ಗಡಿಯಲ್ಲಿ ತಾಯಿನಾಡಿಗೋಸ್ಕರ ಆರು ಯೋಧರು ಹುತಾತ್ಮ ..!! ಹೊಸ ವರ್ಷಾಚರಣೆ ಸಲ್ಲದು.

ಹೊಸ ವರ್ಷದ ಮುನ್ನಾದಿನ ಭಾರತಕ್ಕೆ ಪಾಕಿಸ್ತಾನದ ಉಗ್ರರು ಕ್ರೌರ್ಯದ ಆಘಾತ ನೀಡಿದ್ದಾರೆ. ಹೊಸ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿರುವ ಸಿಆರ್​ಪಿಎಫ್ ತರಬೇತಿ ಶಿಬಿರ ಗುರಿಯಾಗಿಸಿಕೊಂಡು ಶನಿವಾರ ರಾತ್ರಿ ಜೈಶ್ ಎ ಮೊಹಮ್ಮದ್ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದಾರೆ. ಭಾರತ ಯೋಧರು ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮತ್ತೊಂದೆಡೆ ಗಡಿಯಲ್ಲಿ ಪಾಕ್ ಯೋಧರು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

Indian army

ಮಧ್ಯರಾತ್ರಿ ನುಗ್ಗಿದರು…

ಬೆಳಗಿನ ಜಾವ 2 ಗಂಟೆಯಲ್ಲಿ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಪುಲ್ವಾಮಾದ ಲೆತ್ಪೋರಾದಲ್ಲಿರುವ ಸಿಆರ್​ಪಿಎಫ್ ತರಬೇತಿ ಶಿಬಿರಕ್ಕೆ ನುಗ್ಗಿದ ಉಗ್ರರ ತಂಡ ಮೊದಲು ಗ್ರೆನೇಡ್ ಮೂಲಕ ದಾಳಿ ನಡೆಸಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಯೋಧರು ಸಿಆರ್​ಪಿಎಫ್ ಸಿಬ್ಬಂದಿ ಜತೆ ಸೇರಿ ಕಾರ್ಯಾಚರಣೆ ಆರಂಭಿಸಿದಾಗ ಗುಂಡಿನ ಕಾಳಗದಲ್ಲಿ ನಾಲ್ವರು ಯೋಧರು ಮೃತಪಟ್ಟರೆ, ಓರ್ವ ಯೋಧ ಕಾರ್ಯಾಚರಣೆ ವೇಳೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದರು. ಸೇನಾಪಡೆ ಪ್ರತಿದಾಳಿಯಲ್ಲಿ ಮೂವರು ಉಗ್ರರು ಮೃತಪಟ್ಟಿದ್ದು, ಇನ್ನೂ ಹಲವರು ಕಟ್ಟಡವೊಂದನ್ನು ಹೊಕ್ಕಿ ಅಲ್ಲಿಂದಲೇ ಗುಂಡಿನ ಕಾಳಗ ಮುಂದುವರಿಸಿದ್ದಾರೆ.

Indian Army

ದಾಳಿ ನಡೆದದ್ದು ಹೇಗೆ?

  • ಶನಿವಾರ ತಡರಾತ್ರಿ 2ಕ್ಕೆ ಇಬ್ಬರು ಉಗ್ರರಿಂದ ಗ್ರನೇಡ್ ದಾಳಿ
  • ಕಾವಲಿದ್ದ ಭಾರತದ ಯೋಧರಿಂದ ಪ್ರತಿದಾಳಿ
  • ಭದ್ರತೆ ಛಿದ್ರಗೊಳಿಸಿ, ಶಿಬಿರದ ಕಟ್ಟಡ ಹೊಕ್ಕ ಉಗ್ರರು
  • ಹೆಚ್ಚುವರಿ ಯೋಧರನ್ನು ಕರೆಸಿ ಕಾರ್ಯಾಚರಣೆ ಆರಂಭ
  • ಉಗ್ರರ ಗುಂಡಿನ ದಾಳಿಯಿಂದ ಹಲವು ಯೋಧರಿಗೆ ಗಾಯ
  • ಆಸ್ಪತ್ರೆಯಲ್ಲಿ ನಾಲ್ವರು ಹುತಾತ್ಮ
  • ಇಬ್ಬರು ಉಗ್ರರ ಹತ್ಯೆ
  • ಮುಂದುವರಿದ ಶೋಧ ಕಾರ್ಯ

