Tata Nexon: ಹೊಸ ಅಪ್ಡೇಟ್ ಜೊತೆಗೆ ಮಾರುಕಟ್ಟೆಗೆ ಲಗ್ಗೆ ಹಿಡಿಯಲು ಸಜ್ಜಾಯ್ತು ಟಾಟಾ ನೆಕ್ಸನ್. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Tata Nexon facelift is ready to come to market with great features and best pricing- here is the full details of new Tata nexon.

Tata Nexon Facelift: ನಮಸ್ಕಾರ ಸ್ನೇಹಿತರೇ ಭಾರತದ ಆಟೋಮೊಬೈಲ್ ಚಿತ್ರ ಯಾವ ವೇಗದಲ್ಲಿ ಬೆಳೆಯುತ್ತಿದೆ ಎನ್ನುವುದನ್ನು ನಾವು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ. ಸದ್ಯಕ್ಕೆ ಭಾರತದ ಕಾರುಪ್ರಿಯರ ಅತ್ಯಂತ ನಂಬಿಕಸ್ತ ಬ್ರಾಂಡ್ ಆಗಿರುವಂತಹ ಟಾಟಾ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ಕಾರುಗಳಲ್ಲಿ ಒಂದಾಗಿರುವ ಟಾಟಾ ನೆಕ್ಸಾನ್ ಅನ್ನು ಅಪ್ಡೇಟ್ ಮಾಡಿರುವಂತಹ ವರ್ಷನ್ ನಲ್ಲಿ ಸೆಪ್ಟೆಂಬರ್ 14ರ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಟಾಟಾ ಸಂಸ್ಥೆ ಸಜ್ಜಾಗಿ ನಿಂತಿದೆ. ಟಾಟಾ ನೆಕ್ಸನ್ ಫೇಸ್ ಲಿಫ್ಟ್(Tata Nexon Facelift) ಹೆಸರಿನಲ್ಲಿ ಇದು ಲಾಂಚ್ ಆಗಲಿದೆ. ಕರುನಾಡಿನ ಕನ್ನಡಿಗರೇ, ಈ ಲೇಖನವನ್ನು ಓದಿದ ಮೇಲೆ- ನಿಮಗೆ ನಿಮ್ಮ ಊರಿನಲ್ಲಿ ನಿಮ್ಮ ಜಮೀನಿನಲ್ಲಿ ಹೊಸ ಬೋರ್ವೆಲ್ ಗೆ ಹಣದ ಅಗತ್ಯವಿದ್ದರೆ, ಸರ್ಕಾರದ ಹೊಸ ಯೋಜನೆಯನ್ನು ಸದುಪಯೋಗ ಪಡೆಸಿಕೊಳ್ಳಿ. ಈ ಕುರಿತು ಕೊನೆಯಲ್ಲಿ ಮಾಹಿತಿ ನೀಡಲಾಗಿದೆ.

Tata Nexon facelift is ready to come to market with great features and best pricing- here is the full details of new Tata nexon.
Tata Nexon facelift is ready to come to market with great features and best pricing- here is the full details of new Tata nexon.

Tata Nexon Facelift ವಿಶೇಷತೆಗಳೇನು?
ಈಗಾಗಲೇ ಟಾಟಾ ನೆಕ್ಸನ್ ಫೇಸ್ ಲಿಫ್ಟ್(Tata Nexon Facelift) ಕಾರಿನ ಅಡ್ವಾನ್ಸ್ ಬುಕಿಂಗ್ ಪ್ರಾರಂಭವಾಗಿದೆ ಎಂಬುದಾಗಿ ತಿಳಿದು ಬಂದಿದೆ. ಇದು ಎರಡು ಇಂಜಿನ್ ಆಯ್ಕೆಗಳ ಜೊತೆಗೆ ನಿಮಗೆ ಸಿಗುತ್ತದೆ. ಒಂದು 1.2 ಟರ್ಬೋ ಚಾರ್ಜಡ್ ಪೆಟ್ರೋಲ್ ಇಂಜಿನ್. ಇದರ ಸಾಮರ್ಥ್ಯವನ್ನು ನೋಡುವುದಾದರೆ 120Bhp ಪವರ್ ಹಾಗೂ 170Nm ಟಾರ್ಕ್ಅನ್ನು ಇದು ಜನರೇಟ್ ಮಾಡುತ್ತದೆ. ಆರು ಸ್ಪೀಡ್ ಎ ಎಂ ಟಿ, ಆರು ಸ್ಪೀಡ್ ಮ್ಯಾನುವಲ್ ಹಾಗೂ 7 ಸ್ಪೀಡ್ ಡಿಸಿಟಿ ಎನ್ನುವಂತಹ ಮೂರು ಟ್ರಾನ್ಸ್ಮಿಷನ್ ಗಳ ಜೊತೆಗೆ ಈ ಇಂಜಿನ್ ಬರುತ್ತದೆ. ಎರಡನೇದಾಗಿ 1.5 ಟರ್ಬೋ ಚಾರ್ಜಡ್ ಡೀಸೆಲ್ ಇಂಜಿನ್ ಜೊತೆಗೆ ಬರುತ್ತದೆ. ಈ ಇಂಜಿನ್ ನಲ್ಲಿ 114Bhp ಪವರ್ ಹಾಗೂ 260Nm ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ.

