Cricket News: ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ವಿರುದ್ಧದ ಮೂರು ಪಂದ್ಯಗಳ ಸರಣಿ ಈಗ ನಡೆಯುತ್ತಿದೆ., ಇದರ ಮೊದಲ ಪಂದ್ಯ ಹೈದರಾಬಾದ್ ನಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿದರು. ಇದು ಉತ್ತಮವಾದ ನಿರ್ಧಾರವಾಗಿತ್ತು, ಟೀಮ್ ಇಂಡಿಯಾ 47 ಓವರ್ ಗಳಲ್ಲಿ 316/7 ರನ್ಸ್ ಗಳಿಸಿತು. ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನಪ್ ನಲ್ಲಿ ಶುಬ್ಮನ್ ಗಿಲ್ (Shubhman Gill) ಅತ್ಯುತ್ತಮ ಪ್ರದರ್ಶನ ನೀಡಿದರು, 149 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಇವರ ಜೊತೆಗೆ 5ನೇ ವಿಕೆಟ್ ನಲ್ಲಿ ಬಂದ ಟೀಮ್ ಇಂಡಿಯಾದ ವೈಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ (Hardik Pandya) ಉತ್ತಮವಾದ ಜೊತೆಯಾಟದಲ್ಲಿ 74 ರನ್ಸ್ ಗಳಿಸಿದರು.
ಹಾರ್ದಿಕ್ ಪಾಂಡ್ಯ ಅವರು 37 ಎಸೆತಗಳಲ್ಲಿ 28 ರನ್ಸ್ ಭಾರಿಸಿದರು, 38ನೇ ಎಸೆತದಲ್ಲಿ ಡರೈಲ್ ಮಿಶೆಲ್ (Daryl Mitchell) ಅವರು ಸ್ಟಂಪ್ ಲೈನ್ ಗೆ ಎಸೆದರು, ಈ ಬಾಲ್ ಬ್ಯಾಟ್ ಗೆ ತಗುಲಿ, ನಂತರ ವಿಕೆಟ್ ಗೆ ತಗುಲಿ ಬಳಿಕ ವಿಕೆಟ್ ಕೀಪರ್ ನ ಕೈಗೆ ಹೋಯಿತು. 3ನೇ ಅಂಪೈರ್ ಇದಕ್ಕೆ ಔಟ್ ನೀಡಿದರು. ಆದರೆ ಹಾರ್ದಿಕ್ ಪಾಂಡ್ಯ ಅವರ ಪತ್ನಿ ನತಾಶ (Natasha) ಅವರು ಆ ಎಸೆತದ ವಿಡಿಯೋದ ಸ್ಕ್ರೀನ್ ಶಾಟ್ ಗಳನ್ನು ಶೇರ್ ಮಾಡಿ, “ಬ್ಯಾಟ್ ಗೆ ಬಾಲ್ ತಾಗಿಲ್ಲ, ಇದು ಹೇಗೆ ಔಟ್ ಆಗುತ್ತದೆ..?” ಎಂದು ಪ್ರಶ್ನೆ ಮಾಡಿದ್ದಾರೆ. ನತಾಶ ಅವರ ಈ ಮಾತಿಗೆ ಟೀಮ್ ಇಂಡಿಯಾದ ಹೀರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಸಹ ಸಪೋರ್ಟ್ ಮಾಡಿದ್ದಾರೆ . ಇದನ್ನು ಓದಿ.. Cricket News: ದ್ವಿಶತಕ ಗಳಿಸಿದ ಗಿಲ್, ಬೆಂಕಿ ಬೌಲಿಂಗ್ ಮಾಡಿದ ಸಿರಾಜ್: ಆದರೆ ಪಂದ್ಯ ಶ್ರೇಷ್ಠ ಪಡೆದದ್ದು ಯಾರು ಗೊತ್ತೇ? ಯಾರಿಗೆ ಯಾವ ಅವಾರ್ಡ್ ಗೊತ್ತೇ??

“Split Screen, Screenshots ಗಳನ್ನ ಮರೆತುಬಿಡಿ. ಹಾರ್ದಿಕ್ ಪಾಂಡ್ಯ ನಾಟ್ ಔಟ್ ಎಂದು ಶುಭಮನ್ ಗಿಲ್ ಅವರ ಕಟ್ ಶಾರ್ಟ್ ಪ್ರೂವ್ ಮಾಡಿತು..” ಎಂದು ಅಶ್ವಿನ್ (Ravichandran Ashwin) ಅವರು ಟ್ವೀಟ್ ಮಾಡಿದ್ದಾರೆ. ಇನ್ನು ಕ್ರಿಕೆಟ್ ಅಭಿಮಾನಿಗಳು ಕೂಡ ನತಾಶ ಅವರ ಪರವಾಗಿ ಮತ್ತು ಹಾರ್ದಿಕ್ ಪಾಂಡ್ಯ ಅವರ ಪರವಾಗಿ ನಿಂತಿದ್ದಾರೆ. ಹಾರ್ದಿಕ್ ಪಾಂಡ್ಯ ಅವರು ಔಟ್ ಎಂದು ತೀರ್ಪು ಕೊಟ್ಟ ಆ ಮೂರನೇ ಅಂಪೈರ್ ಮೇಲೆ ಆಕ್ಷನ್ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಇದನ್ನು ಓದಿ..Cricket News: ರಿಷಬ್ ಪಂತ್ ಆರೋಗ್ಯದ ಕುರಿತು ಕೊನೆಗೂ ಸಿಕ್ತು ಮಾಹಿತಿ: ಅದೆಷ್ಟು ತಿಂಗಳು ಆಡಲು ಆಗಲ್ಲ ಗೊತ್ತೆ?ಯಾವ ಟೂರ್ನಿ ಮಿಸ್ ಮಾಡಲಿದ್ದಾರೆ ಗೊತ್ತೇ?
Natasa Stankovic reacts to Hardik Pandya’s dismissal pic.twitter.com/r3OUMjLIfd
— Sports Lover (@vinay_cricket) January 18, 2023