Cricket News: ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ಮೈಕಲ್ ವಾನ್. ಯಾವ ತಂಡ ಗೆಲ್ಲಲಿದೆ ಅಂತೇ ಗೊತ್ತೇ??
Cricket News: ಈ ಬಾರಿಯ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವನ್ನು ಆಯ್ಕೆ ಮಾಡಿದ ಮೈಕಲ್ ವಾನ್. ಯಾವ ತಂಡ ಗೆಲ್ಲಲಿದೆ ಅಂತೇ ಗೊತ್ತೇ??
Cricket News: ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಮೈಕಲ್ ವಾನ್ ಅವರು ಭಾರತ ತಂಡವನ್ನು (Team India) ಆಗಾಗ ಕಾಲೆಳೆಯುತ್ತಾರೆ, ಆಗಾಗ ಅಂತಹ ಟ್ವೀಟ್ ಮಾಡುವ ಮೂಲಕ ಭಾರತ ಕ್ರಿಕೆಟ್ ಅಭಿಮಾನಿಗಳು ಕೋಪ ಗೊಳ್ಳುವ ಹಾಗೆ ಮಾಡುತ್ತಾರೆ. ಆದರೆ ಈಗ ಮೈಕಲ್ ವಾನ್ (Michael Vaughan) ಅವರು ಈ ವರ್ಷದ ಅಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ (ODI World Cup) ನಲ್ಲಿ ಗೆಲ್ಲಬಹುದಾದ ತಮ್ಮ ಮೆಚ್ಚಿನ ತಂಡ ಯಾವುದು ಎನ್ನುವ ಪ್ರಶ್ನೆಗೆ ಕೊಟ್ಟಿರುವ ಉತ್ತರ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸಂತೋಷ ಮಾತ್ರವಲ್ಲ ಆಶ್ಚರ್ಯವನ್ನು ತಂದಿದೆ.
ಮೈಕಲ್ ವಾನ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು ಟ್ವೀಟ್ ಮಾಡುತ್ತಲೇ ಇರುತ್ತಾರೆ. ಇದೀಗ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಪ್ರದರ್ಶನ ನೀಡಿ ಗೆದ್ದ ನಂತರ, ಟೀಮ್ ಇಂಡಿಯಾ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಕೊನೆಗೂ ಭಾರತ ತಂಡ ಓಡಿಐ ಪಂದ್ಯಗಳಲ್ಲಿ ಸ್ಫೋಟಕವಾಗಿ ಆಡಲು ಶುರು ಮಾಡಿದೆ. ಈ ಕಾರಣಕ್ಕಾಗಿ ಈ ವರ್ಷ ನಡೆಯಲಿರುವ ಓಡಿಐ ವರ್ಲ್ಡ್ ಕಪ್ ಟೂರ್ನಿಯಲ್ಲಿ ಗೆಲ್ಲಬಹುದಾದ ಎಲ್ಲರ ಮೆಚ್ಚಿನ ತಂಡದಲ್ಲಿ ಭಾರತ ತಂಡದ ಹೆಸರು ಕೇಳಿ ಬರುತ್ತಿದೆ..” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ಓದಿ.. Cricket News: ಬಿಸಿಸಿಐ ವಿಫಲತೆ ಮತ್ತೊಮ್ಮೆ ಬಯಲು: ಕೊಹ್ಲಿ ರವರನ್ನು ಕೈ ಬಿಟ್ಟ ಕೆಲವೇ ದಿನಗಳಲ್ಲಿ ಏನಾಗಿದೆ ಗೊತ್ತೇ?? ಕಿಂಗ್ ಯಾವತ್ತಿದ್ರೂ ಕಿಂಗ್ ಹೇ.
ಏಕದಿನ ಸರಣಿ ಪಂದ್ಯಗಳಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ಮುಂದುವರೆಸಿದೆ, ಇಂಡಿಯಾ ವರ್ಸಸ್ ಶ್ರೀಲಂಕಾ (India vs Srilanka) ಸರಣಿಯಲ್ಲಿ ಎದುರಾಳಿ ತಂಡವನ್ನು ವೈಟ್ ವಾಶ್ ಮಾಡಿ ಗೆಲುವು ಸಾಧಿಸಿತ್ತು. ನ್ಯೂಜಿಲೆಂಡ್ ವಿರುದ್ಧ (India vs New Zealand) ನಡೆಯುತ್ತಿರುವ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು, ವೈಟ್ ವಾಶ್ ಮಾಡಲು ಸನಿಹದಲ್ಲಿದೆ. ವಿಶೇಷವಾಗಿ ಆರಂಭಿಕ ಸ್ಥಾನದಲ್ಲಿರುವ ಬ್ಯಾಟ್ಸ್ಮನ್ ಗಳಾದ ರೋಹಿತ್ ಶರ್ಮಾ (Rohit Sharma) ಮತ್ತು ಶುಬ್ಮನ್ ಗಿಲ್ (Shubhman Gill) ಅತ್ಯುತ್ತಮ ಪ್ರದರ್ಶನ ಕೊಡುತ್ತಿದ್ದಾರೆ. ಈ ಮೂಲಕ ಭಾರತ ತಂಡ ಈ ಸಾರಿ ವಿಶ್ವಕಪ್ ಗೆಲ್ಲುವ ಭರವಸೆ ಮೂಡಿಸಿದೆ. ಇದನ್ನು ಓದಿ..Cricket News: ಶುಭ್ಮಂ ಅಲ್ಲ, ಕಿಶನ್ ಅಲ್ಲ, ಭಾರತಕ್ಕೆ ಮತ್ತೊಬ್ಬ ಕೊಹ್ಲಿ ಹಾಗೂ ರೋಹಿತ್ ಸಿಕ್ಕೇ ಬಿಟ್ಟನೇ?? ಮಾಜಿ ಕ್ರಿಕೆಟಿಗ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??