ಸೈನಿಕರ ವಶಕ್ಕೆ ಸಿಗುವ ಮುನ್ನ ಪಾಪಿಗಳ ಮುಂದೆ ಅಭಿನಂದನ್ ಕೂಗಿ ಹೇಳಿದ್ದು ಏನು ಗೊತ್ತಾ?? ದೇಶಭಕ್ತಿ ಎಂದರೆ ಇದು !!

ಸೈನಿಕರ ವಶಕ್ಕೆ ಸಿಗುವ ಮುನ್ನ ಪಾಪಿಗಳ ಮುಂದೆ ಅಭಿನಂದನ್ ಕೂಗಿ ಹೇಳಿದ್ದು ಏನು ಗೊತ್ತಾ?? ದೇಶಭಕ್ತಿ ಎಂದರೆ ಇದು !!

ಭಾರತದ ಹೆಮ್ಮೆಯ ಪುತ್ರ ಅಭಿನಂದನ್ ರವರು ಗಡಿ ದಾಟಿ ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಸ್ಥಳೀಯ ನಾಗರಿಕರ ಕೈಯಲ್ಲಿ ಬಂಧನಕ್ಕೆ ಒಳಗಾದ ನಂತರ ಪಾಕಿಸ್ತಾನ ಸೇನೆಯು ತನ್ನ ವಶಕ್ಕೆ ಪಡೆದಿತ್ತು. ಆದರೆ ಪಾಕಿಸ್ತಾನ ಸೇನೆಯು ಅಭಿನಂದನ್ ರವರನ್ನು ವಶಕ್ಕೆ ಪಡೆಯುವ ಮುನ್ನ ಹಲವಾರು ಸಂಗತಿಗಳು ನಡೆದಿವೆ, ಆ ಸಂಗತಿಗಳು ಅಭಿನಂದನ್ ರವರ ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಲಿದೆ, ಯಾಕೆ ಗೊತ್ತಾ?? ಅಭಿನಂದನ್ ರವರು ಕೆಳಗಿಳಿದ ನಂತರ ಏನಾಯಿತು ಎಂಬುದನ್ನೂ ಪಾಕಿಸ್ತಾನದ ಸಾಮಾಜಿಕ ಕಾರ್ಯಕರ್ತ ರಜಾಕ್ ರವರು ಪಾಕಿಸ್ತಾನದ ಮೀಡಿಯಾಗಳಿಗೆ ಬಹಿರಂಗಗೊಳಿಸಿದ್ದಾರೆ. ಆ ಮಾತುಗಳನ್ನು ನೀವು ಕೇಳಿದರೆ ಖಂಡಿತವಾಗಿಯೂ ಅಭಿನಂದನ್ ರವರ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಲಿದೆ.ಇವರ ದೈರ್ಯ ಹಾಗು ದೇಶ ಪ್ರೇಮದ ಬಗ್ಗೆ ತಿಳಿಯಲು ನಿಮಗೆ ಸಮಯವಿದ್ದರೆ ಎರಡು ನಿಮಿಷ ಸಂಪೂರ್ಣ ಓದಿ

