Cricket News: ತಾನು ಸರಣಿಯಲ್ಲಿ ಇಲ್ಲದೆ ಇದ್ದರೂ ಶುಭಮ್ ಗಿಲ್ ಗೆ ಹೊಸ ಸಂದೇಶ ರವಾನೆ ಮಾಡಿದ ಕಿಂಗ್ ಕೊಹ್ಲಿ: ಹೇಳಿದ್ದೇನು ಗೊತ್ತೆ?

Cricket News: ತಾನು ಸರಣಿಯಲ್ಲಿ ಇಲ್ಲದೆ ಇದ್ದರೂ ಶುಭಮ್ ಗಿಲ್ ಗೆ ಹೊಸ ಸಂದೇಶ ರವಾನೆ ಮಾಡಿದ ಕಿಂಗ್ ಕೊಹ್ಲಿ: ಹೇಳಿದ್ದೇನು ಗೊತ್ತೆ?

Cricket News: ಟೀಮ್ ಇಂಡಿಯಾದ (Team India) ಭರವಸೆಯ ಬ್ಯಾಟ್ಸ್ಮನ್ ಆಗಿ ಶುಭಮನ್ ಗಿಲ್ (Shubhman Gill) ಅವರು ಬೆಳೆಯುತ್ತಿದ್ದಾರೆ ಎಂದೇ ಹೇಳಬಹುದು. ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ವಿರುದ್ಧದ ಏಕದಿನ ಪಂದ್ಯಗಳಲ್ಲಿ ದ್ವಿಶತಕ ಮತ್ತು ಶತಕ ಭಾರಿಸಿದ್ದ ಶುಬ್ಮನ್ ಗಿಲ್ ಅವರು ನ್ಯೂಜಿಲೆಂಡ್ ವಿರುದ್ಧದ ಮೊದಲ ಎರಡು ಟಿ20 ಪಂದ್ಯಗಳಲ್ಲಿ ವಿಫಲರಾಗಿ ಟೀಕೆಗೆ ಗುರಿಯಾಗಿದ್ದರು. ಆದರೆ ಮೂರನೇ ಆಟದಲ್ಲಿ ಸ್ಫೋಟಕ ಪ್ರದರ್ಶನ ನೀಡುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ಗಿಲ್ ಅವರು ಶತಕ ಸಿಡಿಸಿದ್ದು, ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಇದು ಗಿಲ್ ಅವರ ಮೊದಲ ಶತಕ ಆಗಿದೆ.

