Cricket News: ಭಾರತ ತಂಡಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ ಆಸ್ಟ್ರೇಲಿಯಾ ತಂಡ. ಈ ಬಾರಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??
Cricket News: ಭಾರತ ತಂಡಕ್ಕೆ ಮತ್ತೊಂದು ಎಚ್ಚರಿಕೆ ಕೊಟ್ಟ ಆಸ್ಟ್ರೇಲಿಯಾ ತಂಡ. ಈ ಬಾರಿ ಹೇಳಿದ್ದೇನು ಗೊತ್ತೇ?? ಇವೆಲ್ಲ ಬೇಕಿತ್ತಾ??
Cricket News: ಟೀಮ್ ಇಂಡಿಯಾ (Team India) ಈಗ ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ (Border Gavaskar Trophy) ಕಠಿಣ ಅಭ್ಯಾಸ ನಡೆಸುತ್ತಿದೆ. 4 ಟೆಸ್ಟ್ ಪಂದ್ಯಗಳ ಈ ಸರಣಿಯ ಮೊದಲ ಪಂದ್ಯ ನಾಗ್ಪುರದಲ್ಲಿ ನಡೆಯಲಿದೆ. ಭಾರತ ವರ್ಸಸ್ ಆಸ್ಟ್ರೇಲಿಯಾ (India vs Australia) ವಿರುದ್ಧ ಈ ಪಂದ್ಯಗಳು ನಡೆಯಲಿದ್ದು, ಇದಾದ ಬಳಿಕ ಮಾರ್ಚ್ 7ರಿಂದ ಏಕದಿನ ಸರಣಿ ಶುರುವಾಗಲಿದೆ. ಟೆಸ್ಟ್ ಸರಣಿ ಗೆಲ್ಲುವುದು ಭಾರತ ತಂಡಕ್ಕೆ ಬಹಳ ಮುಖ್ಯ ಆಗಿದ್ದು, ಇದನ್ನು ಗೆದ್ದರೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಗೆ ಭಾರತ ತಂಡ ಆಯ್ಕೆಯಾಗಲಿದೆ.
ಹೀಗಿರುವಾಗ ಆಸ್ಟ್ರೇಲಿಯಾದ ತಂಡದ ನಾಯಕ ಪ್ಯಾಟ್ ಕಮಿನ್ಸ್ (Pat Cummins) ಅವರು ಭಾರತಕ್ಕೆ ಭಯ ತರಿಸುವಂಥ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ಯಾಟ್ ಕಮಿನ್ಸ್ ಅವರು, “ನಮ್ಮ ಟೀಮ್ ನಲ್ಲಿ 20 ವಿಕೆಟ್ಸ್ ತೆಗೆಯುವ ಸಾಮರ್ಥ್ಯ ಇರುವ ಬೌಲರ್ ಇದ್ದಾರೆ, ಸ್ಪಿನ್ ಬೌಲರ್ ಗೆ ಬಹಳಷ್ಟು ಆಯ್ಕೆ ಇದೆ, ಬೆರಳಿನ ಸ್ಪಿನ್ನರ್, ಮಣಿಕಟ್ಟಿನ ಸ್ಪಿನ್ನರ್, ಎಡಗೈ ಸ್ಪಿನ್ನರ್, ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಕೂಡ ಇದ್ದಾರೆ, ಅವರನ್ನು ಸೂಕ್ತ ಸಂದರ್ಭದಲ್ಲಿ ಬಳಸಬಹುದು. ಆಸ್ಟನ್ ಅಗರ್, ಸ್ಟೆಪ್ಸನ್, ಮರ್ಫಿ ಅವರು ಕೂಡ ಈ ಹಿಂದಿನ ಪಂದ್ಯಗಳಲ್ಲಿ ಭಾರತದ ವಿರುದ್ಧ ಆಡಿದ್ದಾರೆ. ಸೋಮವಾರ ನಾಗ್ಪುರಕ್ಕೆ ಹೋಗಲಿದ್ದೇವೆ, ಬಳಿಕ ಅಲ್ಲಿ ಪಿಚ್ ಹೇಗಿದೆ ಎಂದುಗಮನಿಸಿ ಇನ್ನೆಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ..” ಎಂದು ಹೇಳಿದ್ದಾರೆ ಪ್ಯಾಟ್ ಕಮಿನ್ಸ್. ಇದನ್ನು ಓದಿ..Cricket News: ಸೂರ್ಯ ಕುಮಾರ್ ನಂತರ ಭಾರತಕ್ಕೆ ಸಿಕ್ಕ ಮತ್ತೊಬ್ಬ ಎಬಿಡಿ: ಅವಕಾಶ ಸಿಕ್ಕ ತಕ್ಷಣ ಬಾಚಿಕೊಂಡ ಯುವ ಆಟಗಾರ. ಯಾರು ಗೊತ್ತೇ??
ಇನ್ನು ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಮತ್ತು ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರು ಆಸ್ಟ್ರೇಲಿಯಾ ತಂಡವನ್ನು ಸೋಲಿಸಲು ತಂತ್ರಗಳನ್ನು ಮಾಡಿಕೊಳ್ಳುತ್ತಿದ್ದಾರೆ. ತಾವೇ ಸ್ವತಃ ಪಂದ್ಯಗಳು ನಡೆಯುವ ಮೈದಾನಗಳಿಗೆ ಹೋಗಿ, ಪಿಚ್ ಕ್ಯೂರೇಟರ್ ಗಳನ್ನು ಭೇಟಿ ಮಾಡಿ, ಒಳ್ಳೆಯ ಪಿಚ್ ಇರಲಿ ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ರಿಷಬ್ ಪಂತ್ (Rishabh Pant) ಮತ್ತು ಬುಮ್ರ (Jasprit Bumrah) ಅವರು ತಂಡದಲ್ಲಿ ಇಲ್ಲದೆ ಇರುವುದರಿಂದ ಇದು ಭಾರತಕ್ಕೆ ಮೈನಸ್ ಆಗಬಹುದು, ಆಸ್ಟ್ರೇಲಿಯಾ ಎಲ್ಲರ ಫೇವರೆಟ್ ತಂಡ ಆಗಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಗ್ರೆಗ್ ಚಾಪೆಲ್ ಅವರು ಹೇಳಿದ್ದಾರೆ. ಆದರೆ ಟೀಮ್ ಇಂಡಿಯಾ ಆಟಗಾರರು ಈಗಾಗಲೇ ಪ್ರಾಕ್ಟೀಸ್ ಶುರು ಮಾಡಿದ್ದು, ಉತ್ತಮವಾಗಿ ಆಡಿ ಸರಣಿ ಗೆಲ್ಲುವ ಭರವಸೆ ಹೊಂದಿದ್ದಾರೆ. ಇದನ್ನು ಓದಿ..Cricket News: ಮುಂದಿನ ವರ್ಷದ ವಿಶ್ವಕಪ್ ಗೆ ಈಗಾಗಲೇ ಫಿಕ್ಸ್ ಆಗಿರುವ 5 ಆಟಗಾರರು ಯಾರ್ಯಾರು ಗೊತ್ತೇ?? ಇವರಿದ್ದರೇ ಕಪ್ ನಮ್ಮದೇ.