Kannada News: ಸದಾ ಕೊಹ್ಲಿ ವಿರುದ್ಧ ಕಿಡಿ ಕಾರುವ ಗಂಭೀರ್: ಈ ಬಾರಿಯ 2023 ರ ವಿಶ್ವಕಪ್ ನಲ್ಲಿ ಕೊಹ್ಲಿ ಪಾತ್ರದ ಬಗ್ಗೆ ಹೇಳಿದ್ದೇನು ಗೊತ್ತೇ??
Kannada News: ಸದಾ ಕೊಹ್ಲಿ ವಿರುದ್ಧ ಕಿಡಿ ಕಾರುವ ಗಂಭೀರ್: ಈ ಬಾರಿಯ 2023 ರ ವಿಶ್ವಕಪ್ ನಲ್ಲಿ ಕೊಹ್ಲಿ ಪಾತ್ರದ ಬಗ್ಗೆ ಹೇಳಿದ್ದೇನು ಗೊತ್ತೇ??
Kannada News: ವಿರಾಟ್ ಕೊಹ್ಲಿ (Virat Kohli) ಅವರು ಟೀಮ್ ಇಂಡಿಯಾದ ಶ್ರೇಷ್ಠ ಬ್ಯಾಟ್ಸ್ಮನ್ ಗಳಲ್ಲಿ ಒಬ್ಬರಾಗಿದ್ದಾರೆ. ವಿಶೇಷವಾಗಿ ಟಿ20 ಮತ್ತು ಏಕದಿನ ಪಂದ್ಯಗಳಿಗೆ ವಿರಾಟ್ ಅವರು ಹೇಳಿ ಮಾಡಿಸಿದ ಬ್ಯಾಟ್ಸ್ಮನ್ ಎಂದು ಹೇಳಲಾಗುತ್ತಿದೆ. ವಿರಾಟ್ ಅವರು ಏಕದಿನ ಪಂದ್ಯಗಳಲ್ಲಿ ಈಗಾಗಲೇ 45 ಶತಕಗಳನ್ನು ಸಿಡಿಸಿ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ದಾಖಲೆಗಳನ್ನು ಮುರಿಯಲು ಸಿದ್ಧವಾಗಿದ್ದಾರೆ. ಸಚಿನ್ ಅವರು ಏಕದಿನ ಪಂದ್ಯಗಳಲ್ಲಿ ಇಲ್ಲಿಯವರೆಗೆ 49 ಶತಕಗಳನ್ನು ಸಿಡಿಸಿದ್ದಾರೆ. ಈ ವರ್ಷ ಏಕದಿನ ವಿಶ್ವಕಪ್ ಪಂದ್ಯಗಳು ಭಾರತದಲ್ಲೇ ನಡೆಯಲಿದ್ದು ಭಾರತ ತಂಡಕ್ಕೆ ಇದು ಐಸಿಸಿ ಟ್ರೋಫಿ ಗೆಲ್ಲಲು ಒಳ್ಳೆಯ ಸಮಯ ಆಗಿದೆ.
