Cricket News: ಮುಂದಿನ ವರ್ಷದ ವಿಶ್ವಕಪ್ ಗೆ ಈಗಾಗಲೇ ಫಿಕ್ಸ್ ಆಗಿರುವ 5 ಆಟಗಾರರು ಯಾರ್ಯಾರು ಗೊತ್ತೇ?? ಇವರಿದ್ದರೇ ಕಪ್ ನಮ್ಮದೇ.

Cricket News: ಮುಂದಿನ ವರ್ಷದ ವಿಶ್ವಕಪ್ ಗೆ ಈಗಾಗಲೇ ಫಿಕ್ಸ್ ಆಗಿರುವ 5 ಆಟಗಾರರು ಯಾರ್ಯಾರು ಗೊತ್ತೇ?? ಇವರಿದ್ದರೇ ಕಪ್ ನಮ್ಮದೇ.

Cricket News: 2007ರಲ್ಲಿ ಮೊದಲ ಸಾರಿ ಟಿ20 ವಿಶ್ವಕಪ್ (T20 World Cup) ಶುರುವಾದಾಗ, ಭಾರತ ತಂಡದ ಕ್ಯಾಪ್ಟನ್ ಆಗಿದ್ದವರು ಮಹೇಂದ್ರ ಸಿಂಗ್ ಧೋನಿ (MS Dhoni) ಅವರು, ಅವರ ಕ್ಯಾಪ್ಟನ್ಸಿಯಲ್ಲಿ ಟೀಮ್ ಇಂಡಿಯಾ (Team India) ಮೊದಲ ಟಿ20 ವಿಶ್ವಕಪ್ ಗೆದ್ದಿತು, ಅದಾದ ನಂತರ 16 ವರ್ಷಗಳು ಕಳೆದ ಬಳಿಕ ಕೂಡ ಇನ್ನು ಟೀಮ್ ಇಂಡಿಯಾ ಎರಡನೇ ಸಾರಿ ವಿಶ್ವಕಪ್ ಗೆದ್ದಿಲ್ಲ. ಹಾಗಾಗಿ 2024ರಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯವನ್ನು ಗೆಲ್ಲಲೇಬೇಕು ಎಂದು ಭಾರತ ತಂಡ ಪಣ ತೊಟ್ಟಿದೆ. ಅದಕ್ಕಾಗಿ ಯುವ ಆಟಗಾರರ ತಂಡವನ್ನು ಕಟ್ಟುವ ಪ್ಲಾನ್ ನಲ್ಲಿದೆ. ಈಗಾಗಲೇ ಹಾರ್ದಿಕ್ ಪಾಂಡ್ಯ (Hardik Pandya) ಅವರು ಕ್ಯಾಪ್ಟನ್ ಆಗುತ್ತಾರೆ ಎನ್ನುವ ಮಾತಿದೆ. ಏಕೆಂದರೆ ಈ ವರ್ಷದ ಮೊದಲ ತಿಂಗಳಿನಲ್ಲಿ ಅವರ ಕ್ಯಾಪ್ಟನ್ಸಿಯಲ್ಲಿ ಎರಡು ಟಿ20 ಸೀರೀಸ್ ಗಳನ್ನು ಗೆದ್ದಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಹೊರತುಪಡಿಸಿ, ಇನ್ನು ಐವರು ಯುವ ಆಟಗಾರರು ಟಿ20 ವಿಶ್ವಕಪ್ ನಲ್ಲಿ ಆಡುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ..ಆ ಐವರು ಯಾರು ಗೊತ್ತಾ?

