Kannada News: ಸುಂದರ ಹೆಂಡತಿ ಮಾತು ಕೇಳಿ ಹೆತ್ತ ತಾಯಿಯನ್ನು ಆಶ್ರಮಕ್ಕೆ ಬಿಟ್ಟು ಬಂದ ಮಗ, ಕೊನೆಗೆ ಅಮ್ಮ ಏನಾದಳು ಗೊತ್ತೇ? ಇಷ್ಟೆಲ್ಲ ಆದರೂ ಅಮ್ಮ ಮಾಡಿದ್ದೇನು ಗೊತ್ತೇ??

Kannada News: ಸುಂದರ ಹೆಂಡತಿ ಮಾತು ಕೇಳಿ ಹೆತ್ತ ತಾಯಿಯನ್ನು ಆಶ್ರಮಕ್ಕೆ ಬಿಟ್ಟು ಬಂದ ಮಗ, ಕೊನೆಗೆ ಅಮ್ಮ ಏನಾದಳು ಗೊತ್ತೇ? ಇಷ್ಟೆಲ್ಲ ಆದರೂ ಅಮ್ಮ ಮಾಡಿದ್ದೇನು ಗೊತ್ತೇ??

Kannada News: ಈ ಪ್ರಪಂಚದಲ್ಲಿ ಈಗ ಸಂಬಂಧಗಳು ಯಾಂತ್ರಿಕವಾಗಿದೆ ಎಂದರೆ ತಪ್ಪಾಗುವುದಿಲ್ಲ. ತಂದೆ ತಾಯಿ ಮಕ್ಕಳನ್ನು ಎಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಮಕ್ಕಳು ತಂದೆ ತಾಯಿಗೆ ವಯಸ್ಸಾದ ನಂತರ ಅವರ ಪಡೆಯನ್ನು ಹೇಗೆ ಮಾಡಿಬಿಡುತ್ತಾರೆ ಎಂದು ಹಲವು ಘಟನೆಗಳನ್ನು ನೋಡಿದ್ದೇವೆ. ಅಂಥದ್ದೇ ಒಂದು ನೈಜ ಘಟನೆಯನ್ನು ಇಂದು ನಿಮಗೆ ಹೇಳುತ್ತೇವೆ.. ಈ ವ್ಯಕ್ತಿಯ ಹೆಸರು ರಮೇಶ್. ಈತ ತನ್ನ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸಿರುತ್ತಾನೆ.

ಒಂದು ದಿನ ಕೆಲಸ ಮುಗಿಸಿಕೊಂಡು ರಮೇಶ್ ಮನೆಗೆ ಬಂದಾಗ, ಅವನ ಹೆಂಡತಿ ಆಶ್ರಮದಿಂದ ಏನೋ ಲೆಟರ್ ಬಂದಿದೆ, ತಕ್ಷಣವೇ ಬನ್ನಿ ಅಂತ ಹೇಳಿದ್ದಾರೆ, ಆದರೆ ವಿಚಾರ ಏನಾಗಿದೆ ಎಂದು ಬರೆದಿಲ್ಲ. ಹೋಗಿ ನೋಡಿಕೊಂಡು ಬನ್ನಿ ಎಂದು ಹೇಳುತ್ತಾಳೆ. ಆಗ ರಮೇಶ್ ನಾನು ದುಡ್ಡು ಕಳಿಸಿದ್ದೇನಲ್ಲ ಮತ್ತೆ ಯಾಕೆ ಬನ್ನಿ ಅಂತ ಬರೆದಿದ್ದಾರೆ ಎಂದು ಹೇಳುತ್ತಾನೆ. ಆಗ ಅವನ ಹೆಂಡತಿ, ಹೋಗಿ ನೋಡಿಕೊಂಡು ಬನ್ನಿ, ಅಕಸ್ಮಾತ್ ಅವರು ನಿಮ್ಮಮ್ಮನ್ನ ಕರೆದುಕೊಂಡು ಹೋಗಿ ಅಂತ ಹೇಳಿದ್ರೆ, ಕರ್ಕೊಂಡು ಬರ್ಬೇಡಿ. ಇಲ್ಲಿ ನಮ್ಮ ಜೀವನ ನಡೆಸೋದಕ್ಕೆ ಕಷ್ಟ ಆಗ್ತಿದೆ. ಮಗಳಿಗೆ ಓದಿಸಬೇಕು, ಏನೆಲ್ಲಾ ಖರ್ಚುಗಳು ಇದೆ. ಇದನ್ನು ಓದಿ..Kannada News: ಇಷ್ಟು ವರ್ಷ ಆದಮೇಲೆ ಚಿತ್ರರಂಗದ ಕರಾಳ ಮುಖ ಬಿಚ್ಚಿಟ್ಟ ನಯನತಾರ: ಆದ ಅನುಭವ ಎಂತದ್ದು ಗೊತ್ತೇ? ಬೇರೆ ವಿಧಿ ಇಲ್ಲದೆ ಮಾಡಿದ್ದೇನು ಗೊತ್ತೇ? ಬಹಿರಂಗವಾಗಿ ಹೇಳಿದ್ದೇನು ಗೊತ್ತೇ??