ಇಶಾನ್ ಕಿಶನ್ (Ishan Kishan) ಅವರೊಡನೆ ಓಪನರ್ ಆಗಿ ಕಣಕ್ಕೆ ಇಳಿದರು ಗಿಲ್, ಮೊದಲ ವಿಕೆಟ್ ಬೇಗ ಕಳೆದುಕೊಂಡರು ಸಹ, ಶುಬ್ಮನ್ ಗಿಲ್ ಉತ್ತಮ ಪ್ರದರ್ಶನ ನೀಡಿದರು, 63 ಎಸೆತಗಳಲ್ಲಿ 7 ಸಿಕ್ಸರ್ ಹಾಗೂ 12 ಬೌಂಡರಿಗಳನ್ನು ಒಳಗೊಂಡು ಬರೋಬ್ಬರಿ 126 ರನ್ಸ್ ಗಳಿಸಿದರು. ಈ ಶತಕದ ಮೂಲಕ ವಿರಾಟ್ ಕೊಹ್ಲಿ (Virat Kohli) ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ ಗಿಲ್, ಇಂಟರ್ನ್ಯಾಷನಲ್ ಟಿ20 ಇನ್ನಿಂಗ್ಸ್ ನಲ್ಲಿ ಅತಿಹೆಚ್ಚು ವೈಯಕ್ತಿಕ ದಾಖಲಿಸಿದ ಮೊಟ್ಟ ಮೊದಲ ಟೀಮ್ ಇಂಡಿಯಾ ಬ್ಯಾಟ್ಸ್ಮನ್ ಎಂದು ಖ್ಯಾತಿ ಪಡೆದು ವಿರಾಟ್ ಅವರ ದಾಖಲೆಯನ್ನೇ ಹಿಂದಿಕ್ಕಿದ್ದಾರೆ ಗಿಲ್. ಜೊತೆಗೆ ಮೂರು ಸ್ವರೂಪದ ಕ್ರಿಕೆಟ್ ನಲ್ಲೂ ಸೆಂಚುರಿ ಭಾರಿಸಿರುವ ಎರಡನೇ ಅತ್ಯಂತ ಚಿಕ್ಕ ವಯಸ್ಸಿನ ಬ್ಯಾಟ್ಸ್ಮನ್ ಎಂದು ಹೊಸ ದಾಖಲೆ ಬರೆದಿದ್ದಾರೆ. ಈ ದಾಖಲೆಯಲ್ಲಿ ಮೊದಲ ಸ್ಥಾನದಲ್ಲಿ ಇರುವುದು ಪಾಕ್ ತಂಡದ ಅಹ್ಮದ್ ಶಾಹ್ಜಾದ್ (Ahmed Shehzad). ಇದನ್ನು ಓದಿ.. ಇದನ್ನು ಓದಿ..Cricket News: ಬಹು ನಿರೀಕ್ಷಿತ 2023 ರ ವಿಶ್ವಕಪ್ ಗು ಮುನ್ನವೇ ಭಾರತದ ಮುಂದಿದೆ ದೊಡ್ಡ ಸವಾಲು: ಇದನ್ನು ನಿವಾರಿಸಿದರೆ ಮಾತ್ರ ಗೆಲುವು. ಯಾವುದು ಗೊತ್ತೇ??

ಶುಬ್ಮನ್ ಗಿಲ್ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಸಿಡಿಸುತ್ತಿದ್ದ ಹಾಗೆ, ಕಿಂಗ್ ಕೊಹ್ಲಿ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸಂತೋಷ ಹಂಚಿಕೊಂಡಿದ್ದಾರೆ, ಶುಬ್ಮನ್ ಗಿಲ್ ಜೊತೆಗಿರುವ ಫೋಟೋ ಒಂದನ್ನು ಶೇರ್ ಮಾಡಿ, “ಸಿತಾರ (ನಕ್ಷತ್ರ).. ಭವಿಷ್ಯ ಇಲ್ಲಿದೆ..” ಎಂದು ಬರೆದು ಶುಬ್ಮನ್ ಗಿಲ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಮೂಲಕ ವಿರಾಟ್ ಅವರು ಯುವ ಆಟವಾರರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಇದನ್ನು ನೆಟ್ಟಿಗರು ಕೂಡ ಮೆಚ್ಚಿಕೊಂಡಿದ್ದಾರೆ. ಇನ್ನು ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ ಅವರ ಜೊತೆಗೆ ಕೂಡ ಒಳ್ಳೆಯ ಪಾರ್ಟ್ನರ್ಶಿಪ್ ಹೊಂದಿದ್ದಾರೆ. ಇವರಿಬ್ಬರು ಜೊತೆಯಾಗಿ ಏಕದಿನ ಮತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇಬ್ಬರ ಪಾರ್ಟ್ನರ್ಶಿಪ್ ನಲ್ಲಿ ತಂಡಕ್ಕೆ ಒಳ್ಳೆಯ ಕೊಡುಗೆ ಸಿಕ್ಕಿದೆ. ಇದನ್ನು ಓದಿ..Cricket News: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೇಲೆ ಆಟಗಾರನಿಗೆ ಬಹಿರಂಗ ಕ್ಷಮೆ ಕೇಳಿದ ಸೂರ್ಯ ಕುಮಾರ್: ಯಾಕೆ ಗೊತ್ತೇ? ಮಾಡಿದ ತಪ್ಪಾದರೂ ಏನು ಗೊತ್ತೇ?