ಶುಬ್ಮನ್ ಗಿಲ್ (Shubhman Gill) :- ಪ್ರಸ್ತುತ ಇವರ ಫಾರ್ಮ್ ಇಂದಾಗಿ ಗಿಲ್ ಅವರ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಓಡಿಐ ನಲ್ಲಿ ಡಬಲ್ ಸೆಂಚುರಿ ಭಾರಿಸಿದ್ದ ಗಿಲ್, ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ 126 ರನ್ಸ್ ಗಳಿಸಿ ದಾಖಲೆ ಬರೆದಿದ್ದಾರೆ. ಮೊದಲ ಎರಡು ಮ್ಯಾಚ್ ಗಳಲ್ಲಿ ಎಡವಿದ್ದ ಗಿಲ್, ಮೂರನೇ ಪಂದ್ಯದಲ್ಲಿ ಕಂಬ್ಯಾಕ್ ಮಾಡಿ, ಅತಿಹೆಚ್ಚು ರನ್ಸ್ ಸ್ಕೋರ್ ಮಾಡಿದ ಆಟಗಾರ ಎನ್ನಿಸಿಕೊಂಡಿದ್ದಾರೆ. 184ರ ಸ್ಟ್ರೈಕ್ ರೇಟ್, 72ರ ಆವರೇಜ್ ನಲ್ಲಿ ಬರೋಬ್ಬರಿ 144 ರನ್ಸ್ ಗಳಿಸಿದ್ದಾರೆ.
ವಾಷಿಂಗ್ಟನ್ ಸುಂದರ್ (Washington Sundar) :- ಆಲ್ ರೌಂಡರ್ ಆಗಿರುವ ಸುಂದರ್ ಅವರು ಭರ್ಜರಿಯಾಗಿ ಕಂಬ್ಯಾಕ್ ಮಾಡಿದ್ದಾರೆ. 3 ಟಿ20 ಪಂದ್ಯಗಳಲ್ಲಿ ಇವರು ಪಡೆದಿದ್ದು 3 ವಿಕೆಟ್ಸ್, ಆದರೆ ಇವರ ಎಕಾನಮಿ ಹಾರ್ದಿಕ್ ಪಾಂಡ್ಯ ಮತ್ತು ಅರ್ಷದೀಪ್ ಸಿಂಗ್ ಅವರಿಗಿಂತ ಹೆಚ್ಚು, 5.57 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ ಸುಂದರ್. ಹಾಗೆಯೇ 162ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿ, 60 ರನ್ ಗಳಿಸಿದ್ದು, ಇವರು ವಿಶ್ವಕಪ್ ಗೆ ಖಂಡಿತ ಆಯ್ಕೆಯಾಗುತ್ತಾರೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ತಾನು ಸರಣಿಯಲ್ಲಿ ಇಲ್ಲದೆ ಇದ್ದರೂ ಶುಭಮ್ ಗಿಲ್ ಗೆ ಹೊಸ ಸಂದೇಶ ರವಾನೆ ಮಾಡಿದ ಕಿಂಗ್ ಕೊಹ್ಲಿ: ಹೇಳಿದ್ದೇನು ಗೊತ್ತೆ?

ಉಮ್ರಾನ್ ಮಲಿಕ್ (Umran Malik) :- ಇವರ ಸ್ಪೀಡ್ ಗೆ ಭಾರಿ ಮಾತುಕತೆ ನಡೆಯುತ್ತಿದೆ. ಶ್ರೀಲಂಕಾ. ವಿರುದ್ಧದ ಸರಣಿಯಲ್ಲಿ 7 ವಿಕೆಟ್ಸ್ ಪಡೆದು 10ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದರು, ಅದರ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 7ರ ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇವರು ಆಡುತ್ತಿರುವ ರೀತಿ ಸುಧಾರಿಸುತ್ತಿರುವುದರಿಂದ ಇವರನ್ನು ಟಿ20 ವರ್ಲ್ಡ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಬಹುದು.
ಅಕ್ಷರ್ ಪಟೇಲ್ (Axar Patel) :- ಇವರು ರವೀಂದ್ರ ಜಡೇಜಾ ಅವರ ಬದಲಾಗಿ ಆಯ್ಕೆಯಾದ ಆಲ್ ರೌಂಡರ್. ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 117 ರನ್ಸ್ ಗಳಿಸಿ, ಅತಿಹೆಚ್ಚು ಸ್ಕೋರ್ ಮಾಡಿದ ಎರಡನೇ ಆಟಗಾರ ಎನ್ನಿಸಿಕೊಂಡರು. ಬೌಲಿಂಗ್ ನಲ್ಲಿ 3 ವಿಕೆಟ್ಸ್ ಪಡೆದು, ಉತ್ತಮವಾಗಿ ಫೀಲ್ಡಿಂಗ್ ಸಹ ಮಾಡುತ್ತಾರೆ. ಇವರು ಮ್ಯಾಚ್ ವಿನ್ನರ್ ಎಂದರೆ ತಪ್ಪಾಗುವುದಿಲ್ಲ. ಹಾಗಾಗಿ ಇವರು ಟಿ20 ವಿಶ್ವಕಪ್ ಗೆ ಆಯ್ಕೆಯಾಗಬಹುದು.

ಶಿವಂ ಮಾವಿ (Shivam Maavi) :- ಉತ್ತರ ಪ್ರದೇಶದ ವೇಗ ಬೌಲರ್ ಶಿವಂ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂಟ್ರಿ ಕೊಟ್ಟರು. ಇವರು ಇಂಡಿಯಾ ವರ್ಸಸ್ ಶ್ರೀಲಂಕಾ, ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ನಡೆದ 6 ಟಿ20 ಪಂದ್ಯಗಳಲ್ಲು ಆಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ಸ್, ಶ್ರೀಲಂಕಾ ವಿರುದ್ಧ 3 ವಿಕೆಟ್ಸ್ ಪಡೆದರು. ಹಾಗಾಗಿ ಇವರು ಕೂಡ ವಿಶ್ವಕಪ್ ಗೆ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Cricket News: ಸೂರ್ಯ ಕುಮಾರ್ ನಂತರ ಭಾರತಕ್ಕೆ ಸಿಕ್ಕ ಮತ್ತೊಬ್ಬ ಎಬಿಡಿ: ಅವಕಾಶ ಸಿಕ್ಕ ತಕ್ಷಣ ಬಾಚಿಕೊಂಡ ಯುವ ಆಟಗಾರ. ಯಾರು ಗೊತ್ತೇ??