Loan: ಯಾವುದೇ ಪತ್ರ, ಗ್ಯಾರೆಂಟಿ ಕೇಳದೆ ಸಿಗುತ್ತೆ 10 ಲಕ್ಷ ಸಾಲ. ಹೀಗೆ ಅರ್ಜಿ ಹಾಕಿದರೆ ಲೋನ್ ಕೊಟ್ಟೆ ಕೊಡುತ್ತಾರೆ.

Get your loan without any collateral- Here is the complete details of Mudra Loan

ನಮಸ್ಕಾರ ಸ್ನೇಹಿತರೇ, ನಮ್ಮಲ್ಲಿ ಸಾಕಷ್ಟು ಜನ ಬುದ್ಧಿವಂತರು ತಮ್ಮದೇ ಆದಂತಹ ವಿಭಿನ್ನವಾದ ಉದ್ಯಮವನ್ನು ಅಥವಾ ವ್ಯಾಪಾರವನ್ನು ಪ್ರಾರಂಭಿಸುವಂತಹ ಯೋಜನೆಯನ್ನು ಹಾಗೂ ಯೋಜನೆಯನ್ನು ಹಾಕಿಕೊಂಡಿರುತ್ತಾರೆ ಆದರೆ ಅವರಿಗೆ ಸರಿಯಾದ ಆರ್ಥಿಕ ಸಹಾಯ ಸಿಗುವುದಿಲ್ಲ. ಅಂತಹ ಪ್ರತಿಭೆಗಳಿಗೆ ಪ್ರಧಾನಿ ನರೇಂದ್ರ ಮೋದಿಯವರ(Narendra Modi) ಕೇಂದ್ರ ಸರ್ಕಾರ ಒಂದು ಒಳ್ಳೆಯ ಯೋಜನೆಯನ್ನು ಜಾರಿಗೆ ತಂದಿದ್ದು ಅದರ ಬಗ್ಗೆ ಇವತ್ತಿನ ಈ ಲೇಖನಿಯಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಪ್ರತಿಯೊಂದು ವಿವರಗಳನ್ನು ಕೂಡ ನೀಡಲು ಹೊರಟಿದ್ದು ಬನ್ನಿ ಲೇಖನಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದೋಣ.

Get your loan without any collateral- Here is the complete details of Mudra Loan

ಹೌದು ನಾವು ಮಾತನಾಡಲು ಹೊರಟಿರೋದು ಕೇಂದ್ರ ಸರ್ಕಾರ ಪರಿಚಯಿಸಿರುವಂತಹ ಮುದ್ರಾ ಯೋಜನೆಯ(mudra loan scheme) ಬಗ್ಗೆ. ಮೊದಲಿಗೆ ಇದರಲ್ಲಿರುವಂತಹ ಮೂರು ವಿಧಗಳನ್ನು ತಿಳಿದುಕೊಳ್ಳೋಣ. ಮೊದಲನೇದಾಗಿ ಶಿಶು ಸಾಲ. ಈ ವಿಭಾಗದಲ್ಲಿ ನಿಮಗೆ 50,000ಗಳವರೆಗೂ ಕೂಡ ಸಾಲವನ್ನು ನೀಡುವಂತಹ ಮಿತಿಯನ್ನು ಇಡಲಾಗುತ್ತದೆ. ಅದಾದ ನಂತರ ಎರಡನೇ ವಿಭಾಗದಲ್ಲಿ ಕಿಶೋರ್ ಸಾಲ ಕಾಣಿಸಿಕೊಳ್ಳುತ್ತದೆ ಹಾಗೂ ಅಲ್ಲಿ 50,000 ಗಳಿಂದ 5 ಲಕ್ಷ ರೂಪಾಯಿಗಳವರೆಗು ಕೂಡ ಸಾಲವನ್ನು ನೀಡಲಾಗುತ್ತದೆ. ಮೂರನೇದಾಗಿ ತರುಣ್ ಸಾಲದಲ್ಲಿ 5 ಲಕ್ಷ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲವನ್ನು ನೀಡಲಾಗುತ್ತದೆ. ಇಲ್ಲಿ ನಿಮಗೆ ಯಾವ ರೀತಿಯ ಸಾಲ ಹಾಗೂ ಎಷ್ಟು ಸಾಲ ಬೇಕು ಎನ್ನುವುದನ್ನು ನಿಮ್ಮ ಅನುಗುಣಕ್ಕೆ ತಕ್ಕಂತೆ ಆಯ್ಕೆ ಮಾಡಬಹುದಾಗಿದೆ.

ನಿಮಗೆ ಪಿತ್ರಾರ್ಜಿತ ಆಸ್ತಿ ಸಿಕ್ಕಾಗ ಮಾಡಲೇಬೇಕಾದ ಕೆಲಸ- ಇದು ಮಾಡಿದ್ರೆ 100 % ಸೇಫ್. Property Law

