ದೋಸ್ತಿಗಳಿಗೆ ಬಿಗ್ ಶಾಕ್ ಕೊಡಲು ಮುಂದಾದ ಜಿಂದಾಲ್ ಕಂಪನಿ! ಅಡಕತ್ತರಿಗೆ ಸಿಲುಕಿದ ರಾಜ್ಯ ಸರ್ಕಾರ

ದೋಸ್ತಿಗಳಿಗೆ ಬಿಗ್ ಶಾಕ್ ಕೊಡಲು ಮುಂದಾದ ಜಿಂದಾಲ್ ಕಂಪನಿ! ಅಡಕತ್ತರಿಗೆ ಸಿಲುಕಿದ ರಾಜ್ಯ ಸರ್ಕಾರ

ದೋಸ್ತಿಗಳ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಬಂದಿದೆ. ದೋಸ್ತಿಗಳ ಅದೃಷ್ಟ ಯಾಕೋ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ ದಿನಕ್ಕೊಂದು ಹೊಸ ಸಮಸ್ಯೆ ದೋಸ್ತಿಗಳ ಕೊರಳಿಗೆ ಸುತ್ತಿಕೊಳ್ಳುತ್ತಿದೆ. ಇಷ್ಟೆಲ್ಲ ಸಮಸ್ಯೆಗಳನ್ನು ಎದುರಿಸಿಕೊಂಡು ಅಧಿಕಾರವನ್ನು ನಡೆಸಿಕೊಂಡು ಹೋಗುತ್ತಿರುವ ದೋಸ್ತಿಗಳಿಗೆ ಇದೀಗ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಹೌದು, ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಕೆಲವು ದಿನಗಳಿಂದ ಜಿಂದಾಲ್ ಕಂಪನಿಗೆ ಭೂಮಿ ನೀಡುವ ಬಗ್ಗೆ ಇಡೀ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ. ಒಂದೆಡೆ ವಿರೋಧಪಕ್ಷದ ಸ್ಥಾನದಲ್ಲಿ ಕುಳಿತಿರುವ ಬಿಜೆಪಿ ಪಕ್ಷವು ಬೀದಿಗಿಳಿದು ಪ್ರತಿಭಟನೆ ಮಾಡಿದ್ದು ಮತ್ತೊಂದೆಡೆ ದೋಸ್ತಿಗಳ ಶಾಸಕರೇ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಸಿಡಿದೆದ್ದಿದ್ದಾರೆ, ಅಷ್ಟೇ ಅಲ್ಲದೆ ಇತ್ತೀಚೆಗೆ ಇದೇ ವಿಚಾರವಾಗಿ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ.

ಇಷ್ಟೆಲ್ಲಾ ವಾದ-ವಿವಾದಗಳ ನಡುವೆ ರಾಜ್ಯ ಸರ್ಕಾರ ಇಂದಿಗೂ ಜಿಂದಾಲ್ ಕಂಪನಿಗೆ ಭೂಮಿ ನೀಡುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಒಂದು ವೇಳೆ ಅದೇ ನಡೆದಲ್ಲಿ ದೋಸ್ತಿಗಳ ವಿರುದ್ಧ ಮತ್ತಷ್ಟು ಶಾಸಕರು ಸಿಡಿದೇಳುವುದು ಖಚಿತ. ಈಗಾಗಲೇ ಹಲವು ಶಾಸಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಒಂದು ವೇಳೆ ರಾಜ್ಯ ಸರ್ಕಾರವು ಜಿಂದಾಲ್ ಕಂಪನಿಗೆ ಭೂಮಿ ನೀಡುವ ನಿರ್ಧಾರವನ್ನು ಕೈಬಿಟ್ಟರೆ ಜಿಂದಾಲ್ ಕಂಪನಿ ಸುಮ್ಮನೆ ಕೂರುವುದಿಲ್ಲ. ಯಾಕೆಂದರೆ ಈಗಾಗಲೇ ರಾಜ್ಯ ಸರ್ಕಾರದ ಭೂಮಿಯನ್ನು ನಂಬಿಕೊಂಡು ಜಿಂದಾಲ್ ಕಂಪನಿಯು 3,000 ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಒಂದು ವೇಳೆ ರಾಜ್ಯ ಸರ್ಕಾರ ತನ್ನ ನಿರ್ಧಾರ ಹಿಂತೆಗೆದುಕೊಂಡಲ್ಲಿ ಜಿಂದಾಲ್ ಕಂಪನಿಗೆ ಮತ್ತಷ್ಟು ನಷ್ಟವಾಗಲಿದೆ, ಆದ ಕಾರಣದಿಂದ ಜಿಂದಾಲ್ ಕಂಪನಿಯು ಕೋರ್ಟಿನ ಮೆಟ್ಟಿಲೇರಲು ನಿರ್ಧಾರ ಮಾಡುತ್ತದೆ ಎಂಬ ಮಾಹಿತಿ ಹೊರಬಿದ್ದಿದೆ. ಒಟ್ಟಿನಲ್ಲಿ ಇದೀಗ ಭೂಮಿ ನೀಡಿದರೆ ಆಂತರಿಕ ಭಿನ್ನಮತ ಭೂಮಿ ನೀಡದೆ ಇದ್ದರೆ ರಾಜ್ಯಸರ್ಕಾರವನ್ನು ಜಿಂದಾಲ್ ಕಂಪನಿ ನ್ಯಾಯಾಲಯದ ಅಂಗಳಕ್ಕೆ ಎಳೆದು ತರುತ್ತದೆ.