Cricket News: ಶುಭ್ಮಂ ಅಲ್ಲ, ಕಿಶನ್ ಅಲ್ಲ, ಭಾರತಕ್ಕೆ ಮತ್ತೊಬ್ಬ ಕೊಹ್ಲಿ ಹಾಗೂ ರೋಹಿತ್ ಸಿಕ್ಕೇ ಬಿಟ್ಟನೇ?? ಮಾಜಿ ಕ್ರಿಕೆಟಿಗ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News: ಶುಭ್ಮಂ ಅಲ್ಲ, ಕಿಶನ್ ಅಲ್ಲ, ಭಾರತಕ್ಕೆ ಮತ್ತೊಬ್ಬ ಕೊಹ್ಲಿ ಹಾಗೂ ರೋಹಿತ್ ಸಿಕ್ಕೇ ಬಿಟ್ಟನೇ?? ಮಾಜಿ ಕ್ರಿಕೆಟಿಗ ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

Cricket News: ಟೀಮ್ ಇಂಡಿಯಾ (Team India) ಈಗ ಒಳ್ಳೆಯ ಫಾರ್ಮ್ ನಲ್ಲಿ ಸಾಗುತ್ತಿದೆ, ಫ್ರಬ್ರವರಿ 9 ರಿಂದ ಇಂಡಿಯಾ ವರ್ಸಸ್ ಆಸ್ಟೇಲಿಯಾ (India vs Australia) ಸರಣಿ ಟೆಸ್ಟ್ ಪಂದ್ಯಗಳು, ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ (Border Gavaskar Trophy) ನಡೆಯಲಿದೆ. ಈ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡವನ್ನು ಚೇತನ್ ಶರ್ಮಾ ಅವರ ನೇತೃತ್ವದ ಆಯ್ಕೆ ಸಮಿತಿ ಈಗಾಗಲೇ ಆಯ್ಕೆ ಮಾಡಿದೆ. ಈ ತಂಡಕ್ಕೆ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಮತ್ತು ಇಶಾನ್ ಕಿಶನ್ (Ishan Kishan) ಅವರು ಆಯ್ಕೆಯಾಗಿದ್ದಾರೆ. ಇದರ ಬಗ್ಗೆ ಟೀಮ್ ಇಂಡಿಯಾದ ಹಿರಿಯ ಆಟಗಾರ ಅಜರುದ್ದೀನ್ ಅವರು ಸಂತೋಷದಿಂದ ಮಾತನಾಡಿದ್ದಾರೆ.

ಸೂರ್ಯಕುಮಾರ್ ಯಾದವ್ ಅವರು ಟಿ20 ಪಂದ್ಯಗಳಲ್ಲಿ ನಂಬರ್ 1 ಬ್ಯಾಟ್ಸ್ಮನ್ ಆಗಿ ತಮ್ಮನ್ನು ತಾವು ಸಾಬೀತುಪಡಿಸಿಕೊಂಡಿದ್ದಾರೆ, ಹಲವು ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನಗಳನ್ನು ನೀಡಿ, ಐಸಿಸಿ (ICC) ಬೆಸ್ಟ್ ಕ್ರಿಕೆಟರ್ಸ್ ಲಿಸ್ಟ್ ನಲ್ಲಿ ಟಾಪ್ ಸ್ಥಾನ ಅಲಂಕರಿಸಿಕೊಂಡಿದ್ದಾರೆ. ಈವರೆಗೂ 45 ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಹಾಗೂ 17 ಏಕದಿನ ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್ ಅವರು ಈವರೆಗೂ ಟೆಸ್ಟ್ ಪಂದ್ಯಗಳನ್ನು ಆಡಿರಲಿಲ್ಲ, ಇದು ಸೂರ್ಯಕುಮಾರ್ ಯಾದವ್ ಅವರ ಮೊದಲ ಟೆಸ್ಟ್ ಪಂದ್ಯ ಆಗಲಿದೆ, ಹಾಗೆಯೇ ರಿಷಬ್ ಪಂತ್ (Rishab Shetty) ಅವರ ಬದಲಿಗೆ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸೂರ್ಯಕುಮಾರ್ ಯಾದವ್ ಅವರು ಈ ಪಂದ್ಯಗಳನ್ನು ಆಡಿದರೆ, ತಾವು ಮೂರು ರೀತಿಯ ಪಂದ್ಯಗಳನ್ನು ಆಡಬಲ್ಲವರು ಎನ್ನುವುದನ್ನು ಸಾಬೀತು ಮಾಡುತ್ತಾರೆ.. ಇದನ್ನು ಓದಿ..Cricket News: ದ್ವಿಶತಕ ಗಳಿಸಿದ ಗಿಲ್, ಬೆಂಕಿ ಬೌಲಿಂಗ್ ಮಾಡಿದ ಸಿರಾಜ್: ಆದರೆ ಪಂದ್ಯ ಶ್ರೇಷ್ಠ ಪಡೆದದ್ದು ಯಾರು ಗೊತ್ತೇ? ಯಾರಿಗೆ ಯಾವ ಅವಾರ್ಡ್ ಗೊತ್ತೇ??

ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿರುವ ಬಗ್ಗೆ ಅಜರುದ್ದೀನ್ (Azaruddin) ಅವರು ಮಾತನಾಡಿ, ವಿರಾಟ್ ಕೊಹ್ಲಿ ರೋಹಿತ್ ಶರ್ಮಾ ಅವರಂತಹ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಎಂದು ಹೇಳಿದ್ದಾರೆ, “ಬ್ಯಾಟ್ಸ್ಮನ್ ಗಳು ಉತ್ತಮವಾದ ಫಾರ್ಮ್ ನಲ್ಲಿದ್ದಾಗ, ಅವರು ಬೆಂಚ್ ಗೆ ಸೀಮಿತ ಆಗುವ ಹಾಗೆ ಮಾಡಬಾರದು..ಸೂರ್ಯಕುಮಾರ್ ಯಾದವ್ ಅವರು ಮೂರು ರೀತಿಯ ಕ್ರಿಕೆಟ್ ನಲ್ಲಿ ಚೆನ್ನಾಗಿ ಆಡುವ ಸಮಾರ್ಥ್ಯ ಹೊಂದಿದ್ದಾರೆ. ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ (Rohit Sharma) ಅವರ ರೀತಿ ಇವರು ಕೂಡ ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡುತ್ತಾರೆ ಎನ್ನುವ ನಂಬಿಕೆ ನನಗೆ ಇದೆ. ಹಲವು ವರ್ಷಗಳ ನಂತರ ಟೀಮ್ ಇಂಡಿಯಾಗೆ ಇಂತಹ ಒಬ್ಬ ಬ್ಯಾಟ್ಸ್ಮನ್ ಸಿಕ್ಕಿದ್ದಾರೆ..” ಎಂದು ಅಜರುದ್ದೀನ್ ಅವರು ಹೇಳಿದ್ದಾರೆ.. ಇದನ್ನು ಓದಿ.. Cricket News: ಕೊನೆಗೂ ಸಿಕ್ತು ವಿಡಿಯೋ: ದ್ವಿಶತಕ ಗಳಿಸಿ ಕೊಹ್ಲಿ ದಾಖಲೆ ಪುಡಿ ಮಾಡಿದ ಗಿಲ್ ಔಟ್ ಆದಾಗ ಕೊಹ್ಲಿ, ಪಾಂಡ್ಯ ಮಾಡಿದ್ದೇನು ಗೊತ್ತೇ?? ತೆರೆ ಹಿಂದೆ ನಡೆದದ್ದು ಏನು ಗೊತ್ತೇ?