ಬಾಡಿಗೆ ಟ್ಯಾಕ್ಸಿ, ಜನರಲ್ ಸ್ಟೋರ್, ಸಣ್ಣ ಪುಟ್ಟ ಆಹಾರ ಖಾದ್ಯಗಳ ಫ್ಯಾಕ್ಟರಿ, ಜಿಮ್ ಹಾಗೂ ಬಟ್ಟೆ ಅಂಗಡಿ ರೀತಿಯ ಸಣ್ಣಪುಟ್ಟ ಉದ್ಯಮಗಳಿಗೆ ಈ ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ನೀಡಲಾಗುತ್ತದೆ ಎಂಬುದನ್ನು ಮೊದಲಿಗೆ ತಿಳಿದುಕೊಳ್ಳಬೇಕಾಗಿರುತ್ತದೆ. ಇದಕ್ಕಾಗಿ ನೀವು ನೀಡಬೇಕಾಗಿರುವ ಅಂತಹ ದಾಖಲೆಗಳೇನೆಂದರೆ, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಖಾಯಂ ವಿಳಾಸ, ವ್ಯಾಪಾರದ ವಿಳಾಸ, ಮೂರು ವರ್ಷಗಳ ಬ್ಯಾಲೆನ್ಸ್ ಶೀಟ್, ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್(income tax returns), ಜೊತೆಗೆ ಸ್ವಯಂ ಮೌಲ್ಯಮಾಪನದ ರಿಟರ್ನ್ ಅನ್ನು ಕೂಡ ನೀಡಬೇಕಾಗಿರುತ್ತದೆ. ಬೇರೆ ಸಾಲಗಳಿಗೆ ಹೋಲಿಸಿದರೆ ಇದರಲ್ಲಿ ಪಡೆಯುವಂತಹ ಸಾಲದ ಮೇಲೆ ಬಡ್ಡಿದರ ಕಡಿಮೆಯಾಗಿರುತ್ತದೆ ಹಾಗೂ ಪಡೆದುಕೊಂಡಿರುವಂತಹ ಸಾಲದ ಕೇವಲ 0.50% ಬಡ್ಡಿ ಇರುತ್ತದೆ. ನಿಮ್ಮ ಖಾತೆಯಲ್ಲಿ ಹಣ ಎಷ್ಟು ಇದೆ ಮತ್ತು ನೀವು ಎಷ್ಟು ವಾಪಸ್ ಕಟ್ಟುತ್ತಿದ್ದೀರಾ ಎನ್ನುವುದರ ಮೇಲೆ ಕೂಡ ಇದು ನಿರ್ಧರಿತವಾಗಿರುತ್ತದೆ.

These Banks offers Mudra Loans For Indian Residents.

ಮುದ್ರ ಯೋಜನೆ ಅಡಿಯಲ್ಲಿ ಸಾಲವನ್ನು ನೀಡುವ ಬ್ಯಾಂಕುಗಳು ಯಾವೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೊದಲಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳ ಬಗ್ಗೆ ಮಾತನಾಡುವುದಾದರೆ, State Bank of India, Bank of India, Bank of Maharashtra, Bank of Baroda, ಕೆನರಾ ಬ್ಯಾಂಕ್ ಹಾಗೂ ಕಾರ್ಪೊರೇಷನ್ ಬ್ಯಾಂಕ್. ಇದೇ ರೀತಿ ಉಳಿದ ಬ್ಯಾಂಕುಗಳ ಬಗ್ಗೆ ಕೂಡ ನೀವು ಅಧಿಕೃತ ವೆಬ್ಸೈಟ್ನಲ್ಲಿ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ಲೇಖನಿಯಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ಆನ್ಲೈನ್ ಮೂಲಕ ಹೇಗೆ ಅರ್ಜಿ ಹಾಕಿ ಪಡೆದುಕೊಳ್ಳಬಹುದು ಎಂಬುದನ್ನು ಕೂಡ ತಿಳಿಯೋಣ.

ಒಮ್ಮೆ ಚಾರ್ಜ್ ಮಾಡಿದ್ರೆ 300 KM ಓಡುತ್ತೆ, ಬೆಲೆ ಕೂಡ ಕಡಿಮೆ. ಇಂದೇ ಮನೆಗೆ ತನ್ನಿ.. Electric Scooter

How to Apply for Mudra Loan easily without any collateral.

ಮೊದಲಿಗೆ ನೀವು https://www.jansamarth.in/home/ ವೆಬ್ ಸೈಟ್ ಗೆ ಹೋಗಿ ಅಲ್ಲಿ ಮುದ್ರಾ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳುವಂತಹ ಫಾರ್ಮ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದಾದ ನಂತರ ಯಾವ ರೀತಿ ಅಂದರೆ ಯಾವ ವಿಧದ ಸಾಲವನ್ನು ಪಡೆದುಕೊಳ್ಳಲಿದ್ದೀರಿ ಅನ್ನೋದನ್ನ ಕೂಡ ವಿಶೇಷವಾಗಿ ಆಯ್ಕೆ ಮಾಡಿಕೊಂಡು ಅಲ್ಲಿ ಕೇಳಲಾಗುವಂತಹ ವಿವರಗಳನ್ನು ಸರಿಯಾಗಿ ತುಂಬಿಸಿ. ಇದನ್ನು ಭರ್ತಿ ಮಾಡಿದ ನಂತರ ನಿಮಗೆ ಯಾವ ಬ್ಯಾಂಕ್ ಸಾಲವನ್ನು ನೀಡುತ್ತದೆಯೋ ಅಲ್ಲಿ ಇದನ್ನು ಅಗತ್ಯ ದಾಖಲೆಗಳ ಜೊತೆಗೆ ಪೂರೈಸಿ. ಇದಾದ ನಂತರ ನಿಮ್ಮ ಪ್ರತಿಯೊಂದು ವಿವರಗಳನ್ನು ಹಾಗೂ ಫಾರ್ಮ್ ಅನ್ನು ಚೆಕ್ ಮಾಡಿದ ನಂತರ ನೀವು ಅರ್ಹರಾಗಿದ್ದರೆ ನಿಮ್ಮ ಖಾತೆಗೆ ಮುದ್ರ ಯೋಜನೆಯ ಹಣವನ್ನು ನಿಯಮ ಬದ್ಧವಾಗಿ ಬ್ಯಾಂಕು ವರ್ಗಾವಣೆ ಮಾಡುತ್ತದೆ.