದ ಬಿಸಿರಕ್ತ ಭೂಮಿಗೆ ಚೆಲ್ಲಿ ತಾಯಿಭಾರತಿಯ ಹಣೆಯ ಕುಂಕುಮ ಅಳಿಸದಂತೆ ಉಳಿಸಿದಾತ ಸಹೋದರ ತಾರಾಫೋರ್. ಇಂತಹ ಧೀರರ ಪರಿಶ್ರಮದ ಫಲವೇ ನಾವಿಂದು ಇಷ್ಟು ಸುಖವಾಗಿರಲು ಕಾರಣ. ಆದರೆ ನಮ್ಮಲ್ಲಿ ರಾಷ್ಟ್ರ ಭಕ್ತಿ ಎಷ್ಟಿದೆ? ತಾರಪೋರನ ಹಾಗೇ ವೀರಾವೇಶದಿಂದ ಹೋರಾಡಿ ದೇಶಕೋಸ್ಕರ ಪ್ರಾಣಾರ್ಪಣೆ ಮಾಡುವುದು ಬೇಡ ದೇಶಕೋಸ್ಕರ ತಲೆಯಿತ್ತಿ ಬದುಕಬಹುದಲ್ವಾ? ಭಾರತೀಯರು ನಾವು ಭಾಗ್ಯವಂತರು ಎಂದು ಎದೆತಟ್ಟಿ ಹೇಳಬಹುದಲ್ವೆ? ಸಾಧ್ಯವೇ?

ಸಚಿನ್ ಜೈನ್ ಹಳೆಯೂರ್