ಕ್ರಿಕೆಟ್ ಒಂದು ಧರ್ಮವಾದರೆ ಸಚಿನ್ ಆ ಧರ್ಮದ ದೇವರು..!!

ಕ್ರಿಕೆಟ್ ಒಂದು ಧರ್ಮವಾದರೆ ಸಚಿನ್ ಆ ಧರ್ಮದ ದೇವರು..!!

0

ಹೌದು!!ಕ್ರಿಕೆಟ್ ಒಂದು ಧರ್ಮವಾದರೆ ಸಚಿನ್ ಆ ಧರ್ಮದ ದೇವರು.

ಸಚಿನ್ ಗೆ ಸರಿಸಾಟಿ ಮತೊಬ್ಬ ಕ್ರಿಕೆಟರ್ ಹುಟ್ಟಿಲ್ಲ ಎಂದರೆ ತಪ್ಪಾಗಲಾರದು.ಒಂದು ಧರ್ಮವೆಂದರೆ ಆ ಧರ್ಮದಲ್ಲಿ ಹಲವು ತತ್ವಗಳಿರುತ್ತವೆ ಹಾಗೆಯೆ ಕ್ರಿಕೆಟ್ ಧರ್ಮದಲ್ಲಿ ಸಚಿನ್ ತತ್ವ ಎಲ್ಲರೂ ಒಪ್ಪುವ ಹಾಗೆ ಇವೆ. ಸಚಿನ್ ಅವರ ವ್ಯಕ್ತಿತ್ವಕ್ಕೆ ಎಲ್ಲರೂ ತಲೆಬಾಗಲೇಬೇಕು ಅವರನ್ನ ಎಷ್ಟು ಹಾಡಿ ಹೊಗಳಿದರು ಕಡಿಮೆ.

Sachin

ಬರಿ ಮೈದಾನದಲ್ಲಿ ಅಷ್ಟೇ ಛಾಪು ಮೂಡಿಸದೆ , ಮೈದಾನದ ಹೊರಗಡೆ ಕೂಡ ಅವರ ನಡತೆ ನಿಜಕೂ ಎಲ್ಲರೂ ಮೆಚ್ಚುವ ಹಾಗೆ ಇದೆ. ಕ್ರಿಕೆಟ್ ನಲ್ಲಿ ಸಚಿನ್ ಸಾಧನೆಗಳು ಮೈ ರೋಮಾಂಚನಗೊಳಿಸುತ್ತವೆ!! ಇಂದಿಗೂ ಕ್ರಿಕೆಟ್ ಯೆಂದರೆ ಸಚಿನ್, ಸಚಿನ್ ಎಂದರೆ ಕ್ರಿಕೆಟ್ ಎನ್ನುವ ಹಾಗೆ ಇದೆ.

Sachin

ಯಸ್ !! ಸಚಿನ್ ಹಲವು ದಾಖಲೆಗಳು ಮಾಡಿದ್ದಾರೆ.ಅವುಗಳು ಹೇಳುತ್ತಾ ಹೋದರೆ ಒಂದು ದಿನ ಪೂರ್ತಿ ಬೇಕಾಗಬಹುದು, ಸಚಿನ್ ಅವರ ಕೆಲವು ದಾಖಲೆಗಳು ಇಲ್ಲಿವೆ.

ವಿಶ್ವ ದಾಖಲೆಗಳು!! ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ನುಗಳು. ಟೆಸ್ಟ್ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು ಅತಿ ಹೆಚ್ಚು ಟೆಸ್ಟ್ ಪಂದ್ಯಗಳು ಅತಿ ಹೆಚ್ಚು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ರನ್ನುಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಶತಕಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯಪುರುಷೋತ್ತಮ ಪ್ರಶಸ್ತಿಗಳು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೨೦೦ ರನ್ ಹೊಡೆದ ಮೊದಲ ಆಟಗಾರ ವಿಶ್ವಕಪ್ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ನುಗಳು ಟೆಸ್ಟ್ ಪಂದ್ಯಗಳಲ್ಲಿ ೫೦ ಶತಕಗಳಿಸಿದ ವೊದಲನೆ ಆಟಗಾರ.

