Kannada News: ರವಿಚಂದ್ರನ್ ಮಾಡಬೇಕಾಗಿದ್ದ ಸೂರ್ಯವಂಶ ಸಿನಿಮಾ ಕೈ ತಪ್ಪಿದ್ದು ಹೇಗೆ? ನಿಜಕ್ಕೂ ಆ ಸ್ಥಾನಕ್ಕೆ ರವಿಚಂದ್ರನ್ ಸೂಕ್ತ ಆಗಿದ್ರ? ತೆರೆ ಹಿಂದೆ ಏನಾಗಿತ್ತು ಗೊತ್ತೇ?

Kannada News: ರವಿಚಂದ್ರನ್ ಮಾಡಬೇಕಾಗಿದ್ದ ಸೂರ್ಯವಂಶ ಸಿನಿಮಾ ಕೈ ತಪ್ಪಿದ್ದು ಹೇಗೆ? ನಿಜಕ್ಕೂ ಆ ಸ್ಥಾನಕ್ಕೆ ರವಿಚಂದ್ರನ್ ಸೂಕ್ತ ಆಗಿದ್ರ? ತೆರೆ ಹಿಂದೆ ಏನಾಗಿತ್ತು ಗೊತ್ತೇ?

Kannada News: ಚಿತ್ರರಂಗದಲ್ಲಿ ತಯಾರಾಗುವ ಒಂದೊಂದು ಸಿನಿಮಾ ಹಿಂದೆ ಕೂಡ ಒಂದೊಂದು ಕಥೆ ಇರುತ್ತೆ. ಸಿನಿಮಾಗೆ ಕಲಾವಿದರು, ತಂತ್ರಜ್ಞರು ಎಲ್ಲರೂ ಆಯ್ಕೆಯಾಗುವುದು ಕೂಡ ಒಂದು ವಿಭಿನ್ನವಾದ ಪ್ರಕ್ರಿಯೆ. ಇಲ್ಲಿ ಎಲ್ಲರೂ ಅಂದುಕೊಂಡಿದ್ದು ನಡೆಯುವುದಿಲ್ಲ, ಅದಕ್ಕಿಂತ ಬೇರೆಯೇ ಆಗುತ್ತದೆ. ನಮ್ಮ ಕನ್ನಡ ಚಿತ್ರರಂಗದಲ್ಲಿ ನಡೆದ ಇಂಥದ್ದೇ ಒಂದು ಕಥೆಯ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ..

ಚಂದನವನದಲ್ಲಿ ತಯಾರಾದ ಎವರ್ ಗ್ರೀನ್ ಸಿನಿಮಾಗಳಲ್ಲಿ ಒಂದು ಸೂರ್ಯವಂಶ (Suryavamsha), ಸಾಹಸಸಿಂಹ ವಿಷ್ಣುವರ್ಧನ್ (Vishnuvardhan)ಅವರು ತಂದೆ ಮಗನ ದ್ವಿಪಾತ್ರದಲ್ಲಿ ನಟಿಸಿದ ಈ ಸಿನಿಮಾವನ್ನು ಇಂದಿಗೂ ಯಾರು ಮರೆತಿಲ್ಲ, ವಿಷ್ಣು ದಾದ ಅವರು ಗೌಡನ ಗತ್ತಿನಲ್ಲಿ ಅದ್ಭುತವಾಗಿ ನಟಿಸಿದ್ದರು, ಆ ಮೀಸೆ ಆ ಸಮಯದಲ್ಲಿ ಬಹಳ ಫೇಮಸ್ ಆಗಿತ್ತು. ವಿಷ್ಣುವರ್ಧನ್ ಅವರಿಗೆ ಬಹಳ ಹೆಸರು ತಂದುಕೊಟ್ಟ ಸಿನಿಮಾಗಳಲ್ಲಿ ಸೂರ್ಯವಂಶ ಕೂಡ ಒಂದು. ಇದನ್ನು ಓದಿ..Kannada News: ಬಾರಿ ಕ್ಯಾತೆ ತೆಗೆಯುತ್ತಿದ್ದ ಚೀನಾ ದೇಶಕ್ಕೆ ಸ್ಪಷ್ಟ ಉತ್ತರ ಕೊಟ್ಟ ಭಾರತದ ಜೈ ಶಂಕರ್: ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದೇನು ಗೊತ್ತೇ??

ಈ ಸಿನಿಮಾವನ್ನು ಕಲಾಸಾಮ್ರಾಟ್ ಎಸ್.ನಾರಾಯಣ್ (S Narayan) ಅವರು ನಿರ್ದೇಶನ ಮಾಡಿದರು. ಈ ಸಿನಿಮಾವನ್ನು ಮೊದಲಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾಡಬೇಕಿತ್ತು ಎನ್ನುವುದು ಹಲವರಿಗೆ ಗೊತ್ತಿರದ ವಿಚಾರ. ಹೌದು, ಸೂರ್ಯವಂಶ ಸಿನಿಮಾದಲ್ಲಿ ಮೊದಲಿಗೆ ನಟಿಸಬೇಕಿದ್ದು ರವಿಚಂದ್ರನ್ (Ravichandran) ಅವರು, ಆದರೆ ಅದು ಅವರ ಕೈತಪ್ಪಿಹೋಯಿತು. ಆ ಸಮಯದಲ್ಲಿ ನಿಜಕ್ಕೂ ಆಗಿದ್ದೇನು? ರವಿಚಂದ್ರನ್ ಅವರು ಸಿನಿಮಾ ಅವಕಾಶವನ್ನು ಕಳೆದುಕೊಂಡಿದ್ದು ಯಾಕೆ? ತಿಳಿಸುತ್ತೇವೆ ನೋಡಿ..

ಸೂರ್ಯವಂಶ ತಮಿಳು ಸಿನಿಮಾದ ರಿಮೇಕ್ ಆಗಿತ್ತು. ಈ ಸಿನಿಮಾವನ್ನು ರವಿಚಂದ್ರನ್ ಅವರು ತಮ್ಮ ಈಶ್ವರಿ ಪ್ರೊಡಕ್ಷನ್ಸ್ ಬ್ಯಾನರ್ ನ ಅಡಿಯಲ್ಲಿ ನಿರ್ಮಾಣ ಮಾಡಿ, ಎಸ್.ನಾರಾಯಣ್ ಅವರು ಸಿನಿಮಾ ನಿರ್ದೇಶನ ಮಾಡಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದರು. ಆದರೆ ರವಿಚಂದ್ರನ್ ಅವರು ಸಿನಿಮಾ ರಿಮೇಕ್ ರೈಟ್ಸ್ ಪಡೆದುಕೊಳ್ಳುವುದು ತಡವಾಯಿತು, ಅಷ್ಟರಲ್ಲಿ ಆ ಸಿನಿಮಾ ರಿಮೇಕ್ ರೈಟ್ಸ್ ಅನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ (H D Kumaraswamy) ಅವರು ತೆಗೆದುಕೊಂಡಿದ್ದರು. ಇದನ್ನು ಓದಿ..Cricket News: ಇವರಿಬ್ಬರು ಭಾರತಕ್ಕೆ ಕಾಯಂ ಆರಂಭಿಕ ಆಟಗಾರರಾದರೆ ಗೆಲುವು ನಮ್ಮದೇ ಎಂದ ಗಂಭೀರ್: ರೋಹಿತ್, ರಾಹುಲ್, ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ?

ಕುಮಾರಸ್ವಾಮಿ ಅವರು ನಿರ್ಮಾಣ ಮಾಡಿದ ಮೊದಲ ಸಿನಿಮಾ ಆಗಿತ್ತು ಸೂರ್ಯವಂಶ. ಇನ್ನು ಮೊದಲೇ ಇದ್ದ ಹಾಗೆ ಎಸ್.ನಾರಾಯಣ್ ಅವರೇ ಸಿನಿಮಾವನ್ನು ನಿರ್ದೇಶನ ಮಾಡಿದರು. ನಾಯಕನಾಗಿ ವಿಷ್ಣುವರ್ಧನ್ ಅವರು ದ್ವಿಪಾತ್ರದಲ್ಲಿ ನಟಿಸಿದರು. ಸೂರ್ಯವಂಶ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಬ್ಲಾಕ್ ಬಸ್ಟರ್ ಆಗಿತ್ತು. ವಿಷ್ಣುವರ್ಧನ್ ಅವರು ಪಾತ್ರಕ್ಕೆ ತಕ್ಕ ಅಚ್ಚುಕಟ್ಟಾಗಿ ಅಭಿನಯಿಸಿದ್ದರು. ವಿಷ್ಣುವರ್ಧನ್ ಅವರಿಗೆ ನಾಯಕಿಯಾಗಿ ಇಷಾ ಕೊಪ್ಪಿಕರ್ ಅಭಿನಯಿಸಿದ್ದರು.

ಈ ಸಿನಿಮಾ ವಿಷ್ಣುವರ್ಧನ್ ಅವರಿಗೆ ಮತ್ತು ಎಸ್.ನಾರಾಯಣ್ ಅವರಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿತ್ತು, ಇನ್ನು ಅಣ್ಣಾವ್ರು ಕೂಡ ಈ ಸಿನಿಮಾ ನೋಡಿ, ವಿಷ್ಣುವರ್ಧನ್ ಅವರ ಅಭಿನಯ ಮತ್ತು ಅವರ ಮೀಸೆಯನ್ನು ತುಂಬಾ ಇಷ್ಟಪಟ್ಟಿದ್ದರಂತೆ. ಸೂರ್ಯವಂಶ ಸಿನಿಮಾ ಹಿಂದಿನ ಕಥೆ ಇದು. ರವಿಚಂದ್ರನ್ ಅವರು ಮಾಡಬೇಕು ಎಂದುಕೊಂಡಿದ್ದ ಸಿನಿಮಾವನ್ನು ಮಾಡಿ ಗೆದ್ದಿದ್ದು ವಿಷ್ಣುವರ್ಧನ್ ಅವರು. ಇದನ್ನು ಓದಿ.. Cricket News: ರಿಷಬ್ ಪಂತ್ ಆರೋಗ್ಯದ ಕುರಿತು ಕೊನೆಗೂ ಸಿಕ್ತು ಮಾಹಿತಿ: ಅದೆಷ್ಟು ತಿಂಗಳು ಆಡಲು ಆಗಲ್ಲ ಗೊತ್ತೆ?ಯಾವ ಟೂರ್ನಿ ಮಿಸ್ ಮಾಡಲಿದ್ದಾರೆ ಗೊತ್ತೇ?