ರೈತರಿಗೆ ಗೌರಿ ಗಣೇಶ ಹಬ್ಬದ ದಿನ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ, ಮೋದಿ ಅದ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ ಏನು ಗೊತ್ತೇ??

ರೈತರಿಗೆ ಗೌರಿ ಗಣೇಶ ಹಬ್ಬದ ದಿನ ಸಿಹಿ ಸುದ್ದಿ ನೀಡಿದ ಮೋದಿ ಸರ್ಕಾರ, ಮೋದಿ ಅದ್ಯಕ್ಷತೆಯಲ್ಲಿ ಮಹತ್ವದ ನಿರ್ಧಾರ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ದೇಶದೆಲ್ಲೆಡೆ ಗೌರಿ – ಗಣೇಶ ಹಬ್ಬದ ಸಂಭ್ರಮ ಮುಗಿಲು ಮುಟ್ಟುತ್ತಿದೆ. ಕೋರೋನಾ ನಂತರ ಎಲ್ಲಾ ಮಾರುಕಟ್ಟೆಗಳು, ದೈನಂದಿನ ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಬೆಲೆಯೇರಿಕೆಯ ನಡುವೆಯೂ ಜನರು ಗಣೇಶ ಹಬ್ಬದ ಸಂಭ್ರಮದಲ್ಲಿದ್ದಾರೆ. ಈ ನಡುವೆ ಕೇಂದ್ರ ಸರ್ಕಾರ ರೈತರಿಗೆ ಒಂದು ಭರ್ಜರಿ ಗಿಫ್ಟ್ ಸಹ ನೀಡಿದೆ. ಹೌದು ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬೆಲೆ ಏರಿಕೆಯಾಗಿದೆ.

ಅದಕ್ಕೆ ಯಾವುದೇ ಕಾರಣಗಳಿದ್ದರೂ ಕೂಡ ಬೆಲೆ ಏರಿಕೆಯ ಬಿಸಿ ಇದ್ದೆ ಇರುತ್ತದೆ ಅಲ್ಲವೇ, ಆದರೆ ಇದೇ ಸಮಯದಲ್ಲಿ ಎಲ್ಲಾ ಬೆಲೆ ಹೆಚ್ಚಿರುವ ಪದಾರ್ಥಗಳನ್ನು ಉತ್ಪಾದನೆ ಮಾಡುತ್ತಿರುವ ರೈತನಿಗೆ ಮಾತ್ರ ಸಾಕಷ್ಟು ದುಡ್ಡು ಕೈ ಸೇರುತ್ತಿಲ್ಲ. ಬಹುಶಃ ಆದೆ ಕಾರಕ್ಕಾಗಿ ಇರಬೇಕು ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಹೌದು ಸ್ನೇಹಿತರೇ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2022-23 ನೇ ಸಾಲಿನ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಳ ಮಾಡಲು ಅನುಮೋದನೆ ನೀಡಿದೆ.

ಭತ್ತ, ಗೋಧಿ, ಬೇಳೆಕಾಳುಗಳು, ಎಣ್ಣೆಕಾಳುಗಳು ಹೀಗೆ ದೇಶಾದ್ಯಂತ ಹಿಂಗಾರು ಮಳೆಯನ್ನು ಆಶ್ರಯಿಸಿ ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಈ ಹಿಂದೆ ಎಲ್ಲಾ ಬೆಳೆಗಳಿಗೂ ಶೇಕಡಾ 15 ರಷ್ಟು ಬೆಳೆ ಹೆಚ್ಚಿಸಿದ್ದ ಮೋದಿ ಸರ್ಕಾರ, ಈಗ ಹಿಂಗಾರು ಬೆಳೆಗಳಿಗೂ ವಿಶೇಷ ಉತ್ತೇಜನ ನೀಡಿದೆ. ಹಿಂಗಾರು ಮಳೆ ನೀರಿಕ್ಷಿತ ಪ್ರಮಾಣದಲ್ಲಿ ಬಾರದ ಕಾರಣ ರೈತರು ಕೃಷಿಯಿಂದ ವಿಮುಖಗೊಳ್ಳುತ್ತಿದ್ದರು. ಹಾಗಾಗಿ ಈ ಬೆಂಬಲ ಬೆಲೆಯನ್ನು ಮೋದಿ ಸರ್ಕಾರ ಘೋಷಿಸಿದೆ. ಒಟ್ಟಿನಲ್ಲಿ ದೇಶದ ಜಿಡಿಪಿಯಲ್ಲಿ ಆಹಾರ ಪದಾರ್ಥಗಳ ಬೆಳವಣಿಗೆಗಳಿಗಿಂತ, ಎಣ್ಣೆಕಾಳು ಹಾಗೂ ಬೇಳೆಕಾಳು ಮತ್ತು ದ್ವಿದಳ ಧಾನ್ಯಗಳ ಬೆಳೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸುವುದನ್ನು ಮರೆಯಬೇಡಿ.