ಬಿಗ್ ನ್ಯೂಸ್: ವಿಶ್ವದಲ್ಲಿಯೇ ಬೃಹತ್ ರಕ್ಷಣಾ ವ್ಯವಹಾರಕ್ಕೆ ಅಸ್ತು ಎಂದ ಮೋದಿ ಸರ್ಕಾರ! ಮತ್ತಷ್ಟು ಬಲಿಷ್ಠವಾಗುವುದು ಭಾರತೀಯ ಸೇನೆ

ಭಾರತ ದೇಶವು ಈಗಾಗಲೇ ವಿಶ್ವಮಟ್ಟದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ವಿಶ್ವದ ಬಲಾಡ್ಯ ರಾಷ್ಟ್ರಗಳು ಭಾರತ ದೇಶದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ಕಾತರದಿಂದ ಕಾದು ಕುಳಿತಿವೆ. ಪರಿಸ್ಥಿತಿ ಹೀಗಿರುವಾಗ ನೆರೆಯ ಶತ್ರು ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ದೇಶವು ನಮ್ಮ ಏಳಿಗೆಯನ್ನು ಸಹಿಸುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತದಲ್ಲಿ ಯುದ್ಧಭೀತಿ ಎದುರಾದರೆ ವಿದೇಶದಿಂದ ಬರುವ ಬಂಡವಾಳ ಕಡಿಮೆಯಾಗುತ್ತದೆ ಎಂದು ಇತ್ತೀಚೆಗೆ ಪುಲ್ವಾಮಾ ಪ್ರದೇಶದಲ್ಲಿ ಸೇನೆಯ ಮೇಲೆ ಉಗ್ರರು ಬಹುದೊಡ್ಡ ಆತ್ಮಹುತಿ ದಾಳಿ ಮಾಡಿದ್ದರು. ಭಾರತ ದೇಶವು ಸಹ ಇದಕ್ಕೆ ಪ್ರತೀಕಾರವಾಗಿ 300 ಕ್ಕೂ ಹೆಚ್ಚು ಉಗ್ರರನ್ನು ಕ್ಷಣಮಾತ್ರದಲ್ಲಿ ಮುಗಿಸಿ ಪಾಕಿಸ್ತಾನ ದೇಶಕ್ಕೆ ಖಡಕ್ ಎಚ್ಚರಿಕೆಯನ್ನೂ ನೀಡಿತ್ತು. ಈ ಯುದ್ಧದ ಭೀತಿಯಿಂದ ವಿದೇಶಿ ಬಂಡವಾಳ ಕಡಿಮೆಯಾಗಲಿಲ್ಲ, ಯಾಕೆಂದರೆ ನರೇಂದ್ರ ಮೋದಿ ಅವರು ಅಚ್ಚುಕಟ್ಟಾಗಿ ಎಲ್ಲವನ್ನೂ ನಿಭಾಯಿಸಿ, ಭಾರತದಲ್ಲಿ ಹೂಡಿಕೆ ಮಾಡುವ ರಾಷ್ಟ್ರಗಳಿಗೆ ಭಾರತ ಏನೆಂದು ತೋರಿಸಿದ್ದರು.

ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಭಾರತ ದೇಶವು ಪಾಕಿಸ್ತಾನ ದೇಶಕ್ಕೆ ಹೋಲಿಸಿಕೊಂಡರೆ ಖಂಡಿತವಾಗಿಯೂ ಬಲವಾಗಿದೆ. ಆದರೆ ಕಳೆದ ಅರವತ್ತು ವರ್ಷಗಳ ಹಿಂದೆ ಭಾರತ ದೇಶವು ಸ್ವತಂತ್ರವಾಗಿದ್ದರೂ ಸಹ ಸೇನೆಗೆ ಅದೆಷ್ಟೊ ಶಸ್ತ್ರಾಸ್ತ್ರಗಳ ಕೊರತೆ ಕಾಡುತ್ತಿದೆ. ಇನ್ನು ಭಾರತದ ವಾಯು ಸೇನೆ ಹಾಗೂ ನೌಕಾದಳ ವಿಷಯಕ್ಕೆ ಬಂದರೆ ಕನಿಷ್ಠ 400 ಯುದ್ಧವಿಮಾನಗಳ ಅಗತ್ಯವಿದೆ. ಆದರೆ ಭಾರತದ ಬಳಿ ಕೇವಲ ಬೆರಳೆಣಿಕೆಯಷ್ಟು ಯುದ್ಧವಿಮಾನಗಳು ಮಾತ್ರ ಇವೆ. ಇದೇ ಕಾರಣಕ್ಕಾಗಿ ಇದೀಗ ಕೇಂದ್ರ ಸರ್ಕಾರವು ಇಡೀ ವಿಶ್ವದಲ್ಲಿಯೇ ಬೃಹತ್ ರಕ್ಷಣಾ ವ್ಯವಹಾರಕ್ಕೆ ಚುರುಕು ನೀಡಲು ಮುಂದಾಗಿದೆ. (ಬೃಹತ್ ರಕ್ಷಣಾ ವಿಷಯದ ಕುರಿತು ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ)

