Post Office Jobs: 10 ನೇ ತರಗತಿ ಆಗಿದ್ದರೆ ಸಾಕು, ಪಡೆಯಿರಿ ಸರ್ಕಾರೀ ಕೆಲಸ: ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ??

Post Office Jobs: 10 ನೇ ತರಗತಿ ಆಗಿದ್ದರೆ ಸಾಕು, ಪಡೆಯಿರಿ ಸರ್ಕಾರೀ ಕೆಲಸ: ಬರೋಬ್ಬರಿ 40 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಹೇಗೆ ಅರ್ಜಿ ಸಲ್ಲಿಸುವುದು ಗೊತ್ತೇ??

Post Office Jobs: ಸರ್ಕಾರಿ ಕೆಲಸ ಪಡೆಯಬೇಕು ಎನ್ನುವ ಆಸೆ ಇರುವವರಿಗೆ ಭಾರತೀಯ ಅಂಚೆ ಇಲಾಖೆ ಒಂದು ಬೃಹತ್ ಅವಕಾಶ ನೀಡುತ್ತಿದೆ. ಇದೀಗ ಅಂಚೆ ಇಲಾಖೆಯು ಬರೋಬರಿ 40,889 ಹುದ್ದೆಗಳನ್ನು ಭರ್ತಿ ಮಾಡಲು ಆದೇಶ ನೀಡಿದೆ. 10ನೇ ತರಗತಿ ಪಾಸ್ ಆಗಿದ್ದರೆ ಸಾಕು, ನೀವು ಈ ಹುದ್ದೆಗಳಿಗೆ ಅಪ್ಲೈ ಮಾಡಬಹುದು. ಗ್ರಾಮೀಣ ಡಾಕ್ ಸೇವಕ್, ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಭರ್ತಿ ಮಾಡಲಾಗುತ್ತದೆ.

ಈ ಹುದ್ದೆಗಳಿಗೆ ನೀವು ಅಂಚೆ ಇಲಾಖೆಯ ಈ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, indiapostgdsonline.gov.in ಅರ್ಜಿ ಸಲ್ಲಿಸಬಹುದು. 2023ರ ವರ್ಷದ ಅಡಿಯಲ್ಲಿ ಶುರುವಾಗಿರುವ ಈ ನೇಮಕಾತಿಯಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜನವರಿ 27ರಿಂದ ಸಮಯ ಶುರುವಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ 16, ಫೆಬ್ರವರಿ 17 ರಿಂದ 19ರ ವರೆಗು ಅಪ್ಲಿಕೇಶನ್ ಅನ್ನು ಎಡಿಟ್ ಮಾಡುವ ಹಾಗಿದ್ದರೆ ಮಾಡಿಕೊಳ್ಳಬಹುದು. ಈ ಕೆಲಸಕ್ಕೆ ಅಪ್ಲಿಕೇಶನ್ ಹಾಕಲು, ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು, ಅದರಲ್ಲಿ ಇಂಗ್ಲಿಷ್ ಮತ್ತು ಗಣಿತವನ್ನು ಕಡ್ಡಾಯವಾಗಿ ಓದಿರಬೇಕು. ಇದರ ಜೊತೆಗೆ ಸ್ಥಳೀಯ ಭಾಷೆಯನ್ನು ಸಹ ಅಭ್ಯರ್ಥಿಗಳು ಎರಡನೇ ಹಂತದವರೆಗು ಓದಿರಬೇಕು. ಈ ಕೆಲಸಕ್ಕೆ ಬೇಕಿರುವ ವಯಸ್ಸಿನ ಮಿತಿ ನೋಡುವುದಾರೆ, 18 ರಿಂದ 40 ವರ್ಷಗಳ ಒಳಗೆ ಇರುವ ಯಾರಾದರೂ ಕೂಡ ಈ ಕೆಲಸಕ್ಕೆ ಅಪ್ಲೈ ಮಾಡಬಹುದು. ಇದನ್ನು ಓದಿ..Post Office: ಜಸ್ಟ್ 399 ರುಪಾಯಿಗೆ 10 ಲಕ್ಷದ ಅಪಘಾತ ವಿಮೆ ಪೋಸ್ಟ್ ಆಫೀಸ್ ನಲ್ಲಿ ಲಭ್ಯ: ಹೇಗೆ ಮಾಡಿಸಬೇಕು ಗೊತ್ತೇ??

ಅಷ್ಟೇ ಅಲ್ಲದೆ, ಸರ್ಕಾರ ನೀಡಿರುವ ನಿಯಮಗಳ ಪ್ರಕಾರ, ಮೀಸಲಾತಿ ವರ್ಗದವರಿಗೆ ಅಪ್ಲೈ ಮಾಡಲು ವಯಸ್ಸಿನ ಸಡಿಲಿಕೆ ಇರುತ್ತದೆ. ಹಾಗೆಯೇ ಈ ಕೆಲಸಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮೆರಿಟ್ ನ ಆಧಾರದ ಮೇಲೆ. 10ನೇ ತರಗತಿಯಲ್ಲಿ ಇವರು ಪಡೆದಿರುವ ಮಾರ್ಕ್ಸ್ ಗಳ ಆಧಾರದ ಮೇಲೆ ಮರಿಟ್ ಲಿಸ್ಟ್ ತಯಾರಿಸಿ, ಕೆಲಸಕ್ಕೆ ಆಯ್ಕೆ ಮಾಡುತ್ತಾರೆ. ಈ ಕೆಲಸಕ್ಕೆ ನೀವು ಅಜ್ಜಿ ಸಲ್ಲಿಸಲು ಸಾಧ್ಯವಾಗುವುದು ಆನ್ಲೈನ್ ಮೂಲಕ ಮಾತ್ರ. ಬೇರೆ ರೀತಿಯಲ್ಲಿ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಈ ಹುದ್ದೆಗಳ ಅಂತಿಮ ಕಿರುಪಟ್ಟಿ 2023ರ ಜೂನ್ 30ರಂದು ಬಿಡುಗಡೆ ಮಾಡುತ್ತಾರೆ, ಇಲ್ಲಿ ಆಂಧ್ರಪ್ರದೇಶದ ಅಂಚೆ ಕಚೇರಿಯಲ್ಲಿ 2480 ಹುದ್ದೆಗಳು, ಹಾಗೆಯೇ ತೆಲಂಗಾಣದಲ್ಲಿ 1266 ಹುದ್ದೆಗಳು ಖಾಲಿ ಇದೆ. ಹುದ್ದೆಯ ನಿಯಮಗಳು ಮತ್ತು ಅರ್ಜಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ https://indiapostgdsonline.gov.in/ .. ಇದನ್ನು ಓದಿ.. Post Office: ಜಸ್ಟ್ ನೀವು 5 ಸಾವಿರ ಹೂಡಿಕೆ ಮಾಡಿ, ಒಳ್ಳೆಯ ಆದಾಯ ಗಳಿಸುವುದು ಹೇಗೆ ಗೊತ್ತೇ? ಪೋಸ್ಟ್ ಆಫೀಸ್ ಕೊಡ್ತು ಭರ್ಜರಿ ಆಫರ್. ಏನು ಗೊತ್ತೇ?