Cricket News: ಸೂರ್ಯ ಕುಮಾರ್ ನಂತರ ಭಾರತಕ್ಕೆ ಸಿಕ್ಕ ಮತ್ತೊಬ್ಬ ಎಬಿಡಿ: ಅವಕಾಶ ಸಿಕ್ಕ ತಕ್ಷಣ ಬಾಚಿಕೊಂಡ ಯುವ ಆಟಗಾರ. ಯಾರು ಗೊತ್ತೇ??
Cricket News: ಸೂರ್ಯ ಕುಮಾರ್ ನಂತರ ಭಾರತಕ್ಕೆ ಸಿಕ್ಕ ಮತ್ತೊಬ್ಬ ಎಬಿಡಿ: ಅವಕಾಶ ಸಿಕ್ಕ ತಕ್ಷಣ ಬಾಚಿಕೊಂಡ ಯುವ ಆಟಗಾರ. ಯಾರು ಗೊತ್ತೇ??
Cricket News: ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಮೂರು ಟಿ20 ಪಂದ್ಯಗಳ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ನಿನ್ನೆ ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ, ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದ ರಾಹುಲ್ ತ್ರಿಪಾಠಿ (Rahul Tripathi) ಅವರು 3ನೇ ಪಂದ್ಯದಲ್ಲಿ ಸ್ಫೋಟಕವಾಗಿ ಆಡಿದ್ದಾರೆ. ಶ್ರೀಲಂಕಾ (India vs Srilanka) ವಿರುದ್ಧದ ಪಂದ್ಯದಲ್ಲಿ 35 ರನ್ಸ್ ಗಳಿಸಿ ಒಳ್ಳೆಯ ಭರವಸೆ ಮೂಡಿಸಿದ್ದ ರಾಹುಲ್ ತ್ರಿಪಾಠಿ ಅವರು ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಎರಡು ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ.
0 ಮತ್ತು 13 ರನ್ ಗಳಿಸಿ ಔಟ್ ಆದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 22 ಎಸೆತಗಳಲ್ಲಿ ಭರ್ಜರಿಯಾಗಿ 44 ರನ್ಸ್ ಭಾರಿಸಿದರು, ಅದರಲ್ಲಿ 3 ಸಿಕ್ಸರ್ ಮತ್ತು 7 ಬೌಂಡರಿ ಇತ್ತು. ರಾಹುಲ್ ತ್ರಿಪಾಠಿ ಅವರು ಈ ಮೂಲಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ಚೆನ್ನಾಗಿ ಆಡುತ್ತಾರೆ ಎನ್ನುವುದನ್ನು ನಿರೂಪಿಸಿದ್ದಾರೆ. ಇನ್ನು ಇವರ ಆಟದ ಶೈಲಿಗೆ ನೆಟ್ಟಿಗರ ವಲಯದಲ್ಲಿ ಮೆಚ್ಚುಗೆ ಕೂಡ ಸಿಕ್ಕಿದೆ. ಲಾಕಿ ಫರ್ಗ್ಯೂಸನ್ ಅವರ 149ಕಿಮೀ ಸ್ಪೀಡ್ ಬೌಲಿಂಗ್ ನಲ್ಲಿ 7ನೇ ಸ್ಟಂಪ್ ಇಂದ ಫೈನ್ ಲೆಗ್ ಮೇಲಕ್ಕೆ ಮನಮೋಹಕ ಸಿಕ್ಸರ್ ಒಂದನ್ನು ಭಾರಿಸಿದರು. ಇದನ್ನು ಓದಿ..Cricket News: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೇಲೆ ಆಟಗಾರನಿಗೆ ಬಹಿರಂಗ ಕ್ಷಮೆ ಕೇಳಿದ ಸೂರ್ಯ ಕುಮಾರ್: ಯಾಕೆ ಗೊತ್ತೇ? ಮಾಡಿದ ತಪ್ಪಾದರೂ ಏನು ಗೊತ್ತೇ?
ಇದಷ್ಟೇ ಅಲ್ಲದೆ ಇಶ್ ಸೋಧಿ ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ಬೌಲಿಂಗ್ ನಲ್ಲಿ ರಾಹುಲ್ ತ್ರಿಪಾಠಿ ಬೀಸಿದ ಸ್ವೀಪ್ ಶಾಟ್ ಗಳು ಎಲ್ಲರ ಗಮನ ಸೆಳೆದಿದೆ..6ನೇ ಓವರ್ ನಲ್ಲಿ ಲಾಕಿ ಫರ್ಗ್ಯೂಸನ್ ಅವರ ಬೌಲಿಂಗ್ ನಲ್ಲಿ ರಾಹುಲ್ ತ್ರಿಪಾಠಿ ಅವರು ಸ್ಟಂಪ್ಸ್ ಬಿಟ್ಟು ವೈಡ್ ಗೆ ಹತ್ತಿರ ಬಂದಿದ್ದರು. ಆಗ . ಲಾಕಿ ಫರ್ಗ್ಯೂಸನ್ ಸ್ಟಂಪ್ ಗೆ ಏಮ್ ಮಾಡಿ, ಬಾಲ್ ಎಸೆದರು.. ಅದರ ಟೈಮಿಂಗ್ ಅನ್ನು ಚೆನ್ನಾಗಿ ತಿಳಿದುಕೊಂಡ ರಾಹುಲ್ ತ್ರಿಪಾಠಿ ಫೈನ್ ಲೆಗ್ ನ ಮೇಲೆ ಅದ್ಬುತವಾಗಿ ಸಿಕ್ಸರ್ ಭಾರಿಸಿದರು. ಈ ಸಿಕ್ಸರ್ ನೋಡಿ ಅಭಿಮಾನಿಗಳು ಫಿದಾ ಆಗಿರುವ ಅಭಿಮಾನಿಗಳು ಟೀಮ್ ಇಂಡಿಯಾಗೆ ಮತ್ತೊಬ್ಬ 360 ಬ್ಯಾಟ್ಸ್ಮನ್ ಸಿಕ್ಕಿದ್ದಾರೆ ಎನ್ನುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ ಅವರನ್ನು ಎಬಿಡಿ ಅವರಿಗೆ ಹೋಲಿಕೆ ಮಾಡಲಾಗುತ್ತಿತ್ತು, ಈಗ ರಾಹುಲ್ ತ್ರಿಪಾಠಿ ಅವರನ್ನು ಅದೇ ಸಾಲಿಗೆ ಸೇರಿಸಿದ್ದಾರೆ. ಇದನ್ನು ಓದಿ..Cricket News: ತಾನು ಸರಣಿಯಲ್ಲಿ ಇಲ್ಲದೆ ಇದ್ದರೂ ಶುಭಮ್ ಗಿಲ್ ಗೆ ಹೊಸ ಸಂದೇಶ ರವಾನೆ ಮಾಡಿದ ಕಿಂಗ್ ಕೊಹ್ಲಿ: ಹೇಳಿದ್ದೇನು ಗೊತ್ತೆ?