Cricket News: ವಿರಾಟ್ ಸರಿ, ಆದರೆ ರೋಹಿತ್ ಗೆ ಅಷ್ಟು ಸೀನ್ ಇಲ್ಲ. ಬಹಿರಂಗವಾಗಿಯೇ ನಾಯ್ಕ ವಿರುದ್ಧ ಷಾಕಿಂಗ್ ಹೇಳಿಕೆ ಕೊಟ್ಟ ವಸ್ಸಿಂ. ಹೇಳಿದ್ದೇನು ಗೊತ್ತೇ??
Cricket News: ವಿರಾಟ್ ಸರಿ, ಆದರೆ ರೋಹಿತ್ ಗೆ ಅಷ್ಟು ಸೀನ್ ಇಲ್ಲ. ಬಹಿರಂಗವಾಗಿಯೇ ನಾಯ್ಕ ವಿರುದ್ಧ ಷಾಕಿಂಗ್ ಹೇಳಿಕೆ ಕೊಟ್ಟ ವಸ್ಸಿಂ. ಹೇಳಿದ್ದೇನು ಗೊತ್ತೇ??
Cricket News: ಟೀಮ್ ಇಂಡಿಯಾ (Team India) ಎದುರು ಈ ವರ್ಷ ಸಾಕಷ್ಟು ಸವಾಲುಗಳಿವೆ. ವಿಶ್ವ ಟೆಸ್ಟ್ ಚಾಂಪಿಯಶನ್ಷಿಪ್, ಈ ವರ್ಷ ಭಾರತದಲ್ಲಿ ನಡೆಯಲಿರುವ ಓಡಿಐ ಚಾಂಪಿಯನ್ಷಿಪ್ (ODI Championship) ಇವುಗಳಲ್ಲಿ ತಂಡ ಗೆಲ್ಲಲೇಬೇಕು ಎಂದು ಬಿಸಿಸಿಐ ನಿರ್ಧಾರ ಮಾಡಿದೆ. ತಂಡದ ಆಟಗಾರರು ಸಹ ಇದಕ್ಕಾಗಿ ಪರಿಶ್ರಮ ಹಾಕುತ್ತಿದ್ದಾರೆ. ಟೀಮ್ ಇಂಡಿಯಾದ ಹಿರಿಯ ಮತ್ತು ಶ್ರೇಷ್ಠ ಆಟಗಾರರು ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮ (Rohit Sharma) ಇವರಿಬ್ಬರು ಕೂಡ ಈಗ ಟಿ20 ಪಂದ್ಯಗಳಲ್ಲಿ ಆಡುತ್ತಿಲ್ಲ.
ಇವರಿಬ್ಬರ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ (Hardik Pandya) ಅವರು ತಂಡವನ್ನು ಮುನ್ನಡೆಸ್ಸಿ, ಜಯ ಗಳಿಸುತ್ತಿದ್ದಾರೆ. ಫೆಬ್ರವರಿ 9 ರಿಂದ ಶುರುವಾಗಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) ಆಸ್ಟ್ರೇಲಿಯಾ (India vs Australia) ವಿರುದ್ಧದ 4 ಪಂದ್ಯಗಳ ಟೆಸ್ಟ್ ಚಾಂಪಿಯನ್ಷಿಪ್ ಸರಣಿಗೆ ಟೀಮ್ ಇಂಡಿಯಾದ ಹಿರಿಯ ಆಟಗಾರರು ತಯಾರಿ ನಡೆಸುತ್ತಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಗೆ ಯುವ ಆಟಗಾರರನ್ನು ಆಡಿಸುವ ಪ್ಲಾನ್ ನಲ್ಲಿ ಬಿಸಿಸಿಐ (BCCI) ಇದ್ದು, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಹೀಗಿರುವಾಗ, ಟೀಮ್ ಇಂಡಿಯಾದ ಮಾಜಿ ಆಟವಾರ ವಸ್ಸಿಮ್ (Wassim Jaffer) ಅವರು ಇವರಿಬ್ಬರು ಮುಂದಿನ ಟಿ20 ವಿಶ್ವಕಪ್ ಆಡುವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಇದನ್ನು ಓದಿ..Cricket News: ಭಾರತ ತಂಡಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ ಆಸ್ಟ್ರೇಲಿಯಾ ತಂಡ. ಈ ಬಾರಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??
“ರೋಹಿತ್ ಅವರಿಗೆ 35 ವರ್ಷವಾಗಿದೆ, ಅವರು ಈಗಾಗಲೇ ತಮ್ಮ ಕೊನೆಯ ಟಿ20 ವಿಶ್ವಕಪ್ ಆಡಿದ್ದಾರೆ. ಮುಂದಿನ ಟಿ20 ವಿಶ್ವಕಪ್ ನಲ್ಲಿ ಆಡಲು ರೋಹಿತ್ ಅವರಿಗೆ ಅವಕಾಶ ಇಲ್ಲ. ರೋಹಿತ್ ಅವರಿಗಿಂತ ವಿರಾಟ್ ಅವರು ಹೆಚ್ಚಾಗಿ ಫಿಟ್ನೆಸ್ ಕಡೆಗೆ ಗಮನ ಕೊಡುತ್ತಾರೆ. ಈಗಲೂ ಕೂಡ ಕ್ರೀಸ್ ನಲ್ಲಿ ರನ್ ಗಾಗಿ ಆಯಾಸಪಡದೆ ಓಡುತ್ತಾರೆ, ಎಲ್ಲಿಯಾದರೂ ನಿಂತು ಫೀಲ್ಡ್ ಮಾಡುತ್ತಾರೆ..” ಎಂದು ವಸ್ಸಿಮ್ ಅವರು ಹೇಳಿದ್ದಾರೆ. ಇಬ್ಬರ ಫಿಟ್ನೆಸ್ ಗಮನದಲ್ಲಿ ಇಟ್ಟುಕೊಂಡು ವಸ್ಸಿಮ್ ಅವರು ಈ ರೀತಿಯ ಹೇಳಿಕೆ ನೀಡಿದ್ದು, ಟಿ20 ವಿಶ್ವಕಪ್ ಗೆ ಇನ್ನು ತುಂಬಾ ಸಮಯ ಇದೆ, ಅಷ್ಟರಲ್ಲಿ ರೋಹಿತ್ ಅವರು ತಮ್ಮ ಫಿಟ್ನೆಸ್ ಕಂಡುಕೊಂಡು ಇಬ್ಬರು ಕೂಡ ವಿಶ್ವಕಪ್ ಗೆ ಆಯ್ಕೆಯಾಗಬಹುದು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದನ್ನು ಓದಿ..Cricket News: ಪಾಂಡ್ಯ ಅಲ್ಲ, ಶುಭ್ಮಂ ಅಲ್ಲ, ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಗಳನ್ನು ಹೆಸರಿಸಿದ ಕುಂಬ್ಳೆ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??