Cricket News: ದ್ವಿಶತಕ ಗಳಿಸಿದ ಗಿಲ್, ಬೆಂಕಿ ಬೌಲಿಂಗ್ ಮಾಡಿದ ಸಿರಾಜ್: ಆದರೆ ಪಂದ್ಯ ಶ್ರೇಷ್ಠ ಪಡೆದದ್ದು ಯಾರು ಗೊತ್ತೇ? ಯಾರಿಗೆ ಯಾವ ಅವಾರ್ಡ್ ಗೊತ್ತೇ??
Cricket News: ದ್ವಿಶತಕ ಗಳಿಸಿದ ಗಿಲ್, ಬೆಂಕಿ ಬೌಲಿಂಗ್ ಮಾಡಿದ ಸಿರಾಜ್: ಆದರೆ ಪಂದ್ಯ ಶ್ರೇಷ್ಠ ಪಡೆದದ್ದು ಯಾರು ಗೊತ್ತೇ? ಯಾರಿಗೆ ಯಾವ ಅವಾರ್ಡ್ ಗೊತ್ತೇ??
Cricket News: ಇಂಡಿಯಾ ವರ್ಸಸ್ ನ್ಯೂಜಿಲೆಂಡ್ (India vs New Zealand) ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾದಲ್ಲಿ (Team India) ಯುವ ಆಟಗಾರ ಶುಬ್ಮನ್ ಗಿಲ್ (Shubhman Gill) ಅವರು ಡಬಲ್ ಸೆಂಚುರಿ ಭಾರಿಸಿ, 208 ರನ್ಸ್ ಗಳಿಸುವ ಮೂಲಕ, ಭಾರತ ತಂಡದ ಸ್ಕೋರ್ 349 ಸ್ಕೋರ್ ವರೆಗು ಹೋಗಲು ಸಹಾಯ ಮಾಡಿದರು. ಇನ್ನು ಹೈದರಾಬಾದ್ ನವರೆ ಆದ ಮೊಹಮ್ಮದ್ ಸಿರಾಜ್ ಅವರು ಸಹ ಅತ್ಯುತ್ತಮವಾಗಿ ಬೌಲಿಂಗ್ ಮಾಡಿ, ಡೆವೋನ್ ಕಾನ್ವೆ (Devon Conway) ಅವರಂತಹ ದೊಡ್ಡ ವಿಕೆಟ್ ಪಡೆದರು.
ಟೀಮ್ ಇಂಡಿಯಾ ನೀಡಿದ ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ 337 ರನ್ಸ್ ಗಳಿಸಲು ಅಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾ ಗೆದ್ದು ಸಂತೋಷದಲ್ಲಿದ್ದು, ಈ ಪಂದ್ಯದಲ್ಲಿ ಅಂಬುಜಾ ಸ್ಟ್ರಾಂಗೆಸ್ಟ್ ಪ್ಲೇಯರ್ ಆಫ್ ದಿ ಮ್ಯಾಚ್ ಮತ್ತು ಗೇಮ್ ಚೇಂಜರ್ ಆಫ್ ದಿ ಮ್ಯಾಚ್ ಅವಾರ್ಡ್ ಬಂದಿದ್ದು ನ್ಯೂಜಿಲೆಂಡ್ ಆಟಗಾರ ಮೈಕಲ್ ಬ್ರೇಸ್ವೆಲ್ (Michael Bracewell) ಅವರಿಗೆ, ನ್ಯೂಜಿಲೆಂಡ್ ತಂಡದ ಪರವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಇವರು, 78 ಎಸೆತಗಳಲ್ಲಿ ಬರೋಬ್ಬರಿ 149 ರನ್ಸ್ ಗಳಿಸಿದರು. ಹುಂಡೈ ಫೈವ್ ಪವರ್ ಪ್ಲೇಯರ್ ಅವಾರ್ಡ್ ಮೊಹಮ್ಮದ್ ಸಿರಾಜ್ (Mohammad Siraj) ಅವರಿಗೆ ಸಿಕ್ಕಿತು. ಈ ಪಂದ್ಯದಲ್ಲಿ ಸಿರಾಜ್ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ .ಪ್ಲೇಯರ್ ಆಫ್ ದಿ ಮ್ಯಾಚ್ ಅವಾರ್ಡ್ ಶುಭಮನ್ ಗಿಲ್ ಅವರಿಗೆ ಸಿಕ್ಕಿದೆ, ಇವರು 149 ಎಸೆತಗಳಲ್ಲಿ 208 ರನ್ಸ್ ಗಳಿಸಿದರು. ಇದನ್ನು ಓದಿ.. Cricket News: ಇವರಿಬ್ಬರು ಭಾರತಕ್ಕೆ ಕಾಯಂ ಆರಂಭಿಕ ಆಟಗಾರರಾದರೆ ಗೆಲುವು ನಮ್ಮದೇ ಎಂದ ಗಂಭೀರ್: ರೋಹಿತ್, ರಾಹುಲ್, ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?
