ಟ್ರಂಪ್ಗೆ ಬಿಗ್ ಶಾಕ್- ಭಾರತದ ದಶಕಗಳ ಕನಸು ನನಸು, ಸೇನೆಗೆ ಆನೆಬಲ

ಟ್ರಂಪ್ಗೆ ಬಿಗ್ ಶಾಕ್- ಭಾರತದ ದಶಕಗಳ ಕನಸು ನನಸು, ಸೇನೆಗೆ ಆನೆಬಲ

ಇದೀಗ ಭಾರತ ಹಾಗೂ ಅಮೆರಿಕ ದೇಶಗಳ ನಡುವಿನ ಕಿತ್ತಾಟ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಅಮೆರಿಕ ದೇಶದ ಅಧ್ಯಕ್ಷ ಟ್ರಂಪ್ ರವರು ಭಾರತದ ಜೊತೆ ಸ್ನೇಹ ಸಂಬಂಧವನ್ನು ಸರಿಯಾಗಿ ಅರ್ಥಮಾಡಿಕೊಂಡಂತೆ ಕಾಣಿಸುತ್ತಿಲ್ಲ, ನಾವು ಅಮೆರಿಕ ದೇಶದ ಜೊತೆ ಮಿತ್ರರಾಷ್ಟ್ರವಾಗಿ ಗುರುತಿಸಿಕೊಂಡಿರಬಹುದು ಆದರೆ ಅಮೇರಿಕಾ ದೇಶ ಹೇಳುವ ಮಾತುಗಳನ್ನೆಲ್ಲ ಚಾಚೂತಪ್ಪದೆ ಪಾಲಿಸಲು ನಾವು ಸಿದ್ಧರಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಸುಖಾಸುಮ್ಮನೆ ತನ್ನ ವೈಯಕ್ತಿಕ ದ್ವೇಷದಿಂದ ಇತರ ರಾಷ್ಟ್ರಗಳ ಮೇಲೆ ದಿಗ್ಬಂಧನ ಹಾಕುವಂತೆ ಒತ್ತಾಯ ಮಾಡುವುದು, ಇನ್ನೂ ಕೆಲವು ರಾಷ್ಟ್ರಗಳ ಜೊತೆ ಈಗಾಗಲೇ ಸಹಿ ಮಾಡಿರುವ ಒಪ್ಪಂದವನ್ನು ವಾಪಾಸು ತೆಗೆದುಕೊಳ್ಳುವಂತೆ ಒತ್ತಡ ಹೇರಲು ಪ್ರಯತ್ನ ಮಾಡುವುದು ಅಮೆರಿಕ ದೇಶದ ಟ್ರಂಪ್ ರವರಿಗೆ ಅಭ್ಯಾಸ ವಾದಂತೆ ಕಾಣುತ್ತಿದೆ.ಇತ್ತೀಚೆಗೆ ಇರಾನ್ ದೇಶದಿಂದ ತೈಲ ಆಮದು ಮಾಡಿಕೊಳ್ಳಬಾರದು, ಹಾಗೂ ರಷ್ಯಾ ದೇಶದ ಜೊತೆ ನಡೆದಿರುವ ಮಹತ್ವದ s-400 ಒಪ್ಪಂದವನ್ನು ಪ್ರತಿ ಮಾಡುವಂತೆ ಟ್ರಂಪ್ ರವರು ಒತ್ತಾಯ ಮಾಡಿದ್ದರು. ಆದರೆ ಭಾರತ ದೇಶವು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ, ತನ್ನ ವ್ಯಾಪಾರ ಸಂಬಂಧವನ್ನು ರಷ್ಯಾ ಹಾಗು ಇರಾನ್ ದೇಶಗಳ ಜೊತೆ ಮುಂದುವರೆಸಿಕೊಂಡು ಹೋಗುತ್ತಿದೆ.