Next iPad Pro: ಮ್ಯಾಕ್ ಬುಕ್ ರೀತಿ ಕಾಣುವ ಆದರೆ ಮ್ಯಾಜಿಕ್ ಕೀ ಬೋರ್ಡ್ ಇರುವ iPad ಮಾರುಕಟ್ಟೆಗೆ. ಬೆಲೆ ಕೂಡ ಜಾಸ್ತಿನೇ. ಹೊಸ iPad ಸಂಪೂರ್ಣ ವಿವರ.

Tata Nexon Facelift ವಿನ್ಯಾಸಗಳು.
Tata Nexon Facelift ನಲ್ಲಿ LED ಲೈಟ್ಸ್, ಟೈಲ್ ಲ್ಯಾಂಪ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಈ ಬಾರಿ ಹೊಸದಾಗಿ ಎರಡು ಸ್ಟೋಕ್ ಸ್ಟೇರಿಂಗ್ ವೀಲ್ ಜೊತೆಗೆ ಹೊಸ ಡ್ಯಾಶ್ ಬೋರ್ಡ್ ಅನ್ನು ಕೂಡ ಪಡೆದುಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಕ್ಲೈಮೇಟ್ ಕಂಟ್ರೋಲ್ ಸೆಟಪ್, 10.25 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅದರಷ್ಟೇ ದೊಡ್ಡ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಕೂಡ ಇದೆ. 360 ಡಿಗ್ರಿ ಕ್ಯಾಮೆರಾ, ಕಾರ್ ಕನೆಕ್ಟಿವಿಟಿ, ವಯರ್ಲೆಸ್ ಚಾರ್ಜರ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ. ವೆಂಟಿಲೇಟೆಡ್ ಸೀಟ್ಗಳಂತಹ ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವಂತಹ ಫೀಚರ್ಸ್ಗಳನ್ನು ಕೂಡ ಈ ಕಾರಿನಲ್ಲಿ ನೀವು ಗಮನಿಸಬಹುದಾಗಿದೆ.

Tata Nexon Facelift ಸೇಫ್ಟಿ ಫೀಚರ್ಸ್ಗಳು.
Tata Nexon Facelift ಕಾರಿನಲ್ಲಿ ಸುರಕ್ಷತಾ ಕ್ರಮಗಳ ಬಗ್ಗೆ ಸಾಕಷ್ಟು ನಿಗ ವಹಿಸಲಾಗಿದೆ ಎಂಬುದಾಗಿ ತಿಳಿದು ಬಂದಿದೆ. ಆರು ಸ್ಟ್ಯಾಂಡರ್ಡ್ ಏರ್ ಬ್ಯಾಗ್, ABS, EBD, ESC, ಪಾರ್ಕಿಂಗ್ ಸೆನ್ಸಾರ್ ಗಳಂತಹ ಸುರಕ್ಷತಾ ಕ್ರಮಗಳನ್ನು ಕಾರಿನಲ್ಲಿ ಅಳವಡಿಸಲಾಗಿದೆ. ಹಾಗಿದ್ರೆ ಬನ್ನಿ ಕಾರಿನ ಬೆಲೆ ಎಷ್ಟು ಎಂಬುದನ್ನು ತಿಳಿಯೋಣ.

Tata Nexon Facelift ಬೆಲೆ:
ಟಾಟಾ ನೆಕ್ಸನ್ ಫೇಸ್ ಲಿಫ್ಟ್ ಕಾರ್ ಮಾರುಕಟ್ಟೆಯಲ್ಲಿ ಖಂಡಿತವಾಗಿ ಮುಂದಿನ ದಿನಗಳಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುವಂತಹ ಕಾರ್ ಆಗಿದೆ. ಇದನ್ನು ಮಾರುಕಟ್ಟೆಗೆ 8 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಲಾಂಚ್ ಮಾಡಬಹುದು ಎನ್ನುವಂತಹ ನಿರೀಕ್ಷೆ ಕೂಡ ಇದೆ.

ನಿಮ್ಮ ಜಮೀನಿನಲ್ಲಿ ಉಚಿತ ಬೋರ್ವೆಲ್ ಪಡೆಯುವ ಯೋಜನೆ – ಅರ್ಜಿ ಸಲ್ಲಿಸಿ ಬೋರ್ವೆಲ್ ಗೆ ಹಣ ಪಡೆಯಿರಿ. Karnataka Ganga Kalyana Scheme 2023