ಏಕದಿನ ಪಂದ್ಯಗಳಲ್ಲಿ ಅತಿವೇಗವಾಗಿ 1000 ರನ್ಸ್ ಗಳಿಸಿದ ಭಾರತದ ಆಟಗಾರ ಆಗಿದ್ದಾರೆ ಶುಬ್ಮನ್ ಗಿಲ್. ಈ ಅವಾರ್ಡ್ ಬಂದ ನಂತರ ಗಿಲ್ ಅವರು ಹೇಳಿದ್ದೇನು ಗೊತ್ತಾ? “ಕ್ರೀಸ್ ಗೆ ಹೋಗಿ ನಾನು ಅಂದುಕೊಂಡಿದ್ದನ್ನು ಮಾಡಬೇಕು ಎಂದು ಕಾಯುತ್ತಿದ್ದೆ. ವಿಕೆಟ್ಸ್ ಗಳು ಬೀಳುತ್ತಿದ್ದಾಗ, ತಂಡವನ್ನು ಉತ್ತಮ ರೀತಿಯಲ್ಲಿ ತೆಗೆದುಕೊಂಡು ಹೋಗಬೇಕು ಎಂದುಕೊಂಡಿದ್ದೇ, ಕೊನೆಗೆ ನಾನು ಅದನ್ನು ಮಾಡಿದೆ ಎಂದು ಸಂತೋಷವಿದೆ. ಕೆಲವೊಮ್ಮೆ ಬೌಲರ್ ಗಳು ಶೈನ್ ಆಗುವಾಗ, ಅವರ ಮೇಲೆ ನೀವು ಪ್ರೆಶರ್ ಹಾಕಬೇಕಾಗುತ್ತದೆ. ನೀವು ಯಾವುದನ್ನು ಮಾಡಬೇಕು ಎಂದುಕೊಂಡಿರುತ್ತಿರೋ, ಅದಕ್ಕೆ ಅವಕಾಶಗಳು ಚೆನ್ನಾಗಿ ಸಿಗುವಾಗ, ಬಹಳ ಸಂತೋಷ ಆಗುತ್ತದೆ. ಇದು ಮನಸ್ಸಿಗೆ ತೃಪ್ತಿ ಕೊಡುತ್ತದೆ. ನಾನು ಅಂದುಕೊಂಡಿದ್ದಕ್ಕಿಂತ ಇನ್ನು ಹತ್ತಿರಕ್ಕೆ ಗೇಮ್ ಹೋಗಿತ್ತು…” ಎಂದು ಹೇಳಿದ್ದಾರೆ ಗಿಲ್. ಇದನ್ನು ಓದಿ.. Cricket News: ರಿಷಬ್ ಪಂತ್ ಆರೋಗ್ಯದ ಕುರಿತು ಕೊನೆಗೂ ಸಿಕ್ತು ಮಾಹಿತಿ: ಅದೆಷ್ಟು ತಿಂಗಳು ಆಡಲು ಆಗಲ್ಲ ಗೊತ್ತೆ?ಯಾವ ಟೂರ್ನಿ ಮಿಸ್ ಮಾಡಲಿದ್ದಾರೆ ಗೊತ್ತೇ?