Kannada News: ಕೆಲಸವಿಲ್ಲದ ಸ್ನೇಹಿತನಿಗೆ ಕೆಲಸ ಕೊಟ್ಟು ಜೀವನವನ್ನೇ ಬದಲಾಯಿಸಿದ ಆದರೆ ಆ ಸ್ನೇಹಿತ ಕೆಲವೇ ದಿನಗಳಲ್ಲಿ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಗಿ ಹೋಗಿತ್ತು ಗೊತ್ತೇ??
Kannada News: ಕೆಲಸವಿಲ್ಲದ ಸ್ನೇಹಿತನಿಗೆ ಕೆಲಸ ಕೊಟ್ಟು ಜೀವನವನ್ನೇ ಬದಲಾಯಿಸಿದ ಆದರೆ ಆ ಸ್ನೇಹಿತ ಕೆಲವೇ ದಿನಗಳಲ್ಲಿ ಮಾಡಿದ್ದೇನು ಗೊತ್ತೇ? ಕೊನೆಗೆ ಏನಾಗಿ ಹೋಗಿತ್ತು ಗೊತ್ತೇ??
Kannada News: ನಮಸ್ಕಾರ ಸ್ನೇಹಿತರೇ ಕೆಲವೊಂದು ಸಮಯದಲ್ಲಿ ನಾವು ಇತರರಿಗೆ ಸಹಾಯ ಮಾಡಬೇಕು ಎಂದುಕೊಳ್ಳುತ್ತೇವೆ ಕೆಲವೊಮ್ಮೆ ಆ ಸಹಾಯ ತಪ್ಪು ಎಂದು ಕೆಲವು ದಿನಗಳ ನಂತರ ತಿಳಿಯುತ್ತದೆ. ಆದರೆ ಆ ಸಹಾಯ ತಪ್ಪು ಎಂದು ಹೇಳಿದ ಮೇಲೆ ನಾವು ಯಾವ ರೀತಿಯ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂಬುದು ಕೂಡ ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಜೀವನದಲ್ಲಿ ನಾವು ತೆಗೆದುಕೊಳ್ಳುವ ಕೆಲವೊಂದು ನಿರ್ಧಾರಗಳು ನಮ್ಮ ಜೀವನವನ್ನು ಬದಲು ಮಾಡಿಬಿಡುತ್ತವೆ, ಕೊನೆಗೆ ಕೆಲವೊಮ್ಮೆ ಜೀವನವೇ ಅಂತ್ಯವಾದಂತೆ ಭಾಸವಾಗುತ್ತದೆ. ಇಡೀ ರೀತಿಯ ಘಟನೆ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ನಡೆದಿದ್ದು ಸುತ್ತಮುತ್ತಲಿನ ಜನ ಅಕ್ಷರ ಸಹ ಬೆಚ್ಚಿಬಿದ್ದಿದ್ದಾರೆ.
ಹೌದು ಸ್ನೇಹಿತರೇ ಗೌರಿಸಾಯಿ ಎಂಬ ಹುಡುಗ ಕಳೆದ ಕೆಲವು ವರ್ಷಗಳಿಂದ ವಿಶಾಖಪಟ್ಟಣಂ ಬೀಚಿನಲ್ಲಿ ಕುದುರೆಗಳನ್ನು ಹಾಕಿಕೊಂಡು ಚೆನ್ನಾಗಿಯೇ ಹಣ ಸಂಪಾದನೆ ಮಾಡಿದ್ದ. ಪ್ರವಾಸಿಗರು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಈತನ ಕುದುರೆಗಳಿಗೆ ಇರುವ ಬೇಡಿಕೆ ಹೆಚ್ಚಾಗ ತೊಡಗಿತು, ಪ್ರವಾಸಿಗರನ್ನು ಕುದುರೆಗಳ ಮೇಲೆ ಸವಾರಿ ಮಾಡಿಸಿ ಸಾವಿರಾರು ರೂಪಾಯಿ ದಿನಕ್ಕೆ ದುಡಿಯುತ್ತಿದ್ದ. (Kannada News)ಈ ಸಮಯದಲ್ಲಿ ಆತನಿಗೆ ಅಲ್ಲೇ ಪಕ್ಕದ ಊರಿನಲ್ಲಿ ಶಿವ ಎಂಬ ಹುಡುಗ ಕೆಲಸವಿಲ್ಲದೆ ತಿರುಗಾಡುತ್ತಿದ್ದ, ಗೌರಿ ಸಾಯಿಗೆ ಈತ ಈ ಮೊದಲೇ ಸ್ನೇಹಿತನಾಗಿದ್ದ.