ಅದರ ನಡುವೆ ನಿಮ್ಮಮ್ಮ ಬಂದ್ರೆ, ಅವರನ್ನ ನೋಡಿಕೊಳ್ಳೋದು ಕಷ್ಟ ಆಗುತ್ತೆ. ಅವರು ಪದೇ ಪದೇ ಹುಷಾರು ತಪ್ಪುತ್ತಾ ಇರುತ್ತೆ, ಅವರಿಗೆ ಆಸ್ಪತ್ರೆಗೆ ಖರ್ಚು ಮಾಡೋ ಹಣ ವ್ಯರ್ಥ, ಅವರನ್ನ ಕರೆದುಕೊಂಡು ಬರ್ಬೇಡಿ ಎಂದು ಹೇಳುತ್ತಾಳೆ. ಇದರಿಂದ ರಮೇಶನಿಗೆ ಬಹಳ ಕೋಪ ಬರುತ್ತದೆ. ಹೆಂಡತಿ ತನ್ನ ತಾಯಿಯ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿದ್ದು ರಮೇಶನಿಗೆ ಸಹಿಸಲು ಆಗುವುದಿಲ್ಲ. ಅಷ್ಟೇ ಅಲ್ಲದೆ, ಆಕೆ ನಿಮ್ಮ ತಾಯಿಯ ಖರ್ಚನ್ನು ನೋಡಿಕೊಳ್ಳೋದಕ್ಕೆ ಆಗಲ್ಲ ಎಂದಿದ್ದಕ್ಕೆ ರಮೇಶ್..

ಅದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಕೋಪದಲ್ಲಿ ಹೇಳುತ್ತಾನೆ. ಆದರೆ ಕೋಪವನ್ನು ಹೆಚ್ಚಾಗಿ ವ್ಯಕ್ತಪಡಿಸುವುದಕ್ಕೂ ಅವನಿಂದ ಆಗೋದಿಲ್ಲ. ಏಕೆಂದರೆ ರಮೇಶನಿಗೆ ಹೆಂಡತಿ ಕೂಡ ಮುಖ್ಯ ಆಗಿರುತ್ತಾಳೆ. ಮರುದಿನ ಬೆಳಗ್ಗೆ ವೃದ್ಧಾಶ್ರಮಕ್ಕೆ ಹೋಗುವ ರಮೇಶ್, ರಿಸೆಪ್ಶನ್ ಗೆ ಹೋಗಿ ತಕ್ಷಣವೇ ಬನ್ನಿ ಅಂತ ಲೆಟರ್ ನಲ್ಲಿ ಬರೆದಿದ್ರು ಮೇಡಂ, ನಮ್ಮ ತಾಯಿಗೆ ಏನಾಗಿದೆ ಎಂದು ಕೇಳುತ್ತಾರೆ. ಆಗ ಅವರು, ನಿಮ್ಮ ತಾಯಿ ನಿಮಗೆ ಕೊಡೋದಕ್ಕೆ ಒಂದು ಲೆಟರ್ ಕೊಟ್ಟಿದ್ದಾರೆ ಎಂದು ಅದನ್ನು ಕೊಡುತ್ತಾರೆ. ಇದನ್ನು ಓದಿ..Kannada News: ತನ್ನ ಮೂರನೇ ಪತ್ನಿಗೆ ಡೈವೋರ್ಸ್ ಕೊಡಲು ಮುಂದಾದರೆ ಪವನ್ ಕಲ್ಯಾಣ್: ಕಾರಣ ಅದೇನಾ?? ತೆಲುಗಿನಲ್ಲಿ ಮತ್ತೊಂದು ಕರ್ಮಕಾಂಡ??

