Cricket News: ಪದೇ ಪದೇ ವಿಫಲಾಗುತ್ತಿರುವ ರಾಹುಲ್ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ? ಇವರ ಪಾಯಿಂಟ್ ಕೂಡ ಸರಿ ಇದೆ ಎಂದದ್ದು ಯಾಕೆ ಗೊತ್ತೇ?

Cricket News: ಪದೇ ಪದೇ ವಿಫಲಾಗುತ್ತಿರುವ ರಾಹುಲ್ ಬೆಂಬಲಕ್ಕೆ ನಿಂತ ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ? ಇವರ ಪಾಯಿಂಟ್ ಕೂಡ ಸರಿ ಇದೆ ಎಂದದ್ದು ಯಾಕೆ ಗೊತ್ತೇ?

Cricket News: ಟೀಮ್ ಇಂಡಿಯಾದ (Team India) ವೈಸ್ ಕ್ಯಾಪ್ಟನ್ ಕೆ.ಎಲ್.ರಾಹುಲ್ (K L Rahul) ಅವರು ಈಗ ಹೆಚ್ಚಿನ ಟೀಕೆಗಳಿಗೆ ಗುರಿಯಾಗುತ್ತಿದ್ದಾರೆ. ರಾಹುಲ್ ಅವರು ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ರನ್ಸ್ ಗಳಿಸುವುದು ಕಷ್ಟವಾಗುತ್ತಿದೆ. ಪ್ರಸ್ತುತ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಮೊದಲ ಮ್ಯಾಚ್ ನಲ್ಲಿ ಕೂಡ ಕೆ.ಎಲ್.ರಾಹುಲ್ ಅವರು ಕೇವಲ 20 ರನ್ಸ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ರಾಹುಲ್ ಅವರನ್ನು ಟೆಸ್ಟ್ ತಂಡದಿಂದಲೂ ಹೊರಗಿಡುವುದು ಒಳ್ಳೆಯದು ಎನ್ನುವ ಮಾತು ಕೇಳುಬರುತ್ತಿದೆ.

ರಾಹುಲ್ ಅವರು ಫಾರ್ಮ್ ಕಳೆದುಕೊಂಡು ಎಲ್ಲೆಡೆ ಟೀಕೆಗೆ ಗುರಿಯಾಗುವಾಗ, ಟೀಮ್ ಇಂಡಿಯಾದ ಹಿರಿಯ ಆಟಗಾರ ಆಕಾಶ ಚೋಪ್ರ (Akash Chopra) ಅವರು ಕೆ.ಎಲ್.ರಾಹುಲ್ ಅವರ ಪರವಾಗಿ ನಿಂತಿದ್ದಾರೆ. ತಮ್ಮ ಯುಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರಾ ಅವರು ಕೆ.ಎಲ್.ರಾಹುಲ್ ಅವರಿಗೆ ಬೆಂಬಲ ನೀಡಿದ್ದು, ದೆಹಲಿಯಲ್ಲಿ ನಡೆಯುವ ಎರಡನೇ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ ಹೆಚ್ಚು ಬದಲಾವಣೆ ಆಗುವುದಿಲ್ಲ ಎಂದು ತಿಳಿಸಿದ್ದು, ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಬದಲಾಗಿ ಶ್ರೇಯಸ್ ಅಯ್ಯರ್ (Shreyas Iyer) ಅವರು ಪ್ಲೇಯಿಂಗ್ 11 ಗೆ ಬರಬಹುದು ಎಂದು ಹೇಳಿದ್ದಾರೆ. ಶ್ರೇಯಸ್ ಅಯ್ಯರ್ ಅವರು ಈಗ ಚೇತರಿಸಿಕೊಂಡಿದ್ದಾರೆ. ಆಕಾಶ್ ಚೋಪ್ರಾ ಅವರು ಹೇಳಿರೋದೇನು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..WPL 2023: ಆರ್ಸಿಬಿ ಪಾಲಾದ ಸ್ಮೃತಿ ಮಂದಣ್ಣ ಸಂಬಳ ನೋಡಿ ಎಲ್ಲರೂ ಶಾಕ್. ಪಾಕ್ ನ ಬಾಬರ್ ಅಜಂ ನನ್ನ ಟ್ರೊಲ್ ಮಾಡಿದ್ದು ಯಾಕೆ ಗೊತ್ತೇ?

“ಟೀಮ್ ಇಂಡಿಯಾಗೆ ಜಾಸ್ತಿ ಬದಲಾವಣೆ ಬೇಕಿದೆ ಎಂದು ನನಗೆ ಅನ್ನಿಸುತ್ತಿಲ್ಲ, ಇಲ್ಲಿ ಸೂರ್ಯಕುಮಾರ್ ಯಾದವ್ ಅವರ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ಅವಕಾಶ ಕೊಟ್ಟು ಬದಲಾವಣೆ ಮಾಡಬಹುದು. ಇದು ಕೆ.ಎಲ್.ರಾಹುಲ್ ಅವರಿಗೆ ಒತ್ತಡ ಹೇರುವ ಪಂದ್ಯದ ಹಾಗೆ ಕಾಣಿಸುತ್ತದೆ, ಅವರು ಈ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಾರೆ ಎಂದು ಭರವಸೆ ಇದೆ.. ಕೆ.ಎಲ್.ರಾಹುಲ್ ಅವರು ಸುಖಾಸುಮ್ಮನೆ ಟೀಕೆಗೆ ಒಳಗಾಗುಟ್ಟಿದ್ದಾರೆ. ಶುಭಮನ್ ಗಿಲ್ (Shubman Gill) ಅವರು ತಂಡದಲ್ಲಿಲ್ಲ, ಒಬ್ಬ ಆಟಗಾರ ತಂಡದಿಂದ ಹೊರಗಿದ್ದರೆ, ಒಳಗಿರುವ ಬೇರೆ ಆಟಗಾರ ಕಳಪೆ ಆಗುವುದಿಲ್ಲ. ಚೇತೇಶ್ವರ್ ಪೂಜಾರ (Cheteshwar Poojara) ಅವರ 100ನೇ ಪಂದ್ಯ ಇದು, ಹಾಗಾಗಿ ಅವರು ಕೂಡ ಉತ್ತಮ ಪ್ರದರ್ಶನ ಕೊಡುತ್ತಾರೆ ಎಂದು ನಿರೀಕ್ಷೆ ಮಾಡುತ್ತಿದ್ದೇನೆ..”ಎಂದು ಹೇಳಿದ್ದಾರೆ ಆಕಾಶ್ ಚೋಪ್ರಾ.. ಇದನ್ನು ಓದಿ..Cricket News: ಮಾರಕ ಬೌಲರ್ ಬೌಲ್ಟ್ ಗೆ ನಿದ್ದೆ ಕೆಡಿಸಿದ ಮೂರು ಬ್ಯಾಟ್ಸ್ ಮ್ಯಾನ್ ಗಳು ಯಾರು ಗೊತ್ತೇ?? ಅವರೇ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?