ವಿಚಾರ ತಿಳಿಯುತ್ತಿದ್ದಂತೆ ಗೌರಿ ಸಾಯಿ ಆತನನ್ನು ಕರೆದು ಆತನಿಗೂ ಕೂಡ ಎರಡು ಕುದುರೆಗಳನ್ನು ಕೊಟ್ಟು ಇವುಗಳ ನಿರ್ವಹಣೆ ಹಾಗೂ ಪ್ರವಾಸಿಗರನ್ನು ಹತ್ತಿಸಿಕೊಂಡು ಓಡಾಟ ಮಾಡುವ ಮೂಲಕ ಸಂಪಾದನೆ ಮಾಡು ಎಂಬ ದಾರಿಯನ್ನು ತೋರಿಸಿಕೊಟ್ಟ. ಹೀಗೆ ಎಲ್ಲವೂ ಚೆನ್ನಾಗಿ ನಡೆದಿತ್ತು, ಆದರೆ ಗೌರಿಸಾಯಿ ಪ್ರವಾಸಿಗರ ಒಬ್ಬರ ಜೊತೆ ಅನುಚಿತವಾಗಿ ವರ್ತನೆ ಮಾಡಿದ ಕಾರಣ ಆತನನ್ನು ಪೊಲೀಸರು ಕರೆದುಕೊಂಡು ಹೋಗಿ ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿ ಇಟ್ಟಿದ್ದರು. (Kannada News)
ಇದೇ ಸಮಯವನ್ನು ಬಳಸಿಕೊಂಡ ಶಿವ ಎಂಬಾತ ಗೌರಿ ಸಾಯಿ ರವರ ಇನ್ನುಳಿದ ಕುದುರೆಗಳನ್ನು ಕೂಡ ತಾನೇ ಮೇಲ್ವಿಚಾರಣೆ ಮಾಡುತ್ತೇನೆ ಹಾಗೂ ನಗದು ವ್ಯವಹಾರವನ್ನು ನೋಡಿಕೊಳ್ಳುತ್ತೇನೆ ಎಂದು ಗೌರಿ ಸಾಯಿ ರವರ ಪತ್ನಿಯ ಬಳಿ ಅನುಮತಿ ಪಡೆದು ಎಲ್ಲವನ್ನು ಚೆನ್ನಾಗಿ ನಿರ್ವಹಣೆ ಮಾಡುತ್ತಿದ್ದ. ಈ ಸಮಯದಲ್ಲಿ ತನ್ನ ಕೆಲಸವನ್ನು ನೋಡಿಕೊಳ್ಳದೆ ಗೌರಿಸಾಯಿ ರವರ ಪತ್ನಿಯ ಮೇಲೆ ಕಣ್ಣು ಹಾಕಿದ.
ಆತನಿಂದಲೇ ಕೆಲಸ, ಆತನ ಹಣ, ಆತನ ಕುದುರೆಗಳು, ಇಷ್ಟು ಸಾಲದು ಎಂಬಂತೆ ಶಿವನಿಗೆ ಆತನ ಹೆಂಡತಿ ಮೇಲೆ ಕೂಡ ಆಸೆಯಾಯಿತು, ಒಂದು ಕಡೆ ಅತಿ ಜೈಲಿನಲ್ಲಿರುವ ಸಮಯದಲ್ಲಿ ಹೆಂಡತಿ ಕೂಡ ಕ್ಷಣಿಕ ಸುಖಕ್ಕೆ ಆಸೆ ಬಿದ್ದಳು. ಇಬ್ಬರೂ ಕೂಡ ಸಂಬಂಧ ಇಟ್ಟುಕೊಂಡರು, ಕ್ರಮೇಣ ಅದು ದಿನೇ ದಿನೇ ಹೆಚ್ಚಾಗುತ್ತಿತ್ತು. ಅಷ್ಟರಲ್ಲಿ ಗೌರಿ ಸಾಯಿ ಜೈಲಿನಿಂದ ಬಿಡುಗಡೆಯಾಗಿ ವಾಪಾಸ್ ಬಂದ. ತಾನು ನೇಮಿಸಿದ ಸ್ನೇಹಿತ ವ್ಯವಹಾರವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಮೊದಮೊದಲಿಗೆ ಖುಷಿಪಟ್ಟ ಆದರೆ ಬಂದ ಒಂದೇ ವಾರದಲ್ಲಿ ಇವರಿಬ್ಬರ ನಡುವಿನ ಸಂಬಂಧ ಗೌರಿ ಸಾಯಿಗೆ ತಿಳಿದು ಬಿಡ್ತು.
