ಕರುನಾಡ ವಾಣಿ
ಇದು ನಿಮ್ಮ ಧ್ವನಿ

RCB IPL 2023: ಕೊನೆಗೂ ಆರ್ಸಿಬಿ ಗೆ ಸಿಕ್ತು ಭರ್ಜರಿ ಸಿಹಿ ಸುದ್ದಿ: ಬಲಿಷ್ಠ ತಂಡಕ್ಕೆ ಸೇರಿಕೊಂಡು ಮತ್ತಷ್ಟು ಬಲಿಷ್ಠಗೊಳಿಸಿದ ಖಡಕ್ ಆಟಗಾರ. ಯಾರು ಗೊತ್ತೇ??

1,116

Get real time updates directly on you device, subscribe now.

RCB IPL 2023: ಈ ವರ್ಷ ನಡೆಯಲಿರುವ ಐಪಿಎಲ್ 16ನೇ (IPL 16) ಆವೃತ್ತಿಯಲ್ಲಿ ಕಪ್ ಗೆಲ್ಲಲೇಬೇಕು ಎಂದು ಆರ್ಸಿಬಿ (RCB) ತಂಡ ನಿರ್ಧಾರ ಮಾಡಿದೆ. ಏಪ್ರಿಲ್ ತಿಂಗಳಿನಲ್ಲಿ ಐಪಿಎಲ್ (IPL) ಟೂರ್ನಿ ಶುರುವಾಗಲಿದ್ದು, ಅದಕ್ಕಾಗಿ ಬಿಸಿಸಿಐ (BCCI) ವೇಳಾಪಟ್ಟಿಯನ್ನು ತಯಾರಿಸುತ್ತದೆ. ಶೀಘ್ರದಲ್ಲೇ ಐಪಿಎಲ್ ವೇಳಾಪಟ್ಟಿ ಬಿಡುಗಡೆ ಆಗಲಿದ್ದು, ಎಲ್ಲಾ 10 ತಂಡಗಳು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಮ್ಮ ಆರ್ಸಿಬಿ ತಂಡ ಕೂಡ ಅದೇ ಕೆಲಸದಲ್ಲಿದೆ. ಡಿಸೆಂಬರ್ ನಲ್ಲಿ ನಡೆದ ಐಪಿಎಲ್ ಹರಾಜಿನಲ್ಲಿ (IPL Auction) ಆರ್ಸಿಬಿ ತಂಡ 7 ಹೊಸ ಆಟಗಾರರನ್ನು ಖರೀದಿ ಮಾಡಿದೆ.

ಹೊಸ ಆಟಗಾರರು ಮತ್ತು ಇನ್ನುಳಿದ ಆರ್ಸಿಬಿ ಆಟಗಾರರು ಒಳ್ಳೆಯ ಫಾರ್ಮ್ ನಲ್ಲಿರುವ ಕಾರಣ, ತಂಡ ಬಲಿಷ್ಠವಾಗಿ ಕಾಣುತ್ತಿದೆ. ಆದರೆ ಆರ್ಸಿಬಿ ತಂಡಕ್ಕೆ ಈಗ ಮತ್ತೊಂದು ಭರ್ಜರಿಯಾದ ಗುಡ್ ನ್ಯೂಸ್ ಸಿಕ್ಕಿದ್ದು, ಇಡೀ ತಂಡ ಫುಲ್ ಖುಷಿಯಾಗಿದೆ. ಅದೇನು ಅಂದ್ರೆ, ಭಾರತ ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ (Glenn Maxwell) ಅವರು ಈ ಬಾರಿ ಐಪಿಎಲ್ ನಲ್ಲಿ ಪಾಲ್ಗೊಳ್ಳುವುದು ಖಚಿತವಿಲ್ಲ ಎಂದು ಹೇಳಲಾಗಿತ್ತು, ಆದರೆ ಈಗ ಗ್ಲೆನ್ ಮ್ಯಾಕ್ಸ್ವೆಲ್ ಅವರು ಐಪಿಎಲ್ ಗೆ ಆರ್ಸಿಬಿ ತಂಡ ಸೇರಿಕೊಳ್ಳುತ್ತಾರೆ ಎಂದು ಮಾಹಿತಿ ಸಿಕ್ಕಿದೆ. ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮ್ಯಾಕ್ಸ್ವೆಲ್ ಅವರು ತಮ್ಮ ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಹೋಗಿದ್ದರು. ಇದನ್ನು ಓದಿ..Cricket News: ತಾನು ವಿಶ್ವದ ನಂಬರ್ ಆಗಲು ಹಿಂದೆ ನಿಂತದ್ದು ಯಾರು ಎಂದು ತಿಳಿಸಿದ ಸಿರಾಜ್: ಸಂಪೂರ್ಣ ಶ್ರೇಯ ಕೊಟ್ಟಿದ್ದು ಯಾರಿಗೆ ಗೊತ್ತೆ??

