IPL 2023 RCB: ರಿಸೆ ಟೋಪ್ಲೆ ಹೊರಹೋದ ತಕ್ಷಣ ಎಚ್ಚೆತ್ತುಕೊಂಡ ಆರ್ಸಿಬಿ: ಕರಾರುವಾಕ್ ಅಂತಾರಾಷ್ಟ್ರೀಯ ಬೌಲರ್ ಅನ್ನು ಸೇರಿಸಿಕೊಂಡೆ ಬಿಡ್ತು. ಬಂದದ್ದು ಯಾರು ಗೊತ್ತೇ?
ರಿಸೆ ಟೋಪ್ಲೆ ಹೊರಹೋದ ತಕ್ಷಣ ಎಚ್ಚೆತ್ತುಕೊಂಡ ಆರ್ಸಿಬಿ: ಕರಾರುವಾಕ್ ಅಂತಾರಾಷ್ಟ್ರೀಯ ಬೌಲರ್ ಅನ್ನು ಸೇರಿಸಿಕೊಂಡೆ ಬಿಡ್ತು. ಬಂದದ್ದು ಯಾರು ಗೊತ್ತೇ?
IPL 2023 RCB: ನಮಸ್ಕಾರ ಸ್ನೇಹಿತರೇ ಆರ್‌ಸಿಬಿ ತಂಡವು ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವನ್ನು ದಾಖಲಿಸುವ ಮೂಲಕ ಉತ್ತಮ ಆರಂಭ ನೀಡುವ ಭರವಸೆ ನೀಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ರವರ ಹಾಗೂ ಆಕಾಶ್ ಡೀಪ್ ರವರು ನಮ್ಮ ತಂಡದ ಪರವಾಗಿ ಆಟವಾಡುವ ಬದಲು ಬೇರೆ ತಂಡದ ಪರ ಆಟವಾಡಿದಂತೆ ಬೋಲಿಂಗ್ ಮಾಡಿದ ಕಾರಣ ಹೀನಾಯ ಸೋಲನ್ನು ಅನುಭವಿಸಿದೆ. ಇವರಿಬ್ಬರ ಆಟವನ್ನು ವರ್ಣಿಸಲು ಈ ಲೇಖನ ಬರೆಯುವಾಗ ನಿಜಕ್ಕೂ ಪದಗಳು ಹೊರಡುತ್ತಿಲ್ಲ
ಹೀಗೆ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಆರ್‌ಸಿಬಿ ತಂಡ ಸೋತ ಬಳಿಕ ತಂಡಕ್ಕೆ ಮತ್ತೊಂದು ಕಹಿ ಸುದ್ದಿ ಸಿಕ್ಕಿತು, ಹೌದು ಮೊದಲ ಪಂದ್ಯದಲ್ಲಿ ಫೀಲಿಂಗ್ ಮಾಡುವಾಗ ಇಂಜುರಿಯಾದ ಆರ್ಸಿಬಿ ಆಟಗಾರ ರಿಸೆ ಟೋಪ್ಲೆ ಕೇವಲ ಒಂದೆರಡು ಪಂದ್ಯಗಳಿಂದ ಮಾತ್ರ ಹೊರಗಿಗೊಳಿಯುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದರೆ ಎರಡನೇ ಪಂದ್ಯ ಬಳಿಕ ಹೆಚ್ಚುವರಿ ಚಿಕಿತ್ಸೆ ಪಡೆಯುವ ಸಲುವಾಗಿ ಆರ್ಸಿಬಿ ಆಟಗಾರ ಇಡೀ ಟೂರ್ನಿಯಿಂದ ಹೊರ ಹೋಗಿದ್ದಾರೆ. ಮೊದಲ ಪಂದ್ಯದಲ್ಲಿ ಕರಾರುವಾಕ್ ಬೌಲಿಂಗ್ ಮಾಡಿದ ರಿಸೆ ಟೋಪ್ಲೆ ರವರು ಟೂರ್ನಿಯಿಂದ ಹೊರ ಹೋಗಿರುವುದು ಆರ್‌ಸಿಬಿ ತಂಡಕ್ಕೆ ನಿಜಕ್ಕೂ ಕಹಿ ಸುದ್ದಿಯಾಗಿದೆ. ಇದನ್ನು ಓದಿ: ಜಿಯೋ ಐಪಿಎಲ್ ಯೋಜನೆ: ಕಡಿಮೆ ಬೆಲೆಗೆ ಇಂಟರ್ನೆಟ್ ಪ್ಯಾಕ್ ಕೊಟ್ಟ ಅಂಬಾನಿ
ಆದರೆ ಈ ಬಾರಿ ಆರ್ಸಿಬಿ ತಂಡ ಪ್ರಮುಖ ಆಟಗಾರ ಹೊರಹೋದ ತಕ್ಷಣ ಕೂಡಲೇ ಎತ್ತುಕೊಂಡಿದ್ದು, ದಕ್ಷಿಣ ಆಫ್ರಿಕಾದಲ್ಲಿ ತನ್ನದೇ ಆದ ಮಿಂಚು ಹರಿಸಿರುವ ವೇಗದ ಬೌಲರ್ ಆಗಿರುವ ವೇಯ್ನ್ ಪಾರ್ನೆಲ್ ರವರನ್ನು ಆಯ್ಕೆ ಮಾಡಲಾಗಿದೆ, ಈ ಕುರಿತು ಆರ್‌ಸಿಬಿ ತಂಡದಿಂದ ಇನ್ನು ಅಧಿಕೃತ ಘೋಷಣೆ ಬಾಕಿ ಇದೆ, ಆದರೆ ಮೂಲಗಳಿಂದ ವೇಯ್ನ್ ಪಾರ್ನೆಲ್ ರವರು ಆರ್ಸಿಬಿ ತಂಡ ಸೇರಿಕೊಳ್ಳುವುದು ಖಚಿತವಾಗಿದ್ದು ಇಂಗ್ಲೆಂಡ್ ತಂಡದ ವೇಗಿ ರಿಸೆ ಟೋಪ್ಲೆ ರವರ ಬದಲಿಗೆ ಇವರನ್ನು ಹನ್ನೊಂದರ ಬಳಗಕ್ಕೆ ಆಯ್ಕೆ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಇದನ್ನು ಓದಿ: ಗಂಡ ಸತ್ತ ಮಹಿಳೆಗೆ ಬಾಳು ಕೊಡುತ್ತೇನೆ ಎಂದು 3 ಬಾರಿ ಗರ್ಭಪಾತ ಮಾಡಿಸಿ ಪೊಲೀಸ್ ಮೋಸ ಮಾಡಿದ್ದಾನೆ ಎನ್ನುತ್ತಿರುವ ಪ್ರಕರಣದಲ್ಲಿ ನಿಜಕ್ಕೂ ನಡೆದದ್ದು ಏನು ಗೊತ್ತೇ?