ಬಿಸಿಸಿಐ ದಾದಾ ಆಟಕ್ಕೆ ಐಸಿಸಿ ಕ್ಲೀನ್ ಬೋಲ್ಡ್ ! ಮತ್ತೊಮ್ಮೆ ಬಿಸಿಸಿಐ ಆಟದ ಮುಂದೆ ತಲೆಬಾಗಿದ ಪಿಸಿಬಿ !

ಬಿಸಿಸಿಐ ದಾದಾ ಆಟಕ್ಕೆ ಐಸಿಸಿ ಕ್ಲೀನ್ ಬೋಲ್ಡ್ ! ಮತ್ತೊಮ್ಮೆ ಬಿಸಿಸಿಐ ಆಟದ ಮುಂದೆ ತಲೆಬಾಗಿದ ಪಿಸಿಬಿ !

ನಮಸ್ಕಾರ ಸ್ನೇಹಿತರೇ, ಭದ್ರತೆಯ ದೃಷ್ಟಿಯಿಂದ ಹಲವಾರು ವರ್ಷಗಳಿಂದ ಇತರ ದೇಶಗಳು ಪಾಕಿಸ್ತಾನ ದೇಶಕ್ಕೆ ಕ್ರಿಕೆಟ್ ಆಡಲು ತೆರಳುತ್ತಿರಲಿಲ್ಲ. ಆದರೆ ಇತ್ತೀಚಿಗೆ ಹಲವಾರು ಷರತ್ತುಗಳು ಹಾಗೂ ಭದ್ರತೆಯೊಂದಿಗೆ ಬಾಂಗ್ಲಾದೇಶ ತಂಡ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ತೆರಳಿ ಕೆಲವು ಪಂದ್ಯಗಳನ್ನು ಆಡಿತ್ತು.

ಹಲವಾರು ಕ್ರಿಕೆಟ್ಟಿಗರು ನಾವು ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದರೂ ಪಟ್ಟು ಬಿಡದ ಬಾಂಗ್ಲಾದೇಶ ಕ್ರಿಕೆಟ್ ಸಂಸ್ಥೆಯು ಹಲವಾರು ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರನ್ನು ನೇಮಿಸಿ ಪಾಕಿಸ್ತಾನಕ್ಕೆ ತಂಡವೊಂದನ್ನು ಕಳುಹಿಸಿತ್ತು. ಇದನ್ನೇ ಬಂಡವಾಳವನ್ನಾಗಿಸಿಕೊಂಡು ಪಾಕಿಸ್ತಾನ ದೇಶವು ಈ ಬಾರಿ ಏಷ್ಯಾಕಪ್ ಆಯೋಜಿಸುವ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ. ಭಾರತ ತಂಡವು ಪಾಕಿಸ್ತಾನಕ್ಕೆ ಬರುವುದಿಲ್ಲ ಎಂದು ಹೇಳುವ ಹಾಗೆ ಇಲ್ಲ, ಭಾರತ ತಂಡ ಪಾಕಿಸ್ತಾನಕ್ಕೆ ಬಂದು ಕ್ರಿಕೆಟ್ ಆಡಲೇಬೇಕು. ಇದು ಐಸಿಸಿ ಕಾನೂನಿನ ಪ್ರಕಾರ ನ್ಯಾಯ. ಈಗಾಗಲೇ ಪಾಕಿಸ್ತಾನ ದೇಶದಲ್ಲಿ ಕ್ರಿಕೆಟ್ ಪುನಾರಂಭ ವಾಗಿದೆ, ಒಂದು ವೇಳೆ ಬಿಸಿಸಿಐ ಸಂಸ್ಥೆಯು ತಂಡವನ್ನು ಕಳುಹಿಸಿ ಕೊಡದೇ ಇದ್ದಲ್ಲಿ ನಾವು ಭಾರತ ದೇಶ ಆಯೋಜನೆ ಮಾಡಲಿರುವ ಮುಂದಿನ ಟಿ-20 ವರ್ಲ್ಡ್ ಕಪ್ ನಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಬಿಸಿಸಿಐ ಸಂಸ್ಥೆಯು ಬರುವುದಿಲ್ಲ ಎಂದರೆ ಬೇಡ ಬಿಡಿ ಎಂದು ಹೇಳಿಕೆ ನೀಡುವ ಮೂಲಕ ಪಾಕಿಸ್ತಾನ ಕ್ರಿಕೆಟ್ ಬೋರ್ಡನ್ನು ಕಿಚಾಯಿಸುತ್ತು.

ಈ ಎಲ್ಲಾ ವಿದ್ಯಮಾನಗಳ ಬಳಿಕ ಇದೀಗ ಬಿಸಿಸಿಐ ಸಂಸ್ಥೆಯು ಐಸಿಸಿ ಸಂಸ್ಥೆಗೆ ಯಾವುದೇ ಕಾರಣಕ್ಕೂ ಪಾಕಿಸ್ತಾನ ದೇಶಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸಿ ಕೊಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಮೇಲೆ ಐಸಿಸಿ ಸಂಸ್ಥೆಯು ಪಾಕಿಸ್ತಾನ ದೇಶದ ಮಾತುಕತೆ ನಡೆಸಿ ಮುಂದಿನ ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನ ದೇಶವೇ ಯುಎಇ ದೇಶದಲ್ಲಿ ಆಯೋಜನೆ ಮಾಡುವಂತೆ ಒತ್ತಡ ಹೇರಿದೆ. ಐಸಿಸಿ ಸಂಸ್ಥೆಯ ಮಾತಿಗೆ ಮೊದಲು ವಿರೋಧ ಮಾಡಿದರೂ ಕೂಡ ಕೊನೆಗೆ ಪಾಕಿಸ್ತಾನ ದೇಶ ಯುಎಇ ದೇಶದಲ್ಲಿ ಏಷ್ಯಾ ಕಪ್ ಟೂರ್ನಿ ಆಯೋಜನೆ ಮಾಡಲು ಸಿದ್ಧವಿರುವುದಾಗಿ ಹೇಳಿಕೆ ನೀಡಿದೆ ಎನ್ನಲಾಗುತ್ತಿದೆ. ಈ ಮೂಲಕ ಜಾಗತಿಕ ಅಂತರಾಷ್ಟ್ರೀಯ ಕ್ರಿಕೆಟ್ ಬೋರ್ಡ್ ನಲ್ಲಿ ಅತಿ ಶ್ರೀಮಂತ ಕ್ರಿಕೆಟ್ ಬೋರ್ಡ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಬಿಸಿಸಿಐ ಸಂಸ್ಥೆಯು ಮತ್ತೊಮ್ಮೆ ತನ್ನ ತಾಕತ್ತು ಏನು ಎಂಬುದನ್ನು ಸಾರಿ ಹೇಳಿದೆ. ಈ ಕ್ರೆಡಿಟ್ ಸಂಪೂರ್ಣವಾಗಿ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ರವರಿಗೆ ಸಲ್ಲಬೇಕು ಎಂದು ಕ್ರಿಕೆಟ್ ದಿಗ್ಗಜರು ಅಭಿಪ್ರಾಯ ಪಟ್ಟಿದ್ದಾರೆ.