Kannada News: ಬಾರಿ ಕ್ಯಾತೆ ತೆಗೆಯುತ್ತಿದ್ದ ಚೀನಾ ದೇಶಕ್ಕೆ ಸ್ಪಷ್ಟ ಉತ್ತರ ಕೊಟ್ಟ ಭಾರತದ ಜೈ ಶಂಕರ್: ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದೇನು ಗೊತ್ತೇ??

Kannada News: ಬಾರಿ ಕ್ಯಾತೆ ತೆಗೆಯುತ್ತಿದ್ದ ಚೀನಾ ದೇಶಕ್ಕೆ ಸ್ಪಷ್ಟ ಉತ್ತರ ಕೊಟ್ಟ ಭಾರತದ ಜೈ ಶಂಕರ್: ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದೇನು ಗೊತ್ತೇ??

Kannada News: ಇಂಡಿಯಾ (India) ಮತ್ತು ಚೈನಾ (China) ಈ ಎರಡು ದೇಶಗಳ ಗಡಿಗಳನ್ನು ಬೇರೆ ಬೇರೆ ಮಾಡುವ, ವಾಸ್ತವ ನಿಯಂತ್ರಿಸವ ರೇಖೆ ಒಂದನ್ನು ಬದಲು ಮಾಡುವ, ಚೀನಾ ದೇಶದ ಪ್ಲಾನ್ ಬಗ್ಗೆ ನಮ್ಮ ದೇಶದ ವಿದೇಶಾಂಗ ವ್ಯವಹಾರ ಖಾತೆ ಸಚಿವರಾದ ಎಸ್.ಜೈಶಂಕರ್ (S Jaishankar) ಅವರು ಶನಿವಾರ ಮಾತನಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಮಾತನಾಡಿ, ತಮ್ಮ ದೇಶವೇ ಕೋವಿಡ್ 19 ಸಮಸ್ಯೆ ಇಂದ ಬಳಲುತ್ತಿದ್ದರು ಕೂಡ, ಅರುಣಾಚಲ ಪ್ರದೇಶದಲ್ಲಿರುವ (Arunachal Pradesh) ತವಾಂಗ್ ನಲ್ಲಿ ಇಂತಹ ಪ್ರಯತ್ನಗಳನ್ನು ಮಾಡುತ್ತಿರುವುದರಿಂದ ಭಾರತ ದೇಶಕ್ಕೆ ಅಸಮಾಧಾನವಾಗಿದೆ ಎಂದು ಜೈಶಂಕರ್ ಅವರು ತಿಳಿಸಿದ್ದಾರೆ..

ಭಾರತದ ಉತ್ತರದ ಗಡಿಯಲ್ಲಿ ಚೈನಾದೇಶ ದೊಡ್ಡ ಪಡೆಯನ್ನು ಇಡುವ ಮೂಲಕ, ತಮಗೆ ಇಷ್ಟ ಬಂದ ಹಾಗೆ, ಗಡಿಯ ರೇಖೆ ಬದಲಿಸುವ ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಮಾಡಿರುವ ಸಾಕಷ್ಟು ಒಪ್ಪಂದಗಳ ಉಲ್ಲಂಘನೆ ಮಾಡಿದೆ ಚೈನಾ. 2020ರ ಮೇ ತಿಂಗಳಿನಲ್ಲಿ ಇಡೀ ಪ್ರಪಂಚದಲ್ಲಿ ಕೋವಿಡ್ ಇದ್ದರು ಕೂಡ, ಏನೀನೆಲ್ಲಾ ಆಯಿತು ಎಂದು ಎಲ್ಲರಿಗು ಗೊತ್ತಿದೆ, ಆ ಸಮಯದಲ್ಲಿ ನಾವು ಅವರಿಗೆ ಕೊಟ್ಟ ಎದುರುತ್ತರದಲ್ಲಿ ಧೃಡತ ಇತ್ತು..ಎಂದು ಜೈಶಂಕರ್ ಅವರು ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಗಡಿಗಳಲ್ಲಿ ಹವಾಮಾನ ಪರಿಸ್ಥಿತಿ ಕಷ್ಟಕರವಾಗಿ ಇದ್ದರು ಕೂಡ, ಸೈನಿಕರು ಗಡಿಯಲ್ಲಿ ನಿಂತು ರಕ್ಷಣೆ ಮಾಡುತ್ತಿದ್ದಾರೆ. ಭಾರತ ದೇಶದ ಬಗ್ಗೆ ಈಗ ಪ್ರಪಂಚದ ಮಟ್ಟದಲ್ಲಿ ಹೆಚ್ಚಿನ ನಿರೀಕ್ಷೆ ಇದೆ, ರಾಷ್ಟ್ರದ ರಕ್ಷಣೆಯೇ ಭಾರತ ದೇಶದ ಮೊದಲ ಗುರಿ ಎಂದು ಜೈಶಂಕರ್ ಅವರು ಹೇಳಿದ್ದಾರೆ. ಇದನ್ನು ಓದಿ.. Income Tax Department: ನೀವು ಹತ್ತನೇ ತರಗತಿ ಪಾಸ್ ಆಗಿದ್ದರೆ ಸಾಕು, ಸಿಗುತ್ತಿದೆ ಆದಾಯ ತೆರಿಗೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗ: ಹೇಗೆ ಅರ್ಜಿ ಸಲ್ಲಿಸಬೇಕು ಗೊತ್ತೇ?

