Business Ideas: ಹೆಚ್ಚಿನ ಬಂಡವಾಳವಿಲ್ಲದೆ ಹಳ್ಳಿಯಲ್ಲಿಯೂ ಕೂಡ ನಗರ ಪ್ರದೇಶದಂತೆ ದುಡಿಯುವ ಉದ್ಯಮ ಯಾವುದು ಗೊತ್ತೇ? ಪ್ರಾರಂಭಿಸಿ, ಸ್ವಂತ ಬಾಸ್ ಆಗಿ.

Business Ideas: ಹೆಚ್ಚಿನ ಬಂಡವಾಳವಿಲ್ಲದೆ ಹಳ್ಳಿಯಲ್ಲಿಯೂ ಕೂಡ ನಗರ ಪ್ರದೇಶದಂತೆ ದುಡಿಯುವ ಉದ್ಯಮ ಯಾವುದು ಗೊತ್ತೇ? ಪ್ರಾರಂಭಿಸಿ, ಸ್ವಂತ ಬಾಸ್ ಆಗಿ.

Business Ideas: ನೀವು ಒಳ್ಳೆಯ ಬ್ಯುಸಿನೆಸ್ ಶುರು ಮಾಡಿ, ಕಡಿಮೆ ಸಮಯದಲ್ಲಿ ಹೆಚ್ಚಿನ ಲಾಭ ಪಡೆಯಬೇಕು ಎಂದು ಯೋಚನೆ ಮಾಡುತ್ತಿದ್ದೀರಾ? ಹಾಗಿದ್ದರೆ ಇಂದು ನಾವು ನಿಮಗೆ ಒಂದು ಬ್ಯುಸಿನೆಸ್ ಐಡಿಯಾ ತಿಳಿಸುತ್ತೇವೆ, ಇದು ಯಾವಾಗಲೂ ಬೇಡಿಕೆಯಲ್ಲಿರುವ ಬ್ಯುಸಿನೆಸ್ ಆಗಿದೆ. ಇಂದು ನಾವು ನಿಮಗೆ ಹೇಳಲು ಹೊರಟಿರುವುದು ಮೊಬೈಲ್ ಮತ್ತು ಲ್ಯಾಪ್ ಟಾಪ್ ರಿಪೇರಿ ಬ್ಯುಸಿನೆಸ್ ಬಗ್ಗೆ. ಈಗ ತಂತ್ರಜ್ಞಾನ ಹೆಚ್ಚಾಗಿರುವ ಕಾರಣ, ಪ್ರತಿ ಮನೆಗೂ ಲ್ಯಾಪ್ ಟಾಪ್ ಗಳು ಬಂದಿವೆ, ಮೊದಲೆಲ್ಲಾ ಆಫೀಸ್ ಗಳಲ್ಲಿ ಮಾತ್ರ ಲ್ಯಾಪ್ ಟಾಪ್ ಗಳನ್ನು ಕಾಣಬಹುದಿತ್ತು. ಆದರೆ ಈಗ ಲ್ಯಾಪ್ ಟಾಪ್ ಮತ್ತು ಮೊಬೈಲ್ ನ ಬಳಕೆ ಹೆಚ್ಚಾಗಿರುವ ಕಾರಣ, ಅವುಗಳ ರಿಪೇರಿಗೂ ಬೇಡಿಕೆ ಹೆಚ್ಚಿದೆ. ಈ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು, ನೀವು ಇದರ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳಬೇಕು.

ಅದಕ್ಕಾಗಿ ನೀವು ಮೊಬೈಲ್ ಮತ್ತು ಲ್ಯಾಪ್ ಟಾಪ್ ರಿಪೇರಿ ಕೋರ್ಸ್ ಮಾಡಬೇಕು, ಈ ಕೋರ್ಸ್ ಹಲವು ಇನ್ಸ್ಟಿಟ್ಯೂಟ್ ಗಳಲ್ಲಿ ಹೇಳಿಕೊಡುತ್ತಾರೆ, ಅಷ್ಟೇ ಅಲ್ಲದೆ ಆನ್ಲೈನ್ ಮೂಲಕ ಸಹ ಕಲಿಯಬಹುದು, ಆದರೆ ಇನ್ಸ್ಟಿಟ್ಯೂಟ್ ಗೆ ಹೋಗಿ ಕಲಿಯುವುದು ಉತ್ತಮ. ಇದನ್ನು ಕಲಿತ ಬಳಿಕ, ಅನುಭವಕ್ಕಾಗಿ ಬೇರೆ ಅಂಗಡಿಗಳಲ್ಲಿ ಸ್ವಲ್ಪ ಕೆಲಸ ಮಾಡುವುದು ಒಳ್ಳೆಯದು. ಇಲ್ಲಿ ನೀವು ಪೂರ್ತಿಯಾಗಿ ಕೆಲಸ ಕಲಿತ ಬಳಿಕ, ಸ್ವಂತವಾಗಿ ಬ್ಯುಸಿನೆಸ್ ಶುರು ಮಾಡಿ. ನಿಮ್ಮ ಅಂಗಡಿಯು ಜನರು ಸುಲಭವಾಗಿ ಬರಬಹುದಾದಂಥ ಸ್ಥಳದಲ್ಲಿ ಇರಬೇಕು. ಆ ಜಾಗದಲ್ಲಿ ಲ್ಯಾಪ್ ಟಾಪ್ ಮತ್ತು ಮೊಬೈಲ್ ರಿಪೇರಿ ಮಾಡುವ ಬೇರೆ ಅಂಗಡಿಗಳು ಇರಬಾರದು. ನಿಮ್ಮ ಅಂಗಡಿಗೆ ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ಪಡೆಯಿರಿ, ಆಗ ಹೆಚ್ಚಿನ ಜನರಿಗೆ ಗೊತ್ತಾಗುತ್ತದೆ. ಇದರಿಂದ ಕಸ್ಟಮರ್ ಗಳು ಹೆಚ್ಚಾಗುತ್ತಾರೆ. ಇದನ್ನು ಓದಿ..Money Business: ಕೇವಲ 50 ಸಾವಿರ ಹೂಡಿಕೆ ಮಾಡಿದರೆ ಲಕ್ಷ ಲಕ್ಷ ಗಳಿಸುವ ಉತ್ತಮ ಬ್ಯುಸಿನೆಸ್ ಐಡಿಯಾ ಯಾವುದು ಗೊತ್ತೇ??

