Cricket News: ಇವರಿಬ್ಬರು ಭಾರತಕ್ಕೆ ಕಾಯಂ ಆರಂಭಿಕ ಆಟಗಾರರಾದರೆ ಗೆಲುವು ನಮ್ಮದೇ ಎಂದ ಗಂಭೀರ್: ರೋಹಿತ್, ರಾಹುಲ್, ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Cricket News: ಇವರಿಬ್ಬರು ಭಾರತಕ್ಕೆ ಕಾಯಂ ಆರಂಭಿಕ ಆಟಗಾರರಾದರೆ ಗೆಲುವು ನಮ್ಮದೇ ಎಂದ ಗಂಭೀರ್: ರೋಹಿತ್, ರಾಹುಲ್, ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Cricket News: 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ (T20 World Cup) ಸೆಮಿ ಫೈನಲ್ಸ್ ವರೆಗು ಹೋಗಿ ಸೋತ ನಂತರ 2024ರಲ್ಲಿ ನಡೆಯುವ ಟಿ20 ವಿಶ್ವಕಪ್ ಅನ್ನು ಗೆಲ್ಲಲೇಬೇಕು ಎಂದು ಬಿಸಿಸಿಐ (BCCI) ನಿರ್ಧಾರ ಮಾಡಿದ್ದು, ಅದಕ್ಕಾಗಿ ಈಗಿನಿಂದಲೇ ಟೀಮ್ ಇಂಡಿಯಾವನ್ನು (Team India) ಸಜ್ಜುಗೊಳಿಸಬೇಕು, ಪ್ರಭಾವಿ ಯುವ ಆಟಗಾರರ ತಂಡ ಕಟ್ಟಬೇಕು ಎಂದು ಬಿಸಿಸಿಐ ಸಜ್ಜಾಗಿದೆ. ಹಾಗಾಗಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ (Rohit Sharma) ಮತ್ತು ಕೆ.ಎಲ್.ರಾಹುಲ್ (K L Rahul) ಅವರಿಗೆ ಟೀಮ್ ಇಂಡಿಯಾ ಇಂದ ಪೂರ್ತಿಯಾಗಿ ನಿವೃತ್ತಿ ಕೊಡಬೇಕು ಎಂದು ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಹಾಗಾಗಿ ಮುಂದಿನ ಟಿ20 ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡುತ್ತಿಲ್ಲ, ಈ. ಕಾರಣಕ್ಕೆ ಟಿ20 ವಿಶ್ವಕಪ್ ಗೆ ಹಾಗೂ ಇನ್ನುಮುಂದೆ ಟೀಮ್ ಇಂಡಿಯಾದ ಓಪನಿಂಗ್ ಬ್ಯಾಟ್ಸ್ಮನ್ ಗಳಾಗಿ ಪೃಥ್ವಿ ಶಾ (Prithvi Shaw) ಮತ್ತು ಇಶಾನ್ ಕಿಶನ್ (Ishan Kishan) ಕಣಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಪೃಥ್ವಿ ಶಾ ಅವರು ಜನವರಿ 27ರಿಂದ ನಡೆಯುವ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. ಪೃಥ್ವಿ ಧ ಅವರು 5 ಟೆಸ್ಟ್, 6 ಓಡಿಐ ಮತ್ತು 1 ಟಿ20 ಪಂದ್ಯವನ್ನು ಆಡಿದ್ದಾರೆ, 2021ರ ಜುಲೈ ಬಳಿಕ ಇವರು ಟೀಮ್ ಇಂಡಿಯಾ ಪರವಾಗಿ ಆಡಿಲ್ಲ. ಸೈಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಮತ್ತು ರಣಜಿ ಟ್ರೋಫಿಯಲ್ಲಿ (Ranji Trophy) ಅತಿಹೆಚ್ಚು ರನ್ಸ್ ಗಳಿಸಿ, ತ್ರಿಶತಕ ಭಾರಿಸಿ ದಾಖಲೆ ಬರೆದರು. ಈ ಮೂಲಕ ಮತ್ತೊಮ್ಮೆ ನ್ಯಾಷನಲ್ ಟೀಮ್ ಗೆ ಎಂಟ್ರಿಯಾಗಿದ್ದಾರೆ ಈ ಯುವ ಆಟಗಾರ ಈ 23 ವರ್ಷದ ಯುವ ಆಟಗಾರ. ಇದನ್ನು ಓದಿ..Cricket News: 2023 ರಲ್ಲಿ ನಡೆಯುವ ವಿಶ್ವಕಪ್ ಗೆ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ ಗಂಭೀರ್: ಜಡೇಜಾ ಚಾಹಲ್ ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

ಇದೀಗ ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ಪೃಥ್ವಿ ಶಾ ಅವರ ಬಗ್ಗೆ ಮಾತನಾಡಿದ್ದಾರೆ, “ಟೀಮ್ ಇಂಡಿಯಾದಲ್ಲಿ ಪೃಥ್ವಿ ಶಾ ಅವರು ಇರಬೇಕಿತ್ತು, ಅವರಿಗೆ ಅವಕಾಶ ನೀಡಿದಾಗಲೆಲ್ಲಾ ಓಪನರ್ ಆಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟಿ20 ಪಂದ್ಯಗಳಿಗೆ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಸೂಕ್ತ ಆಟಗಾರರು, ಈಗ ಪೃಥ್ವಿ ಶಾ ಅವರನ್ನು ಆಕೆ ಮಾಡಲಾಗಿದೆ, ಅವರನ್ನು ಹೀಗೆಯೇ ಮುಂದುವರೆಸಿ. ಒಂದೇ ಒಂದು ಟೂರ್ನಿ ಇಂದ ಅವರ ಆಟದ ಬಗ್ಗೆ ನಿರ್ಧಾರ ಮಾಡಬೇಡಿ. ಅವರೊಬ್ಬ ಆಕ್ರಮಣಕಾರಿ ಹಾಗೂ ಮ್ಯಾಚ್ ವಿನ್ನಿಂಗ್ ಬ್ಯಾಟ್ಸ್ಮನ್, ಇನ್ನು ಚಿಕ್ಕ ವಯಸ್ಸು. ಹಾಗಾಗಿ ಅವರನ್ನು ಪ್ಲೇಯಿಂಗ್ 11 ಗೆ ಆಯ್ಕೆ ಮಾಡಿ, ಹೆಚ್ಚು ಇನ್ನಿಂಗ್ಸ್ ಆಡುವ ಅವಕಾಶ ನೀಡಿ..” ಎಂದು ಗೌತಮ್ ಗಂಭೀರ್ ಅವರು ಹೇಳಿದ್ದಾರೆ. ಹಾಗೆಯೇ ಶುಬ್ಮನ್ ಗಿಲ್ ಅವರು ಟೆಸ್ಟ್ ಮತ್ತು ಓಡಿಐ ಪಂದ್ಯಗಳ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದ್ದಾರೆ. ಇದನ್ನು ಓದಿ.. Cricket News: ಪದೇ ಪದೇ ಗಾಯದ ಕಾರಣ ನೀಡಿ ತಂಡದಿಂದ ಹೊರಗುಳಿಯುತ್ತಿರುವ ಜಡೇಜಾಗೆ ಷರತ್ತು ವಿಧಿಸಿದ ಬಿಸಿಸಿಐ: ಈ ಕೆಲಸ ಮಾಡಿದರೆ ಮಾತ್ರ ಸ್ಥಾನ, ಇಲ್ಲವೇ??