ಕೆಲವೇ ದಿನಗಳಲ್ಲಿ ತೈಲ ಬೆಲೆ ಪಾತಾಳಕ್ಕೆ !! ಮೋದಿ ರವರಿಂದ ಮಾಸ್ಟರ್ ಪ್ಲಾನ್

ಕೆಲವೇ ದಿನಗಳಲ್ಲಿ ತೈಲ ಬೆಲೆ ಪಾತಾಳಕ್ಕೆ !! ಮೋದಿ ರವರಿಂದ ಮಾಸ್ಟರ್ ಪ್ಲಾನ್

0

ಕಳೆದ ನಾಲ್ಕು ವರ್ಷದಲ್ಲಿ ಭಾರತದಲ್ಲಿ ತೈಲ ಬೆಲೆ ಏರಿಕೆ ಎಂಬ ಪದವನ್ನು ಯಾರೂ ಕೇಳಿರಲಿಲ್ಲ, ಕಳೆದ ನಾಲ್ಕು ವರ್ಷದಲ್ಲಿ ಹೆಚ್ಚಾಗಿದ್ದು ಕೇವಲ ನಾಲ್ಕು ರೂಪಾಯಿಗಳು, ಆದರೆ ಇದನ್ನೇ ಅಸ್ತ್ರವಾಗಿಟ್ಟುಕೊಂಡು ಪ್ರತಿಪಕ್ಷಗಳು ಮೋದಿರವರ ಮೇಲೆ ಕೆಂಡಕಾರಿದರು.ಪಾಪ ಏನೂ ತಿಳಿಯದ ಮುಗ್ಧ ಜನಸಾಮಾನ್ಯರು ಅಂಕಿಅಂಶಗಳನ್ನು ನೋಡದೆ ಮೋದಿ ಸರ್ಕಾರದ ಮೇಲೆ ಗೂಬೆ ಕೂರಿಸಿದರು.

ಆದರೆ ಇದ್ಯಾವುದಕ್ಕೂ ತಲೆ ಕೊಡದ ಮೋದಿ ಒಪೆಕ್‌  ರಾಷ್ಟ್ರಗಳಿಗೆ ಸಡ್ಡು ಹೊಡೆದು, ತೈಲ ಬೆಲೆ ನಿಯಂತ್ರಿಸಿ ವಿರೋಧ ಪಕ್ಷಗಳಿಗೆ ಮತ್ತೊಮ್ಮೆ ತಮ್ಮ ಕೆಲಸದ ಮೂಲಕ ಉತ್ತರ ನೀಡಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಏನದು ಪ್ಲಾನ್ ??. ಅದಕ್ಕಿಂತ ಮೊದಲು ಸಚಿವ ಧರ್ಮೇಂದ್ರ ಪ್ರಧಾನ್‌ ನೀಡಿದ ಎಚ್ಚರಿಕೆ ಬಗ್ಗೆ ತಿಳಿಯಿರಿ…

ಇತ್ತೀಚೆಗಷ್ಟೇ  ಕಚ್ಚಾ ತೈಲ ಬೆಲೆಯಲ್ಲಿ ಒಪೆಕ್‌ ರಾಷ್ಟ್ರಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುವ ಅಗತ್ಯವಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಎಚ್ಚರಿಕೆ ನೀಡಿದ್ದರು. ಒಪೆಕ್‌ ರಾಷ್ಟ್ರಗಳು ತೈಲ ಉತ್ಪಾದನೆ ಕಡಿಮೆಗೊಳಿಸಿ, ಬೆಲೆ ಹೆಚ್ಚಿಸುತ್ತಿರುವ ವಿದ್ಯಮಾನವನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನ್‌, ಭಾರತ ಅತಿ ಹೆಚ್ಚು ತೈಲ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲೊಂದು. ಹೀಗಾಗಿ ಒಪೆಕ್‌ ರಾಷ್ಟ್ರಗಳು ತಮ್ಮ ಜವಾಬ್ದಾರಿ ಅರಿತು ನಿರ್ಧಾರ ತೆಗೆದುಕೊಳ್ಳಬೇಕೆಂದು ಅವರು ಹೇಳಿದ್ದರು.

ಅಷ್ಟಕ್ಕೂ ಮೋದಿ ರವರ ಮಾಸ್ಟರ್ ಪ್ಲಾನ್ ಏನು?

ಅದುವೇ ಒಪೆಕ್‌  ರಾಷ್ಟ್ರಗಳ ಜೊತೆ ವ್ಯವಹಾರ ನಡೆಸದೆ ಅವರಿಗೆ ಸೆಡ್ಡು ಹೊಡೆದು ಬೇರೆ ರಾಷ್ಟ್ರಗಳ ಜೊತೆ ತೈಲ  ಸಂಬಂಧವನ್ನು ಬೆಳೆಸಿಕೊಳ್ಳುವುದು. ಇದರಿಂದ ತೈಲ ಬೆಲೆ ಕಡಿಮೆಯಾಗುವುದಲ್ಲದೇ ರಾಷ್ಟ್ರಕ್ಕೆ ಸರಿಸುಮಾರು 40 ಪರ್ಸೆಂಟ್ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ. ಅಷ್ಟಕ್ಕೂ ಯಾವ ದೇಶಗಳಲ್ಲಿ ಸಂಬಂಧ ಬೆಳೆಯಲಿದೆ? ಸಂಪೂರ್ಣ ಪ್ಲಾನ್ ಏನು? ಸಂಪೂರ್ಣ ಪ್ಲಾನ್ ಏನು?

ವಿಶ್ವದ ದೊಡ್ಡಣ್ಣ ಮತ್ತು ಚೈನಾದ ಜೊತೆ ಸಂಬಂಧ ಬೆಳೆಸಿಕೊಂಡು ಸಮುದ್ರಮಾರ್ಗವಾಗಿ ತೈಲವನ್ನು ಸುಲಭವಾಗಿ ಆಮದು ಮಾಡಿಕೊಂಡು ಸಾಗಾಣಿಕೆ ವೆಚ್ಚವನ್ನು ಕಡಿಮೆ ಮಾಡಿ ಜನಸಾಮಾನ್ಯರಿಗೆ ಅತಿ ಕಡಿಮೆ ಬೆಲೆಗೆ ಪೆಟ್ರೋಲ್ ನೀಡುವ ಉದ್ದೇಶವನ್ನು ಮೋದಿ ಪ್ಲಾನ್ ಮೂಲಕ ರೂಪಿಸಿದ್ದಾರೆ.ಇದರಿಂದ ಕಂಡು ಕೇಳರಿಯದ ರೀತಿಯಲ್ಲಿ ಪೆಟ್ರೋಲ್ ಬೆಲೆ ಪಾತಾಳಕ್ಕೆ ಕುಸಿಯಲಿದೆ.