ಕರುನಾಡ ವಾಣಿ
ಇದು ನಿಮ್ಮ ಧ್ವನಿ

Cricket News: ರಿಷಬ್ ಪಂತ್ ಆರೋಗ್ಯದ ಕುರಿತು ಕೊನೆಗೂ ಸಿಕ್ತು ಮಾಹಿತಿ: ಅದೆಷ್ಟು ತಿಂಗಳು ಆಡಲು ಆಗಲ್ಲ ಗೊತ್ತೆ?ಯಾವ ಟೂರ್ನಿ ಮಿಸ್ ಮಾಡಲಿದ್ದಾರೆ ಗೊತ್ತೇ?

218

Get real time updates directly on you device, subscribe now.

Cricket News: ಟೀಮ್ ಇಂಡಿಯಾದ (Team India) ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಷಬ್ ಪಂತ್ (Rishabh Pant) ಅವರು ಕಳೆದ ತಿಂಗಳು ಅಪಘಾತಕ್ಕೆ ತುತ್ತಾಗಿದ್ದಾರೆ, ದೆಹಲಿಯಿಂದ ತಮ್ಮ ಊರಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿದ್ದು, ಪಂತ್ ಅವರಿಗೆ ಅಂದು ಇಂಟರ್ನಲ್ ಆರ್ಗನ್ ಗಳಿಗೆ ತೊಂದರೆ ಆಗಿಲ್ಲದೆ ಇದ್ದರು ಸಹ ಅವರ ಮಂಡಿಗೆ ಇಂಜುರಿ ಆಗಿದೆ. ಪ್ರಸ್ತುತ ಪಂತ್ ಅವರು ಮುಂಬೈನ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ (Kokilaben Dheerubai Ambani Hospital) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಂತ್ ಅವರು ಆದಷ್ಟು ಬೇಗ ಚೇತರಿಸಿಕೊಂಡು ಬರಲಿ ಎನ್ನುವುದು ಎಲ್ಲರ ಆಸೆಯಾಗಿತ್ತು, ಇಷ್ಟು ದಿವಸ ಸಿಕ್ಕಿದ್ದ ಮಾಹಿತಿಯ ಅನುಸಾರ ರಿಷಬ್ ಪಂತ್ ಅವರು 6 ತಿಂಗಳಲ್ಲಿ ಚೇತರಿಸಿಕೊಳ್ಳುತ್ತಾರೆ ಎನ್ನಲಾಗಿತ್ತು..

ಆದರೆ ಈಗ ಪಂತ್ ಅವರ ಆರೋಗ್ಯದ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿದ್ದು, ಪಂತ್ ಅವರ ಇಂಜುರಿ ಇನ್ನು ಕಡಿಮೆ ಆಗಿಲ್ಲ, ಅದು ಸರಿಹೋಗಲು ಇನ್ನು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಪಂತ್ ಅವರಿಗೆ ರೆಸ್ಟ್ ಮತ್ತು ಚಿಕಿತ್ಸೆಯ ಅವಶ್ಯಕತೆ ಇದ್ದು, ಪಂತ್ ಅವರು ರಿಕವರಿ ಆಗಲು ಇನ್ನು 18 ತಿಂಗಳುಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ, ಮುಂಬೈನಲ್ಲಿ ಪಂತ್ ಅವರಿಗೆ ಸರ್ಜರಿ ಕೂಡ ಮಾಡಿಸಲಾಗಿದೆ.. ಅವರ ಇಂಜುರಿ ಇನ್ನು ಸೂಕ್ಷ್ಮವಾಗಿರುವ ಕಾರಣ, ಹೆಚ್ಚು ಗಮನ ವಹಿಸಬೇಕಾದ ಅವಶ್ಯಕತೆ ಇದೆಯಂತೆ. 2023ರ ಇಡೀ ವರ್ಷವನ್ನು ಪಂತ್ ಅವರು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವರ್ಷ ಭಾರತದಲ್ಲಿ ನಡೆಯುವ ಓಡಿಐ ವರ್ಲ್ಡ್ ಕಪ್ ಗೆ (ODI World Cup) ಪಂತ್ ಅವರು ಲಭ್ಯವಿರುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Kannada News: ಸದಾ ಕೊಹ್ಲಿ ವಿರುದ್ಧ ಕಿಡಿ ಕಾರುವ ಗಂಭೀರ್: ಈ ಬಾರಿಯ 2023 ರ ವಿಶ್ವಕಪ್ ನಲ್ಲಿ ಕೊಹ್ಲಿ ಪಾತ್ರದ ಬಗ್ಗೆ ಹೇಳಿದ್ದೇನು ಗೊತ್ತೇ??

ಟೀಮ್ ಇಂಡಿಯಾದ ಮೇಜರ್ ಆಟಗಾರರಾದ ಪಂತ್ ಅಲಭ್ಯತೆ ತಂಡಕ್ಕೆ ಮೈನಸ್ ಆಗಬಹುದು. ಇದಷ್ಟೇ ಅಲ್ಲದೆ, 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ (T20 World Cup) ಟೂರ್ನಿಯನ್ನು ಕೂಡ ಪಂತ್ ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ಹಾಗೆಯೇ ಐಪಿಎಲ್ (IPL) ನಲ್ಲಿ 2 ಸೀಸನ್ ಅಲಭ್ಯರಾಗುತ್ತಾರೆ, 18 ತಿಂಗಳು ಅಲಭ್ಯರಾಗುವ ಕಾರಣ, 2023 ಮತ್ತು 2024ರಲ್ಲಿ ಐಪಿಎಲ್ ಸೀಸನ್ ಗಳನ್ನು ಮಾಡಿಕೊಳ್ಳುತ್ತಾರೆ. ರಿಷಬ್ ಪಂತ್ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಪ್ಟನ್ ಆಗಿದ್ದರು, ಈಗ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಹೊಸ ಕ್ಯಾಪ್ಟನ್ ಅನ್ನು ಹುಡುಕಬೇಕಿದೆ. ಪ್ರಸ್ತುತ ಪಂತ್ ಅವರ ಬದಲಾಗಿ ಕೆ.ಎಸ್.ಭರತ್, ಇಶಾನ್ ಕಿಶನ್ (Ishan Kishan) ಭಾರತ ತಂಡದ ಪರವಾಗಿ ಆಡುತ್ತಿದ್ದಾರೆ, ಕೆ.ಎಲ್.ರಾಹುಲ್ (K L Rahul) ಅವರು ಕೂಡ ವಿಕೆಟ್ ಕೀಪಿಂಗ್ ಮಾಡುತ್ತಿದ್ದಾರೆ. ಇದನ್ನು ಓದಿ.. Cricket News: ಇವರಿಬ್ಬರು ಭಾರತಕ್ಕೆ ಕಾಯಂ ಆರಂಭಿಕ ಆಟಗಾರರಾದರೆ ಗೆಲುವು ನಮ್ಮದೇ ಎಂದ ಗಂಭೀರ್: ರೋಹಿತ್, ರಾಹುಲ್, ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

Get real time updates directly on you device, subscribe now.