Cricket News: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೇಲೆ ಆಟಗಾರನಿಗೆ ಬಹಿರಂಗ ಕ್ಷಮೆ ಕೇಳಿದ ಸೂರ್ಯ ಕುಮಾರ್: ಯಾಕೆ ಗೊತ್ತೇ? ಮಾಡಿದ ತಪ್ಪಾದರೂ ಏನು ಗೊತ್ತೇ?
Cricket News: ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೇಲೆ ಆಟಗಾರನಿಗೆ ಬಹಿರಂಗ ಕ್ಷಮೆ ಕೇಳಿದ ಸೂರ್ಯ ಕುಮಾರ್: ಯಾಕೆ ಗೊತ್ತೇ? ಮಾಡಿದ ತಪ್ಪಾದರೂ ಏನು ಗೊತ್ತೇ?
Cricket News: ನಮಗೆಲ್ಲ ಗೊತ್ತಿರುವ ಹಾಗೆ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಟಿ20 ಸರಣಿ ಪಂದ್ಯಗಳು ಈಗ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಭಾರತ (Team India), ಎರಡನೇ ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಈ ಪಂದ್ಯ ಗೆಲ್ಲಲು ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಪಾತ್ರ ಪ್ರಮುಖವಾಗಿತ್ತು ಎಂದು ಹೇಳಬಹುದು.. ನಿಧಾನವಾಗಿಯೇ ರನ್ಸ್ ಗಳಿಸಲು ಶುರು ಮಾಡಿದ ಸೂರ್ಯಕುಮಾರ್ ಯಾದವ್ ಅವರು, 31 ಎಸೆತಗಳಲ್ಲಿ 26 ರನ್ಸ್ ಗಳಿಸಿದರು. ಕೊನೆಯವರೆಗೂ ಕ್ರೀಸ್ ನಲ್ಲಿದ್ದು ಸೂರ್ಯಾಕುಮಾರ್ ಯಾದವ್ ಅವರು ಪಂದ್ಯ ಗೆಲ್ಲುವ ಹಾಗೆ ಮಾಡಿದರು.
ಆದರೆ ತಾವು ಆಡುವ ಸಮಯದಲ್ಲಿ ಸೂರ್ಯಕುಮಾರ್ ಯಾದವ್ ಅವರು ಒಂದು ತಪ್ಪು ಮಾಡಿದರು, ಆ ಕಾರಣದಿಂದ ಸೂರ್ಯಕುಮಾರ್ ಯಾದವ್ ಅವರು ಸಹ ಆಟಗಾರನ ಬಳಿ ಕ್ಷಮೆ ಕೇಳಿದ್ದಾರೆ. ಬ್ಯಾಟಿಂಗ್ ಮಾಡುವಾಗ, ಸೂರ್ಯಕುಮಾರ್ ಯಾದವ್ ಅವರು ಮಾಡಿದ ಅದೊಂದು ತಪ್ಪಿಗೆ ವಾಷಿಂಗ್ಟನ್ ಸುಂದರ್ (Washington Sundar) ಅವರು ರನೌಟ್ ಆದರು, ಈ ಕಾರಣಕ್ಕೆ ಸೂರ್ಯಕುಮಾರ್ ಯಾದವ್ ಅವರು ತಮ್ಮ ತಪ್ಪನ್ನು ಅರ್ಥಮಾಡಿಕೊಂಡು, ಕ್ಷಮೆ ಕೇಳಿದ್ದಾರೆ. “ನಾನು ಕ್ರೀಸ್ ಗೆ ಹೋದಾಗ, ಆಗಿನ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅಲ್ಲಿ ಪಿಚ್ ಬ್ಯಾಟಿಂಗ್ ಮಾಡುವುದು ಕಷ್ಟವಾಗಿತ್ತು, ವಾಷಿಂಗ್ಟನ್ ಸುಂದರ್ ರನೌಟ್ ಆದ ನಂತರ ನಾನು ಅಲ್ಲಿ ಉಳಿಯಲೇಬೇಕಿತ್ತು.. ಇದನ್ನು ಓದಿ..Cricket News: ತಾನು ವಿಶ್ವದ ನಂಬರ್ ಆಗಲು ಹಿಂದೆ ನಿಂತದ್ದು ಯಾರು ಎಂದು ತಿಳಿಸಿದ ಸಿರಾಜ್: ಸಂಪೂರ್ಣ ಶ್ರೇಯ ಕೊಟ್ಟಿದ್ದು ಯಾರಿಗೆ ಗೊತ್ತೆ??
ವಾಶಿ ಔಟ್ ಆಗಿದ್ದಕ್ಕೆ ನನ್ನ ತಪ್ಪು ಕಾರಣ..”ಎಂದು ಹೇಳಿದ್ದಾರೆ ಸೂರ್ಯಕುಮಾರ್. “ಅಲ್ಲಿ ಆಡುವುದು ಕಷ್ಟ ಆಗಿತ್ತು, ಆದರೆ ಪಂದ್ಯ ಮುಗಿಯುವವರೆಗೂ ಆಡುವುದು ಮುಖ್ಯ ಎಂದು ಸ್ಪಷ್ಟ ಮನಸ್ಸಿನಿಂದ ನಾನು ಕ್ರೀಸ್ ನಲ್ಲಿದೆ. ಪರಿಸ್ಥಿತಿಗೆ ಹೊಂದಿಕೊಂಡು ಪಾರ್ಟ್ನರ್ಶಿಪ್ ಬೆಳೆಸುವುದು ಅಲ್ಲಿ ಮುಖ್ಯವಾಗಿತ್ತು. ಅಲ್ಲಿನ ಪಿಚ್ ಬೇರೆ ಥರ ಇದೆ ಎಂದು ನನಗೆ ಗೊತ್ತಿತ್ತು, ಕೊನೆಯ ಓವರ್ ವರೆಗು ಇದ್ದರೆ, ಪಂದ್ಯ ಗೆಲ್ಲುವ ಸಾಧ್ಯತೆ ಇದೆ ಎಂದು ನನಗೆ ಗೊತ್ತಿತ್ತು. ಹಾರ್ದಿಕ್ ಪಾಂಡ್ಯ ಬಂದಾಗ, ಈ ಪಂದ್ಯವನ್ನು ಕೊನೆಯವರೆಗೂ ತೆಗೆದುಕೊಂಡು ಹೋಗಬೇಕು ಎಂದು ಇಬ್ಬರು ಕಮ್ಯುನಿಕೇಟ್ ಮಾಡಿಕೊಂಡ್ವಿ..” ಎಂದು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್. ಇದನ್ನು ಓದಿ..Cricket News: ಬಹು ನಿರೀಕ್ಷಿತ 2023 ರ ವಿಶ್ವಕಪ್ ಗು ಮುನ್ನವೇ ಭಾರತದ ಮುಂದಿದೆ ದೊಡ್ಡ ಸವಾಲು: ಇದನ್ನು ನಿವಾರಿಸಿದರೆ ಮಾತ್ರ ಗೆಲುವು. ಯಾವುದು ಗೊತ್ತೇ??