ಈ ಸಮಯದಲ್ಲಿ ತಾಳ್ಮೆ ಕಳೆದುಕೊಂಡ ಗೌರಿ ಸಾಯಿ ಒಂದೆರಡು ದಿನಗಳ ಕಾಲ ಏನು ತಿಳಿಯದಂತೆ ಸುಮ್ಮನೆ ಇದ್ದ, ನಂತರ ಎಂದಿನಂತೆ ಸ್ನೇಹಿತರು ಎಲ್ಲರೂ ಎಣ್ಣೆ ಹಾಕೋಣ ಎಂದು ಹೇಳಿ ಪಕ್ಕದ ಊರಿಗೆ ಶಿವನನ್ನು ಕೂಡ ಕರೆದುಕೊಂಡು ಹೋಗುತ್ತಾರೆ, ಆತ ಕೂಡ ಏನು ತಿಳಿಯದಂತೆ ಗೌರಿ ಸಾಯಿ ಹಾಗೂ ಸ್ನೇಹಿತರ ಜೊತೆ ಎಂಜಾಯ್ ಮಾಡಲು ತೋಟದ ಒಳಗಡೆ ಹೋದ. ಆದರೆ ಎರಡು ದಿನಗಳ ಕಾಲ ಸುಮ್ಮನೆ ಇದ್ದ ಎಂದುಕೊಂಡಿದ್ದ ಗೌರಿ ಸಾಯಿ, ಎರಡು ದಿನಗಳಲ್ಲಿ ತೋಟದ ಒಳಗಡೆ ದೊಡ್ಡ ಹಳ್ಳವನ್ನು ತೋಡಿ ಸ್ನೇಹಿತರ ಜೊತೆ ಪ್ಲಾನ್ ಮಾಡಿ ಶಿವನನ್ನು ಅಲ್ಲಿಗೆ ಕರೆಸಿಕೊಂಡಿದ್ದ. (Kannada News).
ಹೋದ ಕೂಡಲೇ ಆತನನ್ನು ಮುಗಿಸಿ ಅಲ್ಲಿಗೆ ಹೂತು ಹಾಕಿ ಏನು ತಿಳಿಯದಂತೆ ಗೌರಿ ಸಾಯಿ ವಾಪಸ್ ಬಂದು ಮನೆಗೆ ಸೇರಿಕೊಂಡ. ಇದಾದ ನಂತರ ಒಂದು ತಿಂಗಳು ಯಾವುದೇ ತೊಂದರೆ ಇರಲಿಲ್ಲ, ಶಿವನ ತಾಯಿಗೆ ಆತ ಒಂದು ತಿಂಗಳು ಮನೆಗೆ ಬರದೇ ಇದ್ದಾಗ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡುತ್ತಾರೆ.
ಪೊಲೀಸರು ಎಂದಿನಂತೆ ಪ್ರಕರಣದ ತನಿಖೆ ಆರಂಭಿಸಿ ಗೌರಿ ಸಾಯಿ ನನ್ನ ವಿಚಾರಣೆಗೆ ಒಳಪಡಿಸಿದಾಗ ಆತ ನಡೆದ ಎಲ್ಲಾ ಸತ್ಯವನ್ನು ವಿವರಣೆ ನೀಡಿ ತಾನು ಅಪರಾಧಿ ಎಂದು ಒಪ್ಪಿಕೊಂಡ. ಕೂಡಲೇ ಆತನನ್ನು ಇದೀಗ ಜೈಲಿಗೆ ಹಾಕಲಾಗಿದೆ, ಇದೀಗ ಒಂದು ಕಡೆ ಮಗನನ್ನು ಕಳೆದುಕೊಂಡ ತಾಯಿ ಅನಾಥವಾದರೆ ಮತ್ತೊಂದೆಡೆ ಗಂಡ ಜೈಲು ಪಾಲದ ಕಾರಣ ಹೆಂಡತಿ ಕೂಡ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಹೀಗೆ ಜೀವನದಲ್ಲಿ ಕೆಲವೊಂದು ಆಸೆಗಳು ಹಾಗೂ ಕೆಲವೊಂದು ತಪ್ಪು ನಿರ್ಧಾರಗಳು ಜೀವನದ ದಿಕ್ಕನ್ನು ಬದಲಾವಣೆ ಮಾಡಿ ಮುಂದೇನು ತೋಚದಂತಹ ಪರಿಸ್ಥಿತಿಗೆ ತಂದು ಬಿಡುತ್ತವೆ. (Kannada News)