ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ಮುಂದಿನ ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತ ತಂಡದಲ್ಲಿ ಈತನೇ ಮಿಂಚಬೇಕು, ಈತನೇ ಮುಖ್ಯ ಎಂದ ಅಶ್ವಿನ್: ಆಯ್ಕೆ ಮಾಡಿದ್ದು ಯಾರನ್ನು ಗೊತ್ತೆ??

117

Get real time updates directly on you device, subscribe now.

Cricket News: ಭಾರತ ತಂಡ (Team India) ಈಗ ಫೆಬ್ರವರಿ 9ರಿಂದ ತವರಿನಲ್ಲಿ ನಡೆಯುವ ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy), 4 ಟೆಸ್ಟ್ ಪಂದ್ಯಗಳ ಸರಣಿಯ ಆಸ್ಟ್ರೇಲಿಯಾ (India vs Australia) ತಂಡವನ್ನು ಎದುರಿಸಲು ತಯಾರಾಗಿದೆ. ಇದಕ್ಕಾಗಿ ಸಿದ್ಧತೆಗಳನ್ನು ನಡೆಸುತ್ತಿದೆ. ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ನ (World Test Championship) ದೃಷ್ಟಿಯಿಂದ ಇದು ಭಾರತ ತಂಡ ಫೈನಲ್ ಗೆ ಹೋಗಲು ಬಹಳ ಮುಖ್ಯವಾದ ಸರಣಿಯಲ್ಲಿ. ಈಗ ಪಾಯಿಂಟ್ಸ್ ಟೇಬಲ್ ನಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನ ಮತ್ತು ಇಂಡಿಯಾ ಎರಡನೇ ಸ್ಥಾನದಲ್ಲಿದ್ದು, ಈ ಸರಣಿಯನ್ನು ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಗೆದ್ದರೆ, ಫೈನಲ್ಸ್ ಗೆ ಡೈರೆಕ್ಟ್ ಎಂಟ್ರಿ ಪಡೆಯುತ್ತಾರೆ.

ಇನ್ನು ಪ್ಯಾಟ್ ಕಮಿನ್ಸ್ (Pat Cummins) ನೇತೃತ್ವದ ಆಸ್ಟ್ರೇಲಿಯಾ ತಂಡವು ಉತ್ತಮವಾಗಿ ಆಡುತ್ತಿದೆ. ಕಳೆದ ದಶಕದಿಂದ ಭಾರತ ತಂಡವು ತವರಿನಲ್ಲಿ ಯಾವುದೇ ಪಂದ್ಯವನ್ನು ಸೋತಿಲ್ಲ, ಹಾಗಾಗಿ ಈ ಸೀರೀಸ್ ನ ಫಲಿತಾಂಶ ಏನಾಗುತ್ತದೆ ಎಂದು ಎಲ್ಲರಲ್ಲಿ ಕುತೂಹಲ ಇದೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ಫೆಬ್ರವರಿ 9ರಂದು ನಾಗ್ಪುರದಲ್ಲಿ ನಡೆಯಲಿದೆ, ಎರಡನೇ ಪಂದ್ಯ ಫೆಬ್ರವರಿ 17ರಂದು ದೆಹಲಿಯಲ್ಲಿ ನಡೆಯಲಿದೆ, 3ನೇ ಪಂದ್ಯ ಮಾರ್ಚ್ 1ರಂದು ಧರ್ಮಶಾಲಾದಲ್ಲಿ ನಡೆಯಲಿದ್ದು, 4ನೇ ಪಂದ್ಯ ಮಾರ್ಚ್ 9ರಿಂದ ಅಹ್ಮದಾಬಾದ್ ನಲ್ಲಿ ನಡೆಯಲಿದೆ. ಪಂದ್ಯ ಶುರುವಾಗಲು ಉಳಿದಿರುವುದು ಇನ್ನು ಒಂದೆರಡೆ ದಿನಗಳು. ಇದನ್ನು ಓದಿ..Cricket News: ಪಾಂಡ್ಯ ಅಲ್ಲ, ಶುಭ್ಮಂ ಅಲ್ಲ, ಭಾರತ ತಂಡದ ಭವಿಷ್ಯದ ಸೂಪರ್ ಸ್ಟಾರ್ ಗಳನ್ನು ಹೆಸರಿಸಿದ ಕುಂಬ್ಳೆ. ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಟೆಸ್ಟ್ ಮ್ಯಾಚ್ ಗಳಲ್ಲಿ ಭಾರತ ತಂಡದ ಪರವಾಗಿ ರಿಷಬ್ ಪಂತ್ (Rishabh Pant) ಅವರು ಉತ್ತಮ ಪ್ರದರ್ಶನ ನೀಡುತ್ತಿದ್ದರು, ಆದರೆ ಈಗ ಅವರು ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯುತ್ತಿರುವ ಕಾರಣ, ಅವರ ಹಾಗೆ ಟೀಮ್ ಇಂಡಿಯಾದ ಪ್ರಬಲ ಆಟಗಾರ ಯಾರಾಗಬಹುದು ಎನ್ನುವ ಪ್ರಶ್ನೆಯೊಂದು ಈಗ ಕಾಡುತ್ತಿದ್ದು, ಅದಕ್ಕೆ ಟೀಮ್ ಇಂಡಿಯಾದ ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ (Ravichandran Ashwin) ಅವರು ಉತ್ತರ ನೀಡಿ, ಶ್ರೇಯಸ್ ಅಯ್ಯರ್ (Shreyas Iyer) ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ಮುಖ್ಯ ಆಟಗಾರ ಆಗುತ್ತಾರೆ..ಎಂದಿದ್ದಾರೆ. ಆದರೆ ಶ್ರೇಯಸ್ ಅಯ್ಯರ್ ಅವರು ಕೂಡ ಇಂಜುರಿಗೆ ಒಳಗಾಗಿದ್ದು, ಎನ್.ಸಿ.ಎ (NCA) ರಿಹ್ಯಾಬ್ ನಲ್ಲಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಪಾಲ್ಗೊಳ್ಳುವುದು ಖಚಿತವಿಲ್ಲ, ಎರಡನೇ ಪಂದ್ಯದ ವೇಳೆಗೆ ಶ್ರೇಯಸ್ ಅಯ್ಯರ್ ಅವರು ತಂಡಕ್ಕೆ ವಾಪಸ್ ಬರಬಹುದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ವಿರಾಟ್ ಸರಿ, ಆದರೆ ರೋಹಿತ್ ಗೆ ಅಷ್ಟು ಸೀನ್ ಇಲ್ಲ. ಬಹಿರಂಗವಾಗಿಯೇ ನಾಯ್ಕ ವಿರುದ್ಧ ಷಾಕಿಂಗ್ ಹೇಳಿಕೆ ಕೊಟ್ಟ ವಸ್ಸಿಂ. ಹೇಳಿದ್ದೇನು ಗೊತ್ತೇ??

Get real time updates directly on you device, subscribe now.