ಈ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲಿಗೆ ನಿಮ್ಮ ಬಳಿ ಇದಕ್ಕೆ ಬೇಕಾದ ಸಲಕರಣೆಗಳು ಇರಬೇಕು. ಅವುಗಳ ಪಟ್ಟಿ ಮಾಡಿಕೊಂಡು, ನಂತರ ಎಲ್ಲವನ್ನು ಖರೀದಿ ಮಾಡಿ. ರಿಪೇರಿ ಮಾಡಿದ ನಂತರ ಸಾಮಾನ್ಯವಾಗಿ ಸ್ಪೀಕರ್, ಸ್ಕ್ರೀನ್ ಇವುಗಳನ್ನು ಬದಲಾಯಿಸಬೇಕಾಗಬಹುದು, ಇವುಗಳನ್ನು ಅಗತ್ಯವಿದ್ದಾಗ ಆರ್ಡರ್ ಮಾಡಿ. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ 2 ರಿಂದ 4 ಲಕ್ಷ ಬೇಕಾಗಬಹುದು. ಶುರುವಿನಲ್ಲಿ ಕಡಿಮೆ ಬೆಲೆ ಮತ್ತು ಕಡಿಮೆ ವಸ್ತುಗಳ ಮೂಲಕ ಶುರು ಮಾಡಿ, ಬಳಿಕ ಬ್ಯುಸಿನೆಸ್ ಬೆಳೆದ ಹಾಗೆ ಎಲ್ಲವೂ ಹೆಚ್ಚಾಗುತ್ತದೆ. ನಿಮ್ಮ ಬ್ಯುಸಿನೆಸ್ ಬೆಳೆದ ಹಾಗೆ, ರಿಪೇರಿ ಜೊತೆಗೆ ಲ್ಯಾಪ್ ಟಾಪ್ ಮತ್ತು ಮೊಬೈಲ್ ಗಳ ಮಾರಾಟ ಕೂಡ ಶುರು ಮಾಡಬಹುದು. ಈಗ ಲ್ಯಾಪ್ ಟಾಪ್ ಮೊಬೈಲ್ ಮತ್ತು ರಿಪೇರಿಯ ಖರ್ಚು ಹೆಚ್ಚಾಗಿರುವುದರಿಂದ ನಿಮಗೆ ಒಳ್ಳೆಯ ಆದಾಯ ಸಿಗುತ್ತದೆ. ಶುರುವಿನಲ್ಲೇ ಈ ಬ್ಯುಸಿನೆಸ್ ಮೂಲಕ ನೀವು ದಿನಕ್ಕೆ 1000 ರೂಪಾಯಿ ಆದಾಯ ಗಳಿಸಬಹುದು. ನಿಮ್ಮ ಬ್ಯುಸಿನೆಸ್ ಕ್ಲಿಕ್ ಆದ ಹಾಗೆ, ಆದಾಯ ಹೆಚ್ಚಾಗುತ್ತದೆ. ಇದನ್ನು ಓದಿ.. Business Plans: ಬಿಸಿನೆಸ್ ಮಾಡಬೇಕು ಆದರೆ ದುಡ್ಡಿಲ್ಲವೇ? ಈ ಬಿಸಿನೆಸ್ ಮಾಡಲು ದುಡ್ಡು ಬೇಡವೇ ಬೇಡ, ಸುಲಭವಾಗಲಿ ಲಕ್ಷ ಲಕ್ಷ ಗಳುಸುವುದು ಹೇಗೆ ಗೊತ್ತೇ?