ಅಲ್ಲಿ ರನ್ನಿಂಗ್ ಮಾಡುವಾಗ ಬಿದ್ದು, ಕಾಲು ಮುರಿದುಕೊಂಡಿದ್ದರು. ಆಗ ಅವರಿಗೆ 12 ವಾರಗಳ ವಿಶ್ರಾಂತಿ ಬೇಕು, ಕ್ರಿಕೆಟ್ ಇಂದ ದೂರವಿರಬೇಕು ಎಂದು ವೈದ್ಯರು ಸೂಚಿಸಿದ್ದರು. ಇದೀಗ ಮ್ಯಾಕ್ಸ್ವೆಲ್ ಅವರ ವಿಶ್ರಾಂತಿ ಸಮಯ ಮುಗಿದ್ದು, ಶೀಘ್ರದಲ್ಲೇ ನ್ಯಾಷನಲ್ ಟೀಮ್ ಅನ್ನು ಸೇರಿಕೊಳ್ಳಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಫೆಬ್ರವರಿ 9ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂನಲ್ಲಿ, ಕ್ವೀನ್ಸ್ ಲ್ಯಾಂಡ್ ವಿರುದ್ಧ ನಡೆಯಲಿರುವ ಶೆಫೀಲ್ಡ್ ಶೀಲ್ಡ್ (Sheffield Shield Trophy) ಟ್ರೋಫಿ ಟೂರ್ನಿಯಲ್ಲಿ ಮ್ಯಾಕ್ಸ್ವೆಲ್ ಅವರು ವಿಕ್ಟೊರಿಯಾ (Victoria) ತಂಡದ ಪರವಾಗಿ ಆಡಲಿದ್ದಾರೆ. ಇದರಿಂದ, ಗ್ಲೆನ್ ಮ್ಯಾಕ್ಸ್ವೆಲ್ ಅವರು ಐಪಿಎಲ್ ನಲ್ಲಿ ಆಡುವುದು ಕೂಡ ಖಚಿತವಾಗಿದ್ದು, ಆರ್ಸಿಬಿ ತಂಡದ ಬಲ ಹೆಚ್ಚಾಗಿದ್ದು, ವಿರಾಟ್ ಕೊಹ್ಲಿ (Virat Kohli), ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (Faf du Plessis) ಎಲ್ಲರೂ ಸಂತೋಷವಾಗಿದ್ದಾರೆ. ಇದನ್ನು ಓದಿ..Cricket News: ಬಹು ನಿರೀಕ್ಷಿತ 2023 ರ ವಿಶ್ವಕಪ್ ಗು ಮುನ್ನವೇ ಭಾರತದ ಮುಂದಿದೆ ದೊಡ್ಡ ಸವಾಲು: ಇದನ್ನು ನಿವಾರಿಸಿದರೆ ಮಾತ್ರ ಗೆಲುವು. ಯಾವುದು ಗೊತ್ತೇ??

Get real time updates directly on you device, subscribe now.