ಮಿಣಿಮಿಣಿ ಕೇಸ್ HDK ರವರಿಗೆ ಜಯ ! ಕೋರ್ಟ್ ತೀರ್ಪಿನ ಬೆನ್ನಲ್ಲೇ ಮಿಣಿಮಿಣಿ ಎನ್ನಲು ಮತ್ತೊಂದು ದಾರಿ ಹುಡುಕಿಕೊಂಡ ಬಿಜೆಪಿ ಭಕ್ತರು ! ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಮಾಜಿ ಮುಖ್ಯ ಮಂತ್ರಿಗಳಾದ ಕುಮಾರ ಸ್ವಾಮಿ ರವರು ಮಿಣಿಮಿಣಿ ಎಂಬ ಪದ ಬಳಕೆ ಮಾಡಿ ಹೇಳಿಕೆಯೊಂದನ್ನು ನೀಡಿದ್ದರು.

ಹೇಳಿಕೆ ನೀಡಿದ ಬೆನ್ನಲ್ಲೇ ಮಿಣಿಮಿಣಿ ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತ್ತು. ಟ್ರೋಲ್ ಪೇಜ್ ಗಳು ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರ ಅಕೌಂಟ್ ಗಳಲ್ಲಿ ಎಲ್ಲಿ ನೋಡಿದರೂ ಮಿಣಿಮಿಣಿ ಎಂಬ ವಿವಿಧ ರೀತಿಯ ಪೋಸ್ಟರ್ಗಳು ಹರಿದಾಡುತ್ತಿದ್ದವು. ಮಿಣಿಮಿಣಿ ಪೌಡರ್, ಟ್ರೋಲ್ ಪೋಸ್ಟರ್ಸ್, ವೀಡಿಯೊಗಳು ಫೋಟೋಗಳು ಹೀಗೆ ವಿವಿಧ ರೀತಿಯಲ್ಲಿ ಕುಮಾರ ಸ್ವಾಮಿರವರ ಹೇಳಿಕೆಯನ್ನು ಟ್ರೋಲ್ ಮಾಡಲಾಗುತ್ತಿತ್ತು. ಬಿಜೆಪಿ ಕಾರ್ಯಕರ್ತರು ಹೀಗೆ ಮಾಡುತ್ತಿದ್ದಾರೆ ಎಂದು ಕುಮಾರ ಸ್ವಾಮಿ ಕೋರ್ಟ್ ಮೆಟ್ಟಿಲೇರಿದ್ದರು, ಹೌದು ಮಾಧ್ಯಮಗಳಲ್ಲಿ ಹಾಗೂ ಜಾಲತಾಣಗಳಲ್ಲಿ ಮಿಣಿಮಿಣಿ ಹೇಳಿಕೆಯನ್ನು ಅತಿಯಾಗಿ ಹಾಗೂ ಕೆಟ್ಟದಾಗಿ ಬಿಂಬಿಸಲಾಗುತ್ತಿದೆ ಇದರಿಂದ ಮಾಜಿ ಮುಖ್ಯ ಮಂತ್ರಿಗಳ ಘನತೆಗೆ ಧಕ್ಕೆಯಾಗಿದೆ ಎಂದು ಕುಮಾರಸ್ವಾಮಿ ಅವರ ಪರ ವಕೀಲರು ವಾದ ಮಂಡಿಸಿದರು.

ವಾದ ವಿವಾದಗಳನ್ನು ಆಲಿಸಿ ನ್ಯಾಯಾಲಯವು ಕುಮಾರ ಸ್ವಾಮಿ ರವರ ಹೆಸರು ಫೋಟೋ ಜೊತೆಗೆ ಮಿಣಿಮಿಣಿ ಪೌಡರ್ ಬರಹಗಳೊಂದಿಗೆ ಯಾವುದೇ ರೀತಿಯ ಲಿಖಿತ, ದೂರದರ್ಶನ ಹಾಗೂ ಸಾಮಾಜಿಕ ಜಾಲತಾಣಗಳು ಸೇರಿದಂತೆ ಇನ್ನಿತರ ಮಾಧ್ಯಮಗಳಲ್ಲಿ ಪ್ರಕಟಣೆ ಮಾಡದಂತೆ ತಡೆ ಹಿಡಿದಿದೆ. ಈ ತೀರ್ಪಿನಿಂದ ಮಿಣಿಮಿಣಿ ಎಂಬ ಹೇಳಿಕೆ ಟ್ರೊಲ್ ಆಗುವುದು ನಿಲ್ಲುತ್ತದೆ ಎಂದು ಜೆಡಿಎಸ್ ಕಾರ್ಯಕರ್ತರು ಹಾಗೂ ಕುಮಾರ ಸ್ವಾಮಿ ಅಂದುಕೊಂಡಿದ್ದರು. ಆದರೆ ತೀರ್ಪಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಪೇಜ್ ಗಳು ಈಗಾಗಲೇ ಕುಮಾರಸ್ವಾಮಿ ರವರ ಹೆಸರು ಉಲ್ಲೇಖಿಸದೇ ಕೇವಲ ಮಿಣಿಮಿಣಿ ಮಿಣಿಮಿಣಿ ಎಂದು ಪೋಸ್ಟ್ಗಳು ಮಾಡುವ ಮೂಲಕ ಮತ್ತಷ್ಟು ವೈರಲ್ ಮಾಡಿದ್ದಾರೆ. ಕೋರ್ಟ್ ಹೇಳಿರುವುದು ಕುಮಾರಸ್ವಾಮಿ ರವರ ಕುರಿತು ಪೋಸ್ಟ್ ಮಾಡಬಾರದು ಎಂದು ಆದರೆ ಮಿಣಿಮಿಣಿ ಎನ್ನುವುದು ಅವರೇ ಹೇಳಿದಂತೆ ಗ್ರಾಮೀಣ ಸೊಗಡಿನ ಕನ್ನಡ ಪದ ನಾವು ಕೇವಲ ಅದನ್ನು ಬಳಸುತ್ತಿದ್ದೇವೆ ಎಂದು ಟ್ರೋಲ್ ಪೋಸ್ಟರ್ಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದಾರೆ.

Facebook Comments

Post Author: RAVI