ರಜಾಕ್ ರವರು ಹೇಳಿರುವ ಪ್ರಕಾರ ಇದ್ದಕ್ಕಿದ್ದ ಹಾಗೆ ಅವರು ಮನೆಯಲ್ಲಿ ಕುಳಿತಿರುವಾಗ ಭಾರಿ ಸದ್ದು ಕೇಳಿಬರುತ್ತದೆ. ಸದ್ದು ಕೇಳಿಸಿಕೊಂಡು ಗಾಬರಿಯಿಂದ ಹೊರ ಓಡಿ ಬಂದ ರಜಾಕ್ ರವರು ಎರಡು ವಿಮಾನಗಳು ಬೆಂಕಿ ಹೊತ್ತಿಕೊಂಡು ಉರಿಯುವ ದೃಶ್ಯವನ್ನು ಕಾಣುತ್ತಾರೆ. ಒಂದು ವಿಮಾನ ಪಾಕಿಸ್ತಾನದ ಯುದ್ಧ ವಿಮಾನ ಗಡಿ ನಿಯಂತ್ರಣ ರೇಖೆಯತ್ತ ವೇಗವಾಗಿ ಹಾರಿ ಹೋಗುತ್ತದೆ ಆದರೆ ಮತ್ತೊಂದು ವಿಮಾನ ( ಭಾರತೀಯ ಮಿಗ್ 21) ಸ್ಪೋಟಗೊಂಡು ಕೆಳಮುಖವಾಗಿ ಬೀಳುತ್ತದೆ. ಸುಮಾರು ರಜಾಕ್ ರವರ ಮನೆಯಿಂದ ಒಂದು ಕಿಲೋಮೀಟರ್ ದೂರದಲ್ಲಿ ವಿಮಾನ ಪತನ ವಾಗುತ್ತಿರುವುದು ಕಂಡುಬರುತ್ತದೆ. ತದನಂತರ ಅದೇ ಆಸುಪಾಸಿನಲ್ಲಿ ಪ್ಯಾರಶೂಟ್ ಬಳಸಿಕೊಂಡು ಒಬ್ಬ ವ್ಯಕ್ತಿ ಕೆಳಗೆ ಇಳಿಯುತ್ತಿರುವುದು ಕಂಡುಬರುತ್ತದೆ.

ಪ್ಯಾರಶೂಟ್ ನಿಂದ ಪೈಲೆಟ್ ಸುರಕ್ಷಿತವಾಗಿ ಹೊರ ಬರುವುದನ್ನು ಕಂಡ ರಜಾಕ್ ರವರು ಹಳ್ಳಿಯ ಹುಡುಗರನ್ನು ಕರೆದುಕೊಂಡು ಸ್ಥಳಕ್ಕೆ ಕ್ಷಣ ಮಾತ್ರದಲ್ಲಿ ತಲುಪುತ್ತಾರೆ. ಸೇನೆಯವರು ಬರುವವರೆಗೂ ಯಾರೊಬ್ಬರೂ ವಿಮಾನ ಪತನಗೊಂಡ ಜಾಗಕ್ಕೆ ಹೋಗದಿರುವಂತೆ ಸೂಚಿಸಿದ ರಜಾಕ್ ರವರು ಯುವಕರಿಗೆ ಭಾರತೀಯ ಪೈಲೆಟ್ ನನ್ನ ಬಿಗಿಯಾಗಿ ಬಂಧಿಸುವಂತೆ ಸೂಚನೆ ನೀಡುತ್ತಾರೆ. ಆದರೆ ತಾನು ಪಾಕಿಸ್ತಾನ ನೆಲದಲ್ಲಿ ಇದ್ದೇನೆ ಎಂಬ ಅನುಮಾನವಿದ್ದರೂ ಸಹ ನೇರವಾಗಿ ಬಂದೂಕು ತೆಗೆದ ಭಾರತೀಯ ಯೋಧ ಅಭಿನಂದನ್ ಅವರು ನಾನು ಯಾವ ದೇಶದಲ್ಲಿ ಇದ್ದೇನೆ ಎಂಬ ಪ್ರಶ್ನೆಯನ್ನು ಕೇಳಿ ಸ್ಥಳ ಖಚಿತಪಡಿಸಿಕೊಳ್ಳಲು ಪ್ರಯತ್ನ ಪಡುತ್ತಾರೆ.

