ಭಾರತೀಯ ಆರ್ಥಿಕತೆ ಕುರಿತು ಮಹತ್ವದ ಹೇಳಿಕೆ ನೀಡಿದ ಐಎಂಎಫ್ ಮುಖ್ಯಸ್ಥೆ ! ಮೋದಿ ಸರ್ಕಾರದ ಆರ್ಥಿಕತೆಯ ಬಲದ ಕುರಿತು ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಭಾರತ ದೇಶದ ಆರ್ಥಿಕತೆ ಸಂಪೂರ್ಣವಾಗಿ ಬಿದ್ದು ಹೋಗಿದೆ ಎಂದು ವಿರೋಧ ಪಕ್ಷಗಳು ಕಳೆದ ಬಾರಿ ಲೋಕಸಭಾ ಚುನಾವಣಾ ಸಮಯದಲ್ಲಿ ಟೀಕೆಗಳ ಬಾಣಗಳನ್ನು ಸುರಿಸಿದ್ದರು.

ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಮತದಾರ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಮುನ್ನೂರಕ್ಕೂ ಹೆಚ್ಚು ಸೀಟುಗಳ ಮೂಲಕ ಮತ್ತೊಮ್ಮೆ ಅಧಿಕಾರ ಏರುವ ಅವಕಾಶ ನೀಡಿದ್ದರು. ಇದಾದ ನಂತರ ವಿಪಕ್ಷಗಳ ಟೀಕೆಗಳು ನಿಲ್ಲಲಿಲ್ಲ ಮತ್ತಷ್ಟು ಹೆಚ್ಚಾದವು, ಭಾರತದ ಆರ್ಥಿಕತೆ ಮಂದಗತಿಯಲ್ಲಿ ಸಾಗುತ್ತಿದ್ದು ನಿಜ, ಆದರೆ ಆರ್ಥಿಕತೆ ಕುಸಿದಿಲ್ಲ ಎಂದು ಬಿಜೆಪಿ ಪಕ್ಷವಾದ ಮಂಡಿಸುತ್ತಿತ್ತು. ಈ ಎಲ್ಲಾ ವಿದ್ಯಮಾನಗಳ ಬಳಕ ಇದೀಗ ಭಾರತದ ಆರ್ಥಿಕ ಸಮೀಕ್ಷೆ ಪ್ರಕಟಣೆಯಾಗಿದೆ. ಈ ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಇನ್ನು ಕೆಲವೇ ಕೆಲವು ತಿಂಗಳುಗಳಲ್ಲಿ ಆರ್ಥಿಕ ಮಂದಗತಿಯಿಂದ ಹೊರಬರಲಿದೆ ಎಂಬ ಸೂಚನೆಗಳು ಸಿಕ್ಕಿದ್ದವು. ಇದರ ಕುರಿತು ಇದೀಗ ಮಾತನಾಡಿರುವ IMF ಮುಖ್ಯಸ್ಥೆ ಕ್ರಿಸ್ಟಲಿನಾ ಜಿಯೋಜಿವಾ ಮಾತನಾಡಿದ್ದಾರೆ.

ಭಾರತದ ಆರ್ಥಿಕತೆ ಕಳೆದ ವರ್ಷ ಮಂದ ಗತಿಯನ್ನು ಅನುಭವಿಸಿದ್ದು ನಿಜ ಆದರೆ ಅದು ಹಿಂಜರಿತ ವಲ್ಲ, ಖಂಡಿತವಾಗಲೂ ಭಾರತ ಅಸಂಗತವಾದ ಮಂದ ಗತಿಯನ್ನು ಎದುರಿಸಿತ್ತು ಆದರೆ 2020ರಲ್ಲಿ ಭಾರತದ ಬೆಳವಣಿಗೆ ಶೇಕಡ 5.8 ರಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡುತ್ತಿದ್ದೇವೆ, ಇನ್ನು ಮುಂದಿನ ವರ್ಷ ಇದು ಮತ್ತಷ್ಟು ಏರಿಕೆಯಾಗಲಿದ್ದು ಕನಿಷ್ಠ 6.5 ರಷ್ಟು ದರ ತಲುಪಲಿದೆ, ಭಾರತ ದೇಶದಲ್ಲಿ ನೋಟು ಅಮಾನ್ಯತೆಯ ನಂತರ ಕೆಲವೇ ಕೆಲವು ದಿನಗಳಲ್ಲಿ ಜಿಎಸ್ಟಿ ಜಾರಿ ಗೊಳಿಸಿದ್ದ ಕಾರಣ ಭಾರತದ ಆರ್ಥಿಕತೆ ಮಂದಗತಿಯಲ್ಲಿ ಸಾಗುತಿತ್ತು ಆದರೆ ಈ ಎಲ್ಲಾ ಯೋಚನೆಗಳು ದೀರ್ಘಾವಧಿಯಲ್ಲಿ ಫಲ ಕೊಡುತ್ತವೆ, ಕೆಲವೊಮ್ಮೆ ಅಲ್ಪಾವಧಿಗೆ ಅಡ್ಡಿ-ಆತಂಕಗಳು ಎದುರಾಗುತ್ತವೆ ಎಂದು ಹೇಳಿಕೆ ನೀಡಿದ್ದಾರೆ. ಈ ಮೂಲಕ ಭಾರತದ ಆರ್ಥಿಕತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಮಹತ್ವ ಸಿಕ್ಕಿದ್ದು ಮುಂದೆ ಯಾವ ರೀತಿಯಲ್ಲಿ ಭಾರತದ ಆರ್ಥಿಕತೆ ಪುಟಿದೇಳಲಿದೆ ಎಂಬುದನ್ನು ಕಾದುನೋಡಬೇಕಿದೆ.

Post Author: Ravi Yadav