ಈಗಾಗಲೇ ಭಾರತ ದೇಶವು ಫ್ರಾನ್ಸ್ ರಾಷ್ಟ್ರದೊಂದಿಗೆ 36 ರಫೆಲ್ ಯುದ್ಧ ವಿಮಾನಗಳ ಖರೀದಿಯ ಬಗ್ಗೆ ಮಾತುಕತೆ ನಡೆಸಿ, ವ್ಯಾಪಾರವು ಸಹ ಮುಗಿದಿದೆ. ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ರಫೆಲ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಲಭ್ಯವಾಗಲಿವೆ. ಈ ವಿಮಾನಗಳನ್ನು ಹೊರತುಪಡಿಸಿ ಭಾರತದ ಎಚ್ಎಎಲ್ ಸಂಸ್ಥೆಯು ನಿರ್ಮಾಣಮಾಡುವ ತೇಜಸ್ ಹಾಗೂ ಸುಕೋಯ್ ಯುದ್ಧ ವಿಮಾನಗಳ ಮೂಲಕ 160ಕ್ಕೂ ಅಧಿಕ ವಿಮಾನಗಳು ಭಾರತೀಯ ಸೇನೆಯ ತೆಕ್ಕೆಗೆ ಸೇರಿಸಿಕೊಳ್ಳಲಿವೆ. ಇಷ್ಟಾದರೂ ಸಹ ಭಾರತಕ್ಕೆ ಇನ್ನೂ ನೂರಾರು ಯುದ್ಧ ವಿಮಾನಗಳ ಅಲಭ್ಯತೆ ಕಾಡಲಿದೆ. ಆದ ಕಾರಣದಿಂದ ಇದೀಗ ನರೇಂದ್ರ ಮೋದಿರವರ ಸರ್ಕಾರವು, ಯುದ್ಧವಿಮಾನಗಳ ಖರೀದಿಗೆ ಮುಂದಾಗಿದ್ದು, ಈ ಒಪ್ಪಂದದ ಮೂಲಕ ಮೇಕ್ ಇನ್ ಇಂಡಿಯಾ ಯೋಜನೆಗೂ ಮತ್ತಷ್ಟು ಬಲ ತುಂಬಲು ಮೋದಿ ಸರ್ಕಾರ ಸಿದ್ದರಾಗಿದೆ.

ಹೌದು ಶೀಘ್ರದಲ್ಲಿ ಕೇಂದ್ರ ಸರ್ಕಾರವು 114 ಯುದ್ಧವಿಮಾನಗಳ ಖರೀದಿ ಪ್ರಕ್ರಿಯೆಯನ್ನು ಅಂತಿಮಗೊಳಿಸಲಿದೆ. ಈ ವಿಷಯವನ್ನು ಕೇಂದ್ರ ರಕ್ಷಣಾ ಇಲಾಖೆಯ ಸಚಿವ ಶ್ರೀಪಾದ ನಾಯಕ ರವರು ಖಚಿತಪಡಿಸಿದ್ದಾರೆ. 1 ಲಕ್ಷ ಕೋಟಿ ರೂ ಗೂ ಅಧಿಕ ಯುದ್ಧ ವಿಮಾನ ಖರೀದಿ ಪ್ರಕ್ರಿಯೆಯಲ್ಲಿ ಭಾರತ ದೇಶವು ಹೊಸ ಶರತ್ತು ವಿಧಿಸಿದ್ದು, ಶೇಕಡ 85ಕ್ಕೂ ಹೆಚ್ಚು ವಿಮಾನಗಳು ಭಾರತದಲ್ಲಿ ಉತ್ಪಾದನೆಯಾಗಬೇಕು ಎಂದು ಸೂಚಿಸಲಾಗಿದೆ. ಇನ್ನು f21 ಯುದ್ಧ ವಿಮಾನಗಳ ಖರೀದಿಗೆ ಅನುಮತಿ ಸಿಕ್ಕಿದ ತಕ್ಷಣ ಟಾಟಾ ಸಂಸ್ಥೆಯ ಜೊತೆ ಸೇರಿ ವಿಮಾನ ಉತ್ಪಾದನೆ ಮಾಡಲಾಗುತ್ತದೆ. ಇಷ್ಟೇ ಅಲ್ಲದೆ ಎಚ್ಎಎಲ್ ಕಂಪನಿ ಹಾಗೂ ಮಹಿಂದ್ರ ಕಂಪನಿಯ ಜೊತೆ ಬೋಯಿಂಗ್ ಯುದ್ಧವಿಮಾನಗಳ ಒಪ್ಪಂದ ಮಾಡಿಕೊಂಡಿದ್ದು ಎಫ್/ಎ-18 ಯುದ್ಧ ವಿಮಾನ ಉತ್ಪಾದನೆಗೆ ಕೇಂದ್ರ ಸರ್ಕಾರವು ಆಸಕ್ತಿ ತೋರಿದೆ. ಒಟ್ಟಿನಲ್ಲಿ ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಸೇನೆಗೆ ಅಗತ್ಯವಿರುವ ಎಲ್ಲಾ ಯುದ್ಧ ವಿಮಾನಗಳನ್ನು ಕೇಂದ್ರ ಸರ್ಕಾರವು ಒದಗಿಸಲಿದೆ ಎಂಬುದು ಈ ಒಪ್ಪಂದದ ಮೂಲಕ ಖಚಿತವಾಗಲಿದೆ. ಈ ವಿಷಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

ಯಾವುದೇ ರೀತಿಯ ಜಾಹೀರಾತಿಗಾಗಿ 91484 97148 ನಂಬರ್ ಗೆ ವಾಟ್ಸಾಪ್ ಮಾಡಿ.

Facebook Comments

Post Author: RAVI