ಆದರೆ ಯುವಕರು ಅಭಿನಂದನ್ ರವರ ದಾರಿಯನ್ನು ತಪ್ಪಿಸಲು ಇದು ಭಾರತ ಎಂದು ಸುಳ್ಳು ಹೇಳುತ್ತಾನೆ. ಅಭಿನಂದನ್ ಅವರಿಗೆ ಅನುಮಾನ ಮತ್ತಷ್ಟು ಹೆಚ್ಚಾಗುತ್ತದೆ ಆದ ಕಾರಣ ಯಾವುದೇ ಅಂಜಿಕೆ ಇಲ್ಲದೆ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಮೊಳಗಿಸುತ್ತಾರೆ. ತದನಂತರ ಬೆನ್ನು ಮೂಳೆ ಮುರಿದಿದೆ ಎಂದು ನೀರು ಕುಡಿಯಲು ಭಾರತೀಯ ಯೋಧ ಸ್ಥಳೀಯರಲ್ಲಿ ಮನವಿ ಮಾಡುತ್ತಾರೆ. ಆದರೆ ಅಭಿನಂದನ್ ರವರು ಊಹಿಸಿದಂತೆ ಸಾಮಾನ್ಯವಾಗಿ ಎರಡು ಮೂರು ಘೋಷಣೆಗಳ ನಂತರ ಪಾಕಿಸ್ತಾನದ ಯುವಕರ ತಾಳ್ಮೆ ಮುಗಿಯುತ್ತದೆ, ಅವರು ಸಹ ಪಾಕಿಸ್ತಾನದ ದೇಶದ ಪರ ಘೋಷಣೆಗಳನ್ನು ಕೂಗಲು ಆರಂಭಿಸುತ್ತಾರೆ.

ಇದರಿಂದ ಕೆರಳಿದ ಅಭಿನಂದನ್ ರವರು ತಾನು ಪಾಕಿಸ್ತಾನದಲ್ಲೇ ಇದ್ದೇನೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ತಮ್ಮ ಬಂಧೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಲು ಪ್ರಯತ್ನ ಪಡುತ್ತಾರೆ. ಅಲ್ಲಿ ಯುವಕರ ಗುಂಪು ಬಹಳ ಹೆಚ್ಚಾಗಿದ್ದ ಕಾರಣ ಅಂಜದ ಯುವಕರು ಕಲ್ಲುಗಳನ್ನು ಹೆಚ್ಚಿಕೊಂಡು ಅಭಿನಂದನ ರವರ ಮೇಲೆ ಹಲ್ಲೆಗೆ ಯತ್ನಿಸುತ್ತಾರೆ ಬೇರೆ ದಾರಿ ಇಲ್ಲದೆ ಗುಂಪು ಹೆಚ್ಚಾಗಿದ್ದ ಕಾರಣ ಅಭಿನಂದನ್ ರವರು ಬಂದೂಕನ್ನು ಹಿಂದಕ್ಕೆ ತಿರುಗಿ ತಿರುಗಿ ತೋರಿಸಿ ಸುಮಾರು ಅರ್ಧ ಕಿಲೋ ಮೀಟರ್ ನಷ್ಟು ದೂರ ಓಡಿಹೋಗುತ್ತಾರೆ.

ಇವರನ್ನು ಬೆನ್ನತ್ತಿದ ಪಾಕಿಸ್ತಾನದ ಯುವಕರು ಅಭಿನಂದನ್ ರವರ ಬಳಿ ಹೋಗಲು ಯಶಸ್ವಿಯಾಗುತ್ತಾರೆ ಈಗಲೂ ಸಹ ದಾಳಿಯಲ್ಲಿ ಮತ್ತಷ್ಟು ಗುಂಡುಗಳನ್ನು ಹಾರಿಸಿ ಬೆದರಿಸಲು ಅಭಿನಂದನ್ ಪ್ರಯತ್ನ ಪಡುತ್ತಾರೆ ಆದರೆ ಕೊನೆಗೆ ಯಾವುದೇ ಪ್ರಯತ್ನಗಳು ಫಲ ನೀಡದ ಕಾರಣ ಪಾಕಿಸ್ತಾನದ ಗಡಿಯಲ್ಲಿ ಕಂಡುಬಂದ ಸಣ್ಣ ಕೊಳದಲ್ಲಿ ಅಭಿನಂದನ್ ರವರು ಜಿಗಿದು ತನ್ನ ಜೇಬಿನಲ್ಲಿದ್ದ ದಾಖಲೆಗಳನ್ನು ನೀರಿನಲ್ಲಿ ನೆನೆಸಿ ನುಂಗಲು ಪ್ರಯತ್ನ ಪಡುತ್ತಾರೆ. ಅಂತಹ ಸಮಯದಲ್ಲಿ ಸಹ ದೇಶದ ಭದ್ರತೆಯ ಬಗ್ಗೆ ಯಾರಿಗೂ ತಿಳಿಯಬಾರದು ಎಂಬ ದೇಶಭಕ್ತಿ ಇವರ ಮನದಲ್ಲಿ ಇರುತ್ತದೆ.

