ಕೇಂದ್ರ ಬಜೆಟ್ಟಿನ ಬಗ್ಗೆ ವಿಚಿತ್ರ ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿ

ಕೇಂದ್ರ ಬಜೆಟ್ಟಿನ ಬಗ್ಗೆ ವಿಚಿತ್ರ ಪ್ರತಿಕ್ರಿಯೆ ನೀಡಿದ ಸುಬ್ರಮಣಿಯನ್ ಸ್ವಾಮಿ

ಮಹಾನ್ ಅರ್ಥಶಾಸ್ತ್ರ ತಜ್ಞರಾಗಿರುವ ಸುಬ್ರಮಣಿಯನ್ ಸ್ವಾಮಿ ರವರು ಇದೀಗ ಮೋದಿ 2.0 ಮೊಟ್ಟಮೊದಲ ಬಜೆಟಿನ ಬಗ್ಗೆ ವಿಚಿತ್ರವಾದ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಅಳೆದು ತೂಗಿ ದೇಶದ ಹಲವಾರು ಕ್ಷೇತ್ರಗಳನ್ನು ಗಮನದಲ್ಲಿ ಇಟ್ಟುಕೊಂಡು, ಬಜೆಟ್ ಮಂಡನೆ ಮಾಡಿದ್ದಾರೆ. ಇದಕ್ಕೆ ಇದೀಗ ಪ್ರತಿಕ್ರಿಯಿಸಿರುವ ಸುಬ್ರಮಣಿಯನ್ ಸ್ವಾಮಿ ರವರ ಪ್ರತಿಕ್ರಿಯೆಯನ್ನು ನೋಡಿದರೆ ಇದನ್ನು ಧನಾತ್ಮಕವಾಗಿ ಪರಿಗಣಿಸಬೇಕೋ ಅಥವಾ ಋಣಾತ್ಮಕವಾಗಿ ಪರಿಗಣಿಸಬೇಕೋ ಎಂಬ ಗೊಂದಲ ಎಲ್ಲರನ್ನು ಕಾಡತೊಡಗಿದೆ. ಬಿಜೆಪಿ ಪಕ್ಷದ ಸಂಸದರಾಗಿರುವ ಸುಬ್ರಹ್ಮಣ್ಯ ಸ್ವಾಮಿ ರವರು ಈ ರೀತಿಯ ಹೇಳಿಕೆ ನೀಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಅವರು ಏನು ಹೇಳಿದ್ದಾರೆ ಗೊತ್ತಾ?? ಒಮ್ಮೆ ಅವರ ಮಾತುಗಳನ್ನು ಕೇಳಿ ಹಾಗೂ ಈ ಬಜೆಟಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಬಜೆಟಿನ ಬಗ್ಗೆ ನನ್ನ ಅಭಿಪ್ರಾಯ ಏನು ಎಂಬುದನ್ನು ಹೇಳಬೇಕಾದರೆ, ನಾನು ಒಬ್ಬ ಅರ್ಥಶಾಸ್ತ್ರದ ಪ್ರಾಧ್ಯಾಪಕನಾಗಿ ಉತ್ತರಿಸಬೇಕೋ ಅಥವಾ ಒಬ್ಬ ರಾಜ್ಯಸಭೆಯಿಂದ ಆಯ್ಕೆಯಾಗಿರುವ ಸಂಸದನಾಗಿ ಪ್ರತಿಕ್ರಿಯೆ ನೀಡಬೇಕೋ ಎಂಬುದನ್ನು ನಿರ್ಧಾರ ಮಾಡಿ ತದನಂತರ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅಂದರೆ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹೇಳುವುದಾದರೆ ಬೇರೆಯದೇ ರೀತಿಯ ಅಭಿಪ್ರಾಯವಿದೆ, ಮತ್ತೊಂದೆಡೆ ಬಿಜೆಪಿ ಪಕ್ಷದ ಸಂಸದರಾಗಿ ಹೇಳುವುದಾದರೆ ಪಕ್ಷದ ವಿರುದ್ಧ ಮಾತನಾಡಬಾರದು ಕಾರಣಕ್ಕೆ ಅಭಿಪ್ರಾಯವನ್ನು ತಿರುಚಿ ಹೇಳಬೇಕಾಗುತ್ತದೆ ಎಂಬರ್ಥದಲ್ಲಿ ಹೇಳಿಕೆ ನೀಡಿದ್ದಾರೆ. ಯಾಕೋ ಬಜೆಟಿನ ಬಗ್ಗೆ ಸುಬ್ರಮಣಿಯನ್ ಸ್ವಾಮಿ ರವರು ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಆದರೆ ವಿರೋಧ ಪಕ್ಷಗಳ ಟೀಕೆಯನ್ನು ಹೊರತುಪಡಿಸಿದರೆ, ಜನರಿಗೆ ಉಚಿತ ಯೋಜನೆಗಳನ್ನು ನೀಡಿ ಸೋಂಬೇರಿ ಗಳಾಗಿ ಮಾಡುವ ಬದಲು, ಸ್ವಂತ ವ್ಯಾಪಾರಗಳಿಗೆ ಉತ್ತೇಜನ ನೀಡಲು ವಿಶೇಷ ರೀತಿಯ ಸಾಲ ಸೌಲಭ್ಯಗಳನ್ನು ಜಾರಿಗೊಳಿಸಿ, ಎಲ್ಲ ಕ್ಷೇತ್ರಗಳಿಗೂ ತಮ್ಮದೇ ಆದ ಪ್ರಾಮುಖ್ಯತೆ ನೀಡಿ ಬಜೆಟ್ ತಯಾರಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.

ಯಾವುದೇ ರೀತಿಯ ಜಾಹೀರಾತಿಗಾಗಿ 9148497148 ನಂಬರ್ಗೆ ವಾಟ್ಸಾಪ್ ಮಾಡಿ.