ಇಮ್ರಾನ್ ಕುತಂತ್ರಕ್ಕೆ ಘರ್ಜಿಸಿದ ಮೋದಿ, ನಡುಗಿ ಹೋದ ಇಮ್ರಾನ್ ಖಾನ್: ನಡೆದಿದ್ದೇನು ಗೊತ್ತಾ??

ಇಂದು ಭಾರತೀಯ ವಾಯುಪಡೆ ಯೋಧ ಅಭಿನಂದನ್ ರವರನ್ನು ಪಾಕಿಸ್ತಾನ ದೇಶವು ಶಾಂತಿ ಪಸರಿಸಲು ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿದೆ ಮುಂದಿನ 24ಗಂಟೆಗಳಲ್ಲಿ ಭಾರತದ ಗಡಿಯಲ್ಲಿ ಪಾಕಿಸ್ತಾನವು ನಮ್ಮ ಹೆಮ್ಮೆಯ ಅಭಿನಂದನ್ ರವರನ್ನು ಭಾರತಕ್ಕೆ ಸಂಪೂರ್ಣ ಭದ್ರತೆಯೊಂದಿಗೆ ಹಸ್ತಾಂತರ ಮಾಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಇದು ಒಂದು ಒಳ್ಳೆಯ ವಿಚಾರವಾದರೂ ಪಾಕಿಸ್ತಾನ ದೇಶವು ಈ ವಿಷಯದಲ್ಲಿ ಕುತಂತ್ರ ನೀತಿಯನ್ನು ಅನುಸರಿಸಲು ಪ್ರಯತ್ನ ಪಟ್ಟಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ. ಆದರೆ ಎಂದು ದೇಶದ ರಕ್ಷಣೆಯ ವಿಚಾರದಲ್ಲಿ ರಾಜಿ ಮಾಡಿಕೊಳ್ಳದ ಮೋದಿ ರವರು ಪಾಪಿಗಳ ಮಾತು ಕೇಳಿ ಕೆಂಡಾಮಂಡವಾಗಿ ಹೋಗಿದ್ದರೆ

ಅಷ್ಟಕ್ಕೂ ಇಮ್ರಾನ್ ಖಾನ್ ರವರು ಸುಖಾಸುಮ್ಮನೆ ನೇರವಾಗಿ ಅಭಿ ನಂದನ್ ಅವರನ್ನು ಬಿಡುಗಡೆ ಮಾಡುತ್ತೇನೆ ಎಂದು ಘೋಷಿಸಿಲ್ಲ ಬದಲಾಗಿ ಭಾರತದ ಜೊತೆ ಒಂದು ಒಪ್ಪಂದವನ್ನು ಮಾಡಿಕೊಳ್ಳುವ ಆಸಕ್ತಿ ತೋರಿಸಿದ್ದರು.ಆ ಒಪ್ಪಂದ ಪಾಕಿಸ್ತಾನದ ಕುತಂತ್ರ ನೀತಿ ಏನೆಂಬುದನ್ನು ಬಹಿರಂಗಗೊಳಿಸಿತು. ಗಡಿಯಲ್ಲಿ ಭಾರಿ ಜಮಾವಣೆ ಗೊಂಡಿರುವ ಸೇನೆಯನ್ನು ಭಾರತ ದೇಶವು ವಾಪಾಸು ಕರೆಸಿಕೊಂಡರೆ ಅಭಿನಂದನೆಗಳನ್ನು ಬಿಡುಗಡೆ ಮಾಡುತ್ತೇನೆ ಎಂಬ ಶರತ್ತು ಪಾಕಿಸ್ತಾನವು ಭಾರತಕ್ಕೆ ವಿಧಿಸಲು ಪ್ರಯತ್ನ ಪಟ್ಟಿತು. ಬುಧವಾರ ಪಾಕಿಸ್ತಾನದ 20ಕ್ಕೂ ಹೆಚ್ಚು ಯುದ್ಧ ವಿಮಾನಗಳು ಭಾರತದ ಗಡಿಯನ್ನು ಪ್ರವೇಶಿಸಲು ಪ್ರಯತ್ನ ಪಟ್ಟಿದ್ದರು. ಆದರೆ ಭಾರತೀಯ ವಾಯುಪಡೆ ಸಂಚನ್ನು ವಿಫಲಗೊಳಿಸಿತ್ತು. ಇದೆ ಸಮಯದಲ್ಲಿ ಅಭಿನಂದನ್ ರವರು ಗಡಿ ದಾಟಿದ್ದರು

ಆದ ಕಾರಣದಿಂದ ಇದರ ಬಗ್ಗೆ ಯಾವುದೇ ಒಪ್ಪಂದ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ನರೇಂದ್ರ ಮೋದಿ ಅವರು ಅರಿತಿದ್ದರು. ಪಾಕಿಸ್ತಾನದ ಯೋಜನೆಯನ್ನು ತಿಳಿದುಕೊಳ್ಳಲು ಕಾಯುತ್ತಿದ್ದ ನರೇಂದ್ರ ಮೋದಿರವರು ಈ ಮಾತು ಕೇಳಿದ ತಕ್ಷಣ ಕೆಂಡಾಮಂಡಲವಾಗಿ, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದರು.ಒಂದು ವೇಳೆ ಇದ ನಡೆದಲ್ಲಿ ಪಾಕ್ ಆಕ್ರಮಣ ಮಾಡಿದರೆ ಬಹಳ ನಷ್ಟ ಸಂಭವಿಸುತ್ತದೆ ಎಂಬುದು ಮೋದಿ ರವರಿಗೆ ತಿಳಿದಿತ್ತು, ಆದ ಕಾರಣದಿಂದ ಭಾರತ ಅಭಿನಂದನ್ ರವರ ವಿಚಾರದಲ್ಲಿ ಯಾವುದೇ ಷರತ್ತು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಭಾರತದ ಜೊತೆ ಸಮಾಲೋಚನೆ ನಡೆಸಲು ಪ್ರಯತ್ನ ಪಟ್ಟರೆ ಅದು ಸಾಧ್ಯವಾಗುವುದಿಲ್ಲ. ಸೇನೆಯನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಶ್ನೆ ಇಲ್ಲಿ ಕಂಡುಬರುವುದಿಲ್ಲ.

ಪೈಲೆಟ್ ಅಭಿನಂದನ್ ರವರನ್ನು ಭಾರತ ದೇಶಕ್ಕೆ ಹೇಗೆ ಕರೆಸಿಕೊಳ್ಳಬೇಕು ಎಂಬುದು ನಮಗೆ ತಿಳಿದಿದೆ ಆದರೆ ಒಂದು ವೇಳೆ ಅಷ್ಟರಲ್ಲಿ ಪಾಕಿಸ್ತಾನವು ತನ್ನ ಕುತಂತ್ರ ನೀತಿಯನ್ನು ತೋರಿಸಿದರೆ, ಅಭಿನಂದನೆ ರವರಿಗೆ ಚಿಕ್ಕ ತೊಂದರೆಯಾದರೂ ಸಹ ಭಾರತ ದೇಶವು ಪಾಕಿಸ್ತಾನವನ್ನು ಕ್ಷಮಿಸುವುದಿಲ್ಲ. ಭಾರತವು ಎಂತಹ ದಿಟ್ಟ ಹೆಜ್ಜೆಯನ್ನು ಇಡಲು ಹಿಂದೆ ಸರಿಯುವುದಿಲ್ಲ ಅದು ಯುದ್ಧ ವಾದರೂ ಸರಿ ಎಂಬ ಮಾತನ್ನು ನರೇಂದ್ರ ಮೋದಿರವರು ಪಾಕಿಸ್ತಾನಕ್ಕೆ ರವಾನಿಸಿದ್ದರು. ಈ ಮಾತನ್ನು ಕೇಳಿದ ಇಮ್ರಾನ್ ಖಾನ್ ರವರು ಸಹಜವಾಗಿ ಭಾರತ ದೇಶವು ಯುದ್ಧ ಮಾಡುತ್ತದೆ ಎಂದು ನಡುಗಿ ಹೋಗಿ, ಒಪ್ಪಂದ ಬೇಡ ಎಂದು ಅಭಿನಂದನೆ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.

Post Author: Ravi Yadav