ಮೋದಿ ಭರ್ಜರಿ ಓಪನಿಂಗ್- ಕರ್ನಾಟಕಕ್ಕೆ ಬಂಪರ್ ಉಡುಗೊರೆ.

ನರೇಂದ್ರ ಮೋದಿ ಅವರು ಇದೀಗ ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ್ದಾರೆ. ಈಗಾಗಲೇ ಅಧಿಕಾರ ಇಡಿದ ಕ್ಷಣದಿಂದಲೂ ತಮ್ಮ ಅಭಿವೃದ್ಧಿ ಮಂತ್ರವನ್ನು ಮತ್ತೊಮ್ಮೆ ಜಪಿಸುತ್ತ ಹೆಜ್ಜೆ ಇಟ್ಟಿರುವ ನರೇಂದ್ರ ಮೋದಿರವರು ಎಲ್ಲರೂ ಊಹೆ ಮಾಡಿದಂತೆ ಮೊದಲು ದೇಶದ 120 ಕೋಟಿ ಜನರ ಆರೋಗ್ಯದ ಮೇಲೆ ಗಮನಹರಿಸುವತ್ತ ಮುಂದಾಗಿದ್ದಾರೆ. ಕಳೆದ ಬಾರಿ ಅಧಿಕಾರದ ಅವಧಿಯಲ್ಲಿ ಜನೌಷದ ಕೇಂದ್ರಗಳ ಮೂಲಕ ಸಾಮಾನ್ಯ ಜನರಿಗೂ ಸಹ, ದುಬಾರಿ ಔಷಧಿಗಳನ್ನು ಖರೀದಿಸಲು ಸಹಕಾರಿಯಾಗುವಂತೆ ಯೋಜನೆಯನ್ನು ಜಾರಿಗೆ ತಂದಿದ್ದರು. ಶೇಕಡ ಎಂಬತ್ತಕ್ಕೂ ಹೆಚ್ಚು ಕಡಿಮೆ ಬೆಲೆಗೆ ಈ ಕೇಂದ್ರಗಳಲ್ಲಿ ಔಷಧಿಗಳು ದೊರೆಯುತ್ತಿದ್ದವು. ಅಷ್ಟೇ ಅಲ್ಲದೆ ಇಡೀ ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ಕ್ಯಾನ್ಸರ್ ರೋಗದ ಔಷಧಿಗಳ ಮೇಲೆ ಬೆಲೆ ನಿಯಂತ್ರಣ ಕಾಯ್ದೆಯನ್ನು ಜಾರಿಗೆ ತಂದು ಕಡಿವಾಣ ಹಾಕಿದ್ದರು.

ಇಷ್ಟು ದಿವಸ ಔಷಧಿ ಬೆಲೆ ಕಡಿಮೆ ಯೋಜನೆಗಳಲ್ಲಿ ನಿರತರಾಗಿದ್ದ ನರೇಂದ್ರ ಮೋದಿ ಅವರು ಇದೀಗ ದೇಶದ ಎಲ್ಲೆಡೆ ಒಟ್ಟು 36 ಕ್ಯಾನ್ಸರ್ ಕೇಂದ್ರಗಳನ್ನು ತೆರೆಯಲು ನಿರ್ಧಾರ ಮಾಡಿದ್ದಾರೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಲ್ಲಿ ಈ ಕೇಂದ್ರಗಳು ಆರಂಭವಾಗುತ್ತಿದ್ದು, ಈ ಪೈಕಿ ಎರಡು ಕೇಂದ್ರಗಳು ಕರ್ನಾಟಕದಲ್ಲಿ ಆರಂಭವಾಗಲಿವೆ. ಮೊದಲನೇ ಕೇಂದ್ರ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಆರಂಭವಾಗಲಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಒಟ್ಟು 120 ಕೋಟಿ ಹಣ ಬಿಡುಗಡೆಯಾಗಲಿದೆ. ಮತ್ತೊಂದು ಕೇಂದ್ರವನ್ನು ಲೋಕಸಭಾ ಚುನಾವಣೆಯ ಸಮಯದಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಮಂಡ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ನರೇಂದ್ರ ಮೋದಿ ರವರು, ಮಂಡ್ಯ ಜಿಲ್ಲೆಯ ವೈದ್ಯಕೀಯ ಕಾಲೇಜಿನಲ್ಲಿ ಕ್ಯಾನ್ಸರ್ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದ್ದು ಕೇಂದ್ರ ಸರ್ಕಾರದಿಂದ ಇನ್ನು ಕೆಲವೇ ಕೆಲವು ದಿನಗಳಲ್ಲಿ 38 ಕೋಟಿ ಹಣ ಬಿಡುಗಡೆಯಾಗಲಿದೆ. ಇನ್ನು ಬಿಡುಗಡೆಯಾಗುತ್ತಿರುವ ಹಣವು ಒಟ್ಟು ಯೋಜನೆಯ ಶೇಕಡ 60ರಷ್ಟು ಮಾತ್ರ, ಇನ್ನುಳಿದ ಶೇಕಡ 40ರಷ್ಟು ಹಣವನ್ನು ರಾಜ್ಯ ಸರ್ಕಾರವು ನೀಡಬೇಕಾಗಿದೆ.

Post Author: Ravi Yadav