ಈ ಟೂರ್ನಿಗೆ ಸೂರ್ಯಕುಮಾರ್ ಯಾದವ್ (Suryakumar Yadav), ಇಶಾನ್ ಕಿಶನ್ (Ishan Kishan), ಶುಭಮನ್ ಗಿಲ್ (Shubhman Gill) ಅವರೆಲ್ಲರೂ ಆಯ್ಕೆಯಾದರು ಕೂಡ, ಒಳ್ಳೆಯ ಫಾರ್ಮ್ ನಲ್ಲಿರುವ ವಿರಾಟ್ ಕೊಹ್ಲಿ ಅವರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಇದನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ (Gautam Gambhir) ಅವರು ಸಹ ಹೇಳಿದ್ದಾರೆ, “50 ಓವರ್ ಗಳ ಮ್ಯಾಚ್ ನಲ್ಲಿ ಪಂದ್ಯ ಗೆಲ್ಲಲು ಅನುಭವ ಇರುವ ಆಟಗಾರರು ಬಹಳ ಮುಖ್ಯವಾಗುತ್ತಾರೆ. ಟಿ20 ಪಂದ್ಯಗಳಲ್ಲಿ ಇದೆಲ್ಲ ಇಲ್ಲದೆ ಹೋದರು ಕೂಡ ನಡೆಯುತ್ತದೆ, ಆದರೆ ಏಕದಿನ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಅವರಂತಹ ಉತ್ತಮ ಅನುಭವ ಇರುವ ಬ್ಯಾಟ್ಸ್ಮನ್ ಗಳ ಪಾತ್ರ ಬಹಳ ಮುಖ್ಯವಾಗುತ್ತದೆ.. ಇದನ್ನು ಓದಿ.. Cricket News: ಪದೇ ಪದೇ ಗಾಯದ ಕಾರಣ ನೀಡಿ ತಂಡದಿಂದ ಹೊರಗುಳಿಯುತ್ತಿರುವ ಜಡೇಜಾಗೆ ಷರತ್ತು ವಿಧಿಸಿದ ಬಿಸಿಸಿಐ: ಈ ಕೆಲಸ ಮಾಡಿದರೆ ಮಾತ್ರ ಸ್ಥಾನ, ಇಲ್ಲವೇ??
ಓಡಿಐ ವರ್ಲ್ಡ್ ಕಪ್ ಗೆ ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ ಅವರಂತಹ ಸ್ಫೋಟಕ ಯುವ ಆಟಗಾರರನ್ನು ಆಯ್ಕೆ ಮಾಡಿದರೆ ಅದು ಅವರ ಮೊದಲ ವರ್ಲ್ಡ್ ಕಪ್ ಪಂದ್ಯವಾಗುತ್ತದೆ. ವಿರಾಟ್ ಕೋಹ್ಲಿ ಮತ್ತು ರೋಹಿತ್ ಶರ್ಮಾ ಅವರ ಅನುಭವ ಇಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ (Rohit Sharma) ಹೇಗೆ ಆಡುತ್ತಾರೋ ಅದಕ್ಕೆ ಅನುಗುಣವಾಗಿ ಟೀಮ್ ಇಂಡಿಯಾದ (Team India) ಬ್ಯಾಟಿಂಗ್ ಲೈನಪ್ ಹೇಗೆ ಆಡುತ್ತದೆ ಎನ್ನುವುದನ್ನು ಈಗಾಗಲೇ ನೋಡಿದ್ದೇವೆ. ಈ ಕಾರಣಗಳಿಂದ ಈ ವರ್ಷ ಭಾರತದಲ್ಲಿ ನಡೆಯುವ ಏಕದಿನ ವರ್ಲ್ಡ್ ಕಪ್ (ODI World Cup) ನಲ್ಲಿ ವಿರಾಟ್ ಕೊಹ್ಲಿ ಅವರು ಬಹಳ ಮುಖ್ಯವಾದ ಪಾತ್ರ ವಹಿಸುತ್ತಾರೆ, ಅವರ ಅನುಭವ ತುಂಬಾ ಮುಖ್ಯವಾಗುತ್ತದೆ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ ಆಗಿದೆ..” ಎಂದು ಹೇಳಿದ್ದಾರೆ ಗೌತಮ್ ಗಂಭೀರ್. ಇದನ್ನು ಓದಿ..Cricket News: 2023 ರಲ್ಲಿ ನಡೆಯುವ ವಿಶ್ವಕಪ್ ಗೆ ಸ್ಪಿನ್ನರ್ ಗಳನ್ನು ಆಯ್ಕೆ ಮಾಡಿದ ಗಂಭೀರ್: ಜಡೇಜಾ ಚಾಹಲ್ ಬಿಟ್ಟು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??