Sachin

ಆಟಕ್ಕೂ ಮೊದಲಿನ ಅಭ್ಯಾಸದ ಬಗ್ಗೆ ಹೇಳದೇ ಇರಲು ಸಾಧ್ಯವಿಲ್ಲ. ತನ್ನ ಅರ್ಧ ಆಯುಷ್ಯವನ್ನೇ ಫಿಲ್ಡ್ ನಲ್ಲಿ ಕಳೆದರೂ ಪಂದ್ಯಕ್ಕೂ ಮುನ್ನ ಸಚಿನ್ ಅಭ್ಯಾಸವನ್ನು ಇತರಿರಿಗಿಂತ ತುಸು ಹೆಚ್ಚೇ ಮಾಡುತ್ತಿದ್ದರು. ಇದು ಆಟದ ಬಗ್ಗೆ ಇವರ ಬದ್ಧತೆಯನ್ನು ತೋರಿಸುತ್ತದೆ.

ಸಚಿನ್ ರಿಂದ ಕೇವಲ ಕ್ರಿಕೆಟ್ ಮಾತ್ರವಲ್ಲ, ಅವರಿಂದ ನಾವು ಸಾಮಾನ್ಯರು, ಸೆಲೆಬ್ರಿಟಿಗಳು ಕಲಿಯುವ ವಿಷಯಗಳು ಸಾಕಷ್ಟಿವೆ ಎನಿಸುವದಿಲ್ಲವೇ?

ಸಚಿನ್ ತೆಂಡೂಲ್ಕರ್ ಕೇವಲ ತನ್ನ ಕ್ರಿಕೆಟ್ ಕೌಶಲ್ಯದಿಂದ ಇಷ್ಟೊಂದು ಜನರ ಆರಾಧ್ಯ ದೈವನಾದನೇ?

Sachin

ಈ ಮೇಲಿನ ಎಲ್ಲ ನಡವಳಿಕೆಗಳು ಅವರನ್ನು ಇನ್ನಷ್ಟು ಗೌರವದಿಂದ ಕಾಣುವಂತೆ ಮಾಡುತ್ತವೆ. ಎಳ್ಳಷ್ಟೂ ಭಿನ್ನಾಭಿಪ್ರಾಯ ಬರಲಿಲ್ಲ ಎಂದರೆ ಅತೀಶಯೋಕ್ತಿ ಎನಿಸುತ್ತದೆ. ಆದರೆ ಆ ಭಿನ್ನಾಭಿಪ್ರಾಯಗಳನ್ನು ಅತೀಯಾಗಿ ತೋರಿಸಿಕೊಳ್ಳದೇ ತನ್ನ ‘ಆಟ’ವನ್ನಷ್ಟೇ ತೋರಿಸಿದ್ದು ಹಿರಿಮೆ. ಡ್ರೆಸ್ಸಿಂಗ್ ರೂಮ್ ನ್ನು ವರ್ಷಗಟ್ಟಲೇ ‘ಪಾಜಿ’ ಯೊಟ್ಟಿಗೆ ಹಂಚಿಕೊಂಡು ಹಿರಿಯ ಮತ್ತು ಈಗಿನ ಕಿರಿಯ ಆಟಗಾರರು.

ಆಫ್ ದಿ ಫಿಲ್ಡ್, ಆಫ್ ದಿ ರೆಕಾರ್ಡ್ ಕೂಡ ‘ತೆಂಡೂಲ್ಕರ್’ ಮತ್ತೆ ಮತ್ತೇ ‘ಗ್ರೇಟ್’ ಎನಿಸಿಕೊಳ್ಳುತ್ತಾರೆ.

– ಯೋಗೇಶ್ ,

ಹವ್ಯಾಸಿ ಬರಹಗಾರ