ಆದರೆ ಪಾಕಿಸ್ತಾನದ ಯುವಕರು ಬಾರಿ ಪ್ರಮಾಣದಲ್ಲಿ ಕಲ್ಲುಗಳನ್ನು ಅಭಿನಂದನ್ ರವರ ಮೇಲೆ ತೋರಿದ ಕಾರಣ ಅಭಿನಂದನ್ ರವರಿಗೆ ಬಹಳ ಗಾಯಗಳಾಗುತ್ತವೆ. ಯುವಕರು ಕೂಡಲೇ ಅಭಿನಂದನ್ ರವರನ್ನು ಬಂಧನ ಗೊಳಿಸಿದರು, ಇನ್ನೂ ಕೆಲವು ಯುವಕರು ಕೋಪಗೊಂಡಿದ್ದ ಕಾರಣ ಅಭಿನಂದನ ವರಿಗೆ ಥಳಿಸುತ್ತಾರೆ. ಮತ್ತು ಕೆಲವರು ಅಭಿನಂದನ್ ರವರಿಗೆ ಯಾವುದೇ ಹಲ್ಲೆ ಮಾಡದಂತೆ ತಡೆಯಲು ಪ್ರಯತ್ನ ಪಡುತ್ತಾರೆ. ಇಷ್ಟೆಲ್ಲಾ ವಿದ್ಯಮಾನಗಳ ನಡುವೆ ಕೊನೆಗೂ ಪಾಕಿಸ್ತಾನ ಸೇನೆ ಯು ವಿಮಾನ ಪತನಗೊಂಡ ಪ್ರದೇಶವನ್ನು ತಲುಪಿ ಅಭಿ ನಂದನ್ ಅವರನ್ನು ವಶಕ್ಕೆ ಪಡೆಯುತ್ತದೆ.

ತದನಂತರ ಪಾಕಿಸ್ತಾನ ಸೇನೆಯು ಅಭಿನಂದನ್ ರವರನ್ನು ಬಂಧನ ಗೊಳಿಸಿ ವಿಚಾರಣೆ ಮುಗಿಸಿ ಮುಂದಿನ 24ಗಂಟೆಗಳಲ್ಲಿ ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ತಾನು ಪಾಕಿಸ್ತಾನದಲ್ಲಿ ಇದ್ದೇನೆ ಎಂಬ ಸತ್ಯವನ್ನು ಅರಿತರು ಸಹ ನೇರವಾಗಿ ಭಾರತ್ ಮಾತಾಕಿ ಜೈ ಹಾಗೂ ದೇಶದ ಭದ್ರತೆಗೆ ದಾಖಲೆಗಳನ್ನು ಯಾವುದೇ ಕಾರಣಕ್ಕೂ ಶತ್ರುಗಳ ಕೈಗೆ ಸಿಗಬಾರದು ಎಂದು ನುಂಗಲು ಪ್ರಯತ್ನ ಪಟ್ಟಿದ್ದ ಅಭಿನಂದನ್ ರವರ ದೇಶಭಕ್ತಿಯನ್ನು ನೋಡಿದರೆ ಎಲ್ಲರಲ್ಲೂ ಹುಮ್ಮಸ್ಸು ಮೂಡುತ್ತದೆ. ಇಂತಹ ಹೆಮ್ಮೆಯ ಭಾರತೀಯ ಪುತ್ರ, ಅಭಿನಂದನ್ ರವರಿಗೆ ನಮ್ಮ ನಮನಗಳು ಜೈ ಹಿಂದ್. ಪ್ರತಿ ಕ್ಷಣದ ಮಾಹಿತಿಗಾಗಿ ಕರುನಾಡ ವಾಣಿ ಪೇಜನ್ನು ಲೈಕ್ ಮಾಡುವ ಮೂಲಕ ಫಾಲೋ ಮಾಡಿ.