ಇಷ್ಟೇ ಅಲ್ಲದೆ, ಪ್ರಪಂಚದ ಮಟ್ಟದಲ್ಲಿ ಭಾರತ ದೇಶದ ಪ್ರಾಮುಖ್ಯತೆ ಬಗ್ಗೆ ಮಾತನಾಡಿ, “ಭಾರತ ದೇಶಕ್ಕೆ ಇತಿಹಾಸದ ವಿಚಾರದಲ್ಲಿ ತನ್ನದೇ ಆದ ಪ್ರಾಮುಖ್ಯತೆ ಇದೆ. ಬೇರೆ ದೇಶಗಳ ಸಮುದ್ರದ ನಡುವೆ ನಮ್ಮ ದೇಶ ಎದ್ದು ಕಾಣಿಸುತ್ತದೆ. ಭಾರದ ದೇಶ ಸಕ್ರಿಯವಾಗಿ ಪಾಲ್ಗೊಳ್ಳದೆ ಇದ್ದರೆ, ಏಷ್ಯಾ ಖಂಡದ ಸಂಪರ್ಕ ಯೋಜನೆಗಳು ಜಾರಿಗೆ ಬರಲಾಗುವುದಿಲ್ಲ. ಇಡೀ ಭೂಮಿಯಲ್ಲಿ ಭಾರತ ದೇಶವು ತಾನು ಇರುವ ಜಾಗವನ್ನು ಹೇಗೆ ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದನ್ನು ಎಲ್ಲರೂ ನೋಡಿದ್ದಾರೆ. ನಮ್ಮ ಹಿಂದೂ ಮಹಾಸಾಗರಕ್ಕೆ ಈಗ ಹಿಂದಿನ ಸಮಯಕ್ಕಿಂತ ಹೆಚ್ಚು ಪ್ರಸ್ತುತತೆ ಇದೆ. ವಿಶ್ವಮಟ್ಟದ ವಿದ್ಯಮಾನದಲ್ಲಿ ಭಾರತ ದೇಶದ ಸಹಭಾಗಿತ್ವ ಜಾಸ್ತಿಯಾದ ಹಾಗೆ, ಭಾರತದ ಪ್ರಭಾವ ಕೂಡ ಜಾಸ್ತಿಯಾಗುತ್ತಿದೆ.. ಎಂದು ಹೇಳಿದ್ದಾರೆ. ಈ ಮೂಲಕ ಚೈನಾ ಇಂದ ಆಗುತ್ತಿರುವ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಇದನ್ನು ಓದಿ..Kannada News: ನಿಜವಾಗಲೂ ಬೆಂಗಳೂರು-ಮೈಸೂರ್ ಎಕ್ಸ್ ಪ್ರೆಸ್ ಹೈವೇ ಬೈಕ್ – ಆಟೋಗೆ ಪ್ರವೇಶ ಇಲ್ಲ ಎಂದಿದ್ದು ಯಾಕೆ ಗೊತ್ತೇ? ಪ್ರತಾಪ್ ಸಿಂಹ ರವರು ಕೊಟ್ಟ ಕ್ಲಾರಿಟಿ ಏನು ಗೊತ್ತಾ?