ಕರುನಾಡ ವಾಣಿ
ಇದು ನಿಮ್ಮ ಧ್ವನಿ

Railway Jobs 2023: ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; ಬಾರಿ ಹುದ್ದೆಗಳನ್ನು ಭಾರ್ತಿ ಮಾಡಲು ಮುಂದಾದ ರೈಲ್ವೆ; ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

803

Get real time updates directly on you device, subscribe now.

Railway Jobs 2023: ನಮ್ಮ ದೇಶದ ಬಹಳಷ್ಟು ಜನರು ರೈಲ್ವೆ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಪಡೆಯಬೇಕು ಎಂದು ಕಷ್ಟಪಡುತ್ತಿದ್ದಾರೆ. ಅಂಥವರಿಗಾಗಿ 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ಅವರಿಗಾಗಿ ಭಾರತೀಯ ರೈಲ್ವೆ ಇವ ಕೆಲಸಡ್ಸ್ ಅವಕಾಶವನ್ನು ಇಂಡಿಯನ್ ರೈಲ್ವೆ ನೀಡಿದೆ. ಗ್ರೂಪ್ ಡಿ ಹುದ್ದೆಗಳು ಭರ್ತಿ ಮಾಡಲು ಪ್ರಕಟಣೆ ಹೊರಡಿಸಿದೆ, 7,914 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಸೌತ್ ಸೆಂಟ್ರಲ್ ರೈಲ್ವೆ (SCR), ಸೌತ್ ಈಸ್ಟರ್ನ್ ರೈಲ್ವೆ (SER), ನಾರ್ತ್ ವೆಸ್ಟರ್ನ್ ರೈಲ್ವೆ (NWR) ಈ ವಲಯಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ? ಈ ಕೆಲಸಕ್ಕೆ ಬೇಕಿರುವ ಅರ್ಹತೆಗಳು ಏನು? ತಿಳಿಸುತ್ತೇವೆ ನೋಡಿ..

ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದಿರುವ ಸಂಸ್ಥೆ ಇಂದ 10ನೇ ತರಗತಿ ಪಾಸ್ ಆಗಿರಬೇಕು, 10ನೇ ತರಗತಿಯಲ್ಲಿ ಕನಿಷ್ಠ 50% ಅಂಕಗಳು ಬಂದಿರಬೇಕು. ಇದರ ಜೊತೆಗೆ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೇನಿಂಗ್ (NCVT) ಅಥವಾ ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೇನಿಂಗ್ (SCVT) ಇಂದ ಐಟಿಐ ಪಾಸ್ ಆಗಿರುವ ಸರ್ಟಿಫಿಕೇಟ್ ಇರಬೇಕು. ಈ ಕೆಲಸಕ್ಕೆ ವಯೋಮಿತಿ, 15 ರಿಂದ 24 ವರ್ಷಗಳ ಒಳಗೆ ಇರಬೇಕು, 2023ರ ಜನವರಿ 1ಕ್ಕೆ 24 ವರ್ಷ ದಾಟಿರಬಾರದು. ಹಾಗೆಯೇ 15 ವರ್ಷಕ್ಕಿಂತ ಕಡಿಮೆ ಇರಬಾರದು. ರಿಸರ್ವೇಷನ್ ಕ್ಯಾಟಗರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಇದನ್ನು ಓದಿ..KSRTC Jobs: ನೀವು ಜಸ್ಟ್ 10 ನೇ ತರಗತಿ ಪಾಸ್ ಆಗಿದ್ದರೆ ಸಾಕು, KSRTC ಅಲ್ಲಿ ನೀಡುತ್ತಿದ್ದಾರೆ ಉದ್ಯೋಗ; ಸಾವಿರಾರು ಉದ್ಯೋಗಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ??

ಹುದ್ದೆಗಳ ವಿವರ ನೋಡುವುದಾದರೆ, ಸೌತ್ ಸೆಂಟ್ರಲ್ ರೈಲ್ವೆಯಲ್ಲಿ 4,103 ಹುದ್ದೆಗಳು ಖಾಲಿ ಇದೆ. ಸೌತ್ ಈಸ್ಟರ್ನ್ ರೈಲ್ವೆಯಲ್ಲಿ 2,026 ಹುದ್ದೆಗಳ್ಚ್ ಖಾಲಿಯಿದೆ, ನಾರ್ತ್ ಈಸ್ಟರ್ನ್ ರೈಲ್ವೆಯಲ್ಲಿ 1,785 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಅರ್ಹರು ಮತ್ತು ಆಸಕ್ತರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ಎಂದು ನೋಡುವುದಾದರೆ, ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ. 10ನೇ ತರಗತಿ ಜೊತೆಗೆ ಐಟಿಐ ಮಾಡಿರುವವರು ಹೆಚ್ಚು ಆದ್ಯತೆ ಇದೆ. ಈ ಎರಡರಲ್ಲಿ ಹೆಚ್ಚು ಮಾರ್ಕ್ಸ್ ಪಡೆದಿರುವವರ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧವಾಗುತ್ತದೆ.

ಕೆಲಸಕ್ಕೆ ಅಪ್ಲೈ ಮಾಡುವ ವಿಧಾನ, ಸೌತ್ ಸೆಂಟ್ರಲ್ ರೈಲ್ವೆಯಲ್ಲಿ ಖಾಲಿ ಇರುವ 4,103 ಹುದ್ದೆಗಳಿಗೆ ಅಪ್ಲೈ ಮಾಡುವ ಅಭ್ಯರ್ಥಿಗಲ್ಜ್ scr.indianrailways.gov.in ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಿ. ಈ ವಲಯದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಬರುತ್ತದೆ. ಕೊಲ್ಕತ್ತಾ ಬರುವ ಸೌತ್ ಈಸ್ಟರ್ನ್ ರೈಲ್ವೆಯಲ್ಲಿ 2,026 ಪೋಸ್ಟ್ ಗಳು ಖಾಲಿ ಇದೆ, ಇಲ್ಲಿ ಅಪ್ಲೈ ಮಾಡುವವರು rrcser.co.in ಈ ವೆಬ್ಸೈಟ್ ಗೆ ಭೇಟಿ ನೀಡಿ. ನಾರ್ತ್ ಈಸ್ಟರ್ನ್ ರೈಲ್ವೆಯಲ್ಲಿ 1,785 ಹುದ್ದೆಗಳು ಖಾಲಿ ಇದ್ದು ಅದಕ್ಕೆ ಅರ್ಜಿ ಸಲ್ಲಿಸುವವರು rrcjaipur.in ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಕೆಲಸಕ್ಕೆ ಅರ್ಜಿ ಹಾಕಲು ಜನವರಿ 10 ರಿಂದ ಫೆಬ್ರವರಿ 10ರ ವರೆಗು ಸಮಯ ಇದೆ. ಅರ್ಹತೆ ಇರುವ ಅಭ್ಯರ್ಥಿಗಳು ಈ ದಿನಾಂಕಗಳ ಒಳಗೆ ಅರ್ಜಿ ಸಲ್ಲಿಸಿ.. ಇದನ್ನು ಓದಿ..Post Office Jobs: 10 ನೇ ತರಗತಿ ಆಗಿದ್ದರೆ ಸಾಕು, ಪಡೆಯಿರಿ ಸರ್ಕಾರೀ ಕೆಲಸ: ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ??

Get real time updates directly on you device, subscribe now.