IRCTC Thailand Tour Package: ಅತ್ಯಂತ ಕಡಿಮೆ ಬೆಲೆಯ ಥೈಲ್ಯಾಂಡ್ ಏರ್ ಪ್ಯಾಕೇಜ್. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

IRCTC Thailand Tour Package explained with price and benefits in Kannada. Here you can find all the details about IRCTC Thailand Tour Package

IRCTC Thailand Tour Package: ನಮಸ್ಕಾರ ಸ್ನೇಹಿತರೇ ವಿದೇಶಕ್ಕೆ ಟೂರ್ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಕೂಡ ಆಗಿರುತ್ತದೆ. ಆದರೆ ವಿದೇಶಿ ಪ್ರಯಾಣ ಎಂದರೆ ವೀಸಾದಿಂದ ಪ್ರಾರಂಭಿಸಿ ಅಲ್ಲಿಗೆ ತಗಲುವಂತಹ ಕರ್ಚು ಕೂಡ ಸಾಕಷ್ಟು ಬಾರಿ ನಮಗೆ ಈ ಪ್ಲಾನ್ ಅನ್ನು ಕ್ಯಾನ್ಸಲ್ ಮಾಡುವ ಹಾಗೆ ಮಾಡಿರುತ್ತದೆ ಎಂಬುದನ್ನು ಕೂಡ ಅರ್ಥಮಾಡಿಕೊಳ್ಳಬಹುದು. ಆದರೆ ಇಂದಿನ ಲೇಖನಿಯಲ್ಲಿ ನಾವು ನಿಮಗೆ ಸುಲಭ ರೂಪದಲ್ಲಿ ಹಾಗೂ ಕಡಿಮೆ ಬೆಲೆಯಲ್ಲಿ ಯಾವ ರೀತಿಯಲ್ಲಿ ಥಾಯ್ಲ್ಯಾಂಡ್ ಟೂರ್(Thailand Tour) ಮಾಡಬಹುದು ಅನ್ನೋದನ್ನ ಹೇಳಲು ಹೊರಟಿದ್ದೇವೆ.

ಇಂಡಿಯಾ ರೈಲ್ವೆ ಕ್ಯಾಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್(IRCTC) ಕೇವಲ ನಿಮಗೆ ದೇಶದಲ್ಲಿ ಸುತ್ತಾಡೋಕೆ ಮಾತ್ರವಲ್ಲದೆ ವಿದೇಶದಲ್ಲಿ ಸುತ್ತಾಡುವಂತಹ ಪ್ಯಾಕೇಜ್ ಅನ್ನು ಕೂಡ ಈಗ ಪರಿಚಯಿಸುತ್ತಿದೆ ಎಂದು ಹೇಳಬಹುದಾಗಿದೆ. ಥಾಯ್ಲ್ಯಾಂಡ್ ದೇಶಕ್ಕೆ IRCTC ನಿಮ್ಮನ್ನು ಕರೆದುಕೊಂಡು ಹೋಗುವಂತಹ ಈ ಟೂರ್ ಪ್ಯಾಕೇಜ್ (IRCTC Thailand Tour Package) ಡಿಸೆಂಬರ್ 8 ರಿಂದ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದು ಬಂದಿದೆ.

ಇವುಗಳನ್ನು ಕೂಡ ಓದಿ:
ಸುತ್ತಾಡಿ ಸುತ್ತಾಡಿ ನೀವೇ ಸಾಕು ಅಂತೀರಾ, ಆದರೆ ಪೆಟ್ರೋಲ್ ಮುಗಿಯಲ್ಲ. ಬೈಕ್ ನಂತೆ ಮೈಲೇಜ್ ಇರುವ ಕಾರು ಬಿಡುಗಡೆ. –> Maruti Suzuki Alto K10
 ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga
ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.. Next iPad Pro

ನೀವು ಕೂಡ ವಿದೇಶ ಸುತ್ತುವಂತಹ ಕನಸನ್ನು ಹೊಂದಿದ್ದರೆ IRCTC ಸಂಸ್ಥೆಯ ಈ ಟೂರ್ ಪ್ಯಾಕೇಜ್ ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದ್ದು ನಿಮ್ಮ ಉಳಿದುಕೊಳ್ಳುವ ಹೋಟೆಲ್ ನಿಂದ ಹಿಡಿದು ನಿಮ್ಮ ಊಟ ತಿಂಡಿಯ ಎಲ್ಲಾ ಖರ್ಚುಗಳನ್ನು ಹಾಗೂ ವ್ಯವಸ್ಥೆಗಳನ್ನು ಕೂಡ IRCTC ಸಂಸ್ಥೆ ನೋಡಿಕೊಳ್ಳುತ್ತದೆ. ಬನ್ನಿ ಈ ಟೂರಿನ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