Indian Army

ಒಂದು ಕಡೆ ನಮ್ಮ ಸೈನಿಕರು ದೇಶದ ರಕ್ಷಣೆಗೆ ಪ್ರಾಣ ಮುಡಿಪಾಗಿಟ್ಟು ಹೋರಾಡುತಿದರೆ ಇನೊಂದು ಕಡೆ ನಾವು ಎಲ್ಲವನ್ನೂ ಮರೆತು ಹೊಸ ವರ್ಷಾಚರಣೆಯಲ್ಲಿ ಬ್ಯುಸಿ ಅಗಿದೇವೆ ಇದು ನಾವು ನಮ್ಮ ಸೈನಿಕರಿಗೆ ತೋರುತ್ತಿರುವ ಅಗೌರವ.

Indian Party

ಅಷ್ಟಕು ಜನೆವರಿ ಒಂದು ನಮ್ಮ ಸಂಸ್ಕೃತಿಯಲ್ಲ!!
ಹೌದು ಜನೆವರಿ ಒಂದು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹೊಸ ವರ್ಷ ಅಲ್ಲ , ನಮಗೆ ಯುಗಾದಿ ಹೊಸ ವರ್ಷ ಆದರೆ ನಮ್ಮ ಜನರು ಹೊಸ ವರ್ಷಾಚರಣೆಯಲ್ಲಿ ಕುಡಿದು ಕುಣಿದು ಕುಪ್ಪಳಿಸುತ್ತಿರುವುದು ನೋಡಿದರೆ ನಿಜಕೂ ನಾಚಿಕೆಯಾಗುತ್ತದೆ.

Indian Army

ಯೋಧರು ದೇಶಕ್ಕಾಗಿ ಎಲ್ಲವೂ ತ್ಯಾಗ !!
ಹೌದು!! ಇಂದಿನ ಯುಗದಲ್ಲಿ ಸದಾ ತಮ್ಮ ಕುಟುಂಬದ ಏಳಿಗೆ ಬಯಸುವವರ ಮಧ್ಯದಲ್ಲಿ ದೇಶ ಸೇವೆ ಮಾಡಬೇಕು ಎನ್ನುವವರು ಬೆರಳೆಣಿಕೆಯಷ್ಟು ಮಾತ್ರ.

ತಮ್ಮ ಕುಟುಂಬ ತಂದೆ ತಾಯಿ ಎಲ್ಲರನ್ನು ಬಿಟ್ಟು ದೇಶದ ಹಿತಕ್ಕಾಗಿ ದುಡಿಯುತ್ತಿರುವುದು ನಿಜಕೂ ಶ್ಲಾಘನೀಯ.
ಹುತಾತ್ಮ ಯೋಧರು!!

  • ಷರೀಫ್ -ಉದ್ -ದಿನ್ ಗನೇಯಿ
  • ಕುಲದೀಪ್ ರಾಯ್
  • ತೌಫಿಲ್ ಅಹ್ಮದ್
  • ರಾಜೇಂದ್ರ ನೈನ್
  • ಪ್ರದೀಪ್ ಕುಮಾರ್ ಪಾಂಡ

ಗಡಿ ಯಲ್ಲಿ ನಾವು ಹೋಗಿ ಹೋರಾಡುವುದಂತೂ ಅಗುತೂ ಇಲ್ಲೋ ಆದರೆ ನಮ್ಮ ಸೈನಿಕರಿಗೆ ಗೌರವ ತೋರಿಸುವುದು ಬಹಳ ಅವಶ್ಯವಾಗಿದೆ.
ಯೋಧರಿಗೆ ಸಲಾಂ ಜೈ ಹಿಂದ್..!!

Post Author: