ಜನೆವರಿ 1 ಹೊಸ ವರ್ಷಾಚರಣೆ ಹಿಂದಿನ ಇತಿಹಾಸ ಏನು ಗೊತ್ತಾ..? ಇಲ್ಲಿವೆ ಆಶ್ಚಯ೯ಕಾರಿ ವಿಷಯಗಳು..!!ತಪ್ಪದೆ ಓದಿ

ಜನೆವರಿ 1 ಹೊಸ ವರ್ಷಾಚರಣೆ ಹಿಂದಿನ ಇತಿಹಾಸ ಏನು ಗೊತ್ತಾ..?
ಇಲ್ಲಿವೆ ಆಶ್ಚಯ೯ಕಾರಿ ವಿಷಯಗಳು..!!ತಪ್ಪದೆ ಓದಿ

0

ಜನೆವರಿ 1 “new year day”, ಆಚರಣೆಗೆ ಬಂದದ್ದು ಹೇಗೆ ಎನ್ನುವುದು ನಾವು ಭಾರತೀಯರು ತಿಳಿಯಲೇ ಬೇಕಾದ ವಿಷಯ ಇದು.1753ರಲ್ಲಿ ಇಂಗ್ಲೆಂಡ ನಲ್ಲಿ ಪ್ರಥಮ ಬಾರಿಗೆ ಆಚರಿಸಲಾಯಿತು , “new year day” ಜನ್ಮವನ್ನು ಜಾಲಾಡುತ್ತ ಹೋದರೆ ಆಶ್ಚಯ೯ಕಾರಿ ವಿಷಯಗಳು ಹೊರ ಹೊಮ್ಮುತ್ತವೆ.

new-year-celebration

ನಮ್ಮ ಧಮ೯ದಲ್ಲಿ ಕಾಲ ನಿಣ೯ಯವನ್ನು ಗ್ರಹ ಮತ್ತು ನಕ್ಷತ್ರಗಳ ಚಲನೆಯನ್ನಾಧರಿಸಿ , ತಿಥಿ , ವಾರ, ಮಾಸ, ಸಂವತ್ಸರ ಗಳನ್ನು ನಿಖರವಾಗಿ ಸಿದ್ದಗೊಳಿಸುವ ಪಂಚಾಗಕ್ಕೆ ಸಾವಿರಾರು ವಷ೯ಗಳ ಇತಿಹಾಸ ವಿದೆ. ರೋಮ್ ಸಾಮ್ರಾಜ್ಯದ ಕಾಲ ನಿಣ೯ಯ ಪದ್ದತಿ ಹೇಗಿತ್ತು ?

ಒಂದು ವಷ೯ಕ್ಕೆ ಹತ್ತೇ ತಿಂಗಳೆಂದು ರೋಮನ್ನರು ನಂಬಿದ್ದರು. ‘ಭಾರತಿಯ ಕಾಲಶಾಸ್ತ್ರ ನಿಣ೯ಯ ಪದ್ದತಿಯಿಂದ ಕಲಿತು ರೋಮನ್ನರು ರೋಮನ್ ಕ್ಯಾಲೆಂಡರ್‌ಗೆ ಜನವರಿ ಮತ್ತು ಫೆಬ್ರವರಿ ಎರಡು ತಿಂಗಳನ್ನು ಸೇರಿಸಿ 10 ನ್ನು12 ಕ್ಕೆ ಏರಿಸಿದರು. ಜೂನ್ ತಿಂಗಳಲ್ಲಿ 29 ದಿವಸಗಳು ಮಾತ್ರ ಇದ್ದು ಅದನ್ನು 30 ಕ್ಕೆ ಏರಿಸಿದರು. ನಂತರ ರೋಮ್ ದೊರೆ ‘ಜೂಲಿಯಸ್ ಸೀಸರ್’ ಆತನ ಹೆಸರಿನಲ್ಲಿಯೇ “ಜುಲೈ” ತಿಂಗಳನ್ನು ನಾಮಕರಣಗೊಳಿಸಿದ. ಆತನ ಉತ್ತರಾಧಿಕಾರಿ”ಆಗಸ್ಟನ್” ಆತನ ಹೆಸರಿನಲ್ಲಿ ಮುಂದಿನ ತಿಂಗಳನ್ನು ‘ಆಗಸ್ಟ್ ಎಂದು ಕರೆದ.ಭಾರತಿಯ ಶಾಸ್ತ್ರದಿಂದ ರೋಮನ್ನರು ಅವರ ಮುಂದಿನ ತಿಂಗಳುಗಳನ್ನು , ಸೆಪ್ಟೆಂಬರ (ಸಂಸ್ಕೃತ – ಸಪ್ತ = 7 ನೇ + ಅಂಬರ = ತಿಂಗಳು/ಆಕಾಶ), ಅಕ್ಟೋಬರ್ (ಸಂಸ್ಕೃತ-ಅಷ್ಟ = 8ನೇ), ನವೆಂಬರ (ನವ = 9ನೇ) ಮತ್ತು ದಶಂಬರ (ದಶ = 10ನೇ) ಅಂಬರ /ತಿಂಗಳು ಎಂದು ಕರೆದರು.