Here you can find all the details about IRCTC Thailand Tour Package

IRCTC ಸಂಸ್ಥೆ ಪ್ರಾರಂಭಿಸಲಿರುವಂತಹ ಈ ಟೂರ್ ಡಿಸೆಂಬರ್ 8ರಂದು ಲಕ್ನೋದಿಂದ ಪ್ರಾರಂಭವಾಗಲಿದೆ. ಈ ಪ್ರವಾಸವನ್ನು ಐದು ದಿನ ಆರು ರಾತ್ರಿಗಾಗಿ ಇಡಲಾಗಿದೆ. ಯಾವುದೇ ಯಾತ್ರಿಕರಿಗೂ ಕೂಡ ಕನ್ಫ್ಯೂಷನ್ ಆಗಬಾರದು ಎನ್ನುವ ಕಾರಣಕ್ಕಾಗಿ ಲಕ್ನೋದಿಂದ ಬ್ಯಾಂಕಾಕ್(Bangkok, Thailand) ಹಾಗೂ ಬ್ಯಾಂಕಾಕ್ ನಿಂದ ಲಕ್ನೋವಿಗೆ ಫ್ಲೈಟ್ ಅನ್ನು ನಿರ್ಧರಿಸಲಾಗಿದೆ. 3 ಸ್ಟಾರ್ ಹೋಟೆಲ್ ನಿಂದ ಪ್ರಾರಂಭಿಸಿ ಊಟ ತಿಂಡಿಯ ಪ್ರತಿಯೊಂದು ವ್ಯವಸ್ಥೆಯನ್ನು ಕೂಡ ಈ ಟೂರ್ ಪ್ಯಾಕೇಜ್ ನಲ್ಲಿ ಶಾಮಿಲಾಗಿಸಲಾಗಿದೆ. ಈ ಟೂರ್ ಪ್ಯಾಕೇಜ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೀವು irctctourism.com ವೆಬ್ಸೈಟ್ ಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಟೂರ್ ಮಾಡುವಾಗ ಪ್ರತಿಯೊಬ್ಬರೂ ಕೂಡ ಗಮನಿಸಬೇಕಾಗಿರುವ ಪ್ರಥಮ ವಿಚಾರ ಏನೆಂದರೆ ಈ ಪ್ರವಾಸಕ್ಕೆ ಎಷ್ಟು ಖರ್ಚಾಗುತ್ತದೆ(Thailand Tour Package Price) ಎನ್ನುವುದು. ಈ ಪ್ರವಾಸದ ಪ್ಯಾಕೇಜ್ ನೋಡೋದಾದ್ರೆ 69,800 ರೂಪಾಯಿ ಖರ್ಚಾಗಿರುತ್ತದೆ. ಇದು ಒಬ್ಬರಿಗೆ ಆಗಿರುತ್ತದೆ. ಒಂದು ವೇಳೆ ಇಬ್ಬರು ಈ ಟೂರ್ ಪ್ಯಾಕೇಜ್ ಅನ್ನು ಬುಕ್ ಮಾಡುತ್ತಾರೆ ಎಂದರೆ ಆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ 60,300 ರೂಪಾಯಿ ಬೀಳುತ್ತದೆ. ಮೂರು ಜನರು ಒಟ್ಟಿಗೆ ಬುಕ್ ಮಾಡಿದಾಗಲೂ ಕೂಡ ಇದೇ ದರ ಬೀಳುತ್ತದೆ. ಒಂದು ವೇಳೆ ಐದು ಜನ ಒಟ್ಟಿಗೆ ಬುಕ್ ಮಾಡಿದರೆ ಆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ 55,200 ರೂಪಾಯಿ ತಗಲುತ್ತದೆ ಎಂದು ಹೇಳಬಹುದಾಗಿದೆ.

ಈ ಟೂರ್ ಪ್ಯಾಕೇಜ್ (IRCTC Thailand Tour Package)ನ ಹೆಸರು Sparkling Thailand Ex Lucknow ಆಗಿದೆ. ಥಾಯ್ಲ್ಯಾಂಡ್ ನಲ್ಲಿ ಈ ಟೂರ್ ಪ್ಯಾಕೇಜ್ ನ ಅನುಸಾರವಾಗಿ ತಿರುಗಾಡುವಂತಹ ಪ್ರೇಕ್ಷಣೀಯ ಸ್ಥಳ ಬ್ಯಾಂಕಾಕ್ ಹಾಗೂ ಪಟಾಯ. ಡಿಸೆಂಬರ್ 8 ರಿಂದ ಪ್ರಾರಂಭವಾಗಿ 13ನೇ ದಿನಾಂಕದವರೆಗೂ ಕೂಡ ಈ ಟೂರ್ ಅನ್ನು ಮಾಡಬಹುದಾಗಿದೆ. ಇದರ ಅರ್ಥ ಆರು ದಿನ ಹಾಗೂ ಐದು ರಾತ್ರಿಗಳಾಗಿವೆ. ಫ್ಲೈಟ್ ಮೂಲಕ ಚಲಿಸಲಾಗುತ್ತದೆ ಹಾಗೂ ಇಲ್ಲಿ ನಿಮಗೆ ಮೂರು ಹೊತ್ತಿನ ಆಹಾರವನ್ನು ಕೂಡ ಅವರೇ ನೀಡುತ್ತಾರೆ. ಲಕ್ನೋ ಏರ್ಪೋರ್ಟ್(Lucknow Airport) ನಿಂದ ಬ್ಯಾಂಕಾಕ್ ಗೆ ತಲುಪಲಾಗುತ್ತದೆ.