ಅದೇ ರೀತಿಯಲ್ಲಿ ಇದೀಗ ಭಾರತ ಸೇನೆಗೆ ಮತ್ತಷ್ಟು ಬಲ ತುಂಬುವ ನಿರ್ಧಾರ ಮಾಡಿರುವ ನರೇಂದ್ರ ಮೋದಿರವರು ಇನ್ನು ಕೇವಲ ಮೂರು ತಿಂಗಳಲ್ಲಿ ರಷ್ಯಾ ದೇಶದಿಂದ ಆಧುನಿಕ ಟ್ಯಾಂಕ್ ನಿರೋಧಕ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳಲು ನಿರ್ಧಾರ ಮಾಡಿದ್ದಾರೆ. ಸ್ಟ್ರಂ ಅಟಾಕಾ ಎಂಬ ಹೆಸರಿನ ಈ ಕ್ಷಿಪಣಿಗಳನ್ನು ಭಾರತದ ಪ್ರಮುಖ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿರುವ ರಶಿಯಾ ದೇಶದಿಂದ ಖರಿದಿಸಲು ನರೇಂದ್ರ ಮೋದಿರವರ ನೇತೃತ್ವದ ಸರ್ಕಾರ ನಿರ್ಧಾರ ಮಾಡಿದ್ದು, ಒಟ್ಟು 200 ಕೋಟಿ ಮೌಲ್ಯದ ಒಪ್ಪಂದ ಇದಾಗಿದೆ.ಒಪ್ಪಂದಕ್ಕೆ ಸಹಿ ಮಾಡಿದ ಕೇವಲ ಮೂರು ತಿಂಗಳಲ್ಲಿ ರಷ್ಯಾ ದೇಶವು ಸಂಪೂರ್ಣ ಕ್ಷಿಪಣಿಗಳನ್ನು ಭಾರತಕ್ಕೆ ಪೂರೈಕೆ ಮಾಡಬೇಕಾಗಿದೆ. ಈ ಕ್ಷಿಪಣಿಗಳನ್ನು ಭಾರತೀಯ ವಾಯುಪಡೆಯ  ಎಂಐ-35 ಯುದ್ಧ ಹೆಲಿಕ್ಯಾಪ್ಟರ್ ಗಳಲ್ಲಿ ಬಳಸಿಕೊಂಡು ಶತ್ರುರಾಷ್ಟ್ರಗಳ ಟ್ಯಾಂಕರ್ ಗಳನ್ನು ಹಾಗೂ ಯುದ್ಧ ಉಪಕರಣಗಳನ್ನು ಕ್ಷಣಮಾತ್ರದಲ್ಲಿ ಮುಗಿಸಲು ಸಹಾಯವಾಗುತ್ತದೆ. ಭಾರತದೇಶವು ಕಳೆದ ಹತ್ತು ವರ್ಷಗಳಿಂದಲೂ ಈ ಒಪ್ಪಂದವನ್ನು ಮಾಡಿಕೊಳ್ಳಲು ಪ್ರಯತ್ನ ಪಡುತ್ತಿತ್ತು. ಆದರೆ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಒಪ್ಪಂದ ಮಾಡಿಕೊಳ್ಳುವಲ್ಲಿ ವಿಫಲವಾಗಿತ್ತು. ಇದೀಗ ನರೇಂದ್ರ ಮೋದಿರವರು ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ನಂತರ ಈ ಒಪ್ಪಂದ ಏರ್ಪಟ್ಟಿದ್ದು, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬ ಟ್ಯಾಗ್ ಲೈನ್ ಗೆ ಸರಿಹೊಂದುವಂತಿದೆ. ಅದೇನೇ ಆಗಿರಲಿ, ಒಪ್ಪಂದ ಯಾರಾದರೂ ಮಾಡಿಕೊಳ್ಳಲಿ ನಮಗೆ ನಮ್ಮ ಸೇನೆ ಬಲಗೊಳ್ಳುವುದು ಹಾಗೂ ದೇಶದ ಅಭಿವೃದ್ಧಿ ಮಾತ್ರ ಮುಖ್ಯ. ಪಕ್ಷದ ಹಂಗನ್ನು ತೊರೆದು ಈ ರೀತಿಯ ಒಪ್ಪಂದಗಳನ್ನು ಪ್ರತಿಯೊಬ್ಬರೂ ಬೆಂಬಲಿಸಿ.