new-year-celebration

ಜನೆವರಿ & ಮತ್ತು ಫೆಬ್ರವರಿ ನೂತನ ಎರಡು ಮಾಸಗಳನ್ನು ಸೇರಿಸುವ ಮೊದಲು ಇವುಗಳು ಕ್ರಮವಾಗಿ 7, 8, 9, 10ನೇ ತಿಂಗಳುಗಳಾಗಿದ್ದವು, ನೂತನ ಎರಡು ತಿಂಗಳ ಸೇಪ೯ಡೆಯಿಂದ ಮಾಚ೯ನಿಂದ ಡಿಸೆಂಬರವರೆಗಿನ ಎಲ್ಲಾ ತಿಂಗಳುಗಳು 2 ಅಂಕಿ ಕೆಳಗೆ ಜಾರಿದವು ಆದ ಕಾರಣ ಈಗ ಸೆಪ್ಟಂಬರ್, ಅಕ್ಟೋಬರ್, ನವೆಂಬರ್, ದಶಂಬರ್, ತಿಂಗಳುಗಳು ನಿಜವಾದ ಅಥ೯ ಕಳೆದು ವಿರೋಧವಾಗಿ 9, 10, 11, 12ನೇ ತಿಂಗಳುಗಳಾಗಿವೆ. ನವ್ಹೆಂಬರ (ನವ ಅಂಬರ) 9ರ ಬದಲಿಗೆ 11 ಕ್ಕೆ ಬಂದಿದೆ, ಡಿಸೆಂಬರ (ದಶ ಅಂಬರ 10)ರ ಬದಲಿಗೆ 12 ಕ್ಕೆ ಬಂದಿದೆ.

Ugadi_india

‘ಅದೇ ಹಿಂದು’ ಸಂಸ್ಕೃತಿಯ ಪ್ರಕಾರ ಯುಗಾದಿಯನ್ನು ಹೊಸ ವಷ೯ವೆಂದು ಆಚರಿಸುತ್ತೇವೆ. ಕಾರಣ ಈ ಸಮಯದಲ್ಲಿ ಕಾಲಮಾನದಲ್ಲಿಯ ಬದಲಾವಣೆಯನ್ನು ಕಾಣಬಹುದು, ಅದೆ ಕಾರಣಕ್ಕೆ ಯುಗಾದಿಯ ನಂತರ ನಮ್ಮ ರೈತರು ಬೆಳೆ ಬಿತ್ತುವುದು.

ಆದರೆ ಈಗಿನ ನಮ್ಮ ಯುವ ಜನರು ಪಾಶ್ಚಾತ್ಯ ಸಂಸ್ಕ್ರತಿಯ DAY ಯನ್ನು ಆಚರಿಸುವ ಮೂಲಕ ನಮ್ಮ ಸನಾತನ ಪವಿತ್ರ ಹಿಂದು ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಆಯ್ಕೆ ನಿಮಗೆ ಬಿಟ್ಟಿದ್ದು…

– ಪ್ರಭು