ಅದನ್ನು ತೆಗೆದು ನೋಡಿದರೆ, 2 ಲಕ್ಷ ರೂಪಾಯಿಯ ಡಿಡಿ ಮತ್ತು ಒಂದು ಲೆಟರ್ ಅದರಲ್ಲಿ ಇರುತ್ತದೆ. ಲೆಟರ್ ಓದಿದರೆ, ಚಿಕ್ಕ ವಯಸ್ಸಿನಲ್ಲೇ ನಿನ್ನ ತಂದೆ ತೀರಿಹೋದರು, ಆ ಸಮಯದಲ್ಲಿ ನೀನು ನನಗೆ ಭಾರ ಆಗಲಿಲ್ಲ. ಆದರೆ ಈಗ ನಾನು ನಿನಗೆ ಭಾರ ಆಗಿದ್ದೀನಿ. ನನ್ನ ಕಾರಣಕ್ಕೆ ನೀನು ನಿನ್ನ ಹೆಂಡತಿಯ ಹತ್ತಿರ ಕೆಟ್ಟವನಾಗಬೇಡ.
ನೀನು ದುಡ್ಡಿಗಾಗಿ ಕಷ್ಟ ಪಡ್ತಿದ್ದೀಯಾ ಅಂತ ನನಗೆ ಗೊತ್ತು, ಹಾಗಾಗಿ ನಾನು ಒಂದು ಕೆಲಸ ಮಾಡಿದ್ದೀನಿ. ಒಬ್ಬ ವ್ಯಕ್ತಿಗೆ ಕಿಡ್ನಿ ಅವಶ್ಯಕತೆ ಇತ್ತು, ನಾನು ನನ್ನ ಕಿಡ್ನಿಯನ್ನು ಅವರಿಗೆ ನೀಡಿ ಹಣ ಪಡೆದಿದ್ದೀನಿ.

ನಿನ್ನ ಸಾಲ ಮತ್ತು ಮಗಳ ವಿದ್ಯಾಭ್ಯಾಸಕ್ಕೆ ಈ ಹಣ ಬಳಸಿಕೋ.. ನನ್ನ ಬಗ್ಗೆ ಯೋಚನೆ ಮಾಡಬೇಡ, ಇದು ನಿನ್ನ ಕೈಗೆ ಸೇರುವುದಕ್ಕಿಂತ ಮೊದಲು ನಾನು ದೇವರ ಬಳಿಗೆ ಹೋಗಿರುತ್ತೇನೆ ಎಂದು ರಮೇಶನ ತಾಯಿ ಅವರ ಕೈಬರಹದಲ್ಲಿ ಬರೆದಿರುತ್ತಾರೆ. ಇದನ್ನು ಓದಿ ರಮೇಶನಿಗೆ ಬಹಳ ದುಃಖದಲ್ಲಿ ಕಣ್ಣೀರು ಬರುತ್ತದೆ. ಅಮ್ಮಾ ಎಂದು ಅಳುತ್ತಾ ಓಡಿ ಹೋಗುತ್ತಾನೆ. ಆದರೆ ಅಷ್ಟರಲ್ಲಿ ಕಾಲ ಮೀರಿರುತ್ತದೆ. ಈ ಘಟನೆ ಕಾಲ್ಪನಿಕ ಅಲ್ಲ, ನಿಜವಾಗಿ ನಡೆದಿರುವುದು, ಹಾಗಾಗಿ ತಂದೆತಾಯಿಗೆ ಮಕ್ಕಳು ಯಾವತ್ತಿಗೂ ಭಾರ ಆಗುವುದಿಲ್ಲ. ಆದರೆ ಮಕ್ಕಳು ತಂದೆ ತಾಯಿಗೆ ಈ ರೀತಿ ಮಾಡುತ್ತಾರೆ. ಇಂತಹ ಘಟನೆಗಳನ್ನು ಕೇಳಿದ ಮೇಲೆ ಆದರೂ ನಾವೆಲ್ಲರೂ ತಂದೆ ತಾಯಿಯ ಮಹತ್ವವನ್ನು ಅರ್ಥಮಾಡಿಕೊಳ್ಲಬೇಕು. ಇದನ್ನು ಓದಿ..Relationship: ವಯಸ್ಸು 30 ವರ್ಷ ದಾಟಿದ ಮೇಲೆ ಮದುವೆಯಾದರೆ ಏನಾಗುತ್ತದೆ ಗೊತ್ತೇ? ಇಂಗೆಲ್ಲ ಆಗುತ್ತಾ?? ಕೊನೆಗೂ ಬಯಲಾಯ್ತು ಸತ್ಯ.