ತಡರಾತ್ರಿ ರಷ್ಯಾ ಅಧ್ಯಕ್ಷ ಮೋದಿ ಅವರಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ??

ತಡರಾತ್ರಿ ರಷ್ಯಾ ಅಧ್ಯಕ್ಷ ಮೋದಿ ಅವರಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ??

ಪುಲ್ವಾಮ ದಾಳಿಯನ್ನು ಇಂದು ಇಡೀ ವಿಶ್ವವೇ ಖಂಡಿಸುತ್ತದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ದೇಶವು ಅಕ್ಷರ ಬಿಕಾರಿಯಾಗಿದೆ. ಸರಿಯಾದ ಸಾಕ್ಷಗಳನ್ನು ಒದಗಿಸಿರುವ ಭಾರತ, ಪಾಕಿಸ್ತಾನ ವನ್ನು ವಿಶ್ವದ ಮುಂದೆ ಮತ್ತೊಮ್ಮೆ ಬೆತ್ತಲೆ ಮಾಡುವಲ್ಲಿ ಯಶಸ್ವಿಯಾಗಿದೆ ಹಾಗೂ ಈಗಾಗಲೇ ವಾಯುಪಡೆಯ ತನ್ನ ಶಕ್ತಿ ಪ್ರದರ್ಶನ ಮಾಡಿ ಪ್ರತೀಕಾರವನ್ನು ತೀರಿಸಿಕೊಂಡು ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಿದೆ.

ಪಾಕಿಸ್ತಾನವು ಅಭಿನಂದನ್ ಅವರನ್ನು ಬಿಡುಗಡೆ ಮಾಡಲು ಒಪ್ಪಿಕೊಂಡ ನಂತರವೂ ಸಹ ಗಡಿಯಲ್ಲಿ ಇನ್ನು ಗುಂಡಿನ ಚಕಮಕಿ ನಿಂತಿಲ್ಲ ಯಾವುದೇ ಕ್ಷಣದಲ್ಲಿ ಬೇಕಾದರೂ ಯುದ್ಧ ನಡೆಯಬಹುದು ಎಂಬ ಆತಂಕ ಎಲ್ಲರಲ್ಲೂ ಮೂಡಿದೆ. ಒಂದು ವೇಳೆ ಅದೇ ನಡೆದಲ್ಲಿ ಪಾಕಿಸ್ತಾನದ ಅಂತ್ಯ ಕಟ್ಟಿಟ್ಟ ಬುತ್ತಿ ಎಂಬುದು ಎಲ್ಲರಿಗೂ ತಿಳಿದಿದೆ ಆ ಸತ್ಯವನ್ನು ಪಾಕಿಸ್ತಾನ ಸಹ ಅರ್ಥ ಮಾಡಿಕೊಂಡು ಉಗ್ರರನ್ನು ಕಿತ್ತುಹಾಕಲು ಭಾರತಕ್ಕೆ ಸಹಾಯ ಮಾಡಿದರೆ ಅಥವಾ ಏನು ಮಾಡದೆ ಕುಳಿತುಕೊಂಡರೆ ಉಳಿದದ್ದನ್ನು ಭಾರತ ನೋಡಿಕೊಳ್ಳುತ್ತದೆ.

ಆದರೆ ಪಾಕಿಸ್ತಾನವು ಉಗ್ರರನ್ನು ಪೋಷಿಸುತ್ತಿದೆ ಬದಲಾಗಿ ಉಗ್ರರೇ ಪಾಕಿಸ್ತಾನವನ್ನು ಪೋಷಿಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ ಯಾಕೆಂದರೆ ಉಗ್ರರಿಗೆ  ಅಂತಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕ ಸಹಾಯ ಮಾಡುತ್ತಿರುವ ಕೆಲವು ಕುತಂತ್ರಿ ದೇಶಗಳು ಪಾಕಿಸ್ತಾನಕ್ಕೆ ಸಹಾಯ ಮಾಡುವ ಮೂಲದಲ್ಲಿ ಉಗ್ರರಿಗೆ ಹಣ ವರ್ಗಾವಣೆ ಮಾಡುತ್ತಿವೆ. ಆದ ಕಾರಣದಿಂದ ಪಾಕಿಸ್ತಾನ ದೇಶವು ಉಗ್ರರನ್ನು ಮಟ್ಟ ಹಾಕುವ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.

ಆದ ಕಾರಣದಿಂದ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಇನ್ನೂ ಮರೆಮಾಚಿ ಇಲ್ಲ ಇಂತಹ ಸಂದಿಗ್ಧ ಸಮಯದಲ್ಲಿ ವಿಶ್ವದ  ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾದ ಅಧ್ಯಕ್ಷ ಪುಟಿನ್ ಅವರು ನರೇಂದ್ರ ಮೋದಿ ರವರಿಗೆ ತಡರಾತ್ರಿ ಕರೆ ಮಾಡಿದ್ದಾರೆ. ಭಾರತದ ಆಪ್ತಮಿತ್ರ ರಾಷ್ಟ್ರಗಳಲ್ಲಿ ಒಂದಾಗಿರುವ ರಷ್ಯಾ ದೇಶದ ಅಧ್ಯಕ್ಷ ಪುಟಿನ್ ರವರು ಪುಲ್ವಾಮ ದಾಳಿಯ ಕುರಿತು ಕರೆಯಲ್ಲಿ ಮಾತನಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

ಉಗ್ರರ ವಿರುದ್ಧದ ಹೋರಾಟದಲ್ಲಿ ಭಾರತವನ್ನು ಸಂಪೂರ್ಣ ಬೆಂಬಲಿಸುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ರವರು ನರೇಂದ್ರ ಮೋದಿ ಅವರಿಗೆ ಹೇಳಿದ್ದಾರೆ. ಭಯೋತ್ಪಾದಕರ ವಿರುದ್ಧ ಹೋರಾಡಲು ಎಲ್ಲಾ ರೀತಿಯ ಬೆಂಬಲಗಳನ್ನು ನಾವು ಒದಗಿಸುತ್ತೇವೆ ಯಾವುದೇ ಕ್ಷಣದಲ್ಲಿ ಬೇಕಾದರೂ ನಮ್ಮ ದೇಶದಿಂದ ನಿಮಗೆ ಎಲ್ಲ ರೀತಿಯ ಸಹಾಯ ಗಳು ಸಿಗುತ